Posts

Showing posts from March, 2019

ಗಿಲ್ಟು ಪುರಾಣ

ಲೈಫು ತುಂಬಾ ದೊಡ್ದು ಅಂತ ತಿಳ್ಕೊಂಡು ಬೇಕಾಬಿಟ್ಟಿ ಬದುಕ್ತಾ ಇರೋ ಸಿಕ್ಕಾಪಟೆ ಕಮ್ಮಿ ಜನ್ರಲ್ಲಿ ನಾನೂ ಒಬ್ಬ. ಒಂದ್ ಡಿಗ್ರೀನ ಮುಗಿಸೋ ಹೊತ್ತಿಗೆ ಭರ್ತಿ ಇಪ್ಪತ್ತೈದು ವರ್ಷ ಖಾಲಿಯಾಗಿತ್ತು, ಅಷ್ಟ್ರಲ್ಲಿ ನನ್ ಜೊತೆ ಕಲೀತಿದ್ದೋರೆಲ್ಲ ಮಾಸ್ಟರ್ ಡಿಗ್ರಿ ಮಾಡ್ಕೊಂಡು ಐದಾರು ಸೊನ್ನೆ ಹಿಂದೆ ಒಂದ್ ಅಂಕಿ ಸಂಬ್ಳ ಲೆಕ್ಕ ಮಾಡ್ತಿದ್ರು. ಹಿಂಗೆ ಆರಾಮಾಗಿ ಬದ್ಕಿ ಏನ್ ಕಡ್ದು ಕಟ್ಟೆ ಹಾಕಿದ್ನೋ ಇಲ್ವೋ, ಲೆಕ್ಕ ಮಾಡಿದ್ರೆ ಕೈಬೆರಳು ಸಾಕಾಗೋವಷ್ಟು ಗಿಲ್ಟ್ ಇದೆ, ಬಹುಶಃ ಈ ನನ್ನ ಹಳೆ ಕ್ಲಾಸ್‌ಮೇಟ್‌ಗಳದ್ದು ಅವರ ಸಂಬಳದಷ್ಟೇ ದೊಡ್ಡ ಲೆಕ್ಕವಾಗ್ಬೋದು. ಹಿಂಗಾಗಿ ನಾನು ಗ್ರೇಟು, ನೀವ್ ನಂಬ್‌ಬೇಕು. ಹಿಂಗೇ ಹೊತ್ತೋಗ್ದಿದ್ದಾಗ ನನ್ ಗಿಲ್ಟ್‌ಗಳನ್ನ ನೆನ್ಪ್ ಮಾಡ್ಕೊಂಡು ಫ್ರೆಶ್ ಆಗ್ತೀನಿ. ಅಪ್ಪಿತಪ್ಪಿ ಕೂಡ ಲೆಕ್ಕಕ್ಕೆ ಸಾಕಾಗ್ದಿರೋ ವಿಫಲ ಪ್ರೇಮಗಳನ್ನ ಹೇಳಿ ಬೋರ್ ಹೊಡೆಸಲ್ಲ, ಇದು ನನ್ ಲವ್ಕತೆ ಅಲ್ವೇ ಅಲ್ಲ. ಈಗ ನಗ್ಬೋದು ನೀವು, ಖುಷಿ ಆಗಿರ್ಬೇಕಲ್ಲ? ಗಿಲ್ಟ್ ನಂಬರ್ ಒಂದು, ಲಿಮಿಟೇಶನ್ಸ್ ಅನ್ಲಿಮಿಟೆಡ್: ಮೊದಲ್ನೇ ಸಲ ಡಿಗ್ರಿಗೆ ಸೇರ್ಕೊಂಡಾಗ ಅಷ್ಟೂ ಸಬ್ಜೆಕ್ಟ್ಸ್ ಕ್ಲಿಯರ್ ಇರೋ ಕ್ಯಾಟಗರೀಲಿ ಒಂದ್ವರ್ಷ ಬದ್ಕಿ ಬೇಜಾರ್ ಬಂತು. ಹಿಂಗೆ ಲೆಕ್ಕ ಮಾಡಿದ್ರೆ ಲೆಕ್ಕಾಚಾರ ನೆಟ್ಗಿರತ್ತೆ ಅಂತ ಹೇಳ್ಕೊಡೋ ಬಿ.ಕಾಂ. ಪ್ರತಿ ಕ್ಲಾಸೂ ಒಂದೇ ಥರ ಇರ್ತಿತ್ತು, ಸಿ ಕ್ಲಾಸ್ ಗಂಡ್ಮಕ್ಳ ಬೇಕಾಬಿಟ್ಟಿ ಲೈಫು ಆಕರ್ಷಣೆಯಾಗಿತ್ತು. ಆಕರ್ಷಣೆ ಗುಟಖಾ ತಿನ್ನೋ