ಆಗಸದ ತೂತು | ಸಂಚಿಕೆ ೮ - ವಿಚಾರಣೆ, ಮತ್ತೊಂದಿಷ್ಟು

 ಅಕ್ಟೋಬರ್ ೧೪ರ ರಾತ್ರಿಯೇ ಬೆಂಗಳೂರನ್ನು ತಲುಪಿದರೂ ಸಿಸಿಬಿ ಕಚೇರಿಗೆ ಹೋಗುವ ಉಮೇದಿಯಿಲ್ಲದೆ ಮಾರನೇ ದಿನ ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಎಸ್‌ಪಿ ಸಾಹೇಬರಿಗೆ ಕರೆ ಮಾಡಿ, ಬೆಂಗಳೂರಿನಲ್ಲಿದ್ದೇನೆಂದೂ, ಎಷ್ಟು ಹೊತ್ತಿಗೆ ಬರಬೇಕೆಂದೂ ಕೇಳಿದೆ. ಇನ್ನರ್ಧ ಗಂಟೆಯಲ್ಲಿ ತಾನು ಕಚೇರಿಯಲ್ಲಿರುತ್ತೇನೆ, ನೀವೂ ಬನ್ನಿ ಎಂದು ತೀರಾ ಸೌಮ್ಯವಾಗಿಯೇ ಹೇಳಿದ್ದರು. ನಾನೆಷ್ಟು ಸಮಯಪಾಲಕ ಎಂಬುದು ನಿಮಗೆ ಗೊತ್ತಿರಲಿಕ್ಕಿಲ್ಲ, ಕರೆಕ್ಟು ಎಂಟು ಗಂಟೆ ಮೂವತ್ಮೂರು ನಿಮಿಷಕ್ಕೆ ಅವರ ಕಚೇರಿಯಲ್ಲಿದ್ದೆ.


"ಸೋ, ನೀವು ಚೆನ್ನೈನಲ್ಲಿ ಏನು ಮಾಡೋದು?" ಒಂದು ಫೈಲನ್ನು ಟೇಬಲ್ಲಿಗೆ ಎಳೆದುಕೊಂಡ ಎಸ್‌ಪಿ ಪ್ರಜ್ವಲ್ ಪ್ರಶ್ನಿಸಿದ್ದರು. ಆ ಫೈಲಿನಲ್ಲಿ ನನ್ನ ಬಗ್ಗೆ ಈಗಾಗಲೇ ಸಂಗ್ರಹಿಸಲಾದ ಮಾಹಿತಿ, ನನ್ನ ಪ್ರೊಫೈಲ್ ಇದೆಯೆಂದು ಯಾರಿಗಾದರೂ ಗೊತ್ತಾಗಬಹುದು.

"ಮಿಡಿಯಾ ಹೌಸೊಂದರಲ್ಲಿ ಇನ್ಪುಟ್ ಹೆಡ್ ಆಗಿದೀನಿ ಸರ್" ಅಂತಂದೆ.

"You are a journalist ha? What you think about Bhatreri massacre?" ಏಕ್ದಂ ಹಿಂಗೆ ವಿಷಯಕ್ಕೆ ಬರ್ತಾರಲ್ಲ, ಅದು ಇಷ್ಟವಾಗತ್ತೆ.

"It was shocking. I was fallowing that tragic news since it broke. Poor people" ಅಂದು ನನ್ನ ಸಂತಾಪ ವ್ಯಕ್ತಪಡಿಸಿದ್ದೆ.

"You know anyone called Gopalakrishna alias Goputta?" ಮತ್ತೊಂದು ಸ್ಟ್ರೇಟ್ ಹಿಟ್ ಪ್ರಶ್ನೆ.

"ಹೌದು, ನಾನು ಹಿಮಾಚಲ ಪ್ರವಾಸದಲ್ಲಿದ್ದಾಗ ಭೆಟ್ಟಿಯಾಗಿತ್ತು. ಕೆಲ ದಿನ ಒಟ್ಟಿಗೇ ತಿರ್ಗಾಡಿದ್ವಿ. ಅವನ ಕೆಲ ಕತೆಗಳನ್ನ ಹೇಳಿದ್ದ. I couldn't handle his delusions. I was afraid and then I couldn't stay with him anymore. So I left to chennai when I got job offer." ಅಂತ ಸಂಕ್ಷಿಪ್ತವಾಗಿ ನಾನು ನಿರಪರಾಧಿಯೆಂದಿದ್ದೆ.

