Posts

Showing posts from 2019

ಪದ್ಯದಂಗಡಿ ಮತ್ತು ಅಕ್ಷರ ಮಾರಾಟ

ಪದ್ಯದಂಗಡಿ, ಹೇಗೆ ಶುರುವಾಯ್ತು, ಯಾವಾಗ ಶುರುವಾಯ್ತು, ಯಾರಿಂದ ಶುರುವಾಯ್ತು..? ಹಿಂಗಿದ್ದೊಂದು ಪ್ರಶ್ನೆ ನಿಮ್ಮಲ್ಲನೇಕರಲ್ಲಿ ಮೂಡಿರಬಹುದು.  ballistic missile ಅವರಂತೂ ದೀರ್ಘ ಬರೆಹವೊಂದನ್ನೇ ಬರೆದುಬಿಟ್ಟಿದ್ದಾರೆ. We are not supposed to hide our identity. ಸ್ವಲ್ಪವಾದರೂ ಬೆಂಬಲಿಗರು ಸಿಗಲಿ, ಆಮೇಲೆ ನಮ್ಮ ವಿವರಗಳನ್ನ ಬಹಿರಂಗಪಡಿಸೋಣ ಅಂತಲೇ ಸುಮ್ಮನಿದ್ದೆವು. ಅಷ್ಟರಲ್ಲಿ ಏನೇನೋ ಚರ್ಚೆಗಳು ನಡೆದವು, ಏಕಮುಖ ಜಗಳಗಳೂ ನಡೆದವು. ಪದ್ಯದಂಗಡಿಯ ಓನರ್ರುಗಳು ಯಾರಂತ ತಿಳಿಯೋ ಮೊದಲೇ ಪದ್ಯದಂಗಡಿಯ ಭಾಗವೊಂದು ದೂರವಾಯ್ತು. ಹೊಸದೊಂದು ಶುರುವಾದಂತೆ ಪರ-ವಿರೋಧ ಚರ್ಚೆಗಳು ಸಾಮಾನ್ಯ. Unconventional ಅಥವಾ ಅಸಾಂಪ್ರದಾಯಿಕ ಯೋಚನೆಗಳಿಗೆ ಪರ ವಹಿಸುವವರಿಗಿಂತ ವಿರೋಧಿಗಳ ಸಂಖ್ಯೆ ಬೇಗ ಬೆಳೆಯುತ್ತದೆ. ಸದಾ ಎತ್ತಿನಗಾಡಿಯನ್ನೇ ಅವಲಂಬಿಸಿ ಪ್ರಯಾಣ ಮಾಡುತ್ತಿದ್ದವರಿಗೆ ಏಕ್ದಂ ಉಗಿಬಂಡಿ ಕಂಡು ಭಯ ಹುಟ್ಟಲಿಲ್ಲವೇ? ಹಾಗೇ ಪದ್ಯದಂಗಡಿಯ ಅಸಾಂಪ್ರದಾಯಿಕ (ಕ್ರಾಂತಿಕರಿ ಅನ್ನಲಾರೆ, ಕಾರಣ ಮುಂದಿದೆ) ಬರೆವಣಿಗೆ ಮಾರಾಟಗಾರರನ್ನು ಕಂಡು ಬರೀ ಪುಸ್ತಕಗಳಿಗಷ್ಟೇ ಒಗ್ಗಿಕೊಂಡಿದ್ದ, ಹೆಚ್ಚೆಂದರೆ ಬ್ಲಾಗುಗಳಲ್ಲಿ ಪುಕ್ಕಟೆಯಾಗಿ ದೊರಕುತ್ತಿದ್ದ 'ಪ್ರವರ್ಧಮಾನ'ಕ್ಕೆ ಬರುತ್ತಿರುವ ಬರೆಹಗಳಗೆ ಒಗ್ಗಿಕೊಂಡಿದ್ದ ಮನಸ್ಸುಗಳು ಬಂಡೆದ್ದವು. ಇದು ನಮಗೂ ಗೊತ್ತಿತ್ತು. ಪ್ರತಿರೋಧಗಳು ಸ್ವಲ್ಪವಾದರೂ ಚರ್ಚಿಸುವ ಮನಸ್ಥಿತಿಯವರಿಂದ ಬರಬಹುದೆಂಬ ನಿ

