ಸೌಂಡು

ಎದೆಯ ಕದವ
ಯಾರೋ ಬಡಿದಂತೆ ಸೌಂಡು.
ಯಾರಿದ್ದೀರಾ
ಎಂಬ
ದನಿ,
ಮತ್ತೆ ಬಡಿದಂತೇ ಸೌಂಡು.
ಬಾಗಿಲಲಿ ನಿಂತವರಾರು?
ಅದು ಅವಳೇ ಇರಬೇಕು,
ಅಷ್ಟುದ್ದ ಕೇಶ ಯಾರಿಗಿದೆ!
ಮತ್ತೆ ಸೌಂಡು.
ಇಲ್ಲೇನು ಕೆಲಸ?
ಕನಸ ಕೊಲೆ ಮಾಡಿದ
ಸಾಕ್ಷಿ ನಾಷಕೆ ಬಂದಳೇ,
ಕೊಲೆ ಮಾಡಿದ
ಸಂತೋಷ ಕೂಟಕೋ?
ಮತ್ತೆ ಸೌಂಡು, ಟಕ್ ಟಕ್...
ಚಿಲಕ ತೆಗೆದ ಶಬ್ಧ,
ಒಳಗೇ ಬಂದಳು!
ಟಕ್ ಟಕ್ ಚಪ್ಪಲಿಯ
ಸದ್ದು,
ಚಪ್ಪಲಿ ಬಿಚ್ಚಿಟ್ಟು ಬಾ
ಅನ್ನಲೇ?
ಅಂದರೆ ಆಹ್ವಾನ ಕೊಟ್ಟಂತೆ!
ಟಕ್ ಟಕ್ ಸೌಂಡು
ಅರೆ ಶಬ್ಧ ಮಾಯ!
ಎದೆಯ ಮಾಂಸಲದಲ್ಲಿ
ಚಪ್ಪಲಿಯ ಮುಳ್ಳು
ಚುಚ್ಚಿರಬೇಕು!
ನನ್ನದೇ ಎದೆ,
ಆದರೂ ನೋವಿಲ್ಲ!
ಎದೆಯ ಜಗುಲಿಯಲ್ಲಿ
ಸೌಂಡು,
ಕೊಲೆಯ ಕಲೆ ಅಳಿಸಿದ
ಸೌಂಡು,
ನೆನಪು ಸಾಕ್ಷಿ ನಾಷಕ,
ಬದುಕ ವಿನಾಷಕ!
ಪ್ರೀತಿ ವಿದೂಷಕ.

Comments

Ninada said…
Beautiful 😍

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