Posts

Showing posts from 2021

ಅನಾಥಪ್ರಜ್ಞೆ

Image
ಕು ತ್ತಿಗೆಯ ನೆರಿಗೆಗಳನ್ನು ಲೆಕ್ಕ ಹಾಕಿದರೆ ಅರವತ್ತರ ಮೇಲೆ ದಾಟಬಹುದೇನೋ. ಅಜಮಾಸು ಅಷ್ಟೇ ವಯಸ್ಸಾದ ಅಜ್ಜಿಯವಳು. ಟಿವಿ ಕಪಾಟಿನ ಡ್ರಾವರಿಗೆ ಬೀಗ ಜಡಿದೂ ಮತ್ತೆ ಮತ್ತೆ ಭದ್ರತೆಯ ತಪಾಸಣೆ ಮಾಡುವಷ್ಟು ಅಭದ್ರತೆ ಅವಳನ್ನ ಕಾಡುತ್ತಿತ್ತು. ಅದರಲ್ಲಿ ಅಬ್ಬಬ್ಬಾ ಅಂದರೆ ಯಾವುದೋ ಕಾಲದ ತರಂಗವೋ, ಸುಧಾ ಮ್ಯಾಗಜೀನೋ ಇರಬಹುದಷ್ಟೇ! ಚಿಕ್ಕ ಚಿಕ್ಕ ವಸ್ತುಗಳೂ ತನಗೆ ನಿಽಯಷ್ಟೇ ಮುಖ್ಯ ಎಂಬಂತೆ ಜತನದಿಂದ ಕಾಯ್ದುಕೊಳ್ಳುವ ಅಭ್ಯಾಸ ಆಕೆಗೆ ಇತ್ತೀಚೆಗಷ್ಟೇ ಶುರುವಾದದ್ದು; ಇರದ ಮಕ್ಕಳನ್ನು ಇವಳಿಗೆ ಬಿಟ್ಟು ಗಂಡನೂ ಹರನ ಪಾದ ಸೇರಿದಾಗಿನಿಂದ... ಗಡಿಹನಿ ಹತ್ತುವ ವೇಳೆಗೆಲ್ಲ ಊರ ಉಳಿದ ಮಂದಿ ಬಾಳೆಹೆಡೆ ಮಾಡಿ ಅಡಿಕೆಗೊನೆಗಳಿಗೆ ತುತ್ತ-ಸುಣ್ಣವನ್ನೋ, ಬಯೋಪಾಯ್ಟನ್ನೋ ಹೊಡೆಯಲು ತಯಾರಾಗುತ್ತಿದ್ದರೆ ಸಾವಿತ್ರಜ್ಜಿ ಬೆಳೆಸಾಲಕ್ಕೆ ಅರ್ಜಿ ಹಾಕುವುದೂ ಬಗೆಹರಿಯದೆ, ಕೊನೆಗೌಡನ ಹುಡುಕಾಟವೂ ಕೊನೆಗಾಣದೆ ಹೇಡಿಗೆಯ ಮೇಲೆ ಕುಂತು ಸೆರಗಿನ ತುದಿಯಲ್ಲಿ ಗಾಳಿ ಬೀಸಿಕೊಳ್ಳುತ್ತಿದ್ದಳು. ಇಂಥ ದಿನಗಳು ಶುರುವಾಗಿದ್ದು ಎಲ್ಲಿಂದ? ಪ್ರಶ್ನೆಯಾಗಿ ನೆನಪುಗಳು ಬರುತ್ತಿದ್ದರೆ ಗಾಳಿ ಬೀಸುತ್ತಿದ್ದ ಸೆರಗೂ ನಿಷ್ಕ್ರಿಯವಾಗಿತ್ತು. ಮೊಗೆ ಓಳಿಗೆ ನೀರು ಹೊಯ್ಯಲು ಹೋಗಿದ್ದ ಮಗ ಥಿಮೇಟು ಕರಡಿ ಕುಡಿದಿದ್ದು, ಬಯಲುಸೀಮೆಯ ಸೊಸೆ ಮಲೆನಾಡ ಕೃಷಿ-ಬದುಕಿಗೆ ಒಗ್ಗದೇ ತನ್ನ ಮಗಳೊಟ್ಟಿಗೆ ತವರಿಗೆ ಹೋಗಿದ್ದು, ಇದ್ದೊಬ್ಬ ಗಂಡನೆಂಬ ಪ್ರಾಣಿ ಸಂಭಾವನೆಯ ಆಸೆಗೆ ಮನೆಯ ಜವಾಬ್ದಾರಿ ತೊರೆದು ಊರೂ

