Posts

Showing posts with the label ಕತೆಗಳು

ಒಂದು ಭಾನುವಾರದ ಕತೆ

ಇಷ್ಟಿಷ್ಟೇ ಬದುಕುವ ಜೀವಕ್ಕೂ ಭವಿಷ್ಯದ ತೂಕ ಹೇರಿಬಿಡುವ ಜಗತ್ತಿಗೆ ಬಯ್ಯುತ್ತಲೇ ಭಾನುವಾರವೊಂದನ್ನು ಸ್ವಾಗತಿಸಲಾಯ್ತು. ಆವತ್ತೇ ಮೊದಲ ಬಾರಿ ಭಾನುವಾರವನ್ನು ನೋಡಿದ್ದೆಂದಲ್ಲ, ಪ್ರತಿ ರವಿವಾರವೂ ರವಿವಾರದಂತೆಯೇ ಜಿಗುಪ್ಸೆದಾಯಕ ದಿನ. ಆದರೂ ಆವತ್ತಿನ ಆದಿತ್ಯವಾರ ಬರೀ ದಿನದರ್ಶಿಕೆಯ ಮೇಲೆ ಕೆಂಪು ಬಣ್ಣದಲ್ಲಿ ಕಾಣಿಸಿಕೊಂಡದ್ದಲ್ಲ, ಮಾಸಾರಂಭದ ಸೂತಕದಂತೆ ಭಾಸವಾಗುತ್ತಿತ್ತು. ಆ ಭಾನುವಾರ ಅದ್ಯಾಕೆ ಭಾನುವಾರವಾಯ್ತು? ಗೊತ್ತಿಲ್ಲ! ಕಳೆದ ಸೋಮವಾರವಷ್ಟೇ ಮಲಗಿದ್ದೆನೇನೋ ಎಂದನಿಸಿ, ಭಾನುವಾರದ ಗಾಢ ಇಬ್ಬನಿಯನ್ನು ಕಿಟಕಿಯ ಈ ಬದಿಯಿಂದಲೇ ಗುರುತಿಸಿ ಚಾದರವನ್ನು ಕಣ್ಣ ಮೇಲೆ ಎಳೆದುಕೊಳ್ಳುತ್ತಿದ್ದಂತೆಯೇ ಮೊಬೈಲು ಟಿಣ್‌ಟಿಣಿಕ್ ಎಂದು ಹಲುಬಿ ತನ್ನ ನಿತ್ಯಕರ್ಮವನ್ನು ಶುರುಮಾಡಿದಾಗಿನ್ನೂ ಬೆಳಿಗ್ಗೆ ಆರು ಗಂಟೆ. ಇದೊಂದು ನೋಟಿಫಿಕೇಶನ್ನು ನೋಡಿಯೇ ಮುಂದಿನ ನಿದ್ರೆಯನ್ನು ಕಾಣೋಣವೆಂದು ಟೇಬಲ್ಲಿನ ಮೇಲೆ ಮಲಗಿದ್ದ ಮೊಬೈಲನ್ನು ಕೈಗೆತ್ತಿಕೊಂಡೆ. ಯಾವುದೋ ಗ್ರುಪ್‌ನಲ್ಲಿ ಬಂದ “ದರೋಡೆಕೋರರು, ನಾನು ಮತ್ತು ಇಗರ್ಜಿ" ಎಂಬ ದಪ್ಪಕ್ಷರದ ತಲೆ ಬರೆಹವಿದ್ದ ಮೆಸೇಜೊಂದನ್ನು ನೋಡಿ ಒಳ್ಳೆ ಕತೆಯಿದ್ದಂಗಿದೆ, ಓದಿಕೊಂಡೇ ವರಗೋದು ಬೆಸ್ಟು ಅಂತನಿಸಿ ಓದೋಕೆ ಶುರು ಮಾಡಿದೆ. ಒಳ್ಳೆ ಮಜಾ ಇತ್ತು ಕತೆ. ರಾತ್ರಿ ಹೊತ್ತು ಹೊಂಡಾ ಡಿಯೋ ಗಾಡಿಯನ್ನ ಓಡಿಸುತ್ತಿದ್ದ ಒಬ್ಬನ ಬಳಿ ನಾಲ್ವರು ಬಂದು ಅಡ್ರೆಸ್ ಕೇಳಿದ್ದಾಗ್ಯೂ,ಅಡ್ರೆಸ್ ಹೇಳಿ ಮುಂದೆ ಹೋದವನ ಬೆನ್ನತ್ತಿ ಬ...

ಪತ್ತೆದಾರಿ ಕತೆ

      ನಾ ನು ಮೊದಲಿಂದಲೂ ಅಷ್ಟೇ, ತೀರಾ ಶೆರ್ಲಾಕ್ ಹೋಮ್ಸ್‌ನಷ್ಟಲ್ಲದಿದ್ದರೂ ಒಂದು ರೇಂಜಿಗೆ ಬೆಶ್ಟ್ ಪತ್ತೇದಾರ. ಸಣ್ಣಕಿದ್ದಾಗಲೇ ನಮ್ಮ ತೋಟದ ಮಂಡಗಾಲುವೆ ಬದಿಯ ಬಕ್ಕೇಮರಕ್ಕೆ ಬೆಳೆದಿದ್ದ ಬಕ್ಕೆ ಹಣ್ಣು ಕಾಣೆಯಾದಾಗ ನನ್ನ ಚಾಣಾಕ್ಷತನದಿಂದ ಕಳ್ಳನನ್ನು ಹಿಡಿದಿದ್ದೆ. ಹೆಂಗೆ ಅಂತೀರಾ? ಹೇಳಿದರೂ ನಿಮಗೆ ತಿಳಿಯಲಿಕ್ಕಿಲ್ಲ ಬಿಡಿ. ಹೋದ ತಿಂಗಳು ನಡೆದ ಕೊಲೆಯ ಆರೋಪಿಯನ್ನು ಪತ್ತೆ ಹಚ್ಚಿದ ಮೇಲಂತೂ ನನ್ನ ಪ್ರೊಫೆಶನನ್ನೇ ಬದಲಾಯಿಸಿ ಪೂರ್ಣಾವಧಿ ಪತ್ತೇದಾರಿಕೆ ಮಾಡಬೇಕೆಂದು ತೀರ್ಮಾನಿಸಿದ್ದೇನೆ. ಅದಕ್ಕೂ ಮೊದಲು ನಡೆದದ್ದೇನು ಅಂತ ಹೇಳಿ ನಿಮ್ಮ ಅಭಿಪ್ರಾಯವನ್ನೂ ಕೇಳೋಣ ಅಂದುಕೊಂಡೆ. (ನಿಮ್ಮ ಅಭಿಪ್ರಾಯ ನನ್ನ ತೀರ್ಮಾನವನ್ನು ಬದಲಾಯಿಸಲಾರದು. ನನ್ ಬದುಕು, ನನ್ ರೂಲ್ಸು. ಕೇಳೋಕ್ ನೀವ್ಯಾರು) ನಮ್ಮೂರು ಮೆರವಣಿಗೆ ಪಕ್ಕದ ಹಳ್ಳಿ. ಜಗತ್ತಿನಲ್ಲಿ ನಡೆವ ಎಲ್ಲಾ ಥರದ ಘಟನೆಗಳೂ ಮೆರವಣಿಗೆಯಲ್ಲಿ ನಡೀತವೆ. ಅದಕ್ಕೇ ಆ ಊರು ನಿಮಗೆ ಗೊತ್ತಿರಬಹುದು. ನಮ್ಮೂರು ಅಗ್ದಿ ಶಾಂತ, ಸೌಮ್ಯ, ಸಹಬಾಳ್ವೆಯ ಮಂದಿ ಬದುಕೋ ಊರು. ಹೊಳೆಗೆ ಬ್ರಿಜ್ ಇಲ್ಲ, ರಸ್ತೆಯಿಲ್ಲ. ಆದರೂ ಇಪ್ಪತ್ತಿಪ್ಪತ್ತೈದು ವರ್ಷದಿಂದ ವೋಟು ಒತ್ತಿದ್ದು ಮಾತ್ರ ಒಬ್ಬರಿಗೇ. ಕಾರಣ ಗೊತ್ತಲ್ಲ, ಆತ ಯಾರಿಗೂ ಕೆಟ್ಟದು ಮಾಡದ ಗೋವಿನಂಥಾ ಮನ್ಷ ಅಂತ. ನೋಡಿ, ಪತ್ತೇದಾರಿ ಕತೆ ಹೇಳೋನಿಗೆ ರಾಜಕೀಯ ಬೇರೆ ನೆನ್ಪಾಯ್ತು. ಅಲ್ಲ, ಯಾಕೆ ಆ ವಿಷ್ಯ ಬಂತು ಅಂದ್ರೆ, ನಮ್ಮೂರಿನ ಮಂದಿ ಅಗ್ದಿ...