"Can you elaborate those experiences of yours?" ಸಾಹೇಬರು ತಮ್ಮ ಬಳಿ ತುಂಬಾ ಟೈಮಿದೆಯೆಂಬಂತೆ ಪ್ರಶ್ನೆ ಕೇಳಿದರು. ನಿಮಗೆ ಈಗಾಗಲೇ ಹೇಳಿದ್ದನ್ನೇ ಅವರಿಗೂ ಹೇಳಿದೆ.

"So You are implementing, you are not an accomplice to any crime Goputta and his family committed. You weren't his recruit too?" ಮತ್ತೊಂದು ನೇರ ಪ್ರಶ್ನೆ.

"Not at all I'm his accomplice. I tried to be friends with him, but he's not worth a friend. And I need to know why I am here. Am I a suspect? If yes, I want to talk to my lawyer" ಈ ಸಲ ಅವರ ಪ್ರಶ್ನೆ ನನ್ನನ್ನು ಚುಚ್ವಿದಂತನಿಸಿ ರಕ್ಷಣಾತ್ಮಕವಾಗಿ ಪ್ರತಿಕ್ರಿಯಿಸಿದ್ದೆ. ನಿಮ್ಮನ್ನು ಪೊಲೀಸರು ಪ್ರಶ್ನೆಗಾಗಿ ಕರೆದರೆ, ನಿಮಗೆ ಅವಶ್ಯಕತೆಯಿದ್ದರೆ ವಕೀಲರನ್ನು ಒಯ್ಯಬಹುದು. ಉತ್ತರಿಸಲು ನಿರಾಕರಿಸಿದರೆ ಪೊಲೀಸರು ಒತ್ತಾಯಿಸುವಂತಿಲ್ಲ ಎಂಬೆಲ್ಲ ಕಾನೂನಾತ್ಮಕ ಸಲಹೆ ನೀಡಿ ಕಳಿಸಿದ್ದ ಪ್ರಣವ್. (ಪ್ರಣವ್ ನಾನು ಕೆಲಸ ಮಾಡೋ ಮಿಡಿಯಾ ಹೌಸಿನ ಬಾಸ್, ನೆನಪಿದೆ ಅಲ್ಲವೆ?

"ಇಲ್ಲ, ನೀವು ಸಸ್ಪೆಕ್ಟ್ ಅಲ್ಲ ನಿಶ್ಚಿಂತರಾಗಿರಿ. ನಿಮ್ಮಿಂದ ನಮಗೆ ತುಂಬಾ ದೊಡ್ಡ ಸಹಾಯವೊಂದಾಗಬೇಕಿದೆ. ಸಹಾಯ ಕೇಳೋ ಮೊದಲು ನಿಮ್ಮ ಬ್ಯಾಕ್‌ಗ್ರೌಂಡ್ ಬಗ್ಗೆ ನಾವು ಪಡೆದ ಮಾಹಿತಿಗಳನ್ನೆಲ್ಲ ಕ್ರಾಸ್‌ಚೆಕ್ ಮಾಡಬೇಕಿತ್ತು ಅಷ್ಟೇ." ಅಂದ ಪ್ರಜ್ವಲ್ ನಾಯಕರು ತಮ್ಮ ಕುರ್ಚಿಯಿಂದೆದ್ದು, "ಬನ್ನಿ, ನಿಮ್ದಿನ್ನೂ ತಿಂಡಿ ಆಗಿಲ್ಲ ಅನ್ಸತ್ತೆ, ನಂದೂ ಆಗಿಲ್ಲ. ಕೆಫೆಟೆರಿಯಾಕ್ಕೆ ಹೋಗಿ ಏನಾದ್ರೂ ತಿನ್ನುತ್ತಾ ಮಾತಾಡೋಣ" ಎಂದರು. ಅದು ಅದೇಶದಂತೆ ಧ್ವನಿಸಿ ಸುಮ್ಮನೆ ಎದ್ದು ಹೊರಟೆ. ಮಿದುಳು ತನ್ನ ಅಗ್ದಿ ಸಾಮರ್ಥ್ಯವಿದ್ದಷ್ಟು ಯೋಚಿಸುತ್ತಿತ್ತು‌. ನನ್ನಿಂದಾಗಬೇಕಾದ ಸಹಾಯವಾದ್ರೂ ಏನು?

