Posts

Showing posts from October, 2015

ಮುಖಗಳು ಭಾಗ ೨

                    ನಾನಾಗ ಐದನೇ ಕ್ಲಾಸು,ಸರ್ಕಾರಿ ಶಾಲೆಯಲ್ಲಿ ನಾನೇ ತರಗತಿಗೆ ಮೊದಲಿಗಳು. ಬರಿ ಓದಿನಲ್ಲಲ್ಲ,ಎಲ್ಲದರಲ್ಲೂ. ಅಪ್ಪ ಅಮ್ಮನ ಜಗಳಗಳ ಮದ್ಯೆ ನಾನೂ ಹಾಳಾಗುತ್ತಿದ್ದೆ. ಐದನೆ ತರಗತಿ ಮುಗಿಯುವ ಹೊತ್ತಿಗೆ ನನ್ನ ಶೈಕ್ಷಣಿಕ ಪ್ರಗತಿ ಸಾಧಾರಣ ಎಂದರೆ ಸಾಧಾರಣ ಮಟ್ಟ ತಲುಪಿತ್ತು.                     ಇತ್ತ ಅಪ್ಪನ ಅರ್ಭಟವೂ ಅತಿಯಾಗುತಿತ್ತು. ಅದಾಗಲೇ ಅಮ್ಮನಿಗೆ ಯಾವ ಸ್ನೇಹಿತೆಯರೂ ಇಲ್ಲವಾಗಿದ್ದರು. ಅದಾಗಲೇ ತವರೂ ದೂರವಾಗಿತ್ತು. ಅಮ್ಮನ ಕೊನೆ ದಿನಗಳಂತೂ ಥೇಟಾನುಥೇಟು ಮನೆಯೆಂದರೆ ಜೈಲು ಅನ್ನುವಮ್ತಾಗಿತ್ತು. ಅವಳದೇ ಸ್ವಂತ ಮನೆ ಈಗ ಜೈಲು!! ಸಾಯ್ಬೇಕೆಂದರೂ ಕೈಗೆ ಏನೂ ಸಿಗದಂತೆ ಮಾಡಿಬಿಟ್ಟಿದ್ದ ಅಪ್ಪ. ಕೊನೆಗೆ ಅದೊಂದೇ ಉಳಿದಿತ್ತು, ತನ್ನ ಆರು ಮೊಳದ ಸೀರೆ.                   ಅಮ್ಮ ಸತ್ತಮೇಲೆ ಅಪ್ಪ ಮತ್ತೊಂದು ಮದುವೆಯಾಗಲಿಲ್ಲ ಅನ್ನೋದೇ ನನಗಿನ್ನೂ ಆಶ್ಚರ್ಯ. ಅಪ್ಪನಿಗೆ ಹೆಂಡತಿ ಬೇಡ್ವಾಗಿದ್ದಳು ಆದರೆ ನನಗೆ ಅಮ್ಮ ಬೇಕಾಗಿದ್ದಳು. ಆದರೆ ಅಪ್ಪನಿಗೆ ಹಣ ಬೆಕಿತ್ತು. ಅಮ್ಮ ಅದೆಂಗೊ ನಾನು ಪಿ.ಯು.ಸಿ. ಮುಗಿಯುವ ವರೆಗೆ ಬದುಕಿದ್ದಳು. ನಾನು ಇಂಜನಿಯರಿಂಗ್ ಮುಗಿಸಲು ಇನ್ನೂ ನಾಲಕ್ಕು ವರ್ಷಗಳಿದ್ದವು, ಆಮೇಲೆ ಅಪ್ಪನಿಗೆ ಬೇಕಿದ್ದ ಹಣ ಬರುತ್ತಿತ್ತು, ಅವನ ಅದ್ದೂರಿ ಯೋಜನೆಗಳಿಗೆ ನಾನು ಫೈನಾನ್ಸಿಯರ್ ಆಗುತ್ತಿದ್ದೆ. ಅವನ ಮಗಳೆಂಬ ತಿಜೋರಿ ಕನ್ನೆದುರುಗಿತ್ತು. ಬಹುಶಃ ಅಮ್ಮನ್ ಸಾವು ಅವನಿಗೆ ಬುದ್ದಿಯನ್ನೇನು ಕಲಿಸಲಿಲ್