ಇರುವೆ...

ನನ್ನ ಸುತ್ತಮುತ್ತಲೂ
ಅವಳ ನೆನಪಿನ ಮುತ್ತಿಗೆ
ಚೀರಿ ಹೇಳುತಿವೆ ಮೆತ್ತಗೆ,
ನಾನಿರುವೆ ಇಲ್ಲೇ...
ಬೆತ್ತಲೆ ಎದೆಯ ರೋಮಗಳ
ಸಂದಿಯಲ್ಲಿ
ಅವಳ ಕೈಬೆರಳ ಅಚ್ಚು
ಅಚ್ಚಳಿಯದೇ ಉಳಿದಿವೆ
ಕೂಗಿ ಹೇಳುತಿವೆ
ನಾನಿರುವೆ ಇಲ್ಲೇ
ಬೆರಳ ತುದಿಯಲಿ ಅವಳ
ಮುಂಗುರುಳ ಸವರಿದ್ದೆ
ಮುಂಬೆರಳ ಕೂಗಾಟ
ನಾನಿರುವೆ ಇಲ್ಲೇ
ಅವಳುಸಿರು ತಾಕಿದ
ಭುಜದಲ್ಲಿ ಜ್ವರ
ಬಿಸಿಯೇರಿ ಉಸುರುತಿದೆ
ನಾನಿರುವೆ ಇಲ್ಲೇ...
ಅಗೋಚರ ಶಬ್ಧಕ್ಕೆ
ನಯನಗಳ ಹುಡುಕಾಟ
ಸದ್ದುಗಳ ಹುಡುಗಾಟ,
ನೆನಪುಗಳ ಚೀರಾಟ
ನಾ ಇರುವೆ...

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