Posts

Showing posts from January, 2016

ಖಾಲಿ ಕಾ೧

Image
ಎಲ್ಲ ಬರೆದಂತೆ ನಾನೂ ಬರೆಯುವೆ ಪದ್ಯವ, ಘರ್ಷಣೆಯದು, ಸಂಘರ್ಷದ್ದು ಉಚ್ಚೆವಾಸನೆಯ ಇತಿಹಾಸದ್ದು... ನನ್ನದೇ ಸೆಂಟೊಡೆದ ಬದುಕಿನದು. ಯಾರ ಹೆಸರಿಡಲಿ ಮೊದಲ ಸಾಲಿನಲಿ? ಶುರುವಾಗಲಿ ಅವನಿಂದ, ಮೇಲಿರುವನೆಂದು ಜನರನ್ನೋ ನಾ ನಂಬದ ದೇವನಿಗೇ ಥೂ, ಉಗಿದೆ... ಬಿತ್ತು, ಅಂಗವಸ್ತ್ರದ ಅಂಚಿನಲೇ ಒರೆಸಿದೆ ಮುಖವ. ಯಾರಂದು ಏನ ಮಾಡಲಿ? ನನ್ನ ಬದುಕಿದು, ನನ್ನದೇ ಪದ್ಯ. ಸುತ್ತೊಡೆದ ಭೂಮಿಯಲಿ ನಾನಿಬ್ಬನಿರುವೆ, ಎಲ್ಲ ಮರೆತಂತೇ. ನಾ ಕೆಟ್ಟವ ನೆನಪುಳಿದಂತೆ, ಚರಿತ್ರೆಯದು ಖಾಲಿ ಪುಸ್ತಕ.ಚೊ ಎಲ್ಲ ಬರೆದಂತೆ ನಾನೂ ಬರೆವೆ ಪದ್ಯವ, ಜಗಕೆ ಹೇಳುವುದಿದೆ ಕೂಗಿ, ನಾ ಹುಟ್ಟಾಕೆಟ್ಟವನಲ್ಲ ಕೆಟ್ಟೂ ಹುಟ್ಟಿದವನಲ್ಲ, ಹುಟ್ಟಿ ಕೆಟ್ಟವನು ಬೆಳೆದು ಕೆಡಿಸಲ್ಪಟ್ಟವನು...😊

ಶುರು

  ಮಧ್ಯಾಹ್ನ ನಿದ್ರೆ ಜಾಸ್ತಿಯಾಯ್ತು, ಈಗ ನಿದ್ರೆ ಬರ್ತಿಲ್ಲ.  ಹಿಂಗೇ ನ್ಯೂಸ್ ಪೀಡೆಯ ಬುಡ ಕಾಣುತ್ತೇನೋ ಅಂತ ನೋಡ್ತಿದ್ದೆ...ನಾಲ್ಕೈದು ಹಳೆ ಸ್ನೇಹಿತರು ಯಾವತ್ತೋ ಬದಲಿಸಿದ ಪ್ರೊಫೈಲ್ ಪಿಕ್ಚರ್ರುಗಳು ಕಂಡ್ವು.      ಬಹುತೇಕ ಎಲ್ಲರ ಡೀಪಿಗಳು ಪಾರ್ಮಲ್ ಅಂಗಿಗಳ ಒಳಗೆ ಅವರನ್ನ ಅಡಗಿಸಿಟ್ಟಿದ್ವು. ಹೊಟ್ಟೆ ಚೂರೇಚೂರು ದೊಡ್ಡದಾದ್ರೂ ಅಂಗಿಯಿಂದ ಬಿಡುಗಡೆಯಾಗುತ್ತವೇನೋ ಅನ್ವಂಗಿದ್ವು. ಲೈಕ್ ಒತ್ತದೇ ಅವರ ಪ್ರೊಫೈಲುಗಳನ್ನ ಚೆಕ್ಕಿಸಿದೆ. ಎಲ್ಲರದೂ ಒಂದೋ ದೊಡ್ಡ ಕಂಪನಿಯಲ್ಲಿ ಚಿಕ್ಕ ಜಾಬ್, ಚಿಕ್ಕ ಕಂಪನಿಯಲ್ಲಿ ದೊಡ್ಡ ಜಾಬ್ ಅಥವಾ ದೊಡ್ಡ ಚಿಕ್ಕ ಕಂಪನಿಗಳಲ್ಲಿ ದೊಡ್ಡ ಚಿಕ್ಕ ಜಾಬ್ಗಳಲ್ಲಿ ಇರೋದಾಗಿ ತೋರಿಸ್ತಿದ್ವು. ಆಗ ಅನ್ನಿಸಿದ್ದು, ನಾನೂ ಇಷ್ಟೊತ್ತಿಗೆ ಹಿಂಗಿರ್ಬೇಕಾಗಿತ್ತು ಅಲ್ವಾ ಅಂತ.        ಆ ಕ್ಷಣಕ್ಕೆ ಹಂಗನ್ನಿಸಿದ್ರೂ...ಊಹೂಂ ಯಾವುದೋ ಕಲರ್ ಕಾಲರಿನ ಪಾರ್ಮಲ್ ಷರ್ಟಿಗಿಂತಾ ನನಗಿಷ್ಟವಾದ ಕಾಲರ್ಲೆಸ್ ಟೀ ಷರ್ಟನ್ನೇ ಹಾಕಿಕಿಳ್ತಿರೋ ನನಗೆ ಆತ್ಮ ತೃಪ್ತಿಯಿದೆ. ಹಂಗಂತ ಅವರಿಗಿಲ್ಲ ಅಂತಲ್ಲ, ಆ ಜಾಗದಲ್ಲಿ ನನ್ನನ್ನು ಕಲ್ಪಿಸಿಕೊಳ್ಳೋಕೆ ನನಗೆ ಅಸಾಧ್ಯ. ದೊಡ್ಡ ನಗರದಲ್ಲಿ ಬದುಕೋದೂ ನನ್ನಿಂದಾಗದ ಕೆಲಸ. ನನಗೆ ನನ್ನೊಬ್ಬನಿಗೇ ಕೇಳುವ ಎದೆಬಡಿತ ಇಷ್ಟವೇ ಹೊರತು ನನ್ನೊಳಗಿನ ಮಾತೂ ಕೇಳದ ನಗರದ ಗಲಾಟೆ ಊಹ್ಞೂಂ ಇಂಪಾಸಿಬಲ್.       ಒಂದು ಜಾಬಿಗಾಗಿ ಊರು ಬಿಟ್ಟು ಪರದೇಸಿಯಾಗಿ ಬದುಕೋದಿದೆಯಲ್ಲಾ, ಅದರಷ್ಟು ಯಾತನೆ ಕಲ್ಪಿತ ನೆಲದಲ್