Posts

Showing posts from August, 2016

ಕೋತಿಗಳ ಬಿಗ್ ಬಾಸ್ ಮನೆ ಕಥೆ

      ನನ್ನ ಹುಡುಗಿಗೆ ಕಥೆ ಕೇಳೋ ಗೀಳು, ಯಾವಾಗ ಸಿಕ್ಕಿದ್ರೂ  ಕಥೆ ಹೇಳೆಂದು ಪೀಡಿಸುತ್ತಿದ್ಲು. ನನ್ನಲ್ಲಿದ್ದ ಚಂದಮಾಮ ಕಥೆಗಳೆಲ್ಲಾ ಖಾಲಿಯಾಗಿದ್ವು, ಈ ಬಾರಿ ಸಿಕ್ಕಾಗಲೂ ಕಥೆ ಹೇಳು ಎಂದು ಕೇಳಿದರೆ ಯಾವ ಕಥೆ ಹೇಳಲಿ ಎಂಬ ಚಿಂತೆ, ಸರಿ ನನ್ನ ಬಳಿ ಒಂದು ಕಥೆಯಿದೆ, ಅದನ್ನೇ ಅವಳಿಗೆ ಹೇಳಲಾ? ಮೊದಲು ನಿಮಗೆ ಕಥೆ ಹೇಳುವೆ, ಚೆನ್ನಾಗಿದ್ರೆ ಹೇಳಿ ಇದನ್ನೇ ಅವಳಿಗೆ ಹೇಳ್ತೀನಿ.       ಒಂದು  ಕೋಣೆಯಲ್ಲಿ ಒಟ್ಟು ಎಂಟು ಕೋತಿಗಳನ್ನು ಕೂಡಿ ಹಾಕಲಾಯಿತು, ಸೇಮ್ ನಮ್ಮ ಬಿಗ್‍ಬಾಸ್ ಮನೇ ಥರ. ಒಂದು ಟ್ವಿಸ್ಟ್ ಬೇಕಲ್ಲಾ, ಮನೆ ಛಾವಣಿಯ ಮೇಲೆ ಒಂದು ಹಣ್ನಾದ ಬಾಳೆಗೊನೆಯನ್ನು ತೂಗಿ ಹಾಕಲಾಯಿತು. ಬಾಳೆಗೊನೆ ತೂಗಿ ಹಾಕಿದ್ರೆ ಆಯ್ತಾ? ಕೋತಿಗಳಿಗೆ ಹತ್ತಲಿಕ್ಕಾಗ್ಲಿ ಅಂತಾ ಒಂದು ಹಗ್ಗವನ್ನೂ ಜೋತು ಬಿಡಲಾಯ್ತು.     ಬಾಲೆಗೊನೆ ಕಂಡ ಕೋತಿಗಳು ಸುಮ್ಮನೇ ಕುಳಿತುಕೊಳ್ಳೋಕೆ ಸಾಧ್ಯಾನಾ? ಕಣ್ಣೆದುರೇ ಬಾಳೆಗೊನೆ, ತಿನ್ನೋಕೆ ಸುಲಭವಾಗ್ಲಿ ಅಂತಾ ಜೋತುಬಿದ್ದಿರೋ ಹಗ್ಗ! ಖುಷಿಯಿಂದ ಒಂದು ಕೋತಿ ಹಗ್ಗ ಹಿಡಿದು ಮೇಲೇರೆಬಿಟ್ತು. ಇನ್ನೇನು ಬಾಳೇಹಣ್ಣಿಗೆ ಬಾಯಿ ಹಾಕಿಬಿಟ್ತು ಅಂದಾಗ್ಳೇ ಮತ್ತೊಂದು ಕೋತಿ ಅದರ ಬಾಲ ಹಿಡಿದು ಜಗ್ಗೇ ಬಿಟ್ತು! ಬಾಕಿ ಕೋತಿಗಳು ಸುಮ್ಮನಿರಬೇಕಲ್ವಾ, ಅವೆಲ್ಲಾ ಸೇರಿ ಮೊದಲನೇ ಕೋತಿಗೆ ಹೊಡೆಯಹತ್ತಿದವು. ನಮ್ಮೆದುರೇ ಬೇರೆಯವ್ರು ಉದ್ದಾರ ಆದ್ರೆ ಸಹಿಸಲಾಗುತ್ತಾ?      ಮೊದಲನೇ ಕೋತಿಗೆ ತಾನ್ಯಾಕೆ ಹೊಡೆತ ತಿಂದೆ ಅಂತಾನೂ ಗೊತ್ತಾಗ್ಲಿಲ