ಕೈಗಾರಿಕಾ ಕ್ರಾಂತಿಯ ತೆಕ್ಕೆಯಲ್ಲಿ ಮಿಸುಕಾಡುವ ಕೃಷಿವಲಯದ ಸಾಧ್ಯತೆ

Image
ನಾ ವು ಆಗಾಗ ‘ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ’ ಅನ್ನೋ ಆರೋಪವನ್ನು ಕೇಳುತ್ತೇವೆ, ಮಾಡುತ್ತೇವೆ. ಆದರೆ ಈ ಆಧುನಿಕ ವೃದ್ಧಾಶ್ರಮಗಳ ನಿರ್ಮಾಣ ಹೇಗಾಯ್ತು ಅನ್ನುವ ಯೋಚನೆಗೆ ’ನಗರಗಳತ್ತ ಯುವಜನತೆಯ ವಲಸೆ’ ಎನ್ನುವ ಮೂರು ಪದಗಳ ಉತ್ತರವನ್ನು ನೀಡಿ ಸುಮ್ಮನಾಗುತ್ತಿದ್ದೇವಷ್ಟೆ. ಇದರ ಮೂಲ ಮತ್ತು ಪರಿಣಾಮ ನಮ್ಮ ಮೇಲ್ಮಟ್ಟದ ಊಹೆಗಳಲ್ಲಿ ಮೂಡದೇ ಉಳಿದುಬಿಡುತ್ತವೆ. ೧೯೬೦ರ ದಶಕದಲ್ಲಿ ಕೃಷಿ ಕ್ರಾಂತಿ ಎನ್ನುವ ಕ್ರಾಂತಿಯೊಂದಕ್ಕೆ ಭಾರತ ತನ್ನನ್ನ ದೂಡಿಕೊಂಡಿತಾದರೂ ಅದಕ್ಕೂ ಮೊದಲೇ, ಅಂದರೆ ಸ್ವಾತಂತ್ರ್ಯದ ಹೊತ್ತಿಗೆಲ್ಲಾ ಕೈಗಾರಿಕಾ ಕ್ರಾಂತಿಯೆಂಬುದರ ಮೂಲಕ ಹೊಸ ಉದ್ಯೋಗಗಳನ್ನು ತಯಾರಿಸಲಾಗಿತ್ತು. ಅದಕ್ಕೆ ಕನಿಷ್ಠ ವಿದ್ಯಾರ್ಹತೆ, ಕೌಶಲಗಳ ಮಾನದಂಡ ಆ ಕಾಲಕ್ಕೆ ನಿಗದಿಯಾಗದಿದ್ದರೂ ಕೌಶಲದ ಅವಶ್ಯಕತೆ ಇದ್ದೇ ಇತ್ತು. ನಾವು ಆರೋಪಿಸುವ ಮೆಕಾಲೆ ಶಿಕ್ಷಣ ಪದ್ಧತಿ ಅದಾಗಲೇ ರೂಢಿಯಲ್ಲಿದ್ದುದಲ್ಲದೆ ಅದರ ಅವಶ್ಯಕತೆಯನ್ನೂ ಸೃಷ್ಟಿಸಲಾಯ್ತು. ಇವೆಲ್ಲ ಸ್ವಾತಂತ್ರ್ಯೋತ್ತರ ಭಾರತವನ್ನು ಬಲಿಷ್ಠಗೊಳಿಸಲು ಅವಶ್ಯವೆಂಬ ನಂಬಿಕೆ ನಮ್ಮಲ್ಲಿ ಮೂಡಿದ್ದು ಬಹುಶಃ ೭೦-೮೦ರ ದಶಕದ ಸುಮಾರಿಗೆ. ಆರ್ಥಿಕತೆಯ ಜಾಗತಿಕ ಸ್ಥಾನಮಾನಗಳ ಸಂಪಾದನೆಗೋಸ್ಕರ ಭಾರತದ ಸರ್ಕಾರಗಳು ನಗರ ಸೃಷ್ಟಿಗೆ, ನಗರಗಳ ಆರ್ಥಿಕ ಸಾಬಲ್ಯಕ್ಕೆ, ಕೈಗಾರಿಕಾ ವಸಾಹತುಗಳ ಸಾಬಲ್ಯಕ್ಕೆ ಹಲವು ಯೋಜನೆಗಳನ್ನು ತಂದ ಪರಿಣಾಮವೇ ಈಗಿನ ಹಳ್ಳಿಗಳ ಸ್ಥಿತಿ. ಕಡಿಮೆ ಕೂಲಿದರಕ್ಕಾಗಿ ಹಳ್ಳಿಗರತ್ತ ದೃಷ್ಟಿ! ನಗರಗ