Posts

Showing posts from 2022

ಆಗಸದ ತೂತು | ಸಂಚಿಕೆ ೧೨ - ಭಾರತ ಸಂಚಾರ

 ಇಂಟರಾಗೇಶನಲ್ಲಿ ಗೋಪುಟ್ಟನ ಸ್ಟೇಟ್ಮೆಂಟು ಪ್ರಥಮ ಪುರುಷ ದೃಷ್ಟಿಕೋನದಲ್ಲಿರೋದ್ರಿಂದ (ನಾನು ಇಂಗ್ಲಿಷ್ ಪದಗಳ ಬಳಕೆ ಮಾಡೋದಕ್ಕೆ ಆಕ್ಷೇಪ ವ್ಯಕ್ತಪಡಿಸೋರು ಇದೆಂಥದು ಅಂತ ಕೇಳ್ಬಾರ್ದು. ಆದ್ರೂ ಎಲ್ಲರಿಗೂ ಅರ್ಥ ಆಗ್ಲಿ ಅಂತ ಹೇಳ್ತಿದೀನ, first person POV or point of viewನಲ್ಲಿರೋದ್ರಿಂದ ಅಂತ ಓದ್ಕೊಳಿ) ಪೂರ್ತಿ ಕತೆ ಕೂಡ ಕತೆ ಹೇಳೋನ ದೃಷ್ಟಿಕೋನದಲ್ಲಿ ಇರೋದ್ರಿಂದ (which is also in first person POV) ಓದುವಾಗ ಗೊಂದಲ ಉಂಟಾಗ್ಬೋದು. ಹಂಗಾಗಿ ಇಂಟರಾಗೇಶನ್ ಪಾರ್ಟನ್ನು ಗೋಪ್ಪುಟ್ಟನ point of viewದಲ್ಲಿ ಬರೀತಿದೀನಿ. ಇಂಟರಾಗೇಶನ್ ಭಾಗದಲ್ಲಿ 'ನಾನು' ಅಂದ್ರೆ ನರೇಟರ್ ಅಲ್ಲ, ಗೋಪುಟ್ಟ ಎಂದು ಅರ್ಥೈಸಿಕೊಳ್ಳಿ. ಅಲ್ಲೆಲ್ಲೂ ನರೇಟರ್ ಇಣುಕೋದಿಲ್ಲ ಇನ್ನು ಮುಂದೆ. ಇದಕ್ಕೆ narrator shift ಅಂತಾನೂ ಕರೀಬೋದು. ಮನಾಲಿಯಿಂದ ಗೋಪುಟ್ಟನ ಗ್ಯಾಂಗ್ ಹೊರಟ ನಂತರದ ಟೈಮ್‌ಲೈನಿನ ಹಲವಾರು ಘಟನೆಗಳಲ್ಲಿ ಹೇಳದಿದ್ರೆ ಆಗೋದೇ ಇಲ್ಲ ಅನ್ಸಿದ ಘಟನೆಗಳನ್ನಷ್ಟೇ ಗೋಪುಟ್ಟನ ಬಾಯಲ್ಲಿ ಕೇಳಿ. ----------------------------***------------------------- ಮನಾಲಿಯನ್ನು ತೊರೆದ ಐದನೇ ದಿನ, ಜೂನ್ ೪, ೨೦೨೧ ಸೆತ್ಲೆಜ್ ತೀರದಿಂದ ನಮ್ಮ ಕಾರವಾನ್ ವಾಪಸ್ಸು ಬರದೇ ಚಂಡಿಘಡ, ಕುರುಕ್ಷೇತ್ರ, ಪಾಣಿಪತ್ ಮೂಲಕ ಸಾಗಿ ಎನ್.ಎಚ್. ೪೪ರನ್ನು ಬಳಸಿ ಚೆನ್ನೈ ಕಡೆ ಹೋಗೋಕೆ ಸಿದ್ಧವಾಗಿತ್ತು. ಮಲ್ಲಿಕಾಳನ್ನು (ಮೈಸೂರ್ ಪಾಕ್ ಎಂದೇ ಮತ್ತೆ ಹೇಳ

