Posts

ಜಮೀನು, ಕೊಡದಲ್ಲ

“ಮುಂದಿನ ವರ್ಷ ಇಷ್ಟೊತ್ತಿಗೆ ಪ್ಯಾಟೆ ನಮ್ಮೂರ್ ಹೊಳೆ ಬ್ಯಾಲೆ ತನ್ಕ ಬರ್ತು ನೋಡು" ಅಂದ ಮಾಬ್ಲಪ್ಪಚ್ಚಿಯ ಮುಖದಲ್ಲಿ ಅದೆಂಥ ಕಾನ್ಫಿಡೆನ್ಸ್ ಇತ್ತಂದ್ರೆ ಯಾವುದಾದ್ರೂ ಟಿವಿಯವ್ರು ನೋಡಿದ್ರೆ ಮಾರನೇ ದಿನದಿಂದ ಬೆಳಿಗ್ಗೆಯ ಭವಿಷ್ಯ ಹೇಳುವ ಸ್ಲಾಟಿನಲ್ಲಿ ಇವನನ್ನೇ ತೋರಿಸುತ್ತಿದ್ದರೇನೋ. ಇಪ್ಪತ್ತು ಮನೆಯ ಕೇರಿಯಲ್ಲಿ ಉಳಿದಿರೋ ಐವತ್ತು ಮಂದಿಯಲ್ಲಿ ಮೂವರು ಮಾತ್ರ ಮೂವತ್ತರ ಒಳಹೊರಗಿನ ಪ್ರಾಯದವರು ಅಂದ್ರೆ ನಂಬ್ಲೇಬೇಕು ನೀವು. ಮೆರವಣಿಗೆ ಊರು ಇಂಥ ಹಲವು ಊರುಗಳಿಗೆ ಉದಾಹರಣೆಯಷ್ಟೇ, ವೃದ್ಧಾಶ್ರಮವಾದ ಊರುಗಳಿಗೆ ಮಾದರಿಯೊಂದಿದ್ದರೆ ಅದು ಮೆರವಣಿಗೆ. ಬೆಂಗಳೂರನ್ನು ಉದ್ಧರಿಸುವವರನ್ನು ಉತ್ಪಾದಿಸುವ ಕಾರ್ಖಾನೆಗಳ ಪೈಕಿ ಇದೂ ಒಂದಾಗಿತ್ತು. ಊರ ಎರಡು ಗಡಿಗಳನ್ನು ಎರಡು ಹಳ್ಳಗಳು ಬೇರೆ ಊರುಗಳಿಂದ ಪ್ರತ್ಯೇಕಿಸಿದ್ದರೆ, ಮತ್ತೆರಡು ಬದಿಯಲ್ಲಿ ಪಶ್ಚಿಮ ಘಟ್ಟದ ಸಾಲು. ಮೂವತ್ತು-ನಲ್ವತ್ತು ವರ್ಷಗಳ ಹಿಂದೆ ತೋಟಕ್ಕೆ ಬಿಟ್ಟ ಬೆಟ್ಟಗಳು ಬಯಲಾಗಿದ್ದು ಬಿಟ್ಟರೆ ಹೆಚ್ಚಿನ ಗುಡ್ಡಗಳು ಹರಿದ್ವರ್ಣದಲ್ಲಿ ಕತ್ತಲನ್ನು ಹೊದ್ದಿದ್ದವು. ಸಂಪರ್ಕಕ್ಕೆಂದು ಸರಿಯಾದ ರಸ್ತೆಯೂ ಇರದ ಊರಿಗೆ ಕೋಟಿ ರೂಪಾಯಿ ವೆಚ್ಚದ ಸೇತುವೆ ನಿರ್ಮಾಣಗೊಳ್ಳುತ್ತಿತ್ತು, ಅದಕ್ಕಾಗಿನ ಹೋರಾಟವೂ ಒಂದು ಕತೆಯೇ. “ನಂಗ ಪ್ರಾಯದಲ್ಲಿದ್ದಾಗ ಬ್ರಿಜ್ ಮಾಡ್ಕೊಡಿ ಅಂದಿದ್ಯ. ಆವಾಗ ಊರಲ್ಲಿರ ಅಷ್ಟೂ ಮೂಲೆಲ್ಲೂ ಜಮೀನ್ ಮಾಡ ಉಮೇದಿ. ಅರ್ವತ್ ಆದ್ಮೇಲೆ ಬ್ರಿಜ್ ಆತು.ಈಗ ಪ್ರಾಯದ್ ಪ್ವಾರ್ಗನೂ