ಗುಬ್ಬಕ್ಕನ ಕಥೆ

              ಅಮ್ಮ ನನಗೆ ಹೇಳಿದ ಎಲ್ಲಾ ಕಥೆಗಳೂ “ಒಂದಲ್ಲಾ ಒಂದೂರಲ್ಲಿ...” ಎಂದೇ ಶುರುವಾಗ್ತಿತ್ತು. ಆ ಕಥೆಗಳಲ್ಲೆಲ್ಲಾ ಇಣುಕುತ್ತಿದ್ದ ಕಾಗಕ್ಕ ಗುಬ್ಬಕ್ಕನ ಪಾತ್ರಗಳು ನನಗೆ ಖುಷಿ ಕೊಡ್ತಿದ್ವು ಆಗೊಂದು-ಈಗೊಂದು ಕಥೆಗಳಲ್ಲಿ ರಾಜ ರಾಣಿಯರ ಪ್ರವೇಶವೂ ಆಗ್ತಿತ್ತು.ಈಗ ನಾನೂ ಕಥೆ ಹೇಳುವ ವಯಸ್ಸಿನ ಆಸುಪಾಸಿನಲ್ಲಿದ್ದೇನೆ, ನನ್ನ ಮಕ್ಕಳಿಗೆ ಯಾವ ಕಥೆ ಹೇಳಲಿ? ನನ್ನ ಬಳಿ ಮಕ್ಕಳಿಗೆ ಹೇಳಲು ಕಥೆ ಇಲ್ಲ, ನಿಮಗೆ ಹೇಳೋಕೆ ಒಂದು ಕಥೆ ನನ್ನ ಹತ್ತಿರ ಇದೆ. ಈ ಕಥೆಯಲ್ಲಿ ಪಾತ್ರಗಳಿವೆ, ಮುಗ್ದ ಗುಬ್ಬಕ್ಕನೂ ಇದ್ದಾಳೆ,ಮೋಸಗಾತಿ ಕಾಗಕ್ಕನೋ ಇದ್ದಾಳೆ. ಬಿಳಿ ಕುದುರೆ ಏರಿ ಬರುವ ರಾಜಕುಮಾರ, ಹಗಲಿಡೀ ಸ್ವಪ್ನ ಕಾಣುವ ರಾಜಕುಮಾರಿಯೂ ಇದ್ದಾಳೆ...           ಎಷ್ಟೋ ರಾತ್ರಿಗಳ ಆಕ್ರಂದನ ನಾಲ್ಕು ಗೋಡೆಗಳ ನಡುವಿನ ಮತ್ತೊಂದು ಜೀವಕ್ಕೆ ಖುಷಿ ಕೊಡುತ್ತಿತ್ತು. ಯಾವುದೇ ಪಿತ್ರಾರ್ಜಿತ ಆಸ್ತಿಯಿಲ್ಲದ ಅವಳು,ಕನಿಷ್ಠ ಎಂಟನೇ ಕ್ಲಾಸಿನ ಕನ್ನಡ ಪುಸ್ತಕವನ್ನೂ ಓದಲು ತಿಣಕಾಡುತ್ತಿದ್ದ ಅವಳಿಗೆ ಹೆಣ್ಣೆಂಬ ಹಣೆಪಟ್ಟಿಯೊಂದೇ ಜೀವಕ್ಕಿದ್ದ ಅರ್ಹತೆಯಾಗಿತ್ತು. ಯಾರೋ ತಂದೆ-ತಾಯಿಯರೆಂಬ ಅಪರಿಚಿತರು ಕರುಣಿಸಿದ್ದ ಜೀವವನ್ನು ಬದುಕಿಸಿಕೊಳ್ಳಲು ಗುಬ್ಬಕ್ಕನಿಗಿದ್ದುದು ಅದೊಂದೇ ದಾರಿ. ಚಿಕ್ಕ ವಯಸ್ಸಿಗೇ ಕಾÀಗಕ್ಕನ ಸೆರೆಯಾಳಾಗಿದ್ದ ಇವಳ ಸೌಂದರ್ಯ ಅದೆಷ್ಟೋ ಗಿರಾಕಿಗಳಿಂದ ಸೂರೆಯಾಗಿತ್ತು.        ಹಗಲಲಿ ಊರ ವಿಪ್ರರಿಗೆ        ಅಸ್ಪರ್ಷೆ,        ರಾತ್ರಿರಾ

