Posts

Showing posts from April, 2016

ನರ್ಸಜ್ಜನ 'ಖತ್ರಿ'

                                   ನಾನು ದಿನಾ ಬಸ್ಸಲ್ಲಿ ಹೋಗ್ಬೇಕಾದ್ರೆ, ರುದ್ರಮೂಲೆಯನ್ನೋ ಆ ಊರ ಒಂಟಿಮನೆ,ಮನೆಯ ಮುಂದಿನ ಅಂಗಡಿ, ಅಂಗಡಿಯ ಮುಂದೆ ಬಸ್ಸನ್ನು ನೋಡ್ತಾ ನಿಂತ್ಕೊಳ್ಳೋ ಆ ಅಜ್ಜ ತುಂಬಾನೇ ಕುತೂಹಲ ಹುಟ್ಟಿಸೋ ಆಕೃತಿಗಳಾಗಿದ್ವು. ಊರು ಬಿಟ್ಟು ಬಂದ್ಮೇಲೆ ಆ ದಾರಿಯಲ್ಲಿ ಹೋಗಿದ್ದೇ ಕಡಿಮೆಯಾಗಿ ಅವೆಲ್ಲಾ ಮೆದುಳಿನ ಸುರುಳಿಗಳ ಮಧ್ಯೆ ಅಜೀರ್ಣವಾಗಿ ನೆನಪಾಗದಂತೇ ಉಳಿದುಬಿಟ್ಟಿದ್ವು. ಅದ್ಯಾವತ್ತೋ ಯಾರದೋ ಬಾಯಿಯಲ್ಲಿ ಆ 'ಖತ್ರಿ ಅಂಗಡಿ'ಯ ಕಥೆಯಂತಾ ಸುದ್ದಿ ಕೇಳೋವರೆಗೂ.       ನರ್ಸಜ್ಜ,ಅಂಥದ್ದೇ ಎಂಥದೋ ಹೆಸರು ಆ ಅಜ್ಜಂದು ಸರಿಯಾಗಿ ಜ್ಞಾಪಕವಿಲ್ಲ. ಯಾರೂ ಸುಳಿಯದ ಆ ಮೂಲೆಯಲ್ಲಿ ಅದೇಕೆ ಅಂಗಡಿಯಿಟ್ಟಿದ್ನೋ, ಅದೊಂದು ನಿಗೂಢವೇ ಸೈ. ಆಗ್ಲೇ ಎಪ್ಪತ್ತರ ಹತ್ತಿರದ ಪ್ರಾಯ. ಅಂಗಡಿಯ ಖಾಲಿಯಾಗದ ಸಾಮಾನುಗಳ ಅವಧಿ ಮುಗಿದ ನಂತರ ಅಂಗಡಿಯನ್ನ ಅದೆಂಗೆ ತುಂಬಿಡ್ತಿದ್ನೋ, ಅದು ಮತ್ತೊಂದು ನಿಗೂಢ. ಆತ ಬಸ್ಸಿಗೆ ಬಂದದ್ದಂತೂ ನಾನು ನೋಡಿಲ್ಲ. ಅಂತಾ ನರ್ಸಜ್ಜನ ಖತ್ರಿ ಅಂಗಡಿಯು ಈಗಲೂ ಇದೆ. ಗೋಡೆಯಿದೆ,ಬಾಗಿಲಿಲ್ಲ. ರೀಪು-ಪಕಾಸುಗಳ ಒಪ್ಪವಾದ ಅಲಂಕಾರವಿದೆ, ಛಾವಣಿಯಿಲ್ಲ. ಆ ಅಜ್ಜ?        ಎರಡು ವರ್ಷಗಳ ಹಿಂದಂತೆ,             ಯಾವತ್ತೂ ಜಲಜಾಕ್ಷಿಯಂಥದೊಂದು ಹೆಸರಿರಬಹುದಾದ, ನರ್ಸಜ್ಜನೆಂಬ ಅಜ್ಜ ಅಂಗಡಿಕಾರನ ಹೆಂಡತಿ ಕೊಟ್ಟಿಗೆ ಕೆಲಸವನ್ನೆಲ್ಲಾ ಮಾಡಿ ಚಾ ಮಾಡಿ ಗಂಡನಿಗೆ ಕೊಟ್ಟದ್ದರಿಂದ ಶುರುವಾಗಿತ್ತಿತ್ತು ನರ್