ಗಡಿಯಾರ...

ಅದು ಹಳೇಕಾಲದ ಗಡಿಯಾರ, ಹತ್ತು ಬಾರಿ ಬಡಿದು ಸುಮ್ಮನೇ ತನ್ನ ಕಾಲುಗಳನ್ನ ಮುಂದಿಡುತ್ತಿತ್ತು. ಅದಕ್ಕೆ ಸ್ಪಷ್ಟವಾಗಿಯಲ್ಲದಿದ್ದರೂ ಅವನು ಬರೆಯುತ್ತಿದ್ದುದು ಕಾಣುತ್ತಿತ್ತು.
ಪೆನ್ನು ಕಾಗದದ ವೈರಿಯೇನೋ ಎಂಬಂತೆ ಕಾಗದದ ಎದೆಯ ಮೇಲೆ ತನ್ನ ಘಾತ ನೆಡೆಸುತ್ತಿತ್ತು. ಅದಕ್ಕೂ ಅನುಭವವಿದೆ, ಆಗಾಗ ಆತ ಅದನ್ನು ಉಪಯೋಗಿಸಿ ಏನೇನೋ ಗೀಚುವುದುಂಟು.
ಅವನ ಕನ್ನಡಕ ಕಾಗದವನ್ನೇ ದಿಟ್ಟಿಸುತ್ತಿದೆ. ಸ್ನಾನ ಮಾಡುವಾಗ ಮಾತ್ರ ಅವನಿಂದ ಅಗಲುತ್ತದೆಯಷ್ಟೇ. ಕನಸುಗಳನ್ನು ಬರಿಗಣ್ಣಿಂದ ನೋಡಲೆಂದೇ ನಿದ್ರಿಸುವಾಗ ಅದನ್ನು ತೆಗೆದಿಡೋದುಂಟು.
ವಿದ್ಯುತ್ ದೀಪ ಇದಕ್ಕೆಲ್ಲಾ ತಾನೇ ಕಾರಣನೆಂಬ ಅಹಂಕಾರದಿಂದ ಕಣ್ಣು ತೆರೆದುಕೊಂಡೇ ಇದೆ. ಮತ್ತೆ ಬೆಳಗಾಗುವವರೆಗೂ ತಾನೇ ಸೂರ್ಯನೆಂಬ ಹೆಮ್ಮೆಯದಕೆ.
ಆತನಿಗೆ ಅದೆಲ್ಲಾ ಗೊತ್ತು, ಅವುಗಳ ನಿರ್ಜೀವದೆಡೆಗೆ ಆತನಿಗೆ ನಂಬಿಕೆಯಿದೆ. ತಾನು ಬರೆದದ್ದನ್ನ ಅವು ಯಾರಿಗೂ ಹೇಳಲಾರವು. ಆ ಕಾಗದವನ್ನೊಂದು ಬಿಟ್ಟು.
ನಿರ್ಜೀವ ಪಾತ್ರಗಳು ಮಾತನಾಡಿದ್ದನ್ನ ನಾನು ಕೇಳಿದ್ದೇನೆ. ಅವೇ ನನಗೆ ಆತನ ಕಥೆ ಹೇಳಿದ್ದು.
ಅವನೊಬ್ಬ ಕಥೆಗಾರ. ಕಥೆಗಳನ್ನುಬರೆದ. ಆ ಕಥೆಗಳನ್ನೇ ನಾನು ಹೇಳುವುದು. ಅವನಿದ್ದಿದ್ದರೆ ಕಥೆಗಳೇ ಇರುತ್ತಿರಲಿಲ್ಲ!

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