ಒಂದು ಭಾನುವಾರದ ಕತೆ

ಇಷ್ಟಿಷ್ಟೇ ಬದುಕುವ ಜೀವಕ್ಕೂ ಭವಿಷ್ಯದ ತೂಕ ಹೇರಿಬಿಡುವ ಜಗತ್ತಿಗೆ ಬಯ್ಯುತ್ತಲೇ ಭಾನುವಾರವೊಂದನ್ನು ಸ್ವಾಗತಿಸಲಾಯ್ತು. ಆವತ್ತೇ ಮೊದಲ ಬಾರಿ ಭಾನುವಾರವನ್ನು ನೋಡಿದ್ದೆಂದಲ್ಲ, ಪ್ರತಿ ರವಿವಾರವೂ ರವಿವಾರದಂತೆಯೇ ಜಿಗುಪ್ಸೆದಾಯಕ ದಿನ. ಆದರೂ ಆವತ್ತಿನ ಆದಿತ್ಯವಾರ ಬರೀ ದಿನದರ್ಶಿಕೆಯ ಮೇಲೆ ಕೆಂಪು ಬಣ್ಣದಲ್ಲಿ ಕಾಣಿಸಿಕೊಂಡದ್ದಲ್ಲ, ಮಾಸಾರಂಭದ ಸೂತಕದಂತೆ ಭಾಸವಾಗುತ್ತಿತ್ತು. ಆ ಭಾನುವಾರ ಅದ್ಯಾಕೆ ಭಾನುವಾರವಾಯ್ತು? ಗೊತ್ತಿಲ್ಲ! ಕಳೆದ ಸೋಮವಾರವಷ್ಟೇ ಮಲಗಿದ್ದೆನೇನೋ ಎಂದನಿಸಿ, ಭಾನುವಾರದ ಗಾಢ ಇಬ್ಬನಿಯನ್ನು ಕಿಟಕಿಯ ಈ ಬದಿಯಿಂದಲೇ ಗುರುತಿಸಿ ಚಾದರವನ್ನು ಕಣ್ಣ ಮೇಲೆ ಎಳೆದುಕೊಳ್ಳುತ್ತಿದ್ದಂತೆಯೇ ಮೊಬೈಲು ಟಿಣ್‌ಟಿಣಿಕ್ ಎಂದು ಹಲುಬಿ ತನ್ನ ನಿತ್ಯಕರ್ಮವನ್ನು ಶುರುಮಾಡಿದಾಗಿನ್ನೂ ಬೆಳಿಗ್ಗೆ ಆರು ಗಂಟೆ. ಇದೊಂದು ನೋಟಿಫಿಕೇಶನ್ನು ನೋಡಿಯೇ ಮುಂದಿನ ನಿದ್ರೆಯನ್ನು ಕಾಣೋಣವೆಂದು ಟೇಬಲ್ಲಿನ ಮೇಲೆ ಮಲಗಿದ್ದ ಮೊಬೈಲನ್ನು ಕೈಗೆತ್ತಿಕೊಂಡೆ. ಯಾವುದೋ ಗ್ರುಪ್‌ನಲ್ಲಿ ಬಂದ “ದರೋಡೆಕೋರರು, ನಾನು ಮತ್ತು ಇಗರ್ಜಿ" ಎಂಬ ದಪ್ಪಕ್ಷರದ ತಲೆ ಬರೆಹವಿದ್ದ ಮೆಸೇಜೊಂದನ್ನು ನೋಡಿ ಒಳ್ಳೆ ಕತೆಯಿದ್ದಂಗಿದೆ, ಓದಿಕೊಂಡೇ ವರಗೋದು ಬೆಸ್ಟು ಅಂತನಿಸಿ ಓದೋಕೆ ಶುರು ಮಾಡಿದೆ. ಒಳ್ಳೆ ಮಜಾ ಇತ್ತು ಕತೆ. ರಾತ್ರಿ ಹೊತ್ತು ಹೊಂಡಾ ಡಿಯೋ ಗಾಡಿಯನ್ನ ಓಡಿಸುತ್ತಿದ್ದ ಒಬ್ಬನ ಬಳಿ ನಾಲ್ವರು ಬಂದು ಅಡ್ರೆಸ್ ಕೇಳಿದ್ದಾಗ್ಯೂ,ಅಡ್ರೆಸ್ ಹೇಳಿ ಮುಂದೆ ಹೋದವನ ಬೆನ್ನತ್ತಿ ಬ

