ಅರೆಪ್ರಜ್ಞ

ಪೋಲಿ ಪದ್ಯದ
ಮೊದಲ ಸಾಲಿನ
ನಡುವ ಪದ
ಕಣ್ಣು ಹೊಡೆದಂತೆ
ಅವಳು!
ಕಾಲ್ಬೆರಳ ತುದಿಯಲಿ
ರಂಗೋಲಿ ಇಟ್ಟಳಾ?
ತುಟಿಕಚ್ಚಿ ಕರೆದಳಾ
ನನ್ನೆಸರ?
ಉಸಿರು ಸಿಲುಕಿದೆ
ನೀಲಿ ನೆರಿಗೆಯ
ಲಂಗದಲೆಲ್ಲೋ!
ಬಿಚ್ಚಿಟ್ಟು ಬದುಕಿಸು,
ಸುತ್ತಿಟ್ಟು ಸಾಯಿಸು,
ಅಮಲಿನಲಿ
ಎಲ್ಲಾ ಚೆಂದ
ಹೇಳಿಬಿಡು ಏನ್ಮಾಡ್ತೆ?
ಮಾತ ಕೇಳದ
ಬೆರಳುಗಳಿಗೆ
ದಾರಿ ತೋರಿಸು,
ತೋಳ ಕಡೆಯಿಂದ
ಮುಕ್ತಿ ಕೊಡಿಸು.
ಪೋಲಿ ಪದ್ಯದ
ಕೊನೆಯ ಸಾಲಿನ
ನಡುವ ಪದ,
ಹಿಂಗೂದಲ
ಬೆವರ ಘಮಕೆ
ಅರೆಪ್ರಜ್ಞ ನಾನಾ?

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