ಸತ್ಕತೆ

ಈ ಭಯಂಕರ ಟ್ರಾಫಿಕ್ಕಲ್ಲಿ ಬೈಕ್ ಹೋಡೆಯೋಕೋಗಿ ಬಿದ್ದಿರೋದ್ಕಿಂತಾ ಅಷ್ಟು ದೂರದಿಂದ ಫೋನ್ ಮಾಡಿ ತನ್ನ ಆಯುರ್ವೇದದ ಔಷಧಿಗಳು, ಆ ಔಷಧ ಸಿಗದೇ ಇದ್ರೆ ಅಂತ ಅದರ ಪರ್ಯಾಯ ಔಷಧಗಳನ್ನ ಹೇಳುತ್ತಿರೋ ಅಮ್ಮನ ಮಾತುಗಳೇ ಹೆಚ್ಚು ನೋವುಂಟು ಮಾಡುತ್ತಿದ್ವು. ಕರೆಯನ್ನ ಕಟ್ ಮಾಡೋಹಂಗಿಲ್ಲ, ಮತ್ತೊಂದು ಕಡೆ ಹುಡುಗಿಯ ಫೋನ್. ಅವಳೂ ಅಷ್ಟೇ, ಅವಳಮ್ಮ ಹೇಳಿದ ಔಷಧಗಳ ವಿನಿಮಯ ಮಾಡ್ಕೊಳೋಕೇ ಕರೆ ಮಾಡ್ತಿರೋದು, ಡೌಟೇ ಇರ್ಲಿಲ್ಲ.
ಇಷ್ಟಗಲ ಮೊಬೈಲಿದ್ರೂ ಬ್ಯಾಟರಿ ನಿಲ್ಲಲ್ಲ. ಅಮ್ಮನ ಔಷಧದ ವಿವರ ಅರ್ಧ ಆಗುವಷ್ಟರಲ್ಲೇ ಬ್ಯಾಟರಿ ಕೂಗಿಕೊಂಡು ಆತ್ಮಹತ್ಯೆ ಮಾಡಿಕೊಂಡದ್ದು ಖುಷಿ ಕೊಟ್ಟಿತ್ತು.
ಮಡಚಿ ಕಟ್ಟಿದ್ದ ಎಡಗೈ ನೋಯುತ್ತಿತ್ತು. ತಂಪು ಗಾಳಿಗೋಸ್ಕರ ಬಾಲ್ಕನಿಯ ಕಿಟಕಿ ತೆರೆದೆ. ಯಾರೋ ಹಿಂದಿನಿಂದ ತಳ್ಳಿದಂತಾಯ್ತು. ಅಷ್ಟೇ ನೆನಪಿರೋದು.
ಈಗ ಇದೆಂತದೋ ದೀಪವಾಗ್ಲೀ, ಸೂರ್ಯನಾಗ್ಲೀ ಇಲ್ದೇ ಇದ್ರೂ ಬೆಳಕಿರೋ ಜಾಗದಲ್ಲಿದೀನಿ. ಎದುರುಗಡೆ ಟಿವಿಯಿದೆ, ಅರೇ ಇದು ನಮ್ಮನೆ!!
ಇದೆಂತದು! ನ್ಯೂಸಲ್ಲಿ ನನ್ನ ಮುಖವಿದೆ! ಸೌಂಡು ದೊಡ್ಡ ಮಾಡಿ ಕೇಳಿದೆ...
"ಎರಡು ದಿನಗಳ ಹಿಂದೆ ಅಪಘಾತವಾಗಿ ನಂತರ ಆತ್ಮಹತ್ಯೆಗೆ ಯತ್ನಿಸಿದ್ದ ಟೆಕ್ಕಿ ಸಾವು"
ಹೌದು, ನನ್ನನ್ನ ಬಾಲ್ಕನಿಯಿಂದ ತಳ್ಳಿದ್ದು ಅವಳೇ...ಆವತ್ತು ನನ್ ಬೈಕಿಗೆ ಅಡ್ಡ ಬಂದವಳು...

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