ಆಗಸದ ತೂತು | ಸಂಚಿಕೆ ೧೨ - ಭಾರತ ಸಂಚಾರ

 ಇಂಟರಾಗೇಶನಲ್ಲಿ ಗೋಪುಟ್ಟನ ಸ್ಟೇಟ್ಮೆಂಟು ಪ್ರಥಮ ಪುರುಷ ದೃಷ್ಟಿಕೋನದಲ್ಲಿರೋದ್ರಿಂದ (ನಾನು ಇಂಗ್ಲಿಷ್ ಪದಗಳ ಬಳಕೆ ಮಾಡೋದಕ್ಕೆ ಆಕ್ಷೇಪ ವ್ಯಕ್ತಪಡಿಸೋರು ಇದೆಂಥದು ಅಂತ ಕೇಳ್ಬಾರ್ದು. ಆದ್ರೂ ಎಲ್ಲರಿಗೂ ಅರ್ಥ ಆಗ್ಲಿ ಅಂತ ಹೇಳ್ತಿದೀನ, first person POV or point of viewನಲ್ಲಿರೋದ್ರಿಂದ ಅಂತ ಓದ್ಕೊಳಿ) ಪೂರ್ತಿ ಕತೆ ಕೂಡ ಕತೆ ಹೇಳೋನ ದೃಷ್ಟಿಕೋನದಲ್ಲಿ ಇರೋದ್ರಿಂದ (which is also in first person POV) ಓದುವಾಗ ಗೊಂದಲ ಉಂಟಾಗ್ಬೋದು. ಹಂಗಾಗಿ ಇಂಟರಾಗೇಶನ್ ಪಾರ್ಟನ್ನು ಗೋಪ್ಪುಟ್ಟನ point of viewದಲ್ಲಿ ಬರೀತಿದೀನಿ. ಇಂಟರಾಗೇಶನ್ ಭಾಗದಲ್ಲಿ 'ನಾನು' ಅಂದ್ರೆ ನರೇಟರ್ ಅಲ್ಲ, ಗೋಪುಟ್ಟ ಎಂದು ಅರ್ಥೈಸಿಕೊಳ್ಳಿ. ಅಲ್ಲೆಲ್ಲೂ ನರೇಟರ್ ಇಣುಕೋದಿಲ್ಲ ಇನ್ನು ಮುಂದೆ. ಇದಕ್ಕೆ narrator shift ಅಂತಾನೂ ಕರೀಬೋದು. ಮನಾಲಿಯಿಂದ ಗೋಪುಟ್ಟನ ಗ್ಯಾಂಗ್ ಹೊರಟ ನಂತರದ ಟೈಮ್‌ಲೈನಿನ ಹಲವಾರು ಘಟನೆಗಳಲ್ಲಿ ಹೇಳದಿದ್ರೆ ಆಗೋದೇ ಇಲ್ಲ ಅನ್ಸಿದ ಘಟನೆಗಳನ್ನಷ್ಟೇ ಗೋಪುಟ್ಟನ ಬಾಯಲ್ಲಿ ಕೇಳಿ. ----------------------------***------------------------- ಮನಾಲಿಯನ್ನು ತೊರೆದ ಐದನೇ ದಿನ, ಜೂನ್ ೪, ೨೦೨೧ ಸೆತ್ಲೆಜ್ ತೀರದಿಂದ ನಮ್ಮ ಕಾರವಾನ್ ವಾಪಸ್ಸು ಬರದೇ ಚಂಡಿಘಡ, ಕುರುಕ್ಷೇತ್ರ, ಪಾಣಿಪತ್ ಮೂಲಕ ಸಾಗಿ ಎನ್.ಎಚ್. ೪೪ರನ್ನು ಬಳಸಿ ಚೆನ್ನೈ ಕಡೆ ಹೋಗೋಕೆ ಸಿದ್ಧವಾಗಿತ್ತು. ಮಲ್ಲಿಕಾಳನ್ನು (ಮೈಸೂರ್ ಪಾಕ್ ಎಂದೇ ಮತ್ತೆ ಹೇಳ