ಪ್ರಜ್ವಲರು ಸೆಟ್ ದೋಸೆಯನ್ನು, ನಾನು ಎರಡು ಪ್ಲೇಟ್ ವಡಾವನ್ನೂ ಆರ್ಡರಿಸಿ ಹಾಲಿನ ಮಧ್ಯವಿದ್ದ ಟೇಬಲನ್ನು ವಶಕ್ಕೆ ಪಡೆದಿದ್ದೆವು‌. ಅಡುಗೆ ಮಾಡುವವರನ್ನು ಬಿಟ್ಟು ಇಡೀ ಕೆಫೆಟೇರಿಯಾ ಖಾಲಿಯಿದ್ದಿದ್ದು ನಂಗಂತೂ ಆಶ್ಚರ್ಯಕರವಾಗಿತ್ತು.

"ನಿಮ್ಗೆ ಭಟ್ರೇರಿ ಕೇಸಿನ ಅಪ್ಡೇಟ್ ಎಲ್ಲಿಯವರೆಗಿದೆ?" ನಮ್ಮ ನಡುವೆ ಮಾತಾಡಲು ಮತ್ಯಾವುದೇ ಕಾಮನ್ ಗ್ರೌಂಡ್ ಇಲ್ಲವೆಂಬಂತೆ ನಾಯಕರು ಪ್ರಶ್ನಿಸಿದ್ರು.

"ಗೋಪುಟ್ಟ ಮತ್ತವನ ಕಾರ್ಯಕರ್ತರು ಭಟ್ರಕುಳಿಗೆ ಬಂದಿದ್ದು, ಭಟ್ರೇರಿ ಹತ್ಯಾಕಾಂಡದ ನಂತ್ರ ನಾಪತ್ತೆಯಾಗಿದ್ದು ಗೊತ್ತಿದೆ. ದೊಡ್ಡ ಭಟ್ರ ಮಗಳು ವಿಮಲಾ ಮತ್ತೆ ಗೋಪುಟ್ಟ ಫಿಸಿಕಲ್ ರಿಲೇಶನ್ಶಿಪ್ ಇಟ್ಕೊಂಡು, ಒಂದು ಮಗುವೂ ಇತ್ತು ಅನ್ನೋದು ನಿನ್ನೆಯಷ್ಟೇ ಗೊತ್ತಾಯ್ತು. ಅದ್ಬಿಟ್ಟು ಹೆಚ್ಗೆ ಅಪ್ಡೇಟ್ಸ್ ಇಲ್ಲ" ಅಂದೆ. ನಾಯಕರ ಪ್ರಶ್ನೆಯಲ್ಲೇ ಕೇಸು ಮತ್ತೂ ಮುಂದುವರಿದಿದೆ ಅನ್ನೋದು ತಿಳಿದಿತ್ತು.

"ಗೋಪುಟ್ಟ ನಿಮ್ಮತ್ರ ಮಾತಾಡೋವಾಗ ಯಾವಾಗಾದ್ರೂ ವಿಮಲಾ ಬಗ್ಗೆ, ಮಗು ಬಗ್ಗೆ ಮಾತಾಡಿದ್ನಾ?" ನಾಯಕರು ಅಪ್ಡೇಟ್ ಕೊಡೋ ಬದ್ಲು ಬೇರೆ ಪ್ರಶ್ನೆ ಕೇಳಿದ್ದು ನಿರಾಸೆ ಮೂಡಿಸಿತು.

"ಊಹ್ಞೂಂ, ಹೆಂಡ ಕುಡೀದಿದ್ರೂ ಕುಡ್ದಿದಾನೆ ಅಂದ್ಕೊಂಡು ದೊಡ್ಡ ಭಟ್ರು ಊರಿಂದ ಬಹಿಷ್ಕಾರ ಹಾಕಿದ್ರು ಅಂತಿದ್ದ. ವಿಮಲಾ ಬಗ್ಗೆ ಒಂದ್ ಮಾತ್‌ಸಾ ಆಡಿಲ್ಲ" ಅಂದೆ.