ಉಂಬಳ

Image
      ಸಣ್ಣಕಿದ್ದಾಗ ಕಂಡಿದ್ದಷ್ಟೇ ಭಯಂಕರ ಮಳೆಗಾಲವದು. ಮನೆಗೂ ತೋಟಕ್ಕೂ ಮಧ್ಯದ ಹಳ್ಳ ದಾಟಲು ಕಟ್ಟಿಕೊಂಡಿದ್ದ ಬ್ರಿಜ್ಜು ತೇಲಿಹೋಗುವಷ್ಟು ಮಳೆ ಬಂದಿತ್ತು ಅಂದ್ರೆ ಭಯಂಕರ ಅಂತಲೇ ಉದ್ಗಾರ ಹೊರಬರೋದು. ಅಂಥ ಭರ್ಜರಿ ಮಳೆಗಾಲದ ದಿನ ಮಂಜು ನಮ್ಮನೆಯತ್ತ ಬರುತ್ತಿದ್ದುದು ಟಾರಸಿಯ ಮೇಲೆ ಆರಾಮು ಕುರ್ಚಿ ಹಾಕಿ ಕುಂತಿದ್ದ ನಂಗೆ ಕಂಡಿತು. ದೂರದಿಂದಲೇ, ಬರುತ್ತಿರುವ ಮನುಷ್ಯ ಮಂಜು ಎಂದು ಗುರುತು ಹಿಡಿಯಬಲ್ಲ ರೂಪು ಅವನದ್ದು. ಮೊಣಕಾಲನ್ನು ಹೌದೋ ಅಲ್ಲವೋ ಎನ್ನುವಷ್ಟು ಮಾತ್ರ ಮಡಚಿ ನಡೆಯುವ ನಡಿಗೆಯ ಶೈಲಿಯೂ ಅವನಿಗಷ್ಟೇ ಒಲಿದ ಕಲೆಯಂತೆ ಅನಿಸೋದುಂಟು. ಉದ್ದ ದಂಟಿನ ಕಮಲಕಡ್ಡಿ ಕೊಡೆಯನ್ನು ಅದೆಲ್ಲಿಂದ ಹುಡುಕಿ ಕೊಂಡುಕೊಳ್ಳುತ್ತಾನೋ ಗೊತ್ತಿಲ್ಲ, ಬಟನ್ ಛತ್ರಿಗಳ ಕಾಲದಲ್ಲಿ ನನ್ನಂಥವರಿಗೆ nostalgia ಹುಟ್ಟಿಸುವಷ್ಟು ಟಿಪಿಕಲ್ ಆಸಾಮಿ ಈ ಮಂಜು. ಇಂಥ ಮಳೆಯಲ್ಲಿ ಹೊಳೆ ಹೆಂಗೆ ದಾಟಿದನೋ ಎಂಬ ಕುತೂಹಲದ ಸಂತಿಗೇ ಈಗ ಬರೋ ಅರ್ಜೆಂಟು ಏನಿತ್ತು ಅನ್ನೋ ಪ್ರಶ್ನೆಯೊಂದು ಮೂಡಿತ್ತು. ನಮ್ಮನೆಯತ್ತ ಬಂದವನ ನಡುಗೆ ನಿಧಾನವಾಗಿತ್ತು. ನಮ್ಮನೆಯತ್ತ ತಿರುಗುವ ಕಾಲುಹಾದಿಯಲ್ಲಿ ಮೂರೋ- ನಾಲ್ಕೋ ಹೆಜ್ಜೆಯಿಟ್ಟವ ದಾರಿ ಬದಲಿಸಿಬಿಟ್ಟ! ಬಹುಶಃ ನನ್ನನ್ನು ಗಮನಿಸಲಿಲ್ಲವೇನೋ. ಸ್ಟ್ಯಾಂಡು ಹುಗಿಯುತ್ತದೆಂದು ಬೈಕನ್ನು ಶೆಡ್‌ನಲ್ಲಿ ಇಡದೇ ಅಂಗಳದೊಳಕ್ಕೆ ತಂದು ಇಟ್ಟಿದ್ದೆ. ಬಹುಶಃ ಬೈಕು ಕಾಣದೇ ನಾನು ಮನೆಯಲ್ಲಿಲ್ಲ ಅಂದುಕೊಂಡು ಹೊಂಟನೇನೋ ಎಂದು...

ವಿದಾಯ...

