ಉಸಿರು

ಅವನ ಹೆಸರು ಯಾರಿಗೂ ತಿಳಿದೇ ಇಲ್ಲ ಅನ್ನೋ ಮಟ್ಟಿಗೆ 'ಮೂಕ' ಅನ್ನೋ ಅನ್ವರ್ಥ ಪ್ರಸಿದ್ಧವಾಗಿತ್ತು. ಆದರೆ ಅವನೇನು ಭಯಂಕರ ಫೇಮಸ್ ವ್ಯಕ್ತಿಯೇನಲ್ಲ. ಶಹನಾಯಿಯವನ ಜೊತೆ ಶೃತಿ ಊದುವುದೇ ಅವನ ಜನ್ಮ ಕಾಯಕ. ಅರವತ್ತರ ವಯಸ್ಸಿನವನಿಗೆ ನಲವತ್ತೆಂಟರ ಅನುಭವ ಶೃತಿ ಊದುವುದರಲ್ಲಿ.
ಮೂಗತನವೇ ಅವನ ಕೌಶಲ್ಯ. ಶಹನಾಯಿಯವನ ವಾದ್ಯ ಕ್ರಾಂತಿಗೆ ಶೃತಿ ಪೆಟ್ಟಿಗೆ ಆಗಮಿಸಿದ ಮೇಲೆ ಇವನ ಕೌಶಲ್ಯ ಕಾಣೆಯಾಗಿತ್ತು. ಬರೋಬ್ಬರಿ ಹತ್ತು ನಿಮಿಷಕ್ಕಿಂತ ಜಾಸ್ತಿ ಧಮ್ಮು ಕಟ್ತಿದ್ದೋನು ಎರಡು ನಿಮಿಷಕ್ಕೆಲ್ಲಾ ಉಸಿರು ಬಿಡತೊಡಗಿದ.
ಕೆಲಸ ಕಡಿಮೆಯಾದಂತೆ ಆದಾಯ ಕಡಿಮೆ ಆಗುತ್ತಾ ಬಂತು. ಒಂದು ದಿನ ಅವನ ಅಲ್ಪ ಆದಾಯವೂ ನಿಂತು ಹೋಯ್ತು.
ಬದುಕೋಕೆ ಆಹಾರ ಬೇಕು, ಆಹಾರ ಪುಗಸಟ್ಟೆ ಬರತ್ಯೇ? ದುಡಿಮೆಯೇ ಇಲ್ಲದೇ ಬದುಕೋದು ಹೆಂಗೆ? ಮೂಗ ತನ್ನ ಕೌಶಲ್ಯವನ್ನು ಮರಳಿ ಪಡೆಯೋ ಪ್ರಯತ್ನ ಮಾಡಿದ. ಉಸಿರು ಕಟ್ಟಿ ಕುಳಿತ...

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