ಆಗಸದ ತೂತು | ಸಂಚಿಕೆ ೧೧ - ಪುಟ್ಟಿಯಲ್ಲ, ಮೈಸೂರ್‌ಪಾಕ್

  "She was jealous. ಮುಖ ನೋಡಿದ್ರೇ ಗೊತ್ತಾಗ್ತಿತ್ತು. ಆದ್ರೆ ಅವ್ಳನ್ನ ಇಗ್ನೋರ್ ಮಾಡಿದ್ರೆ ಉಳ್ದೋರನ್ನ ಕಂಟ್ರೋಲ್ ಮಾಡೋದು ನನ್ನೊಬ್ನಿಂದ ಆಗೋದಲ್ವಾಗಿತ್ತು. ನಾನು ದೇವರ ಕೋಣೆ ಆಗಿದ್ರೆ ಅವ್ಳು ಆ ಕೋಣೆ ಬೀಳ್ದಿದ್ದಂಗೆ ನೋಡ್ಕೊಳ್ಳೋ ಕಂಬ ಆಗಿದ್ಳು. ನಾನು ಹೊಸ ಹುಡ್ಗೀನ ಪ್ರೀತಿಸ್ತಿದ್ರೂ ಮಲ್ಲಿಕಾಳನ್ನ ಕಡೆಗಣ್ಸಿ ಹೊಸ ಹುಡ್ಗೀ‌ನ ಪಟ್ಟದ ರಾಣಿ ಅಂತೇನೂ ಘೋಷಣೆ ಮಾಡಿರ್ಲಿಲ್ಲ. ಮೈಸೂರ್ ಪಾಕೇ ನನ್ನ ಸೆಕೆಂಡ್ ಇನ್ ಕಮಾಂಡ್ ಆಗಿದ್ಳು" ಹೊಸ ಲವ್ ಟ್ರೈಆ್ಯಂಗಲ್ ಬಗ್ಗೆ ಗೋಪುಟ್ಟ ತನ್ನ ವಿಶ್ಲೇಷಣೆ ಕೊಡ್ತಿದ್ದ. ಅವನನ್ನ ಮಧ್ಯದಲ್ಲೇ ತಡೆದ ನಾನು, "ಮೊದ್ಲು ಆ ಹೊಸ ಹುಡ್ಗಿ ಹೆಸ್ರೇನು ಅಂತೇಳು ಮಾರಾಯ, ಅವ್ಳ ಕತೆ ಏನು?" ಅಂತ ಕೇಳ್ದೆ. "ಅವ್ಳೆಸ್ರು ಚಂಪಾ ಅಂತ. ಫ್ರಾನ್ಸ್ ಮೂಲದ ಅವ್ಳಪ್ಪ ಹಿಪ್ಪಿಗಳ ಕಾಲ್ದಲ್ಲಿ ಭಾರತಕ್ಕೆ ಬಂದು ಇಲ್ಲೇ ಉಳ್ಕೊಂಡಿದ್ದ. ಅವ್ನ ಹೆಂಡ್ತಿ ಅಸ್ಸಾಮಿನಿವ್ಳಂತೆ. ಇಬ್ರೂ ಗೋಕರ್ಣದಲ್ಲಿ ಭೆಟ್ಟಿಯಾಗಿ ಅಲ್ಲೇ ಒಟ್ಟಿಗೇ ಇದ್ರಂತೆ. ಇವ ತಂದಿದ್ದ ಹಣ ಖಾಲಿಯಾದಾಗ ಗೋವಾದೊಳಕ್ಕೆ ಸೇರಿ ಎಕ್ಸ್ಟಸಿ ತಯಾರು ಮಾಡೋಕೆ ಶುರು ಮಾಡಿದ್ರು. ನಿಧಾನಕ್ಕೆ ಒಂದು ಗ್ಯಾಂಗ್ ಬಿಲ್ಡ್ ಮಾಡೋ ಹೊತ್ತಿಗೆ ಇವ್ರ ಅಡ್ಡದ ಮೇಲೆ ಪೊಲೀಸ್ ರೇಡ್ ಆಗಿ ಅವ್ಳಪ್ಪ ಅಂದರ್ ಆದ. ಚಂಪಾಳ ಅಮ್ಮ ಇದ್ದ ಹಣ, ಅವ್ನ ಪಾಸ್ಪೋರ್ಟು ಎಲ್ಲಾ ತಗೊಂಡು ನಾಪತ್ತೆಯಾದ್ಳು. ಆವಾಗ ಕಾಣೆಯಾದೋಳು ಸಿಕ್ಕಿಲ್ಲ. ಒಂದ್ ವರ್ಷದ್ ನಂತ್ರ ಹ