ಕಾಫಿ ವಿಥ್ ಪ್ರೆಂಡ್

        ಮೊನ್ನೆ ಸಂಜೆ ಅಪರೂಪವೆಂಬಂತೆ ನನ್ನ ಗೆಳೆಯ ಮನೆಗೆ ಬಂದಿದ್ದ. ನನಗಿಂತ ಚೂರು ಜಾಸ್ತಿಯೇ ಓದಿದ್ದ ಆತ ಬುದ್ದಿಯಲ್ಲೂ ನನಗಿಂತ ಚುರುಕು. ಅಡುಗೇ ಮನೆಯಲ್ಲಿ ಏನಾದರೂ ತಿನ್ನೋಕಿದ್ಯಾ ಅಂತ ನೋಡೋಕೆ ಇಬ್ರೂ ಒಳಹೊಕ್ವಿ.       ತಿನ್ನೋಕೆ ಏನೂ ಕಾಣಲಿಲ್ಲ, ಸರಿ ಕಾಪಿ ಕುಡಿಯೋ ಚಟ ಹತ್ತಿತು. ಸರಿ ನಾನು ಕಾಫಿ ಮಾಡೋಕೆ ರೆಡಿಯಾದೆ. ಇವನಿಗೋ ಮಾತಿನ ತೆವಲು ಚೂರು ಜಾಸ್ತೀನೇ, ಇವತ್ತು ಯಾಕೋ ಸಮಾಜದ ಉದ್ದಾರದತ್ತ ಇವನ ಚಿತ್ತ ನೆಟ್ಟಂತಿತ್ತು. ನಮ್ಮ ಸಂಸ್ಕøತಿಯ ಶುದ್ದೀಕರಣದತ್ತ ಮಾತು ಹರಿಸತೊಡಗಿದ.       ನಮ್ಮ ಭಾರತೀಯ ಸಂಸ್ಕøತಿ ಜಗತ್ತಿನಲ್ಲೇ ಶ್ರೇಷ್ಠವಾದದ್ದು, ಆದರೆ ಮೂಲ ಸಂಸ್ಕøತಿ ನಾಶವಾಗಿ ಅನೇಕ ಸಂಸ್ಕøತಿಗಳ ಮಿಶ್ರಣದಿಂದಾಗಿ ಅಶುದ್ದವಾಗಿದೆ. ನಮ್ಮ ಜನ ಮನಸ್ಸು ಮಾಡಿದರೆ ಮಾತ್ರ ನಮ್ಮ ಸಂಸ್ಕøತಿ ಉಳಿಯುತ್ತದೆ...ಮತ್ತೆ ಮೊದಲಿನಂತೆ ನಮ್ಮ ಸಂಸ್ಕøತಿ ಉತ್ತುಂಗಕ್ಕೇರುತ್ತದೆ ಎನ್ನುತ್ತಿದ್ದ. ನಾನು ಬಿಸಿ ಹಾಲಿಗೆ ಕಾಫಿ ಪುಡಿ ಹಾಕಿದೆ.     ಪಾಶ್ಚಿಮಾತ್ಯರ ಅಂಧಾನುಕರಣೆಯಿಂದ ಸೀರೆ, ಪಂಚೆಗಳ ಜಾಗವನ್ನು ಜೀನ್ಸ್, ಟೀಶರ್ಟ್ ಆಕ್ರಮಿಸಿವೆ. ಭರತದಲ್ಲಿ ಇಂತಹ ಬಟ್ಟೆಗಳನ್ನು ನಿಶೇಧ ಮಾಡಬೇಕು ಎಂದ. ಅಷ್ಟೊತ್ತಿಗೆ ಕಾಫೀ ಪುಡಿ ಹಾಲಿನೊಂದಿಗೆ ಬೆರೆತು ಒಳ್ಳೆಯ ಘಮ ಹರಡಿತ್ತು. ಅದಕ್ಕೊಂದಿಷ್ಟು ಸಕ್ಕರೆ ಬೆರೆಸಿ ಕಪ್‍ಗೆ ಬೆರೆಸಿ ನಾನೊಂದು ಅವನೊಂದು ಕಪ್ ಕೈಲಿಟ್ಟುಕೊಂಡ್ವಿ.     ಅಷ್ಟರಲ್ಲಿ ಅವನ ಆರೋಪ ನನ್ನ ಮೇಲೆ ಎರಗಿತ್ತು. ನೀನು ನ

ನೀ ಕೊಡದ ಮುತ್ತು ಕೆನ್ನೆ ತುಂಬ...