ಉಂಬಳ

Image
      ಸಣ್ಣಕಿದ್ದಾಗ ಕಂಡಿದ್ದಷ್ಟೇ ಭಯಂಕರ ಮಳೆಗಾಲವದು. ಮನೆಗೂ ತೋಟಕ್ಕೂ ಮಧ್ಯದ ಹಳ್ಳ ದಾಟಲು ಕಟ್ಟಿಕೊಂಡಿದ್ದ ಬ್ರಿಜ್ಜು ತೇಲಿಹೋಗುವಷ್ಟು ಮಳೆ ಬಂದಿತ್ತು ಅಂದ್ರೆ ಭಯಂಕರ ಅಂತಲೇ ಉದ್ಗಾರ ಹೊರಬರೋದು. ಅಂಥ ಭರ್ಜರಿ ಮಳೆಗಾಲದ ದಿನ ಮಂಜು ನಮ್ಮನೆಯತ್ತ ಬರುತ್ತಿದ್ದುದು ಟಾರಸಿಯ ಮೇಲೆ ಆರಾಮು ಕುರ್ಚಿ ಹಾಕಿ ಕುಂತಿದ್ದ ನಂಗೆ ಕಂಡಿತು. ದೂರದಿಂದಲೇ, ಬರುತ್ತಿರುವ ಮನುಷ್ಯ ಮಂಜು ಎಂದು ಗುರುತು ಹಿಡಿಯಬಲ್ಲ ರೂಪು ಅವನದ್ದು. ಮೊಣಕಾಲನ್ನು ಹೌದೋ ಅಲ್ಲವೋ ಎನ್ನುವಷ್ಟು ಮಾತ್ರ ಮಡಚಿ ನಡೆಯುವ ನಡಿಗೆಯ ಶೈಲಿಯೂ ಅವನಿಗಷ್ಟೇ ಒಲಿದ ಕಲೆಯಂತೆ ಅನಿಸೋದುಂಟು. ಉದ್ದ ದಂಟಿನ ಕಮಲಕಡ್ಡಿ ಕೊಡೆಯನ್ನು ಅದೆಲ್ಲಿಂದ ಹುಡುಕಿ ಕೊಂಡುಕೊಳ್ಳುತ್ತಾನೋ ಗೊತ್ತಿಲ್ಲ, ಬಟನ್ ಛತ್ರಿಗಳ ಕಾಲದಲ್ಲಿ ನನ್ನಂಥವರಿಗೆ nostalgia ಹುಟ್ಟಿಸುವಷ್ಟು ಟಿಪಿಕಲ್ ಆಸಾಮಿ ಈ ಮಂಜು. ಇಂಥ ಮಳೆಯಲ್ಲಿ ಹೊಳೆ ಹೆಂಗೆ ದಾಟಿದನೋ ಎಂಬ ಕುತೂಹಲದ ಸಂತಿಗೇ ಈಗ ಬರೋ ಅರ್ಜೆಂಟು ಏನಿತ್ತು ಅನ್ನೋ ಪ್ರಶ್ನೆಯೊಂದು ಮೂಡಿತ್ತು. ನಮ್ಮನೆಯತ್ತ ಬಂದವನ ನಡುಗೆ ನಿಧಾನವಾಗಿತ್ತು. ನಮ್ಮನೆಯತ್ತ ತಿರುಗುವ ಕಾಲುಹಾದಿಯಲ್ಲಿ ಮೂರೋ- ನಾಲ್ಕೋ ಹೆಜ್ಜೆಯಿಟ್ಟವ ದಾರಿ ಬದಲಿಸಿಬಿಟ್ಟ! ಬಹುಶಃ ನನ್ನನ್ನು ಗಮನಿಸಲಿಲ್ಲವೇನೋ. ಸ್ಟ್ಯಾಂಡು ಹುಗಿಯುತ್ತದೆಂದು ಬೈಕನ್ನು ಶೆಡ್‌ನಲ್ಲಿ ಇಡದೇ ಅಂಗಳದೊಳಕ್ಕೆ ತಂದು ಇಟ್ಟಿದ್ದೆ. ಬಹುಶಃ ಬೈಕು ಕಾಣದೇ ನಾನು ಮನೆಯಲ್ಲಿಲ್ಲ ಅಂದುಕೊಂಡು ಹೊಂಟನೇನೋ ಎಂದು, "ಕಡಿಗೋ

ವಿದಾಯ...