Image
ಅಧೂರಿ ಆಂಸ್ ಚೋಡ್‌ಕೆ ಅಧೂರಿ ಪ್ಯಾಸ್ ಚೋಡ್‌ಕೆ ಮೇ ರೋಜ್ ಯೂಹೀಂ ಜಾವೂಂಗಿ ತೋ ಕಿಸ್ ತರಹ್ ನಿಭಾವೋಗೆ ಯೇ ಜಿಂದಗೀಕಿ ರಾಹ್ ಮೇಂ ಜವಾಂ ದಿಲೋಂಕಿ ಚಾಹ್ ಮೇಂ ಕಯೀಂ ಮಕಾಮ್ ಆಯೆಂಗೆ ಜೋ ಹಮ್ ಕೊ ಆಜಮಾಯೇಂಗೆ ಬೂರಾ ನಾ ಮಾನೋ ಬಾತ್‌ಕಾ ಯೇ ಪ್ಯಾರ್ ಹೆ ಗಿಲಾ ನಹೀಂ... ಅಭೀ ನಾ ಜಾವೋ ಚೋಡ್ ಕರ್ ಕೆ ದಿಲ್ ಅಭೀ ಭರಾ ನಹೀಂ... ಇಂಥದ್ದೊಂದು ಅಗ್ದಿ ಇಷ್ಟವಾಗೋ ಹಾಡು ಕನ್ನಡದಲ್ಲಿ ಅದ್ಯಾಕೆ ಕೇಳಿಲ್ಲವೋ ನಾನು. ಇಷ್ಟು ಆಪ್ತವಾಗುವ ಭಾವನೆ, ಶಬ್ದಗಳು ಬರೀ ನನಗಾಗೇ ಬರೆದದ್ದಾ ಅನಿಸುವಷ್ಟು ಹತ್ತಿರವಾಗಿವೆ.. ಅವಳನ್ನ ಮೊದಲಬಾರಿ ಭೆಟ್ಟಿಯಾದಗಲೂ ಅಷ್ಟೇ ಅಲ್ಲವೆ? ಮೊದಲ ಬಾರಿ ಮಾತ್ರವಲ್ಲ, ಪ್ರತಿಬಾರಿಯೂ ಹೋಗ್ಬೇಡ ಅಂತ ಗೋಗರೆದು ಮಳ್ಳಾ ಅಂತ ಬೈಸ್ಕೊಳೋದು ಖಾಯಮ್ಮಾಗಿತ್ತು. ಅಷ್ಟು ಅಮಲು ಅವಳಲ್ಲಿತ್ತಾ ಅಥವಾ ನಮ್ಮ ಪ್ರೇಮದಲ್ಲಿತ್ತಾ? ಗೊತ್ತಿಲ್ಲ. ನಾವು ಭೆಟ್ಟಿಯಾದ ಮುನಿಸಿಪಾಲ್ಟಿ ಲೈಬ್ರರಿಯ ಬಾಗಿಲೂ ದಿಕ್ಕುತಪ್ಪಿದೆ ಈಗ‌. ಅಲ್ಲಿಗೆ ಪ್ರತಿಬಾರಿ ಹೋದಾಗ್ಲೂ ಗೋಣಿ ಚೀಲದಲ್ಲಿ ತುಂಬಿ ತರುವಷ್ಟು ನೆನಪುಗಳಿರತ್ವೆ. ಊರಿಗೆ ಹೋದಾಗೆಲ್ಲ ಆ ಫ್ರೆಶ್ಶು ನೆನಪುಗಳಿಗಾಗಿ ಗ್ರಂಥಾಲಯ ಹೊಕ್ಕುವ ಮನಸ್ಸಾಗತ್ತೆ. ಯೇ ಜಿಂದಗೀಕಿ ರಾಹ್ ಮೆ, ಕಯೀಂ ಮಕಾಮ್ ಆಯೆಂಗೆ... ಮತ್ತವಳ ಸಂಪರ್ಕ ಬೆಳ್ಯತ್ತೆ ಅಂತಾಗ್ಲಿ, ಅಷ್ಟೇ ಆತ್ಮೀಯತೆಯಿಂದ ಮಾತಾಡ್ತೇನೆ ಅಂತಾಗ್ಲೀ ಊಹೆಯೂ ಇರ್ಲಿಲ್ಲ. Love can happen twice ಅನ್ನೋದು ಹಳೆ ಅನುಭ...

ನಾಯಿಮಳ್ಳ

ಮೊದಲು ನಾಯಿ ಮಳ್ಳ ಬಂದ. ಹೆಗಲಿಗೊಂದು ಜೋಳಿಗೆ, ಅದರಲ್ಲೊಂದು ನಾಯಿಮರಿ. ನರಪೇತಲ ನಾಯಿಯೊಂದು ಅವನ ಹಿಂದೆ. ಅದರ ಸಂಗಾತಿ ಮತ್ತೊಂದು ನಾಯಿ; ಕತ್ತಿಗೆ ಕಟ್ಟಿಸಿಕೊಂಡಿದ್ದ ಒಂದಂಗುಲ ದಪ್ಪದ ಸರಪಳಿಯ ಮತ್ತೊಂದು ತುದಿ ನಾಯಿಮಳ್ಳನ ಕೈಯಲ್ಲಿತ್ತು. "ಒಂದ್ ಕೆಂಪೀ ಹೆಣ್ ಕುನ್ನಿ ಒಂದ್ ಹೆಂಗ್ಸಿನ ಸಂತಿಗೆ ಬಂದಿತ್ತು. ಹೊಳೆ ಬುಡ್ಕೆ ಕಂಡಿತ್ತು. ಅದ್ಯಾರ್ ನಾಯೀನ್ರಾ? " ಅಂತ ಕೇಳಿದಾಗ ಅದು ಮಡಿವಾಳರ ಕೇರಿ ಚಂದ್ರನದ್ದೆಂದೂ, ಅವನ ಹೆಂಡತಿ ತಾರಾಳೊಟ್ಟಿಗೆ ಗದ್ದೆ ಕಡೆ ಬಂದಿತ್ತೆಂದೂ ಹೇಳಿದೆ. "ಚಂದ್ರನ ಮನೆ ಎಲ್ಲಿ?" ಎಂದು ಕೇಳಿದ್ದ. ಹಿಂಗೇ ಬೆಟ್ಟದ ಕೆಳಗೆ ಹಾವು ಹರಿದಂತೆ ಹೋಗಿರೋ ಕಾಲುಹಾದಿಯಲ್ಲಿ ನೆಟ್ಟಗೆ ಹೋದಾಗ ಸಿಗೋ ಮೂರನೇ ಮನೆಯೆಂದು ಹೇಳಿ ನನ್ನ ಬೈಕನ್ನು ತೊಳೆಯೋ ಕೆಲಸ ಮುಂದುವರಿಸಿದ್ದೆ.      ಮಾರನೇ ದಿನ ವಾಪಸ್ಸು ಕೆಲಸಕ್ಕೆ ಹಾಜರಿರಬೇಕಿತ್ತು. ಸಂಜೆ ಮನೆಗೆ ಬರೋವರೆಗೆ ದನಗಳಿಗೆ ತಿನ್ನಲು ಬೇಕಲ್ಲ, ಹೊಳೆಬದಿಯ ಹಾಳು ಗದ್ದೆಗೆ ಹೋಗಿ ಹಸಿ ಹುಲ್ಲು ಸವರುತ್ತಿದ್ದೆ. ಹುಲ್ಲು ಸವರುತ್ತಿದ್ದವನಿಗೆ ಈ ನಾಯಿ ಮಳ್ಳನದ್ದೇ ಯೋಚನೆ. ಭಯಂಕರ ಲವಲವಿಕೆಯ ಮನುಷ್ಯ. ಅದ್ಯಾಕೆ ಈ ಮಳ್ಳ ಮಳ್ಳನಾದನೋ ಗೊತ್ತಿಲ್ಲ, ಗೊತ್ತು ಮಾಡಿಕೊಳ್ಳುವ ಜರೂರತ್ತು ಇದೆ ಅನ್ನಿಸಿತು. ನಾನೂ ಶರತ್‌ಚಂದ್ರರ ದೇವದಾಸ್ ಓದಿದ್ದೆ. ಪಾರೋ ಸಿಗದೇ ನಾಯಿಗಳನ್ನೇ ಪತ್ನಿಯರಂತೆ ಸಾಕೋ ಕ್ಯಾರೆಕ್ಟರ್ರು ಪರಿಚಯವಿತ್ತು. ನಮ್ಮೂರಿನಲ್ಲೇ ತನಗೆ ನಟಿ ಮಂಜು...

