ಹಲ್ಬಾಣ ೨೮

ಹವಳದಧರದ ಹುಡುಗಿ
ಹಲ್ಬಾಣವ ಮೆಚ್ಚಿದಳು!
ಒಳಪೆಟ್ಟಿಗೆಗೆ ಬಂದು
ಪಂಥವನಿತ್ತಳು,
ಹಲುಬೆಂದಳು ಅವಳ ಬಗ್ಗೆ.
ಅಪರಿಚಿತೆಯ ಪಂಥಾಹ್ವಾನ
ಒಪ್ಪಿಬಿಡಲೆ?
ಹರಿದ ಚಾದರದ
ಚಪಲ
ಹೂಂ ಅಂತು ಒಳಗೆ,
ನಾಲ್ಕು ಸಾಲಲಿ ಹಲುಬಿದೆ
ಅವಳ ಬಗೆಗೆ.
ಸುಕುಮಾರಿ ಚರಿತೆ
ಗೊತ್ತಿಲ್ಲ ನನಗೆ,
ಸುಕೋಮಲ ಚಂಚಲೆಗೆ
ಮರುಳಾದೆ ಕೊನೆಗೆ.
ನೋಡದೆಯ ಎಡ ಎದೆಯ
ಕೋಣೆಯ ಒಡೆದವಳ
ಸಾಯುವಾ ಮೊದೆಲೆ
ಆಗಲೇ ಮದುವೆ?
ಕೌಮಾರ್ಯ ಕಾಡಿಹುದು,
ಪ್ರೇಮವದು ಮೂಡಿಹುದು!
ಮೂರುಗಂಟಿಗೇ ಬದುಕ
ಮುಗಿಸಿಬಿಡಲೆ?
ಚದುರೆ ಚಂಚಲೆ
ನಕ್ಕಳು ಒಡನೆ,
ಅತಿಯಾಯ್ತು ಹಲ್ಬಾಣ
ಸುಮ್ಮನಿರು ಮಗನೇ 
ಆಗಲೇ ಆಗಿರುವೆ
ಒಂದನೇ ಮದುವೆ,
ಹಳೆ ಗೆಳೆಯ ಕಾದಿಹನು
ದೂಸರಾ ಛಾನ್ಸಿಗೆ,
ಹೊಸಗಂಡ ಬಿಡನು,
ಸಂಬಳವ ತಂದಿಹನು
ದುಡಿ ಮೊದಲು ಜಾಸ್ತಿ
ಮೂರನೇ ಅವಕಾಶ
ನಿನಗೇ ಕೊಡುವೆ 
ಸಹವಾಸ ಸಾಕೆಂದು
ಸುಮ್ಮನಾಗದೆ ನಾನು
ಕೇಳಿದೆನು ಅವಳ
ಮೂರನೆಯ ಮದುವೆ
ಎಂದು? ಎಂದು 
ಉತ್ತರವ ಹೇಳದೇ
ಒದ್ದಂತೆ ಮಾಡಿದಳು,
ಬ್ಲಾಕಿಸಿಯೆ ಬಿಟ್ಟಳು
ಕೊನೆಗೊಮ್ಮೆ ನನ್ನ 
ಚಿರವಿರಹಕೆ ಹೊಸ ನೆನಪು
ಸೇರ್ಪಡೆಯಾಯ್ತೆಂದು
ಖುಷಿಯಾಗಿ ಗೀಚಿದೆ
ಹಲ್ಬಾಣ ಮತ್ತೊಂದು 

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