Posts

Showing posts from July, 2020

ಪತ್ತೆದಾರಿ ಕತೆ

      ನಾ ನು ಮೊದಲಿಂದಲೂ ಅಷ್ಟೇ, ತೀರಾ ಶೆರ್ಲಾಕ್ ಹೋಮ್ಸ್‌ನಷ್ಟಲ್ಲದಿದ್ದರೂ ಒಂದು ರೇಂಜಿಗೆ ಬೆಶ್ಟ್ ಪತ್ತೇದಾರ. ಸಣ್ಣಕಿದ್ದಾಗಲೇ ನಮ್ಮ ತೋಟದ ಮಂಡಗಾಲುವೆ ಬದಿಯ ಬಕ್ಕೇಮರಕ್ಕೆ ಬೆಳೆದಿದ್ದ ಬಕ್ಕೆ ಹಣ್ಣು ಕಾಣೆಯಾದಾಗ ನನ್ನ ಚಾಣಾಕ್ಷತನದಿಂದ ಕಳ್ಳನನ್ನು ಹಿಡಿದಿದ್ದೆ. ಹೆಂಗೆ ಅಂತೀರಾ? ಹೇಳಿದರೂ ನಿಮಗೆ ತಿಳಿಯಲಿಕ್ಕಿಲ್ಲ ಬಿಡಿ. ಹೋದ ತಿಂಗಳು ನಡೆದ ಕೊಲೆಯ ಆರೋಪಿಯನ್ನು ಪತ್ತೆ ಹಚ್ಚಿದ ಮೇಲಂತೂ ನನ್ನ ಪ್ರೊಫೆಶನನ್ನೇ ಬದಲಾಯಿಸಿ ಪೂರ್ಣಾವಧಿ ಪತ್ತೇದಾರಿಕೆ ಮಾಡಬೇಕೆಂದು ತೀರ್ಮಾನಿಸಿದ್ದೇನೆ. ಅದಕ್ಕೂ ಮೊದಲು ನಡೆದದ್ದೇನು ಅಂತ ಹೇಳಿ ನಿಮ್ಮ ಅಭಿಪ್ರಾಯವನ್ನೂ ಕೇಳೋಣ ಅಂದುಕೊಂಡೆ. (ನಿಮ್ಮ ಅಭಿಪ್ರಾಯ ನನ್ನ ತೀರ್ಮಾನವನ್ನು ಬದಲಾಯಿಸಲಾರದು. ನನ್ ಬದುಕು, ನನ್ ರೂಲ್ಸು. ಕೇಳೋಕ್ ನೀವ್ಯಾರು) ನಮ್ಮೂರು ಮೆರವಣಿಗೆ ಪಕ್ಕದ ಹಳ್ಳಿ. ಜಗತ್ತಿನಲ್ಲಿ ನಡೆವ ಎಲ್ಲಾ ಥರದ ಘಟನೆಗಳೂ ಮೆರವಣಿಗೆಯಲ್ಲಿ ನಡೀತವೆ. ಅದಕ್ಕೇ ಆ ಊರು ನಿಮಗೆ ಗೊತ್ತಿರಬಹುದು. ನಮ್ಮೂರು ಅಗ್ದಿ ಶಾಂತ, ಸೌಮ್ಯ, ಸಹಬಾಳ್ವೆಯ ಮಂದಿ ಬದುಕೋ ಊರು. ಹೊಳೆಗೆ ಬ್ರಿಜ್ ಇಲ್ಲ, ರಸ್ತೆಯಿಲ್ಲ. ಆದರೂ ಇಪ್ಪತ್ತಿಪ್ಪತ್ತೈದು ವರ್ಷದಿಂದ ವೋಟು ಒತ್ತಿದ್ದು ಮಾತ್ರ ಒಬ್ಬರಿಗೇ. ಕಾರಣ ಗೊತ್ತಲ್ಲ, ಆತ ಯಾರಿಗೂ ಕೆಟ್ಟದು ಮಾಡದ ಗೋವಿನಂಥಾ ಮನ್ಷ ಅಂತ. ನೋಡಿ, ಪತ್ತೇದಾರಿ ಕತೆ ಹೇಳೋನಿಗೆ ರಾಜಕೀಯ ಬೇರೆ ನೆನ್ಪಾಯ್ತು. ಅಲ್ಲ, ಯಾಕೆ ಆ ವಿಷ್ಯ ಬಂತು ಅಂದ್ರೆ, ನಮ್ಮೂರಿನ ಮಂದಿ ಅಗ್ದಿ ಶಾಂತ, ಸೌಮ್ಯ,

