ನಕ್ಕಳಾಕೆ ನನ್ನತ್ತ

ಆಕೆ ನಕ್ಕಳು, ನನ್ನತ್ತ?
ಬಹುಶಃ ನನ್ನ ನೋಡಿ.
ಎಡಗಾಲ ಚಪ್ಪಲಿಯಡಿ
ಎಂತದೋ ಕಿರಿಕಿರಿ,
ಆಪರಿ ನೋಟಕ್ಕೆ
ಅಂಗುಷ್ಠದ ತುದಿ ಸುಟ್ಟಂತೆ
ಉರಿ.
ಚೂರು ಎಡಕ್ಕೆ ಜರಗು
ಬಲಕ್ಕೆ ಬಗ್ಗು,
ಎದುರಿದ್ದವಳ ಪಿಸುಮಾತು.
ನಕ್ಕಳವಳು ನನ್ನತ್ತ?
ಎಲ್ಲೋ ಎಡ ಎದೆಯಲ್ಲೊಂದು
ಸೆಳೆತ,
ಝಳಕು.
ಪಳಕಿಸುವ ನಗೆ ಮಾಟ
ತುಳುಕಿಸಿತು ಬಳಸಿ
ಹಿಂದಿಂದ.
ನಕ್ಕಳೇನೋ ನನ್ನತ್ತ.
ನಾಗವೇಣಿಯ ತುದಿ
ಹಾರಿತ್ತು,
ಚೀರಿತ್ತು ಮೌನದಿ,
ಸೋಕದಿರು ನನ್ನ
ತಾಕಿದರೆ ಎಡವುವುದು
ಹಾಳು ಯೌವನ.
ನಕ್ಕಳಾಕೆ ನನ್ನತ್ತ.
ಪರದೆಯಾಚೆಗಿನ ಆಕೆ
ತುಂಬು ಮಾಟದ ಕೊಂಕು,
ಕುಕ್ಕಿದಂತೆ ಏನೇನೋ.
ಘಮದ ಅಮಲಿನ
ದಾಸ್ಯದಲಿ ನಾನು,
ಅರ್ಧ ನಿಂತಂತೆ.
ನಕ್ಕಳಾಕೆ ನನ್ನತ್ತ.

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