ಬಹುಶಃ ನಾ ಬರೆದ ಮೊದಲ  ಹಲ್ಬಾಣ  ಇದೇ ಆಗಿರ್ಬೇಕು ಓದಿಬಿಡಿ.      ಈ ಮೂರು ವರ್ಷಗಳಲ್ಲಿ ಅದೆಷ್ಟು ಲವ್ವುಗಳಾದ್ವೋ ಅದೆಷ್ಟು ಬ್ರೇಕಪ್ಪುಗಳಾದ್ವೋ ಅ ದೇವರಿಗೇ ಗೊತ್ತು. ಅದರೆ ಎಷ್ಟು ಲವ್ವುಗಳಾದ್ವೋ ಅಷ್ಟೇ ಬ್ರೇಕಪ್ಪುಗಳಾಗಿದ್ದಂತೂ ಸತ್ಯ. ಮೊದಲ ಪ್ರೇಮ, ಮೊದಲ ಸ್ಪರ್ಷ, ಮೊದಲ ನೋಟ, ಮೊದಲ ಅಪ್ಪುಗೆ... ಮೊದಲ ಬ್ರೇಕಪ್... ಇವನ್ನೆಲ್ಲಾ ಮರೆಯೋದು ಅಷ್ಟು ಸುಲಭವಲ್ಲ ಬಿಡಿ. ನನಗೆ ಮೊದಲ ಪ್ರೆಮದ ನಿಶಾನೆಯಾಗಿ ಏನೂ ಉಳಿದಿಲ್ಲ, ಆದರೆ ಮೊದಲ ವಿದಾಯದ ಕುರುಹಾಗಿ ಉಳಿದಿರೋದು ಇದೊಂದೇ ಪತ್ರ, ಪೋಸ್ಟ್ ಮಾಡದೇ ಬರೀ ಬರೆದಿಟ್ಟ ಪತ್ರ...     ಏಯ್ ನಿರ್ಲಜ್ಜ ಹುಡುಗಿ,         ನೆನಪುಗಳಿಗೆ ಸಾವಿಲ್ಲ ಎಂದು ಗೊತ್ತಿತ್ತು, ಆದರೆ ರಜಾನೂ ಇಲ್ಲ ಅಂತ ತಿಳಿದಿದ್ದು ಈಗಲೇ, ನೀನು ಬಿಟ್ಟು ಹೋದಮೇಲೇ... ಹುಣ್ಣಿಮೆಯ ಚಂದಿರ ಆಗಸದಲ್ಲಿ ನಕ್ಕಾಗ ನಿನ್ನ ನಗು ನೆನಪಾದರೆ, ಅಮಾವಾಸ್ಯೆಯ ಕತ್ತಲು ಕಂಡಾಗ ಜೊತೆಯಲ್ಲಿ ನೀನಿಲ್ಲ ಎಂಬ ನೆನಪಾಗಿ ಮರಗುತ್ತೇನೆ. ನಂಗೊತ್ತು, ನೀನು ನನ್ನ ಮರೆತಿದ್ದೀಯ ಅಂತ, ನನ್ನ ಮರೆತು ಹಾಯಾಗಿದ್ದೀಯಾ ಅಂತಾನೂ ಗೊತ್ತು ಗೆಳತಿ. ಕನ್ನಡ ಚಿತ್ರಗಳನ್ನು ನೋಡಿ ಬೆಳೆದ ನನ್ನಂಥಾ ಪ್ರೇಮಿಗಳು ನಿನ್ನ ಖುಷಿಯೇ ನನ್ನ ಪ್ರೀತಿಯ ಧ್ಯೇಯ ಎಂದು ತಿಳಿಯೋದು ಪ್ರೇಮ ಧರ್ಮವಲ್ಲವಾ ಗೆಳತಿ...     ನಾನು ಹೇಗಿದ್ದೀನಿ ಅಂತಾ ಕೇಳಿದೆಯಾ ಗೆಳತಿ? ನಾನೂ ಖುಷಿಯಾಗಿದ್ದೇನೆ ಬಿಡು. ಸಾಕ್ಷಿ ಬೇಕಾದರೆ ಬಂದು ನನ್ನ ಕಣ್ಣೀರ ನೋಡು. ಬೇಡ, ನನ್ನ ಕಣ

ಒಂದಿಷ್ಟು ಪುಟಿಕಥೆಗಳು...

