ಪಾರಿವಾಳ...

ಆವತ್ತು ಬರೆಯುತ್ತಿದ್ದೆ. ತೆರೆದ ಕಿಟಕಿಯಿಂದ ಹಾರಿ ಬಂದ ಪಾರಿವಾಳ ತಿರುಗುತ್ತಿದ್ದ ಗಾಳಿಪಂಕಕ್ಕೆ ಡಿಕ್ಕಿ ಹೊಡೆದಿತ್ತು. ಗಾಳಿಯಲ್ಲಿ ಎರಡು ಸುತ್ತು ತಿರಗಿ ಕಿಟಕಿ ಪರದೆಯ ಗೂಟಕ್ಕೆ ತಗುಲಿಕೊಂಡಿತು. ಎದೆಯಿಂದ ರಕ್ತ ಇಳಿಯುತ್ತಿತ್ತು, ನಲ್ಲಿಯ ನೀರು ಬಿಟ್ಟಂತೇ! ನಾ ಬರೆಯುತ್ತಿದ್ದ ಕಾಗದಕ್ಕೂ ರಕ್ತ ಬಡೆದಿತ್ತು. ಯಾವತ್ತಾದರೂ ಕೆಂಪನೆಯ ದ್ರವ ಅರೆ ಜೀವದ ಜೀವಿಯಿಂದ ಇಳಿಯುತ್ತಿದ್ದದ್ದನ್ನ ನೋಡಿದ್ದೀರಾ?
ಮೂರ್ಛೆ ಹೋಗಬೇಕಿತ್ತು ನಾನು, ಆದರೆ ನನಗೆ ಯಾವ ಭಾವನೆಯೂ ಹುಟ್ಟಲಿಲ್ಲ. ಅದೇ ನೆತ್ತರ ಹಾಳೆಯ ಮೇಲೆ ಬರೆದೆ. ಬರೆದದ್ದು ಆ ಪಾರಿವಾಳದಂತೇ ಛಂದವಾಗಿತ್ತು.
ಪ್ರಕಟಕರು ನನ್ನ ಲೇಖನ ನೋಡಿ ಅಂದರು, ಇನ್ನು ಹೀಗೆಯೇ ಬರೆಯಿರಿ. ಓದುಗರೂ ಅಂದರು ನೀವು ಬರೆದದ್ದು ಇಷ್ಟವಾಯಿತು.
ಈಗ ನಾ ಬರೆಯುವಾಗ ಮೇಲೆ ಅರೆಜೀವದ ಪಾರಿವಾಳ ತೂಗುತ್ತಿರುತ್ತೆ, ಎದೆಯಿಂದ ನೆತ್ತರ ನಲ್ಲಿ ತೆರೆದ ಪಾರಿವಾಳ...

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