ಕಥೆ

ಕಥೆಗಾರ ಕಥೆಯನ್ನ ಸೃಷ್ಠಿ ಮಾಡ್ತಾನೆ ಅಂತಾನೇ ಅವನಿಗೆ ಗರ್ವವಿತ್ತು. ಆದ್ರೆ ಕಥೆಯೇ ಕಥೆಗಾರನ ಮೂಲಕ ಬರೆಸಿಕೊಳ್ಳತ್ತೆ ಅಂತ ಅವನಿಗೆ ಗೊತ್ತಾಗಿದ್ದು ಆವತ್ತೇ. ಅಷ್ಟಕ್ಕೂ ಆವತ್ತೇನಾಯ್ತು?
ಎಂದಿನ ಭಾನುವಾರದಂತೇ ಆವತ್ತೂ ಆಲಸ್ಯದಿಂದ ಎದ್ದ. ಹೆಂಡತಿಯ ಬೆನ್ನನ್ನು ಹುಡುಕೋನಂತೇ ಹಾಸಿಗೆಯ ಮೈಮೇಲೆ ಕೈ ಹರಿದಾಡುತ್ತಿರೋವಾಗ್ಲೇ ಕುಕ್ಕರ್ರು ಕೂಗಿತು. ಅದಾಗಲೇ ಲೇಜಿ ಸಂಡೆಯ ಸ್ಪೆಷಲ್ ಚಿತ್ರಾನ್ನ ಕೂಗುತ್ತಿದೆ ಅಂತ ಗೊತ್ತಾಯ್ತು.
ಮುಖದಲ್ಲಿ ನೀರು ತೊಳೆದಂತೆ ನೀರನ್ನ ಚಿಮುಕಿಸಿಕೊಂಡ.
ಟೇಬಲ್ಲಿನ ಬಳಿ ಬಂದು ಚಿತ್ರಾನ್ನಕ್ಕಾಗಿ ಹುಡುಕಾಡಿದ. ಕುಕ್ಕರ್ರು ಹನ್ನೊಂದೊಂದ್ಲ ಮಗ್ಗಿ ಹೇಳುತ್ತಿತ್ತು. ಅಡುಗೆ ಮನೆಯ ಬಾಗಿಲು ಹುಡುಕಿಕೊಂಡು ಹೋದ. ಹೆಂಡತಿ ಅಲ್ಲೇ ಮಲಗಿದ್ದಂತೆ ಅನ್ನಿಸಿತು. ಒದ್ದೆ ಕೂದಲು ಆಹ್ವಾನಿಸಿತು.
ಛೇ, ಆಗಲೇ ಬಾಗಿಲು ಬೆಲ್ಲಾಯ್ತು. ಹಿಂದೇ 'ಪಪ್ಪಾ, ಕುಕ್ಕರ್ ಆಫ್ ಮಾಡ್ಬಾರ್ದಾ ಅನ್ನ ಸೀದೋಯ್ತೇನೋ...'ಅಂತಾ ಹದಿನೆಂಟರ ಮಗಳು ಬಂದಳು.
ಆವತ್ತೇ ಮೊದಲೇನೋ, ಹತ್ತು ವರ್ಷದಿಂದೀಚೆ ಹೆಂಡತಿ ನೆನಪಾದದ್ದು.
ಬಾಗಿಲ ತಲೆ ಮೇಲಿದ್ದ ಹೆಂಡತಿಯ ಫೋಟೋ ನೋಡುತ್ತ ನಿಂತ ಅಪ್ಪನ ಬದಿ ಜಾಗ ಮಾಡಿಕೊಂಡು ಅಡುಗೆ ಮನೆಯತ್ತ ನಡೆದಳು ಪುತ್ರಿ.

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