ಮುಳ್ಳಂದಿ ಅಂಬು ಮತ್ತು ಎಂಟು ತಿಂಗಳು

“ಇಲ್ಲಿಯ ಅಡಿಕೆಗೊನೆಗಳಿಗೆ ಚೌಡೇಶ್ವರಿಯ ಕಾವಲಿದೆ. ತೋಟದ ತುದಿಯ ವಾಟೆಮಟ್ಟಿಗೆ ಹೊಕ್ಕಿದ ಹೆಂಗಸರಿಗೆ ಯಾವ ಕಾವಲೂ ಇಲ್ಲ." ಹೀಗೆ ಎರಡು ವಾಕ್ಯಗಳನ್ನು ಓದಿಸುತ್ತಿತ್ತು ಆ ತಂತಿ ಬೇಲಿಯ ಅಂಚಿನ ಅಡಿಕೆ ಮರಕ್ಕೆ ತೂಗುಬಿಟ್ಟಿದ್ದ ಒಂದು ಚದರಡಿಯ ಬೋರ್ಡು. ರಾಮ ಎದುರುಸಿರು ಬಿಟ್ಟುಕೊಂಡು ಬಂದಾಗ ವಿಷಯದ ಗಾಂಭೀರ್ಯತೆ ಇಷ್ಟಿರಬಹುದು ಎಂಬ ನಿರೀಕ್ಷೆಯಿದ್ದಿರಲಿಲ್ಲ. ಒಂದು ಉದ್ದನೆಯ ಉಸಿರ ಒಳಗೆಳೆದು ಬಿಟ್ಟ ಮಂಜ್ನಾಥ ಹೆಗಡೆ. ಹಿಂದೆಯೇ “ಅದ್ರಜ್ಜಿಕುಟಾ" ಎಂಬ ಉದ್ಗಾರ, ತುಸು ಕೋಪದಿಂದೆಂಬಂತೆ. ‘ಗಂಗಾ...’ ಸೊಪ್ಪಿನ ಬೆಟ್ಟದಲ್ಲಿ ರಾಮನ ಕೂಗು ಮೊಳಗಿದಾಗ ಕರೆಯ ಉದ್ದೇಶ ಸ್ಪಷ್ಟವಾಗಿತ್ತು. ಉದ್ದ ತೋಳಿನ ಗಂಡಸರ ಅಂಗಿ, ಸೊಂಟಕ್ಕೊಂದು ಸವಕಲು ಟುವಾಲು ಸುತ್ತುಕೊಂಡಿದ್ದ ಕಪ್ಪುಗಂಗಳ ಗಂಗಾ ನೀರಿನ ಉಗ್ಗ ಇಟ್ಟಿದ್ದ ಹೊನ್ನೆಮರದ ಬುಡದತ್ತ ಹೊಂಟಳು. ಮರದ ಹೆಣೆಗಳ ಜೊತೆ ಕತ್ತಿಗಳ ಗುದ್ದಾಟದ ಸದ್ದು ಆಲಿಸಿ, ಹಿಂಬಾಲಿಸಿ ರಾಮ ಬೆಟ್ಟ ತಲುಪಿದ್ದ. “ಹಗೀರ್ ಮನಿ ಕೆಲ್ಸನೂ ಸಾಕು, ಕಿತ್ರಾಬಿದ್ ಓಡೂದೂ ಸಾಕು", ರಾಮ ಗೊಣಗಿಕೊಂಡ. “ಎಂತಕ್ಕೆ ಕರ್ದೆ?" ಗಂಗಾಳ ನೇರ ಪ್ರಶ್ನೆ, ಹಾಯಗದ ಎಲೆಗೆ ಬಳಿದಿದ್ದ ಬೆಲ್ಲವ ಖಾಲಿ ಮಾಡುತ್ತಾ ಹೊರಬಂತು. “ಮಂಜ್ನಾತೆಗ್ಡ್ರು ಕರೀತವ್ರೆ, ಬ್ಯಾಗ್ ಬರೂಕಂದ್ರು", ರಾಮ ಬಂದ ಕೆಲಸ ಮುಗಿಸಿದ. “ಈಗಾಗೂದಿಲ್ಲಾ, ಭಟ್ರ್ ಸೊಪ್ ಕಡಿಬೋಕು" ಅಂದು ಗಂಡಾಳುಗಳು ಮರಹತ್ತಿ ಕಡಿದು ಕೆಡಗಿದ್ದ ಭಾ...