‪‎ ಸಾಕ್ಷಾತ್ಕಾರ‬ ದೇವರು ಎಲ್ಲಿದ್ದಾನೆ? ಹುಡುಕದೆಯೇ ಹಿರಣ್ಯಕಶ್ಯಪುವಿಗೆ ಕಂಡನಂತೆ! ಅದೂ ಯಾವುದೋ ಭಕ್ತ ಬರೆದ ಕಥೆಯಲ್ಲವೇ? ಬರೆದವರೆಲ್ಲ ಕಥಾನಾಯಕನನ್ನು ದೇವರೆಂದೋ, ದೇವರೇ ನಾಯಕನೆಂದೋ ಬರೆದಿರುತ್ತಾರೆ ಬಿಡಿ. ನಾನು ಯಾರೋ ಬರೆದಿಟ್ಟ ಕಥೆಯ ನಾಯಕನ ಹುಡುಕಾಟದಲ್ಲಿಲ್ಲ, ಆ ಶಕ್ತಿಯನ್ನು ಹುಡುಕುತ್ತಿದ್ದೇನೆ. ಆ ಮಹಾಶಕ್ತಿ ಇಂತಹ ಶುಭ್ರ ಹಿಮಾಲಯದಲ್ಲಿರದೇ ಮತ್ತೆಲ್ಲಿರುತ್ತಾನೆ? ಇಲ್ಲ, ಇಲ್ಲಿಯೂ ಆ ಚೇತನವಿಲ್ಲ! ಇದು ಬರೀ ಬೆಳಕಿನ ಜಾಗ, ಬರೀ ಚಳಿಯ ಜಾಗ ಇಲ್ಲಿ ಹಸಿರೂ ಚಿಗುರುವುದಿಲ್ಲ ಇನ್ನೆಂತಹ ಚೇತನವಿದ್ದೀತು! ಪರಮಾರ್ಥ ಕಾಣಲು ಹೋದವ ಮರಳಿ ಬಂದ. ಬಂದವನಿಗೆ ಎಲ್ಲ ಕೇಳಿದರು,ಸಾಕ್ಷಾತ್ಕಾರವಾಯಿತಾ? ಇವನೇನಂದ?  "ನಿಮ್ಮ ದೇವರು ಸಿಕ್ಕಿದ್ದ, ನನ್ನ ಕಂಡು ಕೈಮುಗಿದು ಹುಡುಕಿ ಕಾಟಕೊಡಬೇಡಿ ಏನೇ ಆದರೂ ನಾನಿರುವೆ...ಅಂದ" ********************************************** ಅವನಿಗೆ ಒಂದಷ್ಟು ಬ್ರೇಕಪ್ಪುಗಳಾಗಿದ್ವು. ಅವನ ಗಡ್ಡದ ಹೇರ್ ಸ್ಟೈಲ್ ನೋಡಿದವರ ಮನಸ್ಸಲ್ಲಿ ಆ ಯೋಚನೆ ದೃಢವಾಗ್ತಿತ್ತು. ಹಿಂಗೇ ನಮ್ಮ ನಿಮ್ಮಂಗೇ ಸಾಮಾಜಿಕ ಜಾಲತಾಣದಲ್ಲಿ (   ) ಸಕ್ರಿಯನಾಗಿದ್ದವನಿಗೆ ಹೊಸತಾಗಿ ಪರಿಚಯವಾದ ಹುಡುಗಿಯರು ಕೇಳೋ ಪ್ರಶ್ನೆ ಹಳೆ ಹುಡುಗಿಯ ಹೆಸರೇನು? ಅವನೇನೋ ಉತ್ತರ ಹೇಳುತ್ತಿದ್ದ ಬಿಡಿ ಅವನಿಗೇನು! ‪‎ ಪ್ರತೀಕಾರ‬ ! ಆವತ್ತೊಂದಿನ ಬಂದ ಸುಂದರಿಯೊಬ್ಬಳ ಮೆಸೇಜು ನಿದ್ದೆ ಕೆಡಿಸಿತ್ತು. ಅದೇ ಹೆಸರು, ಹಳೆ ಹುಡುಗಿಯದು!