ಕುಂಟಣೆ

Image
ನಿಮಗೆ ಮೆರವಣಿಗೆ ಊರು ಗೊತ್ತಿರಬಹುದು. ಗೊತ್ತಿಲ್ಲವೆ? ಮೆರವಣಿಗೆ ರಾಮಣ್ಣ, ಮೆರವಣಿಗೆ ವೇದಕ್ಕ? ಛೆ, ನಿಮಗೆ ಮೆರವಣಿಗೆ ಬಗ್ಗೆ ಸ್ವಲ್ಪವಾದ್ರೂ ಗೊತ್ತಿರಲೇಬೇಕು. ಇತ್ತೀಚೆಗೆ ಭರ್ತಿ ಸುದ್ದಿಯಲ್ಲಿದ್ದ ಊರೇ ಗೊತ್ತಿಲ್ಲವೆಂದ್ರೆ ನೀವು ನ್ಯೂಸ್ ಚಾನಲ್‌ಗಳಲ್ಲಿ ಕೊರೊನಾ ಕಾಮೆಂಟರಿ ಮಾತ್ರ ಕೇಳ್ತಿದ್ರಿ ಅನ್ಸತ್ತೆ. ಇರ್ಲಿ ಬಿಡಿ, ಮೆರವಣಿಗೆ ಅನ್ನೋದು ಮಲೆನಾಡಿನ ಒಂದೂರು. ಇತ್ತೀಚೆಗೆ ಒಂದೆರ್ಡು ಸಾವುಗಳಿಂದ ಇಡೀ ಮಲೆನಾಡ ಭಾಗಕ್ಕೇ ಫುಲ್ ಫೇಮಸ್ ಆಗಿತ್ತು. ನೋಡಿ, ಬೇರೆ ಏನೋ ಹೇಳೋಕೆ ಬಂದೋನಿಗೆ ಮೆರವಣಿಗೆ ಬಗ್ಗೆ ಹೇಳೋ ಹಂಗಾಗಿದ್ದು ವಿಪರ್ಯಾಸವಲ್ವೆ? ಅಷ್ಟೇನು ದೊಡ್ಡದಲ್ಲದ, ಚಿಕ್ಕದೂ ಅಲ್ಲದ ಊರದು. ಪಶ್ಚಿಮ ಘಟ್ಟದ ಎರಡನೇ ಹಂತದ ಗುಡ್ಡಗಳಡಿಗೆ ಸ್ಥಾಪಿತ ಪ್ರದೇಶ. ಹಸಿರು ಗುಡ್ಡಗಳ ಮಧ್ಯೆ ಅಡಿಕೆ ತೋಟ, ಭತ್ತದ ಗದ್ದೆ ಸರಗಳನ್ನು ಸುತ್ತಲೂ ಹಚ್ಚಿಕೊಂಡಿರೋ ಊರನ್ನ ನೋಡೋಕೆ ಒಮ್ಮೆಯಾದ್ರೂ ನೀವು ಹೋಗಲೇಬೇಕು. ಎಂಥ ಚೆಂದ ಉಂಟು ಗೊತ್ತುಂಟಾ! ಅಂಥ ಊರು ಸಿನಿಮಾ ಮಂದಿಯ ಕಣ್ಣಿಗೂ ಬಿದ್ದು ಶೂಟಿಂಗಿಗೆ ಅಂತಲೂ ಬಂದಿದ್ರಂತೆ. ಆದ್ರೆ ಅಲ್ಲಿಯ ಮಳೆಗೆ, ಮಣ್ಣು ರಸ್ತೆಗೆ, ಅಡಿಕೆ ಮುಂಡಿಯ ಸಾರಕ್ಕೆ ಶೂಟಿಂಗು ಅಂದ್ರೆಂತ ಪರಿಚಿತವಾ? ಸರೀ ಹಿಡ್ಕೊಂಡು ಕೊಟ್ಟ ಮಳೆಗೆ ಶೂಟಿಂಗೂ ಆಗ್ದೇ, ಬಂದ ಯುನಿಟ್ಟು ಮಂದಿ ವಾಪಾಸು ಹೋಗುವಾಗ ಟಿಟಿ ಗಾಲಿಗಳು ಎರಡಡಿ ಹೂಳಲ್ಲಿ ಹುಗಿದು ಬಿದ್ದು ಒದ್ದಾಡಿದ್ದೂ ಆಯ್ತಂತೆ. ಮತ್ತೆ ಈಬದಿಗೆ ಮುಖ ಹಾಕಲ್ಲ ಅಂತ ದೊಡ್ಡ ಮಂದಿಯೆಲ್