ಅಸಂಭಾವನೆ

Image
      “ಶಿರ್ಸಿ ಪ್ಯಾಟೆ ಊದ್ದಕೆ ಬೆಳೆದ ಕಾಲವದು. ಅತ್ತ ಇಸಳೂರನ್ನು ದಾಟಿ, ಇತ್ತ ಅಮ್ಮೀನಳ್ಳಿ ದಾಟಿ, ಆಕಡೆ ಬನವಾಸಿಯನ್ನೂ ತನ್ನೊಳಗೆ ಸೇರಿಸಿಕೊಂಡು ಬ್ರಹನ್ನಗರಿಯಾಗುವತ್ತ ತಯಾರಾಗಿತ್ತು." ಹಿಂಗೆ ಹೇಳುತ್ತಿದ್ದಂತೇ, ನಾನು ನೋಡಿದ್ದೇನೆ ಶಿರಸೀನ, ಅಷ್ಟೆಲ್ಲಾ ದೊಡ್ಡ ಇಲ್ಲ ಸುಳ್ ಹೇಳ್ಬೇಡ. ಇದೊಂದು ಸ್ವಪ್ನವೋ, ಕಲ್ಪನೆಯೋ ಎಂಥದೋ ಒಂದೆಂದು ಹೇಳಿದಳು ಸಾನ್ವಿ.         ಸಾನ್ವಿ, ಹುಟ್ಟಿದ್ದು ಬೆಂಗಳೂರಿನಲ್ಲಿದ್ದ ಅಜ್ಜಿ ಮನೆಯಲ್ಲಿ. ಬೆಳೆದಿದ್ದು ಲಂಡನ್ನಿನ ‘ಸಿಟಿ ಆಫ್ ಲಂಡನ್ ಸ್ಕೂಲ್ ಫಾರ್ ಗರ್ಲ್ಸ್’ ಅನ್ನೋ ಈಷ್ಟುದ್ದದ ಹೆಸರುಳ್ಳ ಶಾಲೆಯಲ್ಲಿ.  ಭಾರತೀಯ ಸಂಸ್ಕಾರಗಳನ್ನು ಮೆಮೊರಿ ಕಾರ್ಡಿನಲ್ಲಿ ಫೀಡ್ ಮಾಡಿದರೆ ಹೆಂಗಿರಬಹುದು? ಸಾನ್ವಿ ಹಂಗೇ ಇದ್ದಳು. ಕನ್ನಡ ಗೊತ್ತು, ಇಂಗ್ಲೀಷಿನಂತೇ! ಹನ್ನೆರಡನೇ ಇಯತ್ತೆ ಮುಗಿಸಿ ಬಂದವಳಿಗೆ ಅದ್ಯಾಕೆ ‘ಇಂಡಿಯನ್ ಇಕಾನಮಿ’ ಬಗ್ಗೆ ಅಧ್ಯಯನ ಮಾಡಬೇಕೆಂದು ಅನಿಸಿತ್ತೋ, ಗೊತ್ತಿಲ್ಲ.        “ಅಜ್ಜೀ, ಕಥೆ ಹೇಳೆ" ಇಷ್ಟು ದೊಡ್ಡವಳಾದರೂ ಅಜ್ಜಿಯ ಬಾಯಲ್ಲಿ ಕತೆ ಕೇಳುವ ಹುಚ್ಚು. ಕಾಗಕ್ಕ ಗುಬ್ಬಕ್ಕನ ಕತೆ ಹೇಳಿದರೆ ಅಜ್ಜಿಗೆ ಲಂಡನ್ನಿಂದ ತಂದ ಚಾಕ್ಲೇಟಿಲ್ಲ. ಮತ್ತೆಂತ ಕತೆ ಬೇಕು? ಹ್ಞೂಂ, ಸಿಂಡ್ರೆಲ್ಲಾಳ ಕನ್ನಡ ವರ್ಷನ್ನಾದರೆ ಪರವಾಗಿಲ್ಲ ಅಂತ ಪರೋಕ್ಷ ನಿಬಂಧನೆಯೂ ಇತ್ತು. “ಈಗ ಒಪ್ಕೋ, ಶಿರಸಿ ಬೆಂಗ್ಳೂರಿಗಿಂತಾ ದೊಡ...

ವೇದಕ್ಕಳ ಶವಯಾತ್ರೆ

ಗನಾಕೆ ಮಳೆ ಹೊಯ್ಯುತ್ತಿದ್ದ ಒಂದು ಬೆಳಿಗ್ಗೆ ವೇದಕ್ಕ ಸತ್ತು ಹೋದಳು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ತಾಸು ಘಳಿಗೆಯಲ್ಲಿ ಮೊದಲ ಸಲ ಅತ್ತಿದ್ದ ವೇದಕ್ಕ, ಎಪ್ಪತ್ತೊಂದನೇ ಸ್ವಾತಂತ್ರ್ಯೋತ್ಸವಕ್ಕೆ ಸ್ವತಂತ್ರಳಾದಳು. ಅಲ್ಲಿಗೆ ನಮ್ಮೂರ ಎರಡು ತಲೆಮಾರುಗಳ ಕೊಂಡಿಯೊಂದು ಕಳಚಿಬಿತ್ತು.     ವೇದಕ್ಕ ಸ್ವರ್ಗಸ್ಥಳಾಗಿದ್ದನ್ನು ಈ ರೀತಿ ಹೇಳಬೇಕೇ? ಹೀಗೊಂದು ಪ್ರಶ್ನೆಯನ್ನು ನೀವು ಕೇಳಬಹುದು, ಅದಕ್ಕೆ ನೀವೂ ಸ್ವತಂತ್ರರು ಕೂಡ. ವೇದಕ್ಕ ಅನ್ನೋ ವ್ಯಕ್ತಿತ್ವ ಭಾರತದಷ್ಟೇ ವಿಶಾಲವಾದದ್ದು, ಅಷ್ಟೇ ವೈವಿಧ್ಯಮಯವೂ ಹೌದು. ಸ್ವತಂತ್ರ ಭಾರತದ ಆಗುಹೋಗುಗಳ ಜೀವಂತ ಚಿತ್ರಣವಾದವಳು ಈಗಿಲ್ಲ.     ವೇದಕ್ಕ ಹುಟ್ಟಿದಾಗ ಆಕೆಯೂ ಎಲ್ಲರಂತೇ ಇದ್ದಳು. ಅಂದರೆ ಗೂನು ಬೆನ್ನಿರದ, ಎರಡು ಬೇರೆ ಬೇರೆ ದಿಕ್ಕನ್ನು ತೋರಿಸುವ ಕಂಗಳಿರದ, ಸಪೂರ ದೇಹ ಹೊಂದಿರದ ನಾರ್ಮಲ್ ಮಗುವಿಗೆ ವೇದಾ ಎಂಬ ಚೆಂದನೆಯ ಹೆಸರಿಟ್ಟರು. ಆದರೆ ಹೆಸರಿನಷ್ಟೇ ಚೆನ್ನಾಗಿ ಬೆಳೆಯಬೇಕಿದ್ದ ಮಗುವಿಗೆ ವರ್ಷ ತುಂಬುವುದರೊಳಗೆ ಪೋಲಿಯೋ ಹತ್ತಿಕೊಂಡಿತು. ಆ ಭಾರಕ್ಕೆ ಡೊಂಕ ಕಾಲು, ಗೂನು ಬೆನ್ನುಳ್ಳ ವಿಕಾರ ವೇದಕ್ಕನನ್ನು ರೂಪಿಸಿದ್ದು ಹೌದು. ಹತ್ತನ್ನೆರಡು ಮಕ್ಕಳನ್ನು ಸಾಕಬೇಕಿದ್ದ ವೇದಕ್ಕನ ಅಮ್ಮ, ‘ಸುಬ್ಬಜ್ಜಿ’ ಎಷ್ಟು ಆರೈಕೆ ಮಾಡಿಯಾಳು? ವೇದಕ್ಕನ ನಂತರ ಮತ್ತೂ ಹುಟ್ಟುತ್ತಲೇ ಉಳಿದ ಮಕ್ಕಳನ್ನು ಚೆನ್ನಾಗಿ ಸಾಕುವಲ್ಲಿ ಸುಬ್ಬಜ್ಜಿ ವ್ಯಸ್ತಳಾದಳು.     ಬಿಪಿ...

