ಕಾಗದದ ಕಟ್ಟು!

ಅದು ಹೇಗೆ ಕದ್ದಿದ್ದನೋ ಪುಣ್ಯಾತ್ಮ ಅಷ್ಟು ಹಣಗಳನ್ನು. ಕದಿಯೋ ಅಬ್ಬರದಲ್ಲೋ, ಅಷ್ಟೋಂದ್ ಹಣ ಕಂಡ ಖುಷಿಯಲ್ಲೋ ಏನೋ ಹಣ ಎಣಿಸದೇ ಒಂದು ಅಮೇರಿಕನ್ ಟೂರಿಸ್ಟರ್ ಬ್ಯಾಗಿನ ತುಂಬ ತುಂಬಿಟ್ಟಿದ್ದ. ಅದೇ ಊರಲ್ಲಿದ್ರೆ ಸಿಕ್ಕಾಕೊಂಡ್ ಬೀಳ್ತೀನಿ ಅಂತ ಊರು ಬಿಟ್ಟ.
ರೈಲಿನಲ್ಲಿ ಹೊರಟಿದ್ದಾಗ ಕನಸಲ್ಲಿ ಪೋಲೀಸರು ಬಂದಂತಾಗಿ ಎದ್ದು ಓಡಿತ್ತಿರೋ ರೈಲಿನಿಂದ ಜಿಗಿದೇ ಬಿಟ್ಟ! ಬಿದ್ದವನು ಸತ್ತನೋ ಬದುಕಿದನೋ ಗೊತ್ತಿಲ್ಲ.
ಅವನು ಬಿದ್ದದ್ದನ್ನ ಕಂಡ ವ್ಯಕ್ತಿ ಏಕೆ ಹಾಗೆ ಮಾಡಿದನೋ ಗೊತ್ತಿಲ್ಲ, ಮೊದಲು ಬ್ಯಾಗ್ ಬಿಚ್ಚಿ ನೋಡಿದವ ರೈಲಿನಿಂದ ಬಿದ್ದವನ ಮತ್ತೆ ನೋಡದೇ ಅಲ್ಲಿಂದ ಪರಾರಿಯಾದ.
ಆಗಲೇ ಕತ್ತಲಾಗಿತ್ತು, ಓಡುತ್ತಿರೋನು ತಡವರೆಸಿ ಬಿದ್ದ. ಬಿದ್ದವನು ಏನಾದನೋ ಗೊತ್ತಿಲ್ಲ, ಮತ್ತೆ ಏಳಲಿಲ್ಲ!
ಆ ಬ್ಯಾಗ್ ಒಬ್ಬ ಕುಡಿದು ಧರೆಗುರುಳಿದ್ದವನ ಮೇಲೆ ಬಿತ್ತು. ಏನಪ್ಪಾ ಇದು ಅಂತ ನೋಡಿದರೆ ಬ್ಯಾಗ್ ತುಂಬಾ ಜೊಡಿಸಿಟ್ಟ ಕಾಗದದ ಕಟ್ಟುಗಳು( ಹಣ )
'ಎಂತಾ ಛಳಿ' ಅನ್ನುತ್ತಾ ಕಾಗದಕ್ಕೆ ಬೆಂಕಿ ಹಚ್ಛಾ ಛಳಿಯಿಂದ ಬಚಾವಾದ!!

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