ಆಗಸದ ತೂತು | ಸಂಚಿಕೆ‌ ೧೦ - ಮೈಸೂರ್ ಪಾಕು

  ಒದ್ದೊದ್ದೆ ಮೋಡಗಳು ಮುತ್ತಿ ಮುತ್ತಿಡುವಾಗ ಎಲ್ಲಿದ್ದೆ ನೀ ಹೊಟ್ಟೆಕಿಚ್ಚಿನವಳೆ ಹನಿ ಬಿದ್ದ ಒಡಲಲ್ಲಿ ಹೂ ನಗುವ ಹೊದ್ದಾಗ ಎಲ್ಲಿದ್ದೆ ನೀ ಹಸಿರ ಮನದವಳೆ? ಮೀಸೆ ಮೂಡಿದ ಪ್ರಾಯ ಕನಸುಗಳ ಕೊಡುವಾಗ ಎಲ್ಲಿದ್ದೆ ನೀ ಬನದ ಮೈಯವಳೆ? "Wait, you wrote this? To whom?"  ಗೋಪುಟ್ಟನ ಕತೆಗೆ ತಡೆಯೊಡ್ಡಿದ್ದೆ. ಪದ್ಯ ಬರೆವಷ್ಟು ಬರಗೆಟ್ಟ ಪ್ರೀತಿ ಅವನಲ್ಲಿದ್ದಿರಬಹುದೆಂಬ ಕಲ್ಪನೆಯೂ ಇದ್ದಿರಲಿಲ್ಲ. ------------------------------***--------------------------------- ಮತ್ತೆ ನಾನೆಂಗೆ ಇಂಟರಾಗೇಶನ್ ರೂಮಿಗೆ ಹೊಕ್ಕಿದೆ ಅನ್ನೋ ನಿಮ್ಮ ಪ್ರಶ್ನೆ ಉತ್ತರಿಸಿಯೇ ಮುಂದಿನ ಕತೆಗೆ ಹೋಗ್ತೇನೆ. ಅಕ್ಟೋಬರ್ ೧೫, ೨೦೨೧; ರಾತ್ರಿ ೮ ಗಂಟೆ ಹೊತ್ತು. ಎಸ್‌ಪಿಯವರು ಕರೆ ಮಾಡಿ,  "ಇಲ್ಲೇ ರೌಂಡ್ಸಿಗೆ ಬಂದಿದ್ದೆ, ನಿಮ್ಮ ಹೊಟೆಲ್ ಕಡೆ. ಒಂದಿಷ್ಟು ವಿಚಾರಗಳ ಬಗ್ಗೆ ಮಾತಾಡೋದಿತ್ತು, ಅಭ್ಯಂತರವಿಲ್ದಿದ್ರೆ ರೂಮಿಗೆ ಬರ್ಬೋದಾ?"  ಅಂತ ಕೇಳ್ದಾಗ ವಾಪಸ್ ಚೆನ್ನೈಗೆ ಹೋಗೋಕೆ ತಯಾರಾಗ್ತಿದ್ದೆ. ತೊಂದ್ರೆ ಇಲ್ಲ, ಬನ್ನಿ ಅಂದ ೫ ನಿಮಿಷಕ್ಕೆ ರೂಮೆದುರಿಗೆ ಬಂದು ಬಾಗಿಲನ್ನು ತಮ್ಮ ತೋರುಬೆರಳಲ್ಲಿ ಮೂರು ಬಾರಿ ತಟ್ಟಿದ್ದರು. "ಬನ್ನಿ, ಊಟ?"  ಅಂದೆ, ಬಾಗಿಲು ತೆರೆದು ಅವರ ಮುಖ ದರ್ಶನವಾದಮೇಲೆ. "ಇಲ್ಲ, ಇನ್ನೂ ಲೇಟ್ ಇದೆ. ನೀವ್ ಬೇಕಿದ್ರೆ ಊಟ ಆರ್ಡರ್ ಮಾಡಿ"  ಅಂದ್ರು ಎಸ್‌ಪಿಯವ್ರು. "ಪರ್ವಾಗಿಲ್ಲ