ಆಗಸದ ತೂತು | ಸಂಚಿಕೆ ೧೧ - ಪುಟ್ಟಿಯಲ್ಲ, ಮೈಸೂರ್‌ಪಾಕ್

  "She was jealous. ಮುಖ ನೋಡಿದ್ರೇ ಗೊತ್ತಾಗ್ತಿತ್ತು. ಆದ್ರೆ ಅವ್ಳನ್ನ ಇಗ್ನೋರ್ ಮಾಡಿದ್ರೆ ಉಳ್ದೋರನ್ನ ಕಂಟ್ರೋಲ್ ಮಾಡೋದು ನನ್ನೊಬ್ನಿಂದ ಆಗೋದಲ್ವಾಗಿತ್ತು. ನಾನು ದೇವರ ಕೋಣೆ ಆಗಿದ್ರೆ ಅವ್ಳು ಆ ಕೋಣೆ ಬೀಳ್ದಿದ್ದಂಗೆ ನೋಡ್ಕೊಳ್ಳೋ ಕಂಬ ಆಗಿದ್ಳು. ನಾನು ಹೊಸ ಹುಡ್ಗೀನ ಪ್ರೀತಿಸ್ತಿದ್ರೂ ಮಲ್ಲಿಕಾಳನ್ನ ಕಡೆಗಣ್ಸಿ ಹೊಸ ಹುಡ್ಗೀ‌ನ ಪಟ್ಟದ ರಾಣಿ ಅಂತೇನೂ ಘೋಷಣೆ ಮಾಡಿರ್ಲಿಲ್ಲ. ಮೈಸೂರ್ ಪಾಕೇ ನನ್ನ ಸೆಕೆಂಡ್ ಇನ್ ಕಮಾಂಡ್ ಆಗಿದ್ಳು" ಹೊಸ ಲವ್ ಟ್ರೈಆ್ಯಂಗಲ್ ಬಗ್ಗೆ ಗೋಪುಟ್ಟ ತನ್ನ ವಿಶ್ಲೇಷಣೆ ಕೊಡ್ತಿದ್ದ. ಅವನನ್ನ ಮಧ್ಯದಲ್ಲೇ ತಡೆದ ನಾನು, "ಮೊದ್ಲು ಆ ಹೊಸ ಹುಡ್ಗಿ ಹೆಸ್ರೇನು ಅಂತೇಳು ಮಾರಾಯ, ಅವ್ಳ ಕತೆ ಏನು?" ಅಂತ ಕೇಳ್ದೆ. "ಅವ್ಳೆಸ್ರು ಚಂಪಾ ಅಂತ. ಫ್ರಾನ್ಸ್ ಮೂಲದ ಅವ್ಳಪ್ಪ ಹಿಪ್ಪಿಗಳ ಕಾಲ್ದಲ್ಲಿ ಭಾರತಕ್ಕೆ ಬಂದು ಇಲ್ಲೇ ಉಳ್ಕೊಂಡಿದ್ದ. ಅವ್ನ ಹೆಂಡ್ತಿ ಅಸ್ಸಾಮಿನಿವ್ಳಂತೆ. ಇಬ್ರೂ ಗೋಕರ್ಣದಲ್ಲಿ ಭೆಟ್ಟಿಯಾಗಿ ಅಲ್ಲೇ ಒಟ್ಟಿಗೇ ಇದ್ರಂತೆ. ಇವ ತಂದಿದ್ದ ಹಣ ಖಾಲಿಯಾದಾಗ ಗೋವಾದೊಳಕ್ಕೆ ಸೇರಿ ಎಕ್ಸ್ಟಸಿ ತಯಾರು ಮಾಡೋಕೆ ಶುರು ಮಾಡಿದ್ರು. ನಿಧಾನಕ್ಕೆ ಒಂದು ಗ್ಯಾಂಗ್ ಬಿಲ್ಡ್ ಮಾಡೋ ಹೊತ್ತಿಗೆ ಇವ್ರ ಅಡ್ಡದ ಮೇಲೆ ಪೊಲೀಸ್ ರೇಡ್ ಆಗಿ ಅವ್ಳಪ್ಪ ಅಂದರ್ ಆದ. ಚಂಪಾಳ ಅಮ್ಮ ಇದ್ದ ಹಣ, ಅವ್ನ ಪಾಸ್ಪೋರ್ಟು ಎಲ್ಲಾ ತಗೊಂಡು ನಾಪತ್ತೆಯಾದ್ಳು. ಆವಾಗ ಕಾಣೆಯಾದೋಳು ಸಿಕ್ಕಿಲ್ಲ. ಒಂದ್ ವರ್ಷದ್ ನಂತ್ರ ಹ

ಆಗಸದ ತೂತು | ಸಂಚಿಕೆ‌ ೧೦ - ಮೈಸೂರ್ ಪಾಕು

  ಒದ್ದೊದ್ದೆ ಮೋಡಗಳು ಮುತ್ತಿ ಮುತ್ತಿಡುವಾಗ ಎಲ್ಲಿದ್ದೆ ನೀ ಹೊಟ್ಟೆಕಿಚ್ಚಿನವಳೆ ಹನಿ ಬಿದ್ದ ಒಡಲಲ್ಲಿ ಹೂ ನಗುವ ಹೊದ್ದಾಗ ಎಲ್ಲಿದ್ದೆ ನೀ ಹಸಿರ ಮನದವಳೆ? ಮೀಸೆ ಮೂಡಿದ ಪ್ರಾಯ ಕನಸುಗಳ ಕೊಡುವಾಗ ಎಲ್ಲಿದ್ದೆ ನೀ ಬನದ ಮೈಯವಳೆ? "Wait, you wrote this? To whom?"  ಗೋಪುಟ್ಟನ ಕತೆಗೆ ತಡೆಯೊಡ್ಡಿದ್ದೆ. ಪದ್ಯ ಬರೆವಷ್ಟು ಬರಗೆಟ್ಟ ಪ್ರೀತಿ ಅವನಲ್ಲಿದ್ದಿರಬಹುದೆಂಬ ಕಲ್ಪನೆಯೂ ಇದ್ದಿರಲಿಲ್ಲ. ------------------------------***--------------------------------- ಮತ್ತೆ ನಾನೆಂಗೆ ಇಂಟರಾಗೇಶನ್ ರೂಮಿಗೆ ಹೊಕ್ಕಿದೆ ಅನ್ನೋ ನಿಮ್ಮ ಪ್ರಶ್ನೆ ಉತ್ತರಿಸಿಯೇ ಮುಂದಿನ ಕತೆಗೆ ಹೋಗ್ತೇನೆ. ಅಕ್ಟೋಬರ್ ೧೫, ೨೦೨೧; ರಾತ್ರಿ ೮ ಗಂಟೆ ಹೊತ್ತು. ಎಸ್‌ಪಿಯವರು ಕರೆ ಮಾಡಿ,  "ಇಲ್ಲೇ ರೌಂಡ್ಸಿಗೆ ಬಂದಿದ್ದೆ, ನಿಮ್ಮ ಹೊಟೆಲ್ ಕಡೆ. ಒಂದಿಷ್ಟು ವಿಚಾರಗಳ ಬಗ್ಗೆ ಮಾತಾಡೋದಿತ್ತು, ಅಭ್ಯಂತರವಿಲ್ದಿದ್ರೆ ರೂಮಿಗೆ ಬರ್ಬೋದಾ?"  ಅಂತ ಕೇಳ್ದಾಗ ವಾಪಸ್ ಚೆನ್ನೈಗೆ ಹೋಗೋಕೆ ತಯಾರಾಗ್ತಿದ್ದೆ. ತೊಂದ್ರೆ ಇಲ್ಲ, ಬನ್ನಿ ಅಂದ ೫ ನಿಮಿಷಕ್ಕೆ ರೂಮೆದುರಿಗೆ ಬಂದು ಬಾಗಿಲನ್ನು ತಮ್ಮ ತೋರುಬೆರಳಲ್ಲಿ ಮೂರು ಬಾರಿ ತಟ್ಟಿದ್ದರು. "ಬನ್ನಿ, ಊಟ?"  ಅಂದೆ, ಬಾಗಿಲು ತೆರೆದು ಅವರ ಮುಖ ದರ್ಶನವಾದಮೇಲೆ. "ಇಲ್ಲ, ಇನ್ನೂ ಲೇಟ್ ಇದೆ. ನೀವ್ ಬೇಕಿದ್ರೆ ಊಟ ಆರ್ಡರ್ ಮಾಡಿ"  ಅಂದ್ರು ಎಸ್‌ಪಿಯವ್ರು. "ಪರ್ವಾಗಿಲ್ಲ

