ರಿಪ್ಲೈ

ಅನಾಮತ್ತು ನೂರೈವತ್ತು ಬಾರಿ ಮೆಸೇಜಿಸಿದ್ರೂ ಆಕಡೆಯಿಂದ ರಿಪ್ಲೈ ಬರದಿರೋದ ನೋಡಿ ಅವಳ ಮನೆ ಕಡೆಯೇ ಹೊರಟ. ಎರಡು ದಿನಗಳಿಂದ ಪತ್ತೆಯೇ ಇಲ್ರಾ ಏನು ಕಥೆ ಎಂದು ದಬಾಯಿಸಿ ತನಗೆ ಅವಳ ಮೇಲಿರೋ ಮಮಕಾರವನ್ನ ಷೋ ಮಾಡಬೇಕು, ಅದನ್ನು ಕಂಡು ಆಕೆ ಇವನ ಪ್ರೀತಿಯಲ್ಲಿ ಮುಳುಗಬೇಕು ಅನ್ನೋ ಆಸೆ ಆತನದ್ದಾಗಿತ್ತು ಅನ್ಸುತ್ತೆ.
ಮದ್ಯ ದಾರಿಯಲ್ಲೇ ಆಕೆ ಸಿಕ್ಕಿಬಿಟ್ಲು! "ನಂಗೇಕೆ ರಿಪ್ಲೈ ಮಾಡ್ತಿಲ್ಯಾ? ಏನಾದ್ರೂ ತಪ್ಪಾಯ್ತಾ?" ಅಂತಾ ಕೇಳಿಯೂಬಿಟ್ಟ.
"ಬಾ ಪೋಲಿಸ್ ಸ್ಟೇಷನ್ನಿಗೆ ಹೋಗೋಣ" ಅಂದ್ಲು.
ಇದೇನಪ್ಪಾ ಗ್ರಹಚಾರ, ಯಾರಾದ್ರೂ ಮಾಡ್ಬಾರ್ದನ್ನ ಮಾಡ್ಬಿಟ್ರಾ? ಮೊದಲೇ ಬೆಂಗ್ಳೂರು ಅತ್ಯಾಚಾರದ ನಗರವಾಗೋಗಿದೆ. ಪುಣ್ಯ ಇನ್ನೂ ಪ್ರಪೋಸ್ ಮಾಡಿಲ್ಲ, ಬೇರೆ ಯಾರ್ನಾದ್ರೂ ಹುಡ್ಕೊಳ್ಬೇಕು ಅಂತ ಯೋಚನೆ ಮಾಡೋ ಹೊತ್ತಿಗೆ ಪೋಲಿಸ್ ಸ್ಟೇಷನ್ ಹತ್ತಿರ ಬಂದಿತ್ತು.
ಆಕೆ ಒಳಗೆ ಹೋದೋಳೇ ಒಬ್ಬ ಕಾನ್ಸ್ಟೇಬಲ್ ಹತ್ರಾ ಅಂದ್ಲು, "ಸಾರ್ ನನ್ನ ಮೊಬೇಲ್ ಸಿಕ್ತು ಅಂತಾ ಹಾಸ್ಟೇಲಿಗೆ ಫೋನ್ ಬಂದಿತ್ತು..."

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