ಆಗಸದ ತೂತು | ಸಂಚಿಕೆ ೯ - ಅನಿಶ್ಚಿತ

  ಅಕ್ಟೋಬರ್ ಹದಿನೈದು, ಮಧ್ಯಾಹ್ನ ೪:೧೦. ಪೊಲೀಸರೇ ಸಿದ್ಧಪಡಿಸಿದ್ದ ಪ್ರಶ್ನಾವಳಿಗಳ ಪ್ರತಿ, ಪೆನ್ನು ಪಡೆದು ಇಂಟರಾಗೇಶನ್ ಕೋಣೆಯೊಳಗೆ ಹೋದೆ. ಜೊತೆಯಲ್ಲಿ ಕಟ್ಟುಮಸ್ತಾದ ಮೈಕಟ್ಟಿನ ಪಿಎಸ್‌ಐ ಸಾಹೇಬರು. ಅಂಗಿ ಮೇಲಿನ ಹೆಸರ ಪಟ್ಟಿ ಶ್ರೀನಿವಾಸ ರಾಯುಡು ಎಂದು ಓದಿಸಿಕೊಳ್ಳುತ್ತಿತ್ತು. ಗೋಪುಟ್ಟ ನಗುತ್ತಿದ್ದ. ಕೈಗಳು ಟೇಬಲ್ಲಿಗೆ ಬಂಧಿಸಲ್ಪಟ್ಟಿದ್ದವು. ಗುಂಗುರು ಕೂದಲು ಮತ್ತೂ ಉದ್ದ ಬೆಳೆದಿದ್ದವು, ಗಡ್ಡ-ಮೀಸೆಗಳು ಎರಡು ದಿನಗಳ ಹಿಂದಷ್ಟೇ ಕ್ಲೀನ್ ಶೇವಿಗೆ ಒಡ್ಡಿಕೊಂಡಿದ್ದ ಗುರುತಾಗಿ ಸುಟ್ಟ ಗೋಧಿ ಬಣ್ಣದ ಮುಖದ ಮೇಲೆ ಕಪ್ಪು ಚುಕ್ಕೆಗಳಂತೆ ಬೆಳೆದಿದ್ದವು. ಅದೇ ಮಾಸಲು ನಿಲುವಂಗಿ, ಧೂಳು ಮೆತ್ತಿದಂಥ ಜೀನ್ಸು ಪ್ಯಾಂಟು ತೊಟ್ಟಿದ್ದವ ನಾನು ಕೋಣೆಯೊಳಗೆ ಹೊಕ್ಕಾಗ ನಕ್ಕು 'ಮಾದಾ ಫಕಾ' ಎನ್ನುತ್ತಾ ತಬ್ಬಿಕೊಳ್ಳಲು ಎದ್ದ, ಕೈಗಳನ್ನು ಬಂಧಿಸಿದ್ದ ಸರಪಳಿ ಅದಕ್ಕಾಸ್ಪದ ಕೊಡಲಿಲ್ಲ. ಆಗಲೇ ಅವನ ಮುಖದಲ್ಲಿ ಸಿಡುಕಿನಂಥ ಭಾವವೊಂದು ಕಾಣಿಸಿ ಮರೆಯಾಯ್ತು, ಮಿಲಿ ಸೆಕೆಂಡುಗಳ ಲೆಕ್ಕದಲ್ಲಿ. "ಹೆಂಗಿದೀರಾ ಮಿಸ್ಟರ್ ವ್ಲಾಗರ್? Or should I call you wannabe vlogger?"  ಎಂದು ಹಂಗಿಸಿದ. ನಾನು ಸುಳ್ಳು ಹೇಳಿದ್ದು ಅವನಿಗೆ ಗೊತ್ತಾಗಿದೆ ಅನ್ನೋದು ಪೊಲೀಸರಿಗೆ ಅವ ನೀಡಿದ್ದ ನನ್ನ ವಿಳಾಸ, ಫೋನ್ ನಂಬರುಗಳಿಂದ ಮೊದಲೇ ತಿಳಿದಿತ್ತು. "ಫೈನ್, ಚೆನ್ನಾಗಿದೀನಿ. ನೀನು ಹೆಂಗಿದೀಯಾ ಅಂತ ಕೇಳೋಕೋಗಲ್ಲ; ಗೊತ್ತಾಗ್ತಾ ಇದೆ."