ಆಗಸದ ತೂತು | ಸಂಚಿಕೆ ೯ - ಅನಿಶ್ಚಿತ

  ಅಕ್ಟೋಬರ್ ಹದಿನೈದು, ಮಧ್ಯಾಹ್ನ ೪:೧೦. ಪೊಲೀಸರೇ ಸಿದ್ಧಪಡಿಸಿದ್ದ ಪ್ರಶ್ನಾವಳಿಗಳ ಪ್ರತಿ, ಪೆನ್ನು ಪಡೆದು ಇಂಟರಾಗೇಶನ್ ಕೋಣೆಯೊಳಗೆ ಹೋದೆ. ಜೊತೆಯಲ್ಲಿ ಕಟ್ಟುಮಸ್ತಾದ ಮೈಕಟ್ಟಿನ ಪಿಎಸ್‌ಐ ಸಾಹೇಬರು. ಅಂಗಿ ಮೇಲಿನ ಹೆಸರ ಪಟ್ಟಿ ಶ್ರೀನಿವಾಸ ರಾಯುಡು ಎಂದು ಓದಿಸಿಕೊಳ್ಳುತ್ತಿತ್ತು. ಗೋಪುಟ್ಟ ನಗುತ್ತಿದ್ದ. ಕೈಗಳು ಟೇಬಲ್ಲಿಗೆ ಬಂಧಿಸಲ್ಪಟ್ಟಿದ್ದವು. ಗುಂಗುರು ಕೂದಲು ಮತ್ತೂ ಉದ್ದ ಬೆಳೆದಿದ್ದವು, ಗಡ್ಡ-ಮೀಸೆಗಳು ಎರಡು ದಿನಗಳ ಹಿಂದಷ್ಟೇ ಕ್ಲೀನ್ ಶೇವಿಗೆ ಒಡ್ಡಿಕೊಂಡಿದ್ದ ಗುರುತಾಗಿ ಸುಟ್ಟ ಗೋಧಿ ಬಣ್ಣದ ಮುಖದ ಮೇಲೆ ಕಪ್ಪು ಚುಕ್ಕೆಗಳಂತೆ ಬೆಳೆದಿದ್ದವು. ಅದೇ ಮಾಸಲು ನಿಲುವಂಗಿ, ಧೂಳು ಮೆತ್ತಿದಂಥ ಜೀನ್ಸು ಪ್ಯಾಂಟು ತೊಟ್ಟಿದ್ದವ ನಾನು ಕೋಣೆಯೊಳಗೆ ಹೊಕ್ಕಾಗ ನಕ್ಕು 'ಮಾದಾ ಫಕಾ' ಎನ್ನುತ್ತಾ ತಬ್ಬಿಕೊಳ್ಳಲು ಎದ್ದ, ಕೈಗಳನ್ನು ಬಂಧಿಸಿದ್ದ ಸರಪಳಿ ಅದಕ್ಕಾಸ್ಪದ ಕೊಡಲಿಲ್ಲ. ಆಗಲೇ ಅವನ ಮುಖದಲ್ಲಿ ಸಿಡುಕಿನಂಥ ಭಾವವೊಂದು ಕಾಣಿಸಿ ಮರೆಯಾಯ್ತು, ಮಿಲಿ ಸೆಕೆಂಡುಗಳ ಲೆಕ್ಕದಲ್ಲಿ. "ಹೆಂಗಿದೀರಾ ಮಿಸ್ಟರ್ ವ್ಲಾಗರ್? Or should I call you wannabe vlogger?"  ಎಂದು ಹಂಗಿಸಿದ. ನಾನು ಸುಳ್ಳು ಹೇಳಿದ್ದು ಅವನಿಗೆ ಗೊತ್ತಾಗಿದೆ ಅನ್ನೋದು ಪೊಲೀಸರಿಗೆ ಅವ ನೀಡಿದ್ದ ನನ್ನ ವಿಳಾಸ, ಫೋನ್ ನಂಬರುಗಳಿಂದ ಮೊದಲೇ ತಿಳಿದಿತ್ತು. "ಫೈನ್, ಚೆನ್ನಾಗಿದೀನಿ. ನೀನು ಹೆಂಗಿದೀಯಾ ಅಂತ ಕೇಳೋಕೋಗಲ್ಲ; ಗೊತ್ತಾಗ್ತಾ ಇದೆ."