ಸಿಕ್ಕಳಾ ಹುಡುಗಿ?

''ತಮಾ, ಎದ್ಕಳ..." ಬಾಗಿಲಿಗೆ ಕೈ ತಾಗಿದ ಸದ್ದಂತಿತ್ತು, ಅಪ್ಪ ಬಾಗಿಲು ಬಡಿದದ್ದು. ಅವನಿಗೆ ಗೊತ್ತು, ನಿದ್ರೆ ಹಾಳಾದಾಗ ನನಗೆಷ್ಟು ಕೋಪ ಬರುತ್ತದೆಂದು. ದೂರದಲೆಲ್ಲೋ ದನಿ ಕೇಳಿದಂತಾದರೂ ಪೂರ್ತಿಯಾಗಿ ಈ ಲೋಕಕ್ಕೆ ಬಂದಿರಲಿಲ್ಲ ನಾನು. ''ಬಯಲುಸೀಮಿಂದ ಹುಡ್ಗಿ ಹೊತ್ಕ ಬಂಜ್ವಡಾ ಯಾರೋವಾ, ಹುಡ್ಕಲೆ ಪೊಲೀಸ್ರು ಬಂಜ" ಅನ್ನೋ ಮಾತು ಎರಡನೇ ಬಾರಿ ಕೇಳುವುದರೊಳಗೆ ಕಾಲುಗಳು ಬಾಗಿಲತ್ತ ಒಯ್ದಿದ್ದವು, ಕೈಗಳು ಚಿಲಕ ತೆರೆದಿದ್ದವು. ಅದೆಷ್ಟು ಬೇಗ ಬಾಗಿಲತ್ತ ಸಾಗಿದ್ದೆನೋ ಅಷ್ಟೇ ಬೇಗ ಮತ್ತೆ ಚಾದರ ಹೊದ್ದು ಮಲಗಿದ್ದೆ. "ಹೋಗ್ತಾ ಬಾಗ್ಲ್ ಎರ್ಸಿಕ್ಕೆ ಹೋಗಿ" ಅಂತೊಂಚೂರು ದೊಡ್ಡಕೇ ಕೂಗಿದ್ದೆ, ಅದೊಂಥರ ಅಲವರಿಕೆ ದನಿಯಲ್ಲಿ. ನನ್ನ ಕೋಣೆಯೆಂದರೆ ಅದೊಂದು ಥರ ಗೋದಾಮಿದ್ದಂತೇ. ಏಣಿ, ಹಗ್ಗ, ಬುಟ್ಟಿ, ಚೂಳಿ, ಸುತ್ತಿಗೆ, ವೈರು, ಸ್ಕ್ರ್ಯೂ ಡ್ರೈವರು, ಟೆಸ್ಟರು, ಮೊಳೆ ಮುಂತಾದ ವಸ್ತುಗಳ ಜೊತೆಗೆ ಗುಪ್ಪೆ ಹೊಡೆದಿಟ್ಟ ಕವಳದ ಕೊಟ್ಟೆಯ ರಾಶಿ. ಕವಳ ಅಂದ್ರೆ ಸಾಂಪ್ರದಾಯಿಕ ಎಲೆ-ಅಡಿಕೆ-ಸುಣ್ಣಗಳ ಮಿಶ್ರಣವಲ್ಲ, ಪಕ್ಕಾ ಎರಡು ಚೀಟಿಗಳಲ್ಲಿ ಸಿಗೋ ಗುಟಖಾ ಕೊಟ್ಟೆಯೇ. ಪ್ರಾಯದ ಹವ್ಯಕ ಹುಡುಗನ ಮನೆಯಲ್ಲಿ ಮತ್ತೇನು ನಿರೀಕ್ಷೆಯಿರಬೇಕು! ಅದಿರ್ಲಿ, ಕೆಲಸ ಮುಗಿಸಿ ಮನೆಗೆ ಬರಲು ಹನ್ನೆರಡು ಗಂಟೆಯಾದರೂ, ಮಲಗೋ ರೂಢಿಯಿರೋದು ಎರಡು ಗಂಟೆಗೇ ಅಂದಾಕ್ಷಣ ಮತ್ತೇನೋ ಉನ್ನತ ದರ್ಜೆಯ ಚಟಗಳಿವೆ ಅಂತಲ್ಲ; ಮೊಬೈಲು ನಿದ್ರಿಸಬಿ...

ಜಯಣ್ಣನ ಡಿವೈನ್ ಲವ್ವು

Image
ಜಯಣ್ಣ ಮದುವೆ ಆಗ್ತಾನಂತೆ ಅಂದಾಗ ಊರವರಿಗೆ ಅವನ ಮದುವೆಗಿಂತಾ ಅವನನ್ನೊಪ್ಪಿದ ಹುಡುಗಿಯ ಬಗ್ಗೆಯೇ ಹೆಚ್ಚು ಕುತೂಹಲವಿತ್ತು. ಬ್ರಾಹ್ಮಣ ಕನ್ಯೆಯ ಮಾತಿರಲಿ, ಲಿಂಗಾಯತರ ಹುಡುಗಿಯಾಗಿದ್ದರೂ ಒಪ್ಪದೇ ಇರುವಷ್ಟು ಕ್ವಾಲಿಟಿಗಳಿದ್ದ ಜಯಣ್ಣನಿಗೆ ಮದುವೆ ಫಿಕ್ಸಾಗಿದ್ದು ಊರ ಹಲವರ ಹುಬ್ಬಿಗೆ ದಬ್ಬೆ ಕಟ್ಟಬೇಕೆಂಬ ಪ್ರಸಂಗ ತಂದೊಡ್ಡಿತ್ತು. ಮದುವೆಗೆ ಎರಡು ದಿನವಿರ್ತಾ ಕೇರಿ ಕರೆಯಲು ಬಂದಾತ ನಮ್ಮನೆಯ ತೋಟದ ಕಾಲುವೆಯಲ್ಲಿ ಅಡಗಿ ಕುಳಿತವರಂತೆ ಮಲಗಿದ್ದ. ಸಂಜೆ ಕಾಲೇಜಿಂದ ಬಂದವ ಜಂಬುನೇರಳೆ ಹಣ್ಣಿನ ದೆಸೆಯಿಂದ ತೋಟಕ್ಕೆ ಹೋದ ನನಗೆ ಇವನ ಕಿಸೆಯಿಂದ ಹೊರಗಿಣುಕುತ್ತಿದ್ದ ಬೀಡಿ ಕಟ್ಟನ್ನು ಸೆಳೆಯುವಾಸೆ. ಎಷ್ಟೇ ಟೈಟಾಗಿದ್ದರೂ ಬೀಡಿ ಕಟ್ಟೆಂಬ ಆಸ್ತಿಯನ್ನ ಆತ ಬಿಟ್ಟಾನೇ? ಅದೊಂದು ಭಯದಿಂದ ನೆಟ್ಟಗೆ ಜಂಬುನೇರಳೆಯ ಮರದ ಬುಡಕ್ಕೇ ಹೊರಟೆ. ನನಗೆ ಗೊತ್ತಿಲ್ಲ, ಆದರೂ ಸುದ್ದಿಯಿದೆ. ಜಯಣ್ಣನ ಮದುವೆಯ ರಾತ್ರಿಯೇ ಊರ ಹೊರಗಿನ ಸುಬ್ಬಿಯ ಮನೆಯಲ್ಲಿ ಈತ ಹೊರಳಾಡುತ್ತಿದ್ದನಂತೆ! ಹೊಸ ಹೆಂಡತಿಯನ್ನ ಬಿಟ್ಟು ಅಲ್ಲಿ ಹೋಗಿದ್ದನೆಂದರೆ ಅವನದದೆಂಥಾ ಡಿವೈನ್ ಲವ್ವಿರಬೇಕು ಅಂದುಕೊಂಡಿದ್ದು ಆಗಷ್ಟೇ ಶೇಕ್ಸ್‌ಪಿಯರ್ ನ ಬಲ್ಲವನಾಗಿದ್ದ ನಾನೊಬ್ಬನೇ ಇರಬೇಕು. ಈ ಜಯಣ್ಣ ಆಗಷ್ಟೇ ಊರೊಳಗೆ ತಿರುಗಬಹುದೆಂಬ ಒಪ್ಪಿಗೆ ಪಡೆದು ವರ್ಷವಾಗಿತ್ತು. ಮದುವೆಗೂ ಮುನ್ನ ಭಯಾನಕ ಕಳ್ಳನೆಂಬ ಖ್ಯಾತಿಯನ್ನೂ ಪಡೆದಿದ್ದನಷ್ಟೇ ಅಲ್ಲ, ಗಡಿಪಾರೆಂಬ ಪ್ರಶಸ್ತಿಯನ್ನೂ ಗಿಟ್ಟಿಸಿದ್ದ ಪರಮ ಸಭ್ಯ...

