ಬೆಂಗ್ಳೂರು

"ಇದು ಬೆಂಗ್ಳೂರು ಅಪ್ಪಾ, ಇಲ್ಲಿ ಉತ್ಪಾದನೆಯಷ್ಟೇ ಆಗುತ್ತೆ ಸೃಷ್ಠಿಯಲ್ಲ" ಅಣ್ಣನ ಮದುವೆಯಾಗಿ ಮೂರುವರ್ಷವೇ ಕಳೆದರೂ ಮಕ್ಕಳಾಗದ್ದರ ಬಗ್ಗೆ ಅಪ್ಪನ ಜಿಜ್ಞಾಸೆಗೆ ಅಣ್ಣನ ಉತ್ತರ ಸೂಚ್ಯವಾಗಿ ಪೇಟೆಯ ಬದುಕಿನೆಡೆಗಿನ ತಾತ್ಸಾರವನ್ನು ಸೂಚಿಸುತ್ತಿತ್ತು. ಅಣ್ಣ ಮಾಡಿದ ಮ್ಯಾನೇಜ್ಮೆಂಟ್ ಮಾಸ್ಟರ್ ಪದವಿಗೆ ದಿನಕ್ಕೆ ಬರೀ ಹದಿನಾರು ಘಂಟೆಗಳಷ್ಟೇ ಕೆಲಸಮಾಡುವ ನೌಕರಿ ಸಿಕ್ಕಿತ್ತು ಅನ್ನೋದು ಇತಿಹಾಸ.
ಅಣ್ಣನಿಗೋ ಮನೆಕಡೆ ತೋಟಗಳ ಮಧ್ಯೆ ಬದುಕೋದೇ ಇಷ್ಟವಾಗಿತ್ತು. ಆದರೆ ಅಪ್ಪನಿಗೋ ತನ್ನ ಮಗ ತಿಂಗಳಿಗೆ ಐದಂಕಿಯ ಸಂಬಳ ಪಡೆಯುವ ಉದ್ಯೋಗಿ ಎಂಬ ಜಂಭವೇ ಇಷ್ಟವಾಗಿತ್ತು. ಅವನಿಷ್ಟದಂತೇ ಎಂ.ಬಿ.ಎ ಮುಗಿಸಿ ಬೆಂಗಳೂರೆಂಬ ಬದುಕ ಕಾರ್ಖಾನೆಯಲ್ಲಿ ಪ್ರತಿಷ್ಠಾಪಿತನಾದ.
ಅಪ್ಪನಿಗೂ ವಯಸ್ಸಾಯಿತು, ಸಮಯ ಕಳೆದಂತೆ ಆಸೆಗಳು ಬದಲಾಗುತ್ತವಂತೆ, ಈಗ ಅಪ್ಪನಿಗೆ ಮೊಮ್ಮಕ್ಕಳ ಬಳಿ ತನ್ನ ಮೀಸೆ ಎಳೆಸಿಕೊಳ್ಳೋ ಹಂಬಲ.
ಇತಿಹಾಸ ಆಸೆಗಳಂತೆ ಬದಲಾಗುವುದಿಲ್ಲ ಎಂಬ ಅನುಭವ ಅಪ್ಪನಲ್ಲಿ ನಿರಾಸೆ ಮೂಡಿಸಿದೆ. ಒಂದು ಪಡೆಬೇಕೆದರೆ ಒಂದನ್ನು ಕಳೆದುಕೊಳ್ಳಲೇಬೇಕು ಅಲ್ವಾ...

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