ಆಗಸದ ತೂತು | ಸಂಚಿಕೆ ೮ - ವಿಚಾರಣೆ, ಮತ್ತೊಂದಿಷ್ಟು

  ಅಕ್ಟೋಬರ್ ೧೪ರ ರಾತ್ರಿಯೇ ಬೆಂಗಳೂರನ್ನು ತಲುಪಿದರೂ ಸಿಸಿಬಿ ಕಚೇರಿಗೆ ಹೋಗುವ ಉಮೇದಿಯಿಲ್ಲದೆ ಮಾರನೇ ದಿನ ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಎಸ್‌ಪಿ ಸಾಹೇಬರಿಗೆ ಕರೆ ಮಾಡಿ, ಬೆಂಗಳೂರಿನಲ್ಲಿದ್ದೇನೆಂದೂ, ಎಷ್ಟು ಹೊತ್ತಿಗೆ ಬರಬೇಕೆಂದೂ ಕೇಳಿದೆ. ಇನ್ನರ್ಧ ಗಂಟೆಯಲ್ಲಿ ತಾನು ಕಚೇರಿಯಲ್ಲಿರುತ್ತೇನೆ, ನೀವೂ ಬನ್ನಿ ಎಂದು ತೀರಾ ಸೌಮ್ಯವಾಗಿಯೇ ಹೇಳಿದ್ದರು. ನಾನೆಷ್ಟು ಸಮಯಪಾಲಕ ಎಂಬುದು ನಿಮಗೆ ಗೊತ್ತಿರಲಿಕ್ಕಿಲ್ಲ, ಕರೆಕ್ಟು ಎಂಟು ಗಂಟೆ ಮೂವತ್ಮೂರು ನಿಮಿಷಕ್ಕೆ ಅವರ ಕಚೇರಿಯಲ್ಲಿದ್ದೆ. "ಸೋ, ನೀವು ಚೆನ್ನೈನಲ್ಲಿ ಏನು ಮಾಡೋದು?"  ಒಂದು ಫೈಲನ್ನು ಟೇಬಲ್ಲಿಗೆ ಎಳೆದುಕೊಂಡ ಎಸ್‌ಪಿ ಪ್ರಜ್ವಲ್ ಪ್ರಶ್ನಿಸಿದ್ದರು. ಆ ಫೈಲಿನಲ್ಲಿ ನನ್ನ ಬಗ್ಗೆ ಈಗಾಗಲೇ ಸಂಗ್ರಹಿಸಲಾದ ಮಾಹಿತಿ, ನನ್ನ ಪ್ರೊಫೈಲ್ ಇದೆಯೆಂದು ಯಾರಿಗಾದರೂ ಗೊತ್ತಾಗಬಹುದು. "ಮಿಡಿಯಾ ಹೌಸೊಂದರಲ್ಲಿ ಇನ್ಪುಟ್ ಹೆಡ್ ಆಗಿದೀನಿ ಸರ್"  ಅಂತಂದೆ. "You are a journalist ha? What you think about Bhatreri massacre?" ಏಕ್ದಂ ಹಿಂಗೆ ವಿಷಯಕ್ಕೆ ಬರ್ತಾರಲ್ಲ, ಅದು ಇಷ್ಟವಾಗತ್ತೆ. "It was shocking. I was fallowing that tragic news since it broke. Poor people" ಅಂದು ನನ್ನ ಸಂತಾಪ ವ್ಯಕ್ತಪಡಿಸಿದ್ದೆ. "You know anyone called Gopalakrishna alias Goputta?" ಮತ್ತೊಂದು ಸ್ಟ್ರೇಟ್ ಹಿ