Posts

Showing posts from March, 2023

ಜಮೀನು, ಕೊಡದಲ್ಲ

“ಮುಂದಿನ ವರ್ಷ ಇಷ್ಟೊತ್ತಿಗೆ ಪ್ಯಾಟೆ ನಮ್ಮೂರ್ ಹೊಳೆ ಬ್ಯಾಲೆ ತನ್ಕ ಬರ್ತು ನೋಡು" ಅಂದ ಮಾಬ್ಲಪ್ಪಚ್ಚಿಯ ಮುಖದಲ್ಲಿ ಅದೆಂಥ ಕಾನ್ಫಿಡೆನ್ಸ್ ಇತ್ತಂದ್ರೆ ಯಾವುದಾದ್ರೂ ಟಿವಿಯವ್ರು ನೋಡಿದ್ರೆ ಮಾರನೇ ದಿನದಿಂದ ಬೆಳಿಗ್ಗೆಯ ಭವಿಷ್ಯ ಹೇಳುವ ಸ್ಲಾಟಿನಲ್ಲಿ ಇವನನ್ನೇ ತೋರಿಸುತ್ತಿದ್ದರೇನೋ. ಇಪ್ಪತ್ತು ಮನೆಯ ಕೇರಿಯಲ್ಲಿ ಉಳಿದಿರೋ ಐವತ್ತು ಮಂದಿಯಲ್ಲಿ ಮೂವರು ಮಾತ್ರ ಮೂವತ್ತರ ಒಳಹೊರಗಿನ ಪ್ರಾಯದವರು ಅಂದ್ರೆ ನಂಬ್ಲೇಬೇಕು ನೀವು. ಮೆರವಣಿಗೆ ಊರು ಇಂಥ ಹಲವು ಊರುಗಳಿಗೆ ಉದಾಹರಣೆಯಷ್ಟೇ, ವೃದ್ಧಾಶ್ರಮವಾದ ಊರುಗಳಿಗೆ ಮಾದರಿಯೊಂದಿದ್ದರೆ ಅದು ಮೆರವಣಿಗೆ. ಬೆಂಗಳೂರನ್ನು ಉದ್ಧರಿಸುವವರನ್ನು ಉತ್ಪಾದಿಸುವ ಕಾರ್ಖಾನೆಗಳ ಪೈಕಿ ಇದೂ ಒಂದಾಗಿತ್ತು. ಊರ ಎರಡು ಗಡಿಗಳನ್ನು ಎರಡು ಹಳ್ಳಗಳು ಬೇರೆ ಊರುಗಳಿಂದ ಪ್ರತ್ಯೇಕಿಸಿದ್ದರೆ, ಮತ್ತೆರಡು ಬದಿಯಲ್ಲಿ ಪಶ್ಚಿಮ ಘಟ್ಟದ ಸಾಲು. ಮೂವತ್ತು-ನಲ್ವತ್ತು ವರ್ಷಗಳ ಹಿಂದೆ ತೋಟಕ್ಕೆ ಬಿಟ್ಟ ಬೆಟ್ಟಗಳು ಬಯಲಾಗಿದ್ದು ಬಿಟ್ಟರೆ ಹೆಚ್ಚಿನ ಗುಡ್ಡಗಳು ಹರಿದ್ವರ್ಣದಲ್ಲಿ ಕತ್ತಲನ್ನು ಹೊದ್ದಿದ್ದವು. ಸಂಪರ್ಕಕ್ಕೆಂದು ಸರಿಯಾದ ರಸ್ತೆಯೂ ಇರದ ಊರಿಗೆ ಕೋಟಿ ರೂಪಾಯಿ ವೆಚ್ಚದ ಸೇತುವೆ ನಿರ್ಮಾಣಗೊಳ್ಳುತ್ತಿತ್ತು, ಅದಕ್ಕಾಗಿನ ಹೋರಾಟವೂ ಒಂದು ಕತೆಯೇ. “ನಂಗ ಪ್ರಾಯದಲ್ಲಿದ್ದಾಗ ಬ್ರಿಜ್ ಮಾಡ್ಕೊಡಿ ಅಂದಿದ್ಯ. ಆವಾಗ ಊರಲ್ಲಿರ ಅಷ್ಟೂ ಮೂಲೆಲ್ಲೂ ಜಮೀನ್ ಮಾಡ ಉಮೇದಿ. ಅರ್ವತ್ ಆದ್ಮೇಲೆ ಬ್ರಿಜ್ ಆತು.ಈಗ ಪ್ರಾಯದ್ ಪ್ವಾರ್ಗನೂ