ಬೀಡಿ

ಅವಂಗೆ ಅದೊಂದು ಹವ್ಯಾಸ. ಬೀಡಿ ಎಳೆಯೋದು. ಹವ್ಯಾಸ, ಚಟ, ಚಟ, ಹವ್ಯಾಸ...ಅದು ಚಟ ಅಲ್ಲ ಹವ್ಯಾಸಾನೇ ಬಿಡಿ.
ಬೀಡಿ ಎಳೆದಂತೆ ಗಾತ್ರ ಚಿಕ್ಕದಾಯ್ತು. ಬದುಕೂ.
ಎಳೆದಂತೆ ಹೊಸ ಕನಸುಗಳ ಸುರುಳಿ ಕರಗಿ ಗಾಳಿಯಲ್ಲಿ ಲೀನವಾಗ್ತಿದ್ದದ್ದನ್ನ ನೋಡಿ ನಕ್ಕಿದ್ದ. ಥೂ ಎಂತಾ ಫಿಲಾಸಪಿ 
ಅವಂಗೆ ಅದೊಂದು ಹವ್ಯಾಸ. ಬೀಡಿ ಎಳೆಯೋದು. ಹವ್ಯಾಸ,ಚಟ,ಚಟ,ಹವ್ಯಾಸ...ಅದು ಹವ್ಯಾಸಾನೇ.
ಸುರುಳಿ ಕರಗಿದಂತೆ ಕನಸೂ ಕರಗುತ್ತಿತ್ತು. ತಲೆಬಿಸಿ. ಎಲ್ಲರಿಗೂ ಆಗುವಂತೆ ಇವಂಗೂ ವಯಸ್ಸಾಗಿತ್ತು. ಎಲ್ಲರಿಗೂ ಆಗುವಂತೆ ಮದುವೆಯೊಂದನ್ನು ಬಿಟ್ಟು.
ವಿದ್ಯೆಯಿಲ್ಲ. ಬುದ್ದಿಯಿದೆ, ಅರವತ್ತೂ ಚಿಲ್ಲರೆ ವರ್ಷ ದಡ್ಡನಾಗಿ ಅನಾಥನಾಗಿ ಬದುಕುತ್ತಿದ್ನಾ?
ಥೂ ಕೊರೆತ.
ಅವಂಗೆ ಅದೊಂದು ಹವ್ಯಾಸ. ಬೀಡಿ ಎಳೆಯೋದು. ಹವ್ಯಾಸ,ಚಟ,ಚಟ,ಹವ್ಯಾಸ...ಅದು ಹವ್ಯಾಸವೇ ಬಿಡಿ.
ಮೊದಲು ಕೆಲಸಕ್ಕಿದ್ದ ಮನೆಯವರು ಮನೆ ಮಾರಿ ಹೋಗಾಯ್ತು. ಮುಂದೆ? ದಿಕ್ಕಿಲ್ಲದ ತನ್ನ ಈ ವಯಸ್ಸಲ್ಲಿ ಕೆಲಸಕ್ಕಿಟ್ಟುಕೊಳ್ಳೋರು ಯಾರು? ತಾನೊಮ್ಮೆ ಸತ್ತರೆ?
ಅವಂಗೆ ಅದೊಂದು ಹವ್ಯಾಸ...ಬೀಡಿ ಬೀದಿಯಲಿ ಬಿದ್ದಿತ್ತು.

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