Image
ಅಧೂರಿ ಆಂಸ್ ಚೋಡ್‌ಕೆ ಅಧೂರಿ ಪ್ಯಾಸ್ ಚೋಡ್‌ಕೆ ಮೇ ರೋಜ್ ಯೂಹೀಂ ಜಾವೂಂಗಿ ತೋ ಕಿಸ್ ತರಹ್ ನಿಭಾವೋಗೆ ಯೇ ಜಿಂದಗೀಕಿ ರಾಹ್ ಮೇಂ ಜವಾಂ ದಿಲೋಂಕಿ ಚಾಹ್ ಮೇಂ ಕಯೀಂ ಮಕಾಮ್ ಆಯೆಂಗೆ ಜೋ ಹಮ್ ಕೊ ಆಜಮಾಯೇಂಗೆ ಬೂರಾ ನಾ ಮಾನೋ ಬಾತ್‌ಕಾ ಯೇ ಪ್ಯಾರ್ ಹೆ ಗಿಲಾ ನಹೀಂ... ಅಭೀ ನಾ ಜಾವೋ ಚೋಡ್ ಕರ್ ಕೆ ದಿಲ್ ಅಭೀ ಭರಾ ನಹೀಂ... ಇಂಥದ್ದೊಂದು ಅಗ್ದಿ ಇಷ್ಟವಾಗೋ ಹಾಡು ಕನ್ನಡದಲ್ಲಿ ಅದ್ಯಾಕೆ ಕೇಳಿಲ್ಲವೋ ನಾನು. ಇಷ್ಟು ಆಪ್ತವಾಗುವ ಭಾವನೆ, ಶಬ್ದಗಳು ಬರೀ ನನಗಾಗೇ ಬರೆದದ್ದಾ ಅನಿಸುವಷ್ಟು ಹತ್ತಿರವಾಗಿವೆ.. ಅವಳನ್ನ ಮೊದಲಬಾರಿ ಭೆಟ್ಟಿಯಾದಗಲೂ ಅಷ್ಟೇ ಅಲ್ಲವೆ? ಮೊದಲ ಬಾರಿ ಮಾತ್ರವಲ್ಲ, ಪ್ರತಿಬಾರಿಯೂ ಹೋಗ್ಬೇಡ ಅಂತ ಗೋಗರೆದು ಮಳ್ಳಾ ಅಂತ ಬೈಸ್ಕೊಳೋದು ಖಾಯಮ್ಮಾಗಿತ್ತು. ಅಷ್ಟು ಅಮಲು ಅವಳಲ್ಲಿತ್ತಾ ಅಥವಾ ನಮ್ಮ ಪ್ರೇಮದಲ್ಲಿತ್ತಾ? ಗೊತ್ತಿಲ್ಲ. ನಾವು ಭೆಟ್ಟಿಯಾದ ಮುನಿಸಿಪಾಲ್ಟಿ ಲೈಬ್ರರಿಯ ಬಾಗಿಲೂ ದಿಕ್ಕುತಪ್ಪಿದೆ ಈಗ‌. ಅಲ್ಲಿಗೆ ಪ್ರತಿಬಾರಿ ಹೋದಾಗ್ಲೂ ಗೋಣಿ ಚೀಲದಲ್ಲಿ ತುಂಬಿ ತರುವಷ್ಟು ನೆನಪುಗಳಿರತ್ವೆ. ಊರಿಗೆ ಹೋದಾಗೆಲ್ಲ ಆ ಫ್ರೆಶ್ಶು ನೆನಪುಗಳಿಗಾಗಿ ಗ್ರಂಥಾಲಯ ಹೊಕ್ಕುವ ಮನಸ್ಸಾಗತ್ತೆ. ಯೇ ಜಿಂದಗೀಕಿ ರಾಹ್ ಮೆ, ಕಯೀಂ ಮಕಾಮ್ ಆಯೆಂಗೆ... ಮತ್ತವಳ ಸಂಪರ್ಕ ಬೆಳ್ಯತ್ತೆ ಅಂತಾಗ್ಲಿ, ಅಷ್ಟೇ ಆತ್ಮೀಯತೆಯಿಂದ ಮಾತಾಡ್ತೇನೆ ಅಂತಾಗ್ಲೀ ಊಹೆಯೂ ಇರ್ಲಿಲ್ಲ. Love can happen twice ಅನ್ನೋದು ಹಳೆ ಅನುಭ

