Posts

Showing posts from June, 2016

ಆತ್ಮಗಮನೆ

         ಕುಮಟಾ, ಅಂಥಾ ದೂರದೂರೇನಲ್ಲ ನನ್ನೂರಿಂದ. ಅಂಥಾ ಪ್ರೇಕ್ಷಣೀಯ ಪಟ್ಟಣವಾಗ್ಲೀ, ಆಕರ್ಷಕ ನಗರವಾಗ್ಲೀ ಅಲ್ಲ. ಆದರೆ, ನಂಗೊಂಥರಾ ಸೆಳೆತ ಆ ಊರೆಂದರೆ‌. ಪ್ರತೀಬಾರಿ ಹೋದಾಗಲೂ ಒಂಥರಾ ರಿಪ್ರೆಷ್ಷಾಗಿ ಬರ್ತೀನಿ, ಇಲ್ಲೆಲ್ಲೋ ಕಳೆದು ಹೋದ ನಾನು ಅಲ್ಲೆಲ್ಲಿಂದಲೋ ಪತ್ತೆಯಾಗುವ ಕ್ರಿಯೆಯೇ ಕುಮಟಾ ಆಗಿರ್ಬೋದು.         ಸಖತ್ತ್ ಬೋರಿಂಗ್ ಲೀಡ್ ಅಲ್ವಾ? ಇರ್ಲಿ ಬಿಡಿ‌. ನಂಗೆ ಕುಮಟಾ ಪೇಟೆಗಿಂತಾ ಶಿರಸಿಯಿಂದ ಕುಮಟಾವನ್ನ ಸೇರಿಸೋ ರಸ್ತೆ, ಆ ಪಯಣವೇ ಇಷ್ಟ‌.‌‌‌‌ ಹಿಂಗಂದ್ರೆ ಹಿಂಗೇ ನಿಶ್ಚಲ ನಾನು ಚಲಿಸೋಕೆ ಶುರು ಮಾಡ್ತೀನಿ. ಅಮ್ಮೀನಳ್ಳಿ ಗೊತ್ತಾ ನಿಮಗೆ? ಅಲ್ಲೇ, ಚೂರು ಒಳಗಡೆ ನನ್ನ ಅಮ್ಮನ ತವರೂರಿದೆ. ಇತ್ತು, ನನ್ನ ಸೋದರಮಾವಂದಿರೆಲ್ಲಾ ಹಿಸೆಯಾಗಿ ಪಟ್ಟಣ ಸೇರುವುದರೊಂದಿಗೆ ಇಲ್ಲವಾಯ್ತು‌. ಅಜ್ಜಿಯ ಮೊದಲ ತಿಥಿಯೇ ಅಲ್ಲಿಗೆ ನನ್ನ ಕೊನೇ ಭೇಟಿಯಾಗಿತ್ತು, ಏಳೆಂಟು ವರ್ಷಗಳ ಹಿಂದಿನ ಮಾತದು ಈಗ್ಯಾಕೆ ಬಿಡಿ. ಹಾ, ಕುಮಟಾ ರಸ್ತೆ ಇಷ್ಟವಾಗೋದು ಇಂಥದೇ ಮರೆತು ಹೋದ ನನ್ನವರ ನೆನಪಿಂದ‌. ಮೊದಲ ಹುಡುಗಿಯ ತವರೂ ಆ ಕಡೆಗೇ ಅನ್ನೋದು ನೆನಪಾದರೂ ಮರೆಯಬಲ್ಲ ವಿಷಯ.           ಆಗೆಲ್ಲಾ ನಾನು ಬಿ.ಕಾಂ‌. ಓದುತ್ತಿದ್ದ ಸಮಯ. ವೆಂಕ,ನಂದು, ರವಿ ಮತ್ತೆ ನಾನು ಮೂಡು ಬಂತೆಂದ್ರೆ ಹಂಗೇ ಗಾಡಿ ಹತ್ತಿ ಉಂಚಳ್ಳಿ ಫಾಲ್ಸಿಗೋ, ಬೆಣ್ಣೆ ಫಾಲ್ಸಿಗೋ ಹೋಗುತ್ತಿದ್ದದುಂಟು. ಈಗ ಅವ್ರೆಲ್ಲಾ ಎಲ್ಲಿ? ನಾನೇಕೆ ಇನ್ನೂ ಇಲ್ಲೇ ಇದೀನಿ? ಹಿಂಗೆಲ್ಲಾ ಅಸಂಬದ್ಧ ಪ್ರಶ್ನ