ರಂಗು...

ಇವತ್ತವಳ ಹುಟ್ಟುಹಬ್ಬವಾ? ಅವಳನ್ನ ನೋಡಿಯಷ್ಟೇ ಪರಿಚಯ, ಎದುರಾದಾಗ ಮುಗುಳ್ನಗೆಯ ಗೆಳೆತನ. ಖುಷಿಯಾದಾಗೆಲ್ಲಾ ಬಿಳಿ ಬಣ್ಣದ ಅನಾರ್ಕಲಿ ತೊಡುತ್ತಾಳೋ ಇಲ್ಲಾ ಬಿಳಿಯ ಅನಾರ್ಕಲಿ ತೊಟ್ಟಾಗ ಖುಷಿಯಾಗಿರುತ್ತಾಳೋ ಗೊತ್ತಿಲ್ಲ! ಇವತ್ತು ಅವೆರಡನ್ನೂ ಹೊತ್ತು ಎದುರಾದವಳ ನೋಡಿ ಬೆನ್ನಿನಡಿಯಿಂದ ಎಂತದೋ ಹೊಕ್ಕಂತಾಯ್ತು.
ಉಹೂಂ, ಅವಳ ನಗುವನ್ನ ನೋಡಿಯೋ,ಬಿಳಿ ಬಟ್ಟೆ ನೋಡಿಯೋ ಗೊತ್ತಿಲ್ಲ, ಎದುರಾದವಳ ಮೈಮೇಲೆ ಕೆಂಪೆರಚುವ ಮನಸ್ಸಾಯ್ತು. ನಗು ಹೊತ್ತು ಹೇಳಿಯೇ ಬಿಟ್ಟೆ, 'ಹ್ಯಾಪಿ ಹೋಲಿ.' ಅವಳೊಂದಿಗಿನ ಮೊದಲ ಸಂಭಾಷಣೆ.
ಆಕೆ ಮಾತನಾಡಲಿಲ್ಲ. ಮುಷ್ಠಿಯೊಳಗಿನ ಕೆಂಪು ನನ್ನ ಕೆನ್ನೆ ಸವರಿತ್ತಷ್ಟೇ.
ಹಿಂದೇ ಅವಳ ನದಿಹಾಸ  ನಾನೂ ನಕ್ಕು ಕೆಂಪು ಬಳಿದೆ.  ಆಮೇಲೆ ಹಸಿರು, ಹಳದಿ, ನೀಲಿ...ಇಬ್ಬರ ಕಣ್ಣಲ್ಲೂ ಗುಲಾಬಿಯ ಬಣ್ಣ ನಗುತ್ತಿತ್ತು.
ಕೊನೆಗೂ ಮಾತನಾಡಿದಳು, "ಎಲ್ಲಿ ಪೊಟ್ಯಾಷಿಯಂ ಪರಮಾಂಗನೇಟಿನ ಆ ನೇರಳೆಯ ರಂಗು?" ನಮ್ಮಿಬ್ಬರ ನಗೆಯೂ ಒಂದಾಗಿ ಘಾಟು ಬಂತು.

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