ಆಗಸದ ತೂತು | ಸಂಚಿಕೆ ೧೧ - ಪುಟ್ಟಿಯಲ್ಲ, ಮೈಸೂರ್‌ಪಾಕ್
"She was jealous. ಮುಖ ನೋಡಿದ್ರೇ ಗೊತ್ತಾಗ್ತಿತ್ತು. ಆದ್ರೆ ಅವ್ಳನ್ನ ಇಗ್ನೋರ್ ಮಾಡಿದ್ರೆ ಉಳ್ದೋರನ್ನ ಕಂಟ್ರೋಲ್ ಮಾಡೋದು ನನ್ನೊಬ್ನಿಂದ ಆಗೋದಲ್ವಾಗಿತ್ತು. ನಾನು ದೇವರ ಕೋಣೆ ಆಗಿದ್ರೆ ಅವ್ಳು ಆ ಕೋಣೆ ಬೀಳ್ದಿದ್ದಂಗೆ ನೋಡ್ಕೊಳ್ಳೋ ಕಂಬ ಆಗಿದ್ಳು. ನಾನು ಹೊಸ ಹುಡ್ಗೀನ ಪ್ರೀತಿಸ್ತಿದ್ರೂ ಮಲ್ಲಿಕಾಳನ್ನ ಕಡೆಗಣ್ಸಿ ಹೊಸ ಹುಡ್ಗೀನ ಪಟ್ಟದ ರಾಣಿ ಅಂತೇನೂ ಘೋಷಣೆ ಮಾಡಿರ್ಲಿಲ್ಲ. ಮೈಸೂರ್ ಪಾಕೇ ನನ್ನ ಸೆಕೆಂಡ್ ಇನ್ ಕಮಾಂಡ್ ಆಗಿದ್ಳು" ಹೊಸ ಲವ್ ಟ್ರೈಆ್ಯಂಗಲ್ ಬಗ್ಗೆ ಗೋಪುಟ್ಟ ತನ್ನ ವಿಶ್ಲೇಷಣೆ ಕೊಡ್ತಿದ್ದ. ಅವನನ್ನ ಮಧ್ಯದಲ್ಲೇ ತಡೆದ ನಾನು, "ಮೊದ್ಲು ಆ ಹೊಸ ಹುಡ್ಗಿ ಹೆಸ್ರೇನು ಅಂತೇಳು ಮಾರಾಯ, ಅವ್ಳ ಕತೆ ಏನು?" ಅಂತ ಕೇಳ್ದೆ. "ಅವ್ಳೆಸ್ರು ಚಂಪಾ ಅಂತ. ಫ್ರಾನ್ಸ್ ಮೂಲದ ಅವ್ಳಪ್ಪ ಹಿಪ್ಪಿಗಳ ಕಾಲ್ದಲ್ಲಿ ಭಾರತಕ್ಕೆ ಬಂದು ಇಲ್ಲೇ ಉಳ್ಕೊಂಡಿದ್ದ. ಅವ್ನ ಹೆಂಡ್ತಿ ಅಸ್ಸಾಮಿನಿವ್ಳಂತೆ. ಇಬ್ರೂ ಗೋಕರ್ಣದಲ್ಲಿ ಭೆಟ್ಟಿಯಾಗಿ ಅಲ್ಲೇ ಒಟ್ಟಿಗೇ ಇದ್ರಂತೆ. ಇವ ತಂದಿದ್ದ ಹಣ ಖಾಲಿಯಾದಾಗ ಗೋವಾದೊಳಕ್ಕೆ ಸೇರಿ ಎಕ್ಸ್ಟಸಿ ತಯಾರು ಮಾಡೋಕೆ ಶುರು ಮಾಡಿದ್ರು. ನಿಧಾನಕ್ಕೆ ಒಂದು ಗ್ಯಾಂಗ್ ಬಿಲ್ಡ್ ಮಾಡೋ ಹೊತ್ತಿಗೆ ಇವ್ರ ಅಡ್ಡದ ಮೇಲೆ ಪೊಲೀಸ್ ರೇಡ್ ಆಗಿ ಅವ್ಳಪ್ಪ ಅಂದರ್ ಆದ. ಚಂಪಾಳ ಅಮ್ಮ ಇದ್ದ ಹಣ, ಅವ್ನ ಪಾಸ್ಪೋರ್ಟು ಎಲ್ಲಾ ತಗೊಂಡು ನಾಪತ್ತೆಯಾದ್ಳು. ಆವಾಗ ಕಾಣೆಯಾದೋಳು ಸಿಕ್ಕಿಲ್ಲ. ಒಂದ್ ವರ್ಷದ್ ನಂತ್ರ ಹ...