ಆಗಸದ ತೂತು | ಸಂಚಿಕೆ ೮ - ವಿಚಾರಣೆ, ಮತ್ತೊಂದಿಷ್ಟು

  ಅಕ್ಟೋಬರ್ ೧೪ರ ರಾತ್ರಿಯೇ ಬೆಂಗಳೂರನ್ನು ತಲುಪಿದರೂ ಸಿಸಿಬಿ ಕಚೇರಿಗೆ ಹೋಗುವ ಉಮೇದಿಯಿಲ್ಲದೆ ಮಾರನೇ ದಿನ ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಎಸ್‌ಪಿ ಸಾಹೇಬರಿಗೆ ಕರೆ ಮಾಡಿ, ಬೆಂಗಳೂರಿನಲ್ಲಿದ್ದೇನೆಂದೂ, ಎಷ್ಟು ಹೊತ್ತಿಗೆ ಬರಬೇಕೆಂದೂ ಕೇಳಿದೆ. ಇನ್ನರ್ಧ ಗಂಟೆಯಲ್ಲಿ ತಾನು ಕಚೇರಿಯಲ್ಲಿರುತ್ತೇನೆ, ನೀವೂ ಬನ್ನಿ ಎಂದು ತೀರಾ ಸೌಮ್ಯವಾಗಿಯೇ ಹೇಳಿದ್ದರು. ನಾನೆಷ್ಟು ಸಮಯಪಾಲಕ ಎಂಬುದು ನಿಮಗೆ ಗೊತ್ತಿರಲಿಕ್ಕಿಲ್ಲ, ಕರೆಕ್ಟು ಎಂಟು ಗಂಟೆ ಮೂವತ್ಮೂರು ನಿಮಿಷಕ್ಕೆ ಅವರ ಕಚೇರಿಯಲ್ಲಿದ್ದೆ. "ಸೋ, ನೀವು ಚೆನ್ನೈನಲ್ಲಿ ಏನು ಮಾಡೋದು?"  ಒಂದು ಫೈಲನ್ನು ಟೇಬಲ್ಲಿಗೆ ಎಳೆದುಕೊಂಡ ಎಸ್‌ಪಿ ಪ್ರಜ್ವಲ್ ಪ್ರಶ್ನಿಸಿದ್ದರು. ಆ ಫೈಲಿನಲ್ಲಿ ನನ್ನ ಬಗ್ಗೆ ಈಗಾಗಲೇ ಸಂಗ್ರಹಿಸಲಾದ ಮಾಹಿತಿ, ನನ್ನ ಪ್ರೊಫೈಲ್ ಇದೆಯೆಂದು ಯಾರಿಗಾದರೂ ಗೊತ್ತಾಗಬಹುದು. "ಮಿಡಿಯಾ ಹೌಸೊಂದರಲ್ಲಿ ಇನ್ಪುಟ್ ಹೆಡ್ ಆಗಿದೀನಿ ಸರ್"  ಅಂತಂದೆ. "You are a journalist ha? What you think about Bhatreri massacre?" ಏಕ್ದಂ ಹಿಂಗೆ ವಿಷಯಕ್ಕೆ ಬರ್ತಾರಲ್ಲ, ಅದು ಇಷ್ಟವಾಗತ್ತೆ. "It was shocking. I was fallowing that tragic news since it broke. Poor people" ಅಂದು ನನ್ನ ಸಂತಾಪ ವ್ಯಕ್ತಪಡಿಸಿದ್ದೆ. "You know anyone called Gopalakrishna alias Goputta?" ಮತ್ತೊಂದು ಸ್ಟ್ರೇಟ್ ಹಿ

ಆಗಸದ ತೂತು | ಸಂಚಿಕೆ ೭ - ಹೊಳೆ ಬ್ಯಾಲೆ (೨)

  ಓದುವ ಮುನ್ನ:  ಈ ಸಂಚಿಕೆಯಲ್ಲಿ ಕೆಲ ಆಘಾತಕಾರಿ ವಿವರಣೆಗಳು ಮಾನಸಿಕವಾಗಿ ನೋವುಂಟುಮಾಡಬಹುದಾಗಿದೆ. ನೀವು ಭಾವುಕ ಜೀವಿಯಾಗಿದ್ದರೆ, ಹೃದಯ ಸಂಬಂಧೀ ಕಾಯಿಲೆಯುಳ್ಳವರಾಗಿದ್ದರೆ ಅಥವಾ ಬೇಗನೆ ಪ್ರಭಾವಕ್ಕೊಳಗಾಗುವ ಮನಸ್ಥಿತಿಯವರಾಗಿದ್ದರೆ ಖಂಡಿತ ಓದಬೇಡಿ. ಯಾರೇ ಓದಿದರೂ ಅದರಿಂದಾಗುವ ಪರಿಣಾಮಗಳಿಗೆ ನೀವೇ ಜವಾಬ್ದಾರರು ಹೊರತು ಬರೆಹಗಾರರಲ್ಲ. ದಯವಿಟ್ಟು ಓದಬೇಡಿ. ೨೦೨೧, ಅಕ್ಟೋಬರ್ ೧೪. ಆಫೀಸಿಗೆ ಹೋದರೂ ಕೆಲಸ ಮಾಡಲು ಉಮೇದಿಯಿಲ್ಲದೆ ಛೇಂಬರಿನಲ್ಲಿ ಕುಂತಿದ್ದೆ. ಮಧ್ಯಾಹ್ನ ಮೂರು ಗಂಟೆಯಿರಬಹುದು, ಗೆಳೆಯ, ಬಾಸು ಪ್ರಣವ್ ಬಂದು,  "ಕರ್ನಾಟಕದ ಯಾವ್ದೋ ಎಸ್‌ಪಿ ಆಫೀಸಿಂದ ಕಾಲ್ ಬಂದಿತ್ತು. ನಿನ್ ಜೊತೆ ಮಾತಾಡ್ಬೇಕಂತೆ. ನೀನು ಹೊರ್ಗಡೆ ಹೋಗಿದೀಯಾ ಅಂತದೆ. You need to call him back"  ಅಂತಂದು ಒಂದು ಚೀಟಿ ಕೈಗಿತ್ತ. ಕರ್ನಾಟಕದ ಲ್ಯಾಂಡ್‌ಲೈನ್ ನಂಬರದು, ಬೆಂಗಳೂರಿನ ಕೋಡ್ ಇತ್ತು. ಹದಿಮೂರು ಹೆಣಗಳ ಬಗ್ಗೆಯೇ ಆಗಿರ್ಬೇಕು. ಆದ್ರೆ ನಂಗೇನು ಸಂಬಂಧ? ಅಂತೊಂದು ಪ್ರಶ್ನೆ ಮೂಡಿದರೂ ಮಾಹಿತಿಯ ಕೊರತೆ ನಂಗೂ ಇದ್ದಿದ್ದರಿಂದ ಕಾಲು ಬಂದಿದ್ದ ನಂಬರನ್ನು ಮೊಬೈಲಿನಲ್ಲಿ ಡಯಲ್ ಮಾಡಿದೆ. ಛೇಂಬರಿನ ಅಷ್ಟೂ ಬಾಗಿಲು, ಕರ್ಟನ್ನುಗಳು ಮುಚ್ಚಿರುವುದನ್ನು ಖಾತರಿಪಡಿಸಿಕೊಂಡು ಟೇಬಲ್ಲಿಗೆ ಒರಗಿ ನಿಂತುಕೊಂಡೆ. ಅರ್ಧ ರಿಂಗಿಂಗ್ ಟೈಮು ಮುಗಿದಮೇಲೆ ಯಾವುದೋ ಆಪರೇಟರ್ ಕಾಲು ರಿಸೀವಿಸಿದ. ನೇರವಾಗಿ ಎಸ್‌ಪಿಯವರೇ ಲೈನಿಗೆ ಬಂದು ಮಾತಾಡಿದಾಗ ವಿಷಯ ತಕ

