Posts

Showing posts from 2015

ಮಾರಾಟಕ್ಕಿವೆ...ಎಂದೂ ಬಳಸದ ಚಪ್ಪಲಿಗಳು.

                 ಈ ಬ್ಲಾಗಿಗರ ಖೋಖೊ ಆಟ ನೋಡಿ ಗೊತ್ತು, ಆದ್ರೆ ನಂಗಿದು ಹೊಸದು.                  ಗುರುಕಿರಣ್ ಸೋದೆ ಬರೆದ ಕಥೆಯಲ್ಲಿ ನಂಗಿಷ್ಟವಾದದ್ದು ಕಥೆಯ ತಲೆ,'ಮಾರಾಟಕ್ಕಿವ ೆ,ಎಂದೂ ಬಳಸದ ಚಪ್ಪಲಿಗಳು' ಎಂಬ ಆ ಭಾವನೆ. ಇದೊಂದೇ ಸಾಲು ಸಾಕಲ್ಲವೇ? ಕಥೆಯೇ ಬೇಡವಾಗಿತ್ತು ಅನ್ನಿಸಿದರೂ ಗೆಳೆಯ ಗುರುವಿನ ಕಥೆ ಹೇಳುವ ಶೈಲಿ ಮತ್ತೆ ಆಯ್ದುಕೊಂಡ ಕಥೆಯ ಮಾಂಸಲ ಭಾಗ ಇಷ್ಟವಾಯ್ತು. ಗುರು ಬರೆದ ಕಥೆ ಓದಲು ಕೆಳಗಿನ ಲಿಂಕ್ ಬಳಸಿ  http:// guruu725.blogspo t.in/2015/11/ blog-post_7.html                   ಗುರು ಅವನ ಆಟ ಮುಗಿಸಿ ನನ್ನ ತಂಗಿಯಂತಾ ಹುಡುಗಿ ರಾಧಾ ಹೆಗಡೆಗೆ ಖೋ ಕೊಟ್ಟ.ರಾಧೆಯ ಕಥೆ ನಂಗೆ ಬಹಳವೇ ಇಷ್ಟವಾಯ್ತು. ಆಧುನಿಕ ಅರ್ಜೆಂಟ್ ಪ್ರೇಮ, ಅರ್ಜೆಂಟ್ ಮದುವೆ, ಅಪಕ್ವ ಬೌದ್ದಿಕತೆಯ ಫಲ ಅಪೂರ್ಣ ಮಗುವಿನ ಸುತ್ತ ಆಕೆ ಹಣೆದ ಕಥೆಯ ಪಾತ್ರಗಳು ನಮ್ಮ ಮಧ್ಯೆಯೇ ಇದ್ದವೇನೋ, ಇದ್ದಾವೇನೋ ಅನ್ನಿಸಿತು. ರಾಧೆಯ ಕಥೆ ಓದಲು ಕೆಳಗಿನ ಲಿಂಕ್ ತೆರೆಯಿರಿ  http:// radhayagneshwar. blogspot.in/ 2015/11/ blog-post_13.htm l?spref=fb                  ಸರಿ, ರಾಧಾ ನನಗೆ ಖೋ ಕೊಟ್ಟಿದಾಳೆ. ಬರೆಯೋದೆಲ್ಲಾ ನನ್ ಕೈಲಿ ಆಗೋದಿಲ್ಲಾ ಅಂತ ಡಿಸೈಡಿಸಿದ್ದೆ.ಚಿಕ್ಕ  ಕಥೆಗೇನು ಹೊತ್ತ ಪರಿವೆ ಅಂತ ಕಥೆಯ ತಿರುಳಿನ ನನ್ನ ವರ್ಷನ್ ಬರೆದು ನಿಮ್ಮ ಮುಂದಿಡುತ್ತಿದ್ದೇ ನೆ. ನಾ ಓದಿದಾಗ ಎಲ್ಲೋ ಮೊದಲಿಬ್ಬರ ಕಥೆಯ ನ

