ಸಿಗರೇಟು

ಅಂವಂಗೆ ಸಿಗರೇಟು ಸೇದೋದು ಬರೀ ಚಟಕ್ಕಿಂತಾ ಜಾಸ್ತಿ ಅನ್ನುವಂಥದ್ದು. ದಿನಕ್ಕೆ ಎಷ್ಟು ಉರಿದು ಸಾಯುತ್ತಿದ್ವು ಅನ್ನೋ ಲೆಕ್ಕ ನನ್ನ ಬಳಿಯಂತೂ ಇಲ್ಲ. ಎಲ್ಲರಂತೇ ಅದೊಂದು ಚಟವಿಲ್ದಿದ್ರೆ ಭಾರಿ ಒಳ್ಳೆ ಮನ್ಷಾ ಅಂವ.
ಅಂಥಾ ಅವಂಗೆ ಒಂದು ಲವ್ ಸ್ಟೋರಿಯಿತ್ತು, ಮಾಮೂಲಿ ಕಥೆಯಲ್ಲ ಅನ್ನೋದು ನನ್ ನಂಬಿಕೆ. ಪ್ರತಿಬಾರಿ ಹೊಗೆ ಬಿಟ್ಟಾಗಲೂ ಆ ಹೊಗೆ ಒಂದು ಹುಡುಗಿಯ ಆಕಾರ ಪಡೆಯೋದು. ಶ್ವೇತ ಸುಂದರಿ! ಬಹುಶಃ ಆ ಸುಂದರಿಯ ಸಾನಿಧ್ಯಕ್ಕಾಗೇ ಅವನು ಸಿಗರೇಟು ಸೇದ್ತಿದ್ನೇನೋ.
ಸುಂದರಿಯ ಸಹವಾಸದಿಂದ ಮಾತಿಗಿಂತ ಅವನ ಬಾಯಿಯಿಂದ ಹೊಗೆಯೇ ಹೊರಹೊಮ್ಮುತ್ತಿತ್ತು. ಅವನ ಪ್ರೇಮ ಅದ್ಯಾವ ಉತ್ಕಟತೆಗೆ ಹೋಯ್ತೆಂದ್ರೆ, ಒಂದು ದಿನ ಆ ಸುಂದರಿಯ ಅಪ್ಪುಗೆ ಬಯಸಿದ. ಅವಳೂ ತೆಕ್ಕೆಗೆ ಎಳೆದುಕೊಂಡಳು. ಪಲ್ಲಂಗಕ್ಕೆ ಬರಸೆಳೆದಳು. ಮೈಥುನದ ಶಾಖಕ್ಕೆ ಉಸಿರು ಬಿಸಿಯಾಯ್ತು. ಅಮಲು ಕತ್ತಲಾಯ್ತು.
ಎದ್ದು ನೋಡಿದ, ತಡಕಾಡಿದ, ಇಲ್ಲ..ಸುಂದರಿ ಅಲ್ಲಿಲ್ಲ!
ದೇವರ ಮನೆಯತ್ತ ನೆಡೆದ ಆಕೆಯ ಹುಡುಕುತ್ತ. ಅಲ್ಲೊಂದು ಹಣತೆಯಿತ್ತು. ಅದೇಕೋ ಆ ಸುಂದರಿಯ ಘಮ ಇವನ ಮೂಗಿಗೆ ಸೋಕಿತು.
ಹಣತೆ ಆರಿತು, ಕಪ್ಪನೆಯ ಹೊಗೆ ಬಂತು. ಅದೇ ಸುಂದರಿ! ನೀಲಕನ್ಯೆ...

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