ಆಗಸದ ತೂತು | ಸಂಚಿಕೆ ೬ - ಅಂತ್ಯಕ್ಕೊಂದು ಮುನ್ನುಡಿ

  "ನಂಬಿಕೆಗೆ ಎರಡು ವಿಧ. ಪಾಸಿಬಿಲಿಟಿಗಳನ್ನು ನೋಡಿ ನಂಬೋದು. ನೀನಂದ ಕತೆಗೆ ಸಾಧ್ಯತೆಗಳಿವೆ. ನಿಜವಾಗಿರಲೂಬಹುದು. ಆದ್ರೆ ಸುಳ್ಳಾಗಿರುವ ಸಾಧ್ಯತೆ ಕೂಡ ಇದೆ. ಹಾಗಂತ ನೀನ್ನನ್ನು ಜಜ್ ಮಾಡಿ, ನೀನು ಸುಳ್ಳುಗಾರ ಅಂತನ್ನೋ ಯಾವ ಉದ್ದೇಶ ಕೂಡ ನಂಗಿಲ್ಲ. ನೀನಂದ ಕತೆಯ ಫಸ್ಟ್ ಹ್ಯಾಂಡ್ ಸೋರ್ಸ್ ನೀನೇ, ನೀನದನ್ನು ನಂಬುವ ಆಯ್ಕೆ ನಿಂದು‌. ನಂಬಿಕೆಯ ಎರಡನೇ ವಿಧ ಯಾವ್ದು ಗೊತ್ತಾ? ಪುರಾವೆಗಳಿರೋ ವಿಷಯವನ್ನ ನಂಬೋದು. ಅದು ರ‌್ಯಾಶನಲ್ ಮನಸ್ಥಿತಿಯ ಆಯ್ಕೆ. ನಿಮ್ಮೂರಲ್ಲಿ ಮಹಿಳೆಯರ ಸ್ತನದಿಂದ ರಕ್ತ ಬರ್ತಿತ್ತು, ಯಾವ್ದೋ ದೇವಿ ನಿಂಗೆ ಕಾಣಿಸಿ ಆಗಸಕ್ಕೆ ತೂತು ಬೀಳತ್ತೆ ಅಂದ್ಳು, ಉತ್ತರಕ್ಕೆ ಹೋಗು ಅಂದ್ಳು ಅನ್ನೋದಕ್ಕೆಲ್ಲ ಪುರಾವೆ ಕೊಡು, ಖಂಡಿತ ನಂಬ್ತೀನಿ; ನಿನ್ನ ಕಾರ್ಯಕರ್ತರಲ್ಲೊಬ್ಬನಾಗ್ತೀನಿ. ನೀನೇ ಅದಕ್ಕೆ ಸಾಕ್ಷಿ ಅಂತದ್ರೆ ನಾನು ನಂಬೋದಕ್ಕಾಗಲ್ಲ, ನೀನು ಮಾರ್ಫಿನ್ನಿನ ಅಮಲಲ್ಲಿದ್ದಾಗ ಕಂಡ ಹಲ್ಯೂಸಿನೇಶನ್ ಅದಾಗಿರ್ಬೋದು ಅಥ್ವಾ ನೀನು ಖಬರಿಲ್ಲದೇ ಮಲ್ಗಿದ್ದಾಗ ಯಾರೋ ಹೇಳಿದ ಕತೆಯಾಗಿರ್ಬೋದು. I am more rational than you ever can think."  ಅನ್ನೋದು ನನ್ನ ಕಡೆಯ ಮಾತಾಗಿತ್ತು ಗೋಪುಟ್ಟನಿಗೆ‌.  "Go and fu*k yourself in hell like South India"  ಅಂದಿದ್ದು ಗೋಪುಟ್ಟ ನನ್ನೊಂದಿಗಾಡಿದ ಕೊನೆಯ ಮಾತು. ಇಷ್ಟೆಲ್ಲ ಮಾತುಕತೆಯಾಗಿದ್ದು ಯಾವ ಖುಷಿಗೆ ಅಂತ ನಿಮಗೆ ಕುತೂಹಲವಿರಬಹುದು. ಎಲ್ಲವನ್ನೂ ವಿ