ಮುಖಗಳು ಭಾಗ ೨

                    ನಾನಾಗ ಐದನೇ ಕ್ಲಾಸು,ಸರ್ಕಾರಿ ಶಾಲೆಯಲ್ಲಿ ನಾನೇ ತರಗತಿಗೆ ಮೊದಲಿಗಳು. ಬರಿ ಓದಿನಲ್ಲಲ್ಲ,ಎಲ್ಲದರಲ್ಲೂ. ಅಪ್ಪ ಅಮ್ಮನ ಜಗಳಗಳ ಮದ್ಯೆ ನಾನೂ ಹಾಳಾಗುತ್ತಿದ್ದೆ. ಐದನೆ ತರಗತಿ ಮುಗಿಯುವ ಹೊತ್ತಿಗೆ ನನ್ನ ಶೈಕ್ಷಣಿಕ ಪ್ರಗತಿ ಸಾಧಾರಣ ಎಂದರೆ ಸಾಧಾರಣ ಮಟ್ಟ ತಲುಪಿತ್ತು.                     ಇತ್ತ ಅಪ್ಪನ ಅರ್ಭಟವೂ ಅತಿಯಾಗುತಿತ್ತು. ಅದಾಗಲೇ ಅಮ್ಮನಿಗೆ ಯಾವ ಸ್ನೇಹಿತೆಯರೂ ಇಲ್ಲವಾಗಿದ್ದರು. ಅದಾಗಲೇ ತವರೂ ದೂರವಾಗಿತ್ತು. ಅಮ್ಮನ ಕೊನೆ ದಿನಗಳಂತೂ ಥೇಟಾನುಥೇಟು ಮನೆಯೆಂದರೆ ಜೈಲು ಅನ್ನುವಮ್ತಾಗಿತ್ತು. ಅವಳದೇ ಸ್ವಂತ ಮನೆ ಈಗ ಜೈಲು!! ಸಾಯ್ಬೇಕೆಂದರೂ ಕೈಗೆ ಏನೂ ಸಿಗದಂತೆ ಮಾಡಿಬಿಟ್ಟಿದ್ದ ಅಪ್ಪ. ಕೊನೆಗೆ ಅದೊಂದೇ ಉಳಿದಿತ್ತು, ತನ್ನ ಆರು ಮೊಳದ ಸೀರೆ.                   ಅಮ್ಮ ಸತ್ತಮೇಲೆ ಅಪ್ಪ ಮತ್ತೊಂದು ಮದುವೆಯಾಗಲಿಲ್ಲ ಅನ್ನೋದೇ ನನಗಿನ್ನೂ ಆಶ್ಚರ್ಯ. ಅಪ್ಪನಿಗೆ ಹೆಂಡತಿ ಬೇಡ್ವಾಗಿದ್ದಳು ಆದರೆ ನನಗೆ ಅಮ್ಮ ಬೇಕಾಗಿದ್ದಳು. ಆದರೆ ಅಪ್ಪನಿಗೆ ಹಣ ಬೆಕಿತ್ತು. ಅಮ್ಮ ಅದೆಂಗೊ ನಾನು ಪಿ.ಯು.ಸಿ. ಮುಗಿಯುವ ವರೆಗೆ ಬದುಕಿದ್ದಳು. ನಾನು ಇಂಜನಿಯರಿಂಗ್ ಮುಗಿಸಲು ಇನ್ನೂ ನಾಲಕ್ಕು ವರ್ಷಗಳಿದ್ದವು, ಆಮೇಲೆ ಅಪ್ಪನಿಗೆ ಬೇಕಿದ್ದ ಹಣ ಬರುತ್ತಿತ್ತು, ಅವನ ಅದ್ದೂರಿ ಯೋಜನೆಗಳಿಗೆ ನಾನು ಫೈನಾನ್ಸಿಯರ್ ಆಗುತ್ತಿದ್ದೆ. ಅವನ ಮಗಳೆಂಬ ತಿಜೋರಿ ಕನ್ನೆದುರುಗಿತ್ತು. ಬಹುಶಃ ಅಮ್ಮನ್ ಸಾವು ಅವನಿಗೆ ಬುದ್ದಿಯನ್ನೇನು ಕಲಿಸಲಿಲ್