ಗುಬ್ಬಕ್ಕನ ಕಥೆ

              ಅಮ್ಮ ನನಗೆ ಹೇಳಿದ ಎಲ್ಲಾ ಕಥೆಗಳೂ “ಒಂದಲ್ಲಾ ಒಂದೂರಲ್ಲಿ...” ಎಂದೇ ಶುರುವಾಗ್ತಿತ್ತು. ಆ ಕಥೆಗಳಲ್ಲೆಲ್ಲಾ ಇಣುಕುತ್ತಿದ್ದ ಕಾಗಕ್ಕ ಗುಬ್ಬಕ್ಕನ ಪಾತ್ರಗಳು ನನಗೆ ಖುಷಿ ಕೊಡ್ತಿದ್ವು ಆಗೊಂದು-ಈಗೊಂದು ಕಥೆಗಳಲ್ಲಿ ರಾಜ ರಾಣಿಯರ ಪ್ರವೇಶವೂ ಆಗ್ತಿತ್ತು.ಈಗ ನಾನೂ ಕಥೆ ಹೇಳುವ ವಯಸ್ಸಿನ ಆಸುಪಾಸಿನಲ್ಲಿದ್ದೇನೆ, ನನ್ನ ಮಕ್ಕಳಿಗೆ ಯಾವ ಕಥೆ ಹೇಳಲಿ? ನನ್ನ ಬಳಿ ಮಕ್ಕಳಿಗೆ ಹೇಳಲು ಕಥೆ ಇಲ್ಲ, ನಿಮಗೆ ಹೇಳೋಕೆ ಒಂದು ಕಥೆ ನನ್ನ ಹತ್ತಿರ ಇದೆ. ಈ ಕಥೆಯಲ್ಲಿ ಪಾತ್ರಗಳಿವೆ, ಮುಗ್ದ ಗುಬ್ಬಕ್ಕನೂ ಇದ್ದಾಳೆ,ಮೋಸಗಾತಿ ಕಾಗಕ್ಕನೋ ಇದ್ದಾಳೆ. ಬಿಳಿ ಕುದುರೆ ಏರಿ ಬರುವ ರಾಜಕುಮಾರ, ಹಗಲಿಡೀ ಸ್ವಪ್ನ ಕಾಣುವ ರಾಜಕುಮಾರಿಯೂ ಇದ್ದಾಳೆ...           ಎಷ್ಟೋ ರಾತ್ರಿಗಳ ಆಕ್ರಂದನ ನಾಲ್ಕು ಗೋಡೆಗಳ ನಡುವಿನ ಮತ್ತೊಂದು ಜೀವಕ್ಕೆ ಖುಷಿ ಕೊಡುತ್ತಿತ್ತು. ಯಾವುದೇ ಪಿತ್ರಾರ್ಜಿತ ಆಸ್ತಿಯಿಲ್ಲದ ಅವಳು,ಕನಿಷ್ಠ ಎಂಟನೇ ಕ್ಲಾಸಿನ ಕನ್ನಡ ಪುಸ್ತಕವನ್ನೂ ಓದಲು ತಿಣಕಾಡುತ್ತಿದ್ದ ಅವಳಿಗೆ ಹೆಣ್ಣೆಂಬ ಹಣೆಪಟ್ಟಿಯೊಂದೇ ಜೀವಕ್ಕಿದ್ದ ಅರ್ಹತೆಯಾಗಿತ್ತು. ಯಾರೋ ತಂದೆ-ತಾಯಿಯರೆಂಬ ಅಪರಿಚಿತರು ಕರುಣಿಸಿದ್ದ ಜೀವವನ್ನು ಬದುಕಿಸಿಕೊಳ್ಳಲು ಗುಬ್ಬಕ್ಕನಿಗಿದ್ದುದು ಅದೊಂದೇ ದಾರಿ. ಚಿಕ್ಕ ವಯಸ್ಸಿಗೇ ಕಾÀಗಕ್ಕನ ಸೆರೆಯಾಳಾಗಿದ್ದ ಇವಳ ಸೌಂದರ್ಯ ಅದೆಷ್ಟೋ ಗಿರಾಕಿಗಳಿಂದ ಸೂರೆಯಾಗಿತ್ತು. ...