ಆಗಸದ ತೂತು | ಸಂಚಿಕೆ ೫ - ಅನ್ಲಾಕ್ ಪ್ರಕ್ರಿಯೆ ಜಾರಿಯಲ್ಲಿದೆ

  ರಾಯಲ್ ಹೆರಿಟೇಜಿನ ಮೂರನೇ ಮಹಡಿಯ ಬಾಲ್ಕನಿಯಲ್ಲಿ ನಿಂತು ಗಡ್ಡ ಕೆರೆಯುತ್ತಿದ್ದೆ. ಬಿಯಾಸ್ ನದಿ ತಣ್ಣಗೆ ಹರಿಯುತ್ತಿದೆ ಅಂತನಿಸಿ ಮೈ ಜುಂ ಅಂದಿತ್ತು. ನಮ್ಮ ಹೊಟೆಲಿನ ಕೆಳಭಾಗದಲ್ಲಿ, ಕುಲ್ಲುವಿನವರೆಗೂ ರಿವರ್ ರ‌್ಯಾಫ್ಟಿಂಗಿನ ದಂಧೆ ನಡೆಯುತ್ತದೆ. ಗೋಪುಟ್ಟ ಬೆಳಿಗ್ಗೆಯೇ ರ‌್ಯಾಫ್ಟಿಂಗಿಗೆ ತೆರಳಿದ್ದ. ಸಾವಿರಾರು ರೂಪಾಯಿ ಕೊಟ್ಟು ಆ ಚಳಿಯಲ್ಲಿ ದೋಣಿಯಲ್ಲಿ ಹೋಗೋದೇನಿದೆ? ಓಡಾಡಲು ರಸ್ತೆ ಸಂಪರ್ಕವಿದೆ, ರೈಲಿವೆ, ವಿಮಾನಗಳೂ ಹಾರುತ್ತವೆ. ಈ ಕಾಲದಲ್ಲಿ ದೋಣಿಯಲ್ಲಿ ಓಡಾಡುವ ಅವಶ್ಯಕತೆಯೇನಿದೆ? ಹೀಗೆ ನಿರಾಕರಿಸಿ ರೂಮಲ್ಲೇ ಉಳಿದವನಿಗೆ ಹೊತ್ತು ಹೋಗುತ್ತಿರಲಿಲ್ಲ. ಬಾಲ್ಕನಿಯಲ್ಲಿ ನಿಂತು ಜಗತ್ತನ್ನು ನೋಡುವ ಪ್ರಯತ್ನ ಮಾಡುತ್ತಿದ್ದೆ. ಗೋಪುಟ್ಟ ರ‌್ಯಾಫ್ಟಿಂಗಿಗೆ ಹೋದವ ವಾಪಸ್ಸು ಬಂದಿದ್ದು ನಾಲ್ಕೈದು ಮಂದಿಯ ಗುಂಪಿನೊಟ್ಟಿಗೆ. ಎಲ್ಲರೂ ಗೋಪುಟ್ಟನನ್ನು ಹಿಂಬಾಲಿಸಿದಂತೆ, ಆತ ಎಲ್ಲರಿಗೂ ನಾಯಕನೇನೋ ಎಂಬಂತೆ ಭಾಸವಾಗುವಂತೆ ಆ ಗುಂಪು ಹೊಟೆಲ್‌ನತ್ತ ಬರುತ್ತಿತ್ತು. ಮೂವರು ಹೆಣ್ಣುಮಕ್ಕಳು, ಪ್ರಾಯ ಅಜಮಾಸು ಇಪ್ಪತ್ಮೂರು-ಇಪ್ಪತ್ನಾಲ್ಕಿರಬಹುದು. ಮತ್ತೊಬ್ಬ ೧೯೭೫-೮೦ರ ಕಾಲದ ಹಿಪ್ಪಿಯಂತಿದ್ದ ಯುವಕ. ಬಿಯಾಸ್ ನದಿಯ ಬದಿಯಿಂದ ಹೊಟೆಲ್ ಇದ್ದ ಬದಿಗೆ ರಸ್ತೆ ದಾಟುವಾಗ ಅಡ್ಡ ಬಂದ ಟೂರಿಸ್ಟರ ಗಾಡಿಯೊಂದನ್ನು ಗೋಪುಟ್ಟನ ಸಹಚರರು ಏರಿ, ಮನಾಲಿಯತ್ತ ಹೋದರು. ಬಹುಶಃ ಅವರ ವಾಸ್ತವ್ಯ ಅಲ್ಲೇ ಇತ್ತೇನೋ, ಗೊತ್ತಿಲ್ಲ. ಕೋಣೆಗೆ ಬರುತ್ತಿದ್ದವನ ಬಾಯಿ ದೇವಾನಂ

ಆಗಸದ ತೂತು | ಸಂಚಿಕೆ ೪- ಹೊಳೆ ಬ್ಯಾಲೆ (೧)