ಗಿಲ್ಟು ಪುರಾಣ

ಲೈಫು ತುಂಬಾ ದೊಡ್ದು ಅಂತ ತಿಳ್ಕೊಂಡು ಬೇಕಾಬಿಟ್ಟಿ ಬದುಕ್ತಾ ಇರೋ ಸಿಕ್ಕಾಪಟೆ ಕಮ್ಮಿ ಜನ್ರಲ್ಲಿ ನಾನೂ ಒಬ್ಬ. ಒಂದ್ ಡಿಗ್ರೀನ ಮುಗಿಸೋ ಹೊತ್ತಿಗೆ ಭರ್ತಿ ಇಪ್ಪತ್ತೈದು ವರ್ಷ ಖಾಲಿಯಾಗಿತ್ತು, ಅಷ್ಟ್ರಲ್ಲಿ ನನ್ ಜೊತೆ ಕಲೀತಿದ್ದೋರೆಲ್ಲ ಮಾಸ್ಟರ್ ಡಿಗ್ರಿ ಮಾಡ್ಕೊಂಡು ಐದಾರು ಸೊನ್ನೆ ಹಿಂದೆ ಒಂದ್ ಅಂಕಿ ಸಂಬ್ಳ ಲೆಕ್ಕ ಮಾಡ್ತಿದ್ರು. ಹಿಂಗೆ ಆರಾಮಾಗಿ ಬದ್ಕಿ ಏನ್ ಕಡ್ದು ಕಟ್ಟೆ ಹಾಕಿದ್ನೋ ಇಲ್ವೋ, ಲೆಕ್ಕ ಮಾಡಿದ್ರೆ ಕೈಬೆರಳು ಸಾಕಾಗೋವಷ್ಟು ಗಿಲ್ಟ್ ಇದೆ, ಬಹುಶಃ ಈ ನನ್ನ ಹಳೆ ಕ್ಲಾಸ್‌ಮೇಟ್‌ಗಳದ್ದು ಅವರ ಸಂಬಳದಷ್ಟೇ ದೊಡ್ಡ ಲೆಕ್ಕವಾಗ್ಬೋದು. ಹಿಂಗಾಗಿ ನಾನು ಗ್ರೇಟು, ನೀವ್ ನಂಬ್‌ಬೇಕು. ಹಿಂಗೇ ಹೊತ್ತೋಗ್ದಿದ್ದಾಗ ನನ್ ಗಿಲ್ಟ್‌ಗಳನ್ನ ನೆನ್ಪ್ ಮಾಡ್ಕೊಂಡು ಫ್ರೆಶ್ ಆಗ್ತೀನಿ. ಅಪ್ಪಿತಪ್ಪಿ ಕೂಡ ಲೆಕ್ಕಕ್ಕೆ ಸಾಕಾಗ್ದಿರೋ ವಿಫಲ ಪ್ರೇಮಗಳನ್ನ ಹೇಳಿ ಬೋರ್ ಹೊಡೆಸಲ್ಲ, ಇದು ನನ್ ಲವ್ಕತೆ ಅಲ್ವೇ ಅಲ್ಲ. ಈಗ ನಗ್ಬೋದು ನೀವು, ಖುಷಿ ಆಗಿರ್ಬೇಕಲ್ಲ? ಗಿಲ್ಟ್ ನಂಬರ್ ಒಂದು, ಲಿಮಿಟೇಶನ್ಸ್ ಅನ್ಲಿಮಿಟೆಡ್: ಮೊದಲ್ನೇ ಸಲ ಡಿಗ್ರಿಗೆ ಸೇರ್ಕೊಂಡಾಗ ಅಷ್ಟೂ ಸಬ್ಜೆಕ್ಟ್ಸ್ ಕ್ಲಿಯರ್ ಇರೋ ಕ್ಯಾಟಗರೀಲಿ ಒಂದ್ವರ್ಷ ಬದ್ಕಿ ಬೇಜಾರ್ ಬಂತು. ಹಿಂಗೆ ಲೆಕ್ಕ ಮಾಡಿದ್ರೆ ಲೆಕ್ಕಾಚಾರ ನೆಟ್ಗಿರತ್ತೆ ಅಂತ ಹೇಳ್ಕೊಡೋ ಬಿ.ಕಾಂ. ಪ್ರತಿ ಕ್ಲಾಸೂ ಒಂದೇ ಥರ ಇರ್ತಿತ್ತು, ಸಿ ಕ್ಲಾಸ್ ಗಂಡ್ಮಕ್ಳ ಬೇಕಾಬಿಟ್ಟಿ ಲೈಫು ಆಕರ್ಷಣೆಯಾಗಿತ್ತು. ಆಕರ್ಷಣೆ ಗುಟಖಾ ತಿನ್ನೋ