ಮಾಯಾ!

ಅವಳು ಇದ್ದಕ್ಕಿದ್ದಂಕೇ ಮಾಯವಾದವಳು, ಇದ್ದಕ್ಕಿದ್ದಂತೇ ಪ್ರತ್ಯಕ್ಷವಾದವಳು! ಅವಳಾಗೇ ಬಿಟ್ಟು ಹೋದಾಗ ಅಯ್ಯೋ ಹೋದಳಲ್ಲಾ ಎಂಬ ನೋವಿಗಿಂತಾ ಎಲ್ಲಿ ಹೋದಳು ಅನ್ನೋ ಚಿಂತೇನೇ ಜಾಸ್ತಿಯಾಗಿತ್ತು. ಅವಳು ವಾಪಸ್ಸು ಬಂದಾಗ ಎರಡು ಸುಧೀರ್ಘ ವಸಂತಗಳು ಉರುಳಿದ್ದವು. ಆ ವಸಂತಗಳಲ್ಲಿ ಅದೆಷ್ಟೋ ಘಟನೆಗಳ ನಡುವೆ ಅವಳ ನೆನಪು ವಿಶ್ರಾಂತಿ ತೆಗೆದುಕೊಂಡಿತ್ತು.
ಈಬಾರಿ ಅವಳ ಕಥೆ ಕೇಳುವ ಮನಸ್ಸು ನನ್ನದಾಗಿರ್ಲಿಲ್ಲ. ಬದುಕು ಅವಳ ಪಾವಿತ್ರ್ಯವನ್ನು ಶಂಕಿಸಿತ್ತು. ಒಳ್ಳೆಯತನ ಅನ್ನೋದು ತೀರಾ ಆಪ್ತರಿಗೆ ಅಪಥ್ಯ. ಅವಳು ಜಗತ್ತಿನ ಎಲ್ಲಾ ಒಳ್ಳೆಯತನವನ್ನ ನನ್ನಲ್ಲಿ ನಿರೀಕ್ಷಿಸಿ ಎದುರಿಗೆ ನಿಂತದ್ದು ಕಾಣುತ್ತಿತ್ತು.
ನನ್ನೆಲ್ಲಾ ಪ್ರಶ್ನೆಗಳನ್ನು ಮಾನವೀಯತೆಯ ಮುಖವಾಡದಲ್ಲಿ ಅಡಗಿಸಿಟ್ಟು ಅವಳನ್ನು ಸ್ವಾಗತಿಸಿದೆ.ಎಂದಿಗೂ ಆ ಎರಡು ವರ್ಷದ ಅವಳ ಬದುಕನ್ನು ಪ್ರಶ್ನಿಸಲೇ ಇಲ್ಲ...

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