  ಚಾರ್ಲ್ ಮ್ಯಾನ್ಸನ್ (charles manson) ಯಾರು ಅಂತ ಗೂಗಲ್ ಮಾಡಿದಿರಾ? ಮಾಡಿರದಿದ್ದರೆ ಒಮ್ಮೆ ಅವನ ಬಗ್ಗೆ ತಿಳಿದುಕೊಳ್ಳೋದೊಳ್ಳೇದು ನೋಡಿ. ಗೋಪುಟ್ಟನ ಕತೆ ಸರಿಯಾಗಿ ಅರ್ಥವಾಗ್ಬೇಕಂದ್ರೆ ಮ್ಯಾನ್ಸನ್ ಮತ್ತೆ ಅವನ ಫ್ಯಾಮಿಲಿಯ ಬಗ್ಗೆ ಗೊತ್ತಿದ್ರೆ ಒಳ್ಳೇದು. ಅಂದಂಗೆ ಕತೆ ಹೇಳ್ತಿರೋ ಭಾಷೆ, ಕೆಲ ಪದಗಳ ಬಗ್ಗೆ ನಿಮ್ಗೇನಾದ್ರೂ ಆಕ್ಷೇಪ ಉಂಟಾ? (ಕಾಮೆಂಟ್ ಸೆಕ್ಷನನ್ನ ಬಳ್ಸ್ಕೊಳ್ಳಿ!) ಹ್ಞೂಂ, ಎಲ್ಲಿತನ್ಕ ಆಗಿತ್ತು? ಗೋಪುಟ್ಟ ಅದ್ಯಾಕೆ ಆ ಮಗುವಿಕೆ ಕೆಟ್ಟ ಶಬ್ದ ಹೇಳ್ಕೊಟ್ಟ ಅಂತ ಸ್ಪಷ್ಟನೆ ನೀಡಿದ್ದ ಅಲ್ವಾ? ಅವ್ನ ಕತೆ ಅಲ್ಲಿಗೇ ಮುಗ್ದಿಲ್ಲ. ಆ ಸಲ ಭೂಕುಸಿತ ಆದ್ಮೇಲೆ ಸರ್ಕಾರದ ಪರಿಹಾರ, ಸಂಘ-ಸಂಸ್ಥೆಗಳಿಂದ ಒಟ್ಟಾದ ದೇಣಿಗೆ, ಮಠ-ಮಾನ್ಯಗಳ ನೆರವು ಎಲ್ಲಾ ಸಿಕ್ಕಿತ್ತು ಗೋಪುಟ್ಟನಿಗೆ‌. ಅಜ್ಜನ ಮನೆಯಿಂದ ಹೊರಬಿದ್ದವನೇ ಭಟ್ರಕುಳಿಗೆ (ಗೋಪುಟ್ಟನ ಊರ ಹೆಸ್ರದು, ನೆನ್ಪಿದೆ ಅಲ್ವಾ?) ಹೋಗಿ, ಅರೆಮನೆ ಕಟ್ಟಿ, ಬಿದ್ದ ಮನೆಯಿಂದ ಉಪಯೋಗಕ್ಕೆ ಬರೋದನ್ನೆಲ್ಲ ಒಟ್ಟಾಕಿ ಉಳ್ಕೊಂಡ. ಗುಡ್ಡ ಕುಸಿದು ಬಹುತೇಕ ಸಪಾಟಾಗಿದ್ದ ಊರಲ್ಲಿ ಬಾಂದುಕಲ್ಲು (ನೀವು ಗಡಿಕಲ್ಲು ಅಂತೀರಾ?), ಗದ್ದೆ ಬಯ್ಲು, ಸೊಪ್ಪಿನ ಬೆಟ್ಟ, ಡಾಂಬರು ರಸ್ತೆ ಎಂತ ಸಡ್ಗಾಡೂ ಇಲ್ಲವಾಗಿತ್ತು. ಇದ್ದಿದ್ದರಲ್ಲೇ ಎತ್ತರ ಅಂತನಿಸೋ ಜಾಗದಲ್ಲಿತ್ತು ಗೋಪುಟ್ಟನ ಹೊಸ ಬಿಡಾರ. ಮನೆಯ ಒಂದು ಓರೆ ಸ್ಮಶಾನದತ್ತ ಒರಗಿತ್ತು. ಅದು ಭೂಗತ ಭಟ್ರಕುಳಿ ಮತ್ತು ಲೆಕ್ಕ ಮಾಡಿ ಎಂಟು ಮನೆಯಿದ್ದ ಭಟ್ರೇರಿ ಹ

ಆಗಸದ ತೂತು | ಸಂಚಿಕೆ ೩- ಬಾರ್ಡರ್‌ಲೈನ್

  ಗೋಪುಟ್ಟ ತಾನು ಅಜ್ಜನಮನೆಯಿಂದ ಗಡಿಪಾರಾಗಲು ಕಾರಣವಾದ ಕತೆ ಹೇಳೋವರೆಗೂ ಆತ ನನ್ನಂತೇ ಒಬ್ಬ ಬಾರ್ಡರ್‌ಲೈನ್ ಸೊಶಿಯೋಪಾಥ್ ಅಥವಾ ಬಾರ್ಡರ್‌ಲೈನ್ ಸೈಕೋಪಾಥ್ ಅಂತಂದುಕೊಂಡಿದ್ದೆ. ಆದ್ರೆ ಈ ಬಡ್ಡಿಮಗ ಪಕ್ಕಾ ಮೆಂಟಲ್ ಕೇಸ್ ಅಂತ ಗೊತ್ತಾಗಿದ್ದು ನಂತರವಷ್ಟೇ. ಕಾಥಿಕುಕ್ರಿಯಿಂದ ಹೊಂಟ ನಾವು ಮುಂದಿನ ತಂಗುದಾಣವಾಗಿ ಆಯ್ಕೆ ಮಾಡಿಕೊಂಡಿದ್ದು ರಾಯಲ್ ಹೆರಿಟೇಜ್ ಹೊಟೆಲನ್ನು. ಕುಲ್ಲು ಮತ್ತು ಮನಾಲಿಗಳ ಮಧ್ಯೆ ಬಿಯಾಸ್ ನದಿ ತಟದಲ್ಲಿದ್ದ ಹೊಟೆಲ್ ಚಳಿಗಾಲದಲ್ಲಿ ಪೂರ್ತಿ ಹಿಮ ತುಂಬಿ, ರಸ್ತೆ ಸಂಪರ್ಕವನ್ನೂ ಇಟ್ಟುಕೊಳ್ಳದಷ್ಟು ಏಕಾಂತವಾಗುತ್ತದಂತೆ. ಮೊದಲೇ ಬುಕ್ ಮಾಡದಿದ್ದರೆ ರೂಮಲ್ಲಿ ಉಳಿಯೋದಿರಲಿ, ಲಾಬಿಯಲ್ಲೂ ನಿಲ್ಲೋಕೆ ಬಿಡದ ಹೊಟೆಲ್‌ಗೆ ನಾವಿಬ್ಬರೂ ಪ್ರತ್ಯೇಕವಾಗಿ ಮೊದಲೇ ಬುಕ್ ಮಾಡಿಕೊಂಡಿದ್ದು ಕಾಕತಾಳೀಯವಿದ್ದೀತು, ಯೋಚಿಸಿಲ್ಲ. ರಾಯಲ್ ಹೆರಿಟೇಜಿನಿಂದ ಹತ್ತು ಮೈಲಿ ದೂರದಲ್ಲಿ ಮನಾಲಿಯೆಂಬ ಹನಿಮೂನ್ ಸ್ಪಾಟ್ ಇದ್ದಿದ್ದಕ್ಕೂ, ನಮ್ಮ ಪ್ರವಾಸಕ್ಕೂ ಸಂಬಂಧವಿರಲಿಲ್ಲ. ಅಗ್ದಿ ಬೆಶ್ಟ್ ಸೊಪ್ಪು (ನೀವೆಲ್ಲ weed, grass, joint ಅಂತೆಲ್ಲ ಇಂಗ್ಲಿಷ್ ಅರ್ಬನ್ ಸ್ಲ್ಯಾಂಗ್ ಬಳಸಿದರೆ ನಮಗೆಲ್ಲ ಅದು ಸೊಪ್ಪಷ್ಟೇ) ಹಳೆ ಮನಾಲಿಯಲ್ಲಿ ಸಿಗುತ್ತದೆಂಬ ಆಸೆ ನನ್ನದಾಗಿದ್ದರೆ, ಗೋಪುಟ್ಟನಿಗೆ ಸೊಲಾಂಗ್ ವ್ಯಾಲಿಯಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವ ಹುಚ್ಚು ಹುಟ್ಟಿತ್ತು. ಮೊದಲೇ ಯೋಜಿಸಿದ್ದೆಯಾ ಎಂದು ಪ್ರಶ್ನಿಸಿದಾಗ, "ನಿನ್ನೇವರೆಗೂ ಅಲ್ಲಿ ಅಂಥದ್ದೆಲ್

