ಬಸ್ಕತೆ

ನಗುವಿಗೆ ಅಡ್ಡ
ಕೈಯಿಟ್ಟು ನಕ್ಕಳು,
ಕೆಂಪು ಪ್ರೇಮಿನ
ಸುಲೋಚನದೊಡತಿ!
ರೇಷ್ಮೆಗೂದಲ ಹೆರಳ
ಹಿಂದೆತ್ತಿ ಕಟ್ಟಿಹಳು
ಪಕ್ಕದಲಿರುವಾಕೆಯ ಚೇಷ್ಟೆ
ನಗುವೇಕೋ ನಿಂತಿಲ್ಲ!
ಸಂಜೆ ಬಸ್ಸನಲಿ
ಇರುವೊಬ್ಬ ಚೆಲುವೆ,
ಎತ್ತರದ ನಿಲುವು
ತಾಮ್ರ ಬಣ್ಣದ ತೊಗಲು.
ಮುಗ್ಧ ಮಗುವಲ್ಲ
ಅಮಲ ಚೆಲುವು
ಕಂಗೆಟ್ಟು ನೋಡುತಿಹೆ,
ನಿಂತಿಲ್ಲ ನಗುವಿನ್ನೂ!!
ಜೋಳಿಗೆಯ ಕಂಡಕ್ಟರ
ತ್ರಾಸಭರಿತ ನೋಟ,
ಚಿಲ್ಲರೆಗಾಗಿ ಕೂಸ ಹುಡುಕಾಟ,
ಕಿಟಕಿದಾಟಿದ ಗಾಳಿಗೆ
ಮುಂಗುರುಳ ಜೊತೆಯಾಟ.
ಕುಂತಲ್ಲೇ ನೋಡಿದೆ
ಒಂಟೆಕತ್ತಲಿ ಅತ್ತ,
ಅಲ್ಲೆ ಬದಿಯಲಿ ಎನ್ನ
ಸೋದರಿಯ ಆಸನ
ತಿರುಗಿ ನೋಡಿದಳು
ತಂಗಿ ನನ್ನತ್ತ...
ಮುಗುಳ್ನಗೆಯನಿತ್ತು
ತಿರುಗಿದೆ ಗೆಳೆಯನತ್ತ,
ಚೆಲುವೆಯಿಳಿದಳು ಬಸ್ಸ,
ಕತ್ತಲೆಯಲಿ ಕರಗಿ,
ಕೊನೆಗೊಮ್ಮೆ ತಿರುಗಿ 

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