ಆತ್ಮಗಮನೆ

         ಕುಮಟಾ, ಅಂಥಾ ದೂರದೂರೇನಲ್ಲ ನನ್ನೂರಿಂದ. ಅಂಥಾ ಪ್ರೇಕ್ಷಣೀಯ ಪಟ್ಟಣವಾಗ್ಲೀ, ಆಕರ್ಷಕ ನಗರವಾಗ್ಲೀ ಅಲ್ಲ. ಆದರೆ, ನಂಗೊಂಥರಾ ಸೆಳೆತ ಆ ಊರೆಂದರೆ‌. ಪ್ರತೀಬಾರಿ ಹೋದಾಗಲೂ ಒಂಥರಾ ರಿಪ್ರೆಷ್ಷಾಗಿ ಬರ್ತೀನಿ, ಇಲ್ಲೆಲ್ಲೋ ಕಳೆದು ಹೋದ ನಾನು ಅಲ್ಲೆಲ್ಲಿಂದಲೋ ಪತ್ತೆಯಾಗುವ ಕ್ರಿಯೆಯೇ ಕುಮಟಾ ಆಗಿರ್ಬೋದು.         ಸಖತ್ತ್ ಬೋರಿಂಗ್ ಲೀಡ್ ಅಲ್ವಾ? ಇರ್ಲಿ ಬಿಡಿ‌. ನಂಗೆ ಕುಮಟಾ ಪೇಟೆಗಿಂತಾ ಶಿರಸಿಯಿಂದ ಕುಮಟಾವನ್ನ ಸೇರಿಸೋ ರಸ್ತೆ, ಆ ಪಯಣವೇ ಇಷ್ಟ‌.‌‌‌‌ ಹಿಂಗಂದ್ರೆ ಹಿಂಗೇ ನಿಶ್ಚಲ ನಾನು ಚಲಿಸೋಕೆ ಶುರು ಮಾಡ್ತೀನಿ. ಅಮ್ಮೀನಳ್ಳಿ ಗೊತ್ತಾ ನಿಮಗೆ? ಅಲ್ಲೇ, ಚೂರು ಒಳಗಡೆ ನನ್ನ ಅಮ್ಮನ ತವರೂರಿದೆ. ಇತ್ತು, ನನ್ನ ಸೋದರಮಾವಂದಿರೆಲ್ಲಾ ಹಿಸೆಯಾಗಿ ಪಟ್ಟಣ ಸೇರುವುದರೊಂದಿಗೆ ಇಲ್ಲವಾಯ್ತು‌. ಅಜ್ಜಿಯ ಮೊದಲ ತಿಥಿಯೇ ಅಲ್ಲಿಗೆ ನನ್ನ ಕೊನೇ ಭೇಟಿಯಾಗಿತ್ತು, ಏಳೆಂಟು ವರ್ಷಗಳ ಹಿಂದಿನ ಮಾತದು ಈಗ್ಯಾಕೆ ಬಿಡಿ. ಹಾ, ಕುಮಟಾ ರಸ್ತೆ ಇಷ್ಟವಾಗೋದು ಇಂಥದೇ ಮರೆತು ಹೋದ ನನ್ನವರ ನೆನಪಿಂದ‌. ಮೊದಲ ಹುಡುಗಿಯ ತವರೂ ಆ ಕಡೆಗೇ ಅನ್ನೋದು ನೆನಪಾದರೂ ಮರೆಯಬಲ್ಲ ವಿಷಯ.           ಆಗೆಲ್ಲಾ ನಾನು ಬಿ.ಕಾಂ‌. ಓದುತ್ತಿದ್ದ ಸಮಯ. ವೆಂಕ,ನಂದು, ರವಿ ಮತ್ತೆ ನಾನು ಮೂಡು ಬಂತೆಂದ್ರೆ ಹಂಗೇ ಗಾಡಿ ಹತ್ತಿ ಉಂಚಳ್ಳಿ ಫಾಲ್ಸಿಗೋ, ಬೆಣ್ಣೆ ಫಾಲ್ಸಿಗೋ ಹೋಗುತ್ತಿದ್ದದುಂಟು. ಈ...

ನರ್ಸಜ್ಜನ 'ಖತ್ರಿ'

                                   ನಾನು ದಿನಾ ಬಸ್ಸಲ್ಲಿ ಹೋಗ್ಬೇಕಾದ್ರೆ, ರುದ್ರಮೂಲೆಯನ್ನೋ ಆ ಊರ ಒಂಟಿಮನೆ,ಮನೆಯ ಮುಂದಿನ ಅಂಗಡಿ, ಅಂಗಡಿಯ ಮುಂದೆ ಬಸ್ಸನ್ನು ನೋಡ್ತಾ ನಿಂತ್ಕೊಳ್ಳೋ ಆ ಅಜ್ಜ ತುಂಬಾನೇ ಕುತೂಹಲ ಹುಟ್ಟಿಸೋ ಆಕೃತಿಗಳಾಗಿದ್ವು. ಊರು ಬಿಟ್ಟು ಬಂದ್ಮೇಲೆ ಆ ದಾರಿಯಲ್ಲಿ ಹೋಗಿದ್ದೇ ಕಡಿಮೆಯಾಗಿ ಅವೆಲ್ಲಾ ಮೆದುಳಿನ ಸುರುಳಿಗಳ ಮಧ್ಯೆ ಅಜೀರ್ಣವಾಗಿ ನೆನಪಾಗದಂತೇ ಉಳಿದುಬಿಟ್ಟಿದ್ವು. ಅದ್ಯಾವತ್ತೋ ಯಾರದೋ ಬಾಯಿಯಲ್ಲಿ ಆ 'ಖತ್ರಿ ಅಂಗಡಿ'ಯ ಕಥೆಯಂತಾ ಸುದ್ದಿ ಕೇಳೋವರೆಗೂ.       ನರ್ಸಜ್ಜ,ಅಂಥದ್ದೇ ಎಂಥದೋ ಹೆಸರು ಆ ಅಜ್ಜಂದು ಸರಿಯಾಗಿ ಜ್ಞಾಪಕವಿಲ್ಲ. ಯಾರೂ ಸುಳಿಯದ ಆ ಮೂಲೆಯಲ್ಲಿ ಅದೇಕೆ ಅಂಗಡಿಯಿಟ್ಟಿದ್ನೋ, ಅದೊಂದು ನಿಗೂಢವೇ ಸೈ. ಆಗ್ಲೇ ಎಪ್ಪತ್ತರ ಹತ್ತಿರದ ಪ್ರಾಯ. ಅಂಗಡಿಯ ಖಾಲಿಯಾಗದ ಸಾಮಾನುಗಳ ಅವಧಿ ಮುಗಿದ ನಂತರ ಅಂಗಡಿಯನ್ನ ಅದೆಂಗೆ ತುಂಬಿಡ್ತಿದ್ನೋ, ಅದು ಮತ್ತೊಂದು ನಿಗೂಢ. ಆತ ಬಸ್ಸಿಗೆ ಬಂದದ್ದಂತೂ ನಾನು ನೋಡಿಲ್ಲ. ಅಂತಾ ನರ್ಸಜ್ಜನ ಖತ್ರಿ ಅಂಗಡಿಯು ಈಗಲೂ ಇದೆ. ಗೋಡೆಯಿದೆ,ಬಾಗಿಲಿಲ್ಲ. ರೀಪು-ಪಕಾಸುಗಳ ಒಪ್ಪವಾದ ಅಲಂಕಾರವಿದೆ, ಛಾವಣಿಯಿಲ್ಲ. ಆ ಅಜ್ಜ?        ಎರಡು ವರ್ಷಗಳ ಹಿಂದಂತೆ,             ಯಾವತ...