ಆಗಸದ ತೂತು | ಸಂಚಿಕೆ ೨- ಮತ್ತೆ ಬೇವಾರ್ಸಿ

  ಗೋಪುಟ್ಟ ಅಜ್ಜನಮನೆಗೆ ಬಂದಿದ್ದು ನಿಮಗೆ ಗೊತ್ತೇ ಇದೆ. ಅಷ್ಟಕ್ಕೂ ನಾನೇಕೆ ಗೋಪುಟ್ಟನ ಕತೆ ಹೇಳುತ್ತಿದ್ದೇನೆಂದೇ ತಿಳಿಸಿಲ್ಲ ನೋಡಿ‌. ಈ ಗೋಪುಟ್ಟ ನಂಗೆ ಸಿಕ್ಕಿದ್ದು ಹಿಮಾಚಲದ ಆಕಡೆ ತುದಿಯಾದ ಕಾಥಿಕುಕ್ರಿಯೆಂಬ ಬೆಟ್ಟದಲ್ಲಿ ಅಂಡಲೆಯುತ್ತಿದ್ದಾಗ ಸಿಕ್ಕಿದ್ದ. ಅರೆ, ನಮ್ ಕನ್ನಡಿಗ ಎಂಬ ಯಾವ ಹೆಮ್ನೆಯೂ ಮೂಡದಷ್ಟು ಆತ್ಮೀಯನಾದ ಗೋಪುಟ್ಟ, ಕನ್ನಡಕ್ಕಿಂತ ಒಟ್ರಾಶಿ ಇಂಗ್ಲಿಷ್ ಶಬ್ದಗಳನ್ನು ತುರುಕಿ ಮಾತಡಿದ್ದೇ ಜಾಸ್ತಿ. ಅವನ ವೊಕ್ಯಾಬುಲರಿಯನ್ನು ಮುಂದೆ ಹೇಳುತ್ತೇನೆ, ಅಲ್ಲಿಯವರೆಗೆ ಚೂರುಪಾರಾದರೂ ಮರ್ಯಾದೆಯಿಟ್ಟುಕೊಳ್ಳುವ ಉದ್ದೇಶ ನನ್ನದು. ಅದಿರ್ಲಿ, ನಾನು ಕಾಥಿಕುಕ್ರಿಗೆ ಹೋಗಿದ್ದ ಕಾರಣಕ್ಕೂ, ಗೋಪುಟ್ಟನ ಪ್ರವಾಸಕ್ಕೂ ರಾಶಿ ವ್ಯತ್ಯಾಸವೇನೂ ಇರಲಿಲ್ಲ. ಇಬ್ಬರೂ ಹೊತ್ತೋಗದೆ ಊರು ತಿರುಗಿದ್ದಷ್ಟೇ. ಆದರೆ ಅವನಿಗೆ ಊರು ಬಿಡಲಂತೂ ಕಾರಣವಿತ್ತು‌. ಆ ಕಾರಣಗಳನ್ನೆಲ್ಲ ಕೇಳಿದಾಗ ಇಂಥ ಮನುಷ್ಯನ ಬಗ್ಗೆ ನಿಮಗೂ ತಿಳಿದಿರಲಿ ಎಂಬ ಮಾನವೀಯ ಸ್ಪಂದನೆ ಈ ಕತೆ ಹೇಳಲಿಕ್ಕೆ ಕಾರಣ. ಈ ಮಳ್ಳ ಗೋಪುಟ್ಟ ಅವನ ಅಜ್ಜನಮನೆಯಿಂದ ಹೊರಹಾಕಿಸಿಕೊಂಡಿದ್ದಕ್ಕೂ ಕಾರಣವಿದೆ. ಹೆಚ್ಚು ಓದಿರದ, ಹೆಚ್ಚು ಜನರೊಂದಿಗೆ ಸಂಪರ್ಕವಿರದ ಟಿಪಿಕಲ್ಲು ಮಲೆನಾಡ ಪ್ರವಾಹಪೀಡಿತ ಗ್ರಾಮಸ್ಥನ ಮನಸ್ಥಿತಿ ಗೋಪುಟ್ಟನದು. ಭೂಕುಸಿತಕ್ಕೂ ಮುನ್ನ ಕಾಳಜಿ, ಕನಿಕರದ ಕೇಂದ್ರಬಿಂದುವಾಗಿದ್ದ ಭಟ್ರಕುಳಿ ಊರು (ಎಲ್ಲ ಹೇಳಿ ಗೋಪುಟ್ಟನ ಊರ್ಯಾವುದೆಂದೇ ಹೇಳಿರಲಿಲ್ಲ ನೋಡಿ!) ಪಕ್ಕದ ಊರುಗಳಿಗಿಂತ