"ಆತನ ಮೇಲೆ ಅತ್ಯಾಚಾರದ ಕೇಸ್ ದಾಖಲಾಗಿದ್ದು ೨೦೨೦ರ ಜೂ.೧ರಂದು. ಮೇ ೩೧ರ ರಾತ್ರಿ ಅತ್ಯಾಚಾರ ಮಾಡಿದ್ನಂತೆ. They were supposed to be married prior that incident. ನಮ್ ಗಂಡ್ಸ್ರಿಗೆ ಹೆಂಡ್ತಿ ಆಬ್ಜೆಕ್ಟ್ ಥರ ಕಾಣ್ತಾಳೆ. ಹೆಂಡ್ತಿ ಅವ್ರ ಪ್ರಾಪರ್ಟಿ, ಯಾವಾಗ ಬೇಕಾದ್ರೂ ಯೂಸ್ ಮಾಡ್ಕೊಳ್ಬೋದು ಅಂದ್ಕೊಳ್ತಾರೆ. In this case, ಗೋಪುಟ್ಟ ಹೆಂಗಿದ್ರೂ ತಾನು ಮದುವೆಯಾಗೋಳು ಅಂತ ಅವ್ಳನ್ನ ಬಳ್ಸ್ಕೊಳೋಕೆ ಹೋಗಿರ್ಬೋದು. ಆದ್ರೆ, one can not be so potent to pregnent a woman with single intercourse. ಇದು ಒಂದು ಸಲ ಏಕಾಂತದಲ್ಲಾದ ಘಟನೆಯಲ್ಲ. ವಿಮಲಾ ಮತ್ತು ಗೋಪುಟ್ಟ ಆವತ್ತಿಗೂ ಮೊದಲು ದೈಹಿಕ ಸಂಪರ್ಕ ಹೊಂದಿದ್ರು ಅನ್ಸಿತ್ತು. ಗೋಪುಟ್ಟನತ್ರ ಈ ಬಗ್ಗೆ ಕೇಳ್ದಾಗ, ಡ್ರಗ್ ಮಾಡ್ಸಿ ಅವ್ಳನ್ನ ನಾಲ್ಕೈದು ಬಾರಿ ಉಪ್ಯೋಗ್ಸಿಕೊಂಡಿರೋದಾಗಿ ಒಪ್ಕೊಂಡ. ಆವತ್ತು ಡ್ರಗ್ ಕೆಲ್ಸ ಮಾಡ್ಲಿಲ್ವಂತೆ, ವಿಮಲಾ ಕಿರ್ಚ್ಕೊಂಡಾಗ ಭಟ್ರೇರಿಯವ್ರೆಲ್ಲ ಒಟ್ಟಾಗಿ ಇವ್ನಿಗೆ ಹೊಡ್ದಿದಾರೆ. ಇವ್ನು ನಿಮ್ಮನ್ನೆಲ್ಲ ಸರ್ವನಾಶ ಮಾಡ್ತೀನಿ ಅಂದು ಊರು ಬಿಟ್ಟ. ಗೋಪುಟ್ಟ ಮತ್ತೆ ಬರ್ಬೋದು ಅನ್ಸಿ ದೊಡ್ಡ ಭಟ್ರು ಒಂದು ಕಂಪ್ಲೇಂಟ್ ಲಾಜ್ ಮಾಡಿದ್ರು" ಅನ್ನೋ ಹೊತ್ತಿಗೆ ನಮ್ಮ ತಿಂಡಿ ಬಂದಿತ್ತು.

"ನಿಮ್ಗೆ ಗೋಪುಟ್ಟ ಸಿಕ್ಕಿದ್ನಾ?" ಎಸ್ಪಿಯವರ ಪೂರ್ತಿ ಮಾತಿನಲ್ಲಿ ನಾನು ಪಡೆದ ಮಾಹಿತಿ ಇಷ್ಟೇ ಆಗಿತ್ತು. ಅವ್ರು ಗೋಪುಟ್ಟನನ್ನ ಪ್ರಶ್ನಿಸಿದಾರೆ. ಹೆಚ್ಚಾಗಿ ನನ್ನ ಬಗ್ಗೆ ಅವ್ನ ವರ್ಶನ್ ಕೂಡ ಸ್ಟೇಟ್ಮೆಂಟಲ್ಲಿದೆ. ಬಹುಶಃ ಅದಕ್ಕೇ ನನ್ನ ಕರೆಸಿದ್ದು ಅನ್ನೋದು ತಿಳಿಯಾಗುತ್ತಿತ್ತು.

"ಹ್ಞೂಂ, ಅದೊಂದು ದೊಡ್ಡ ಕತೆ. ಅದ್ರ ಬಗ್ಗೆ ಆರಾಮಾಗಿ ಮಾತಾಡೋಣ. ಮೊದ್ಲು ತಿಂಡಿ ತಿನ್ನಿ. ಚಾ ಕುಡೀರೀರಿ ಅಲ್ವಾ?" ಅಂದ ಪ್ರಜ್ವಲರು ನನ್ನ ಪ್ರತಿಕ್ರಿಯೆಗೂ ಕಾಯದೇ "ಎರ್ಡು ಚಾ" ಎಂದು ಕೌಂಟರಿನತ್ತ ಕೈಯೆತ್ತಿ ಕೂಗಿದರು.

ಚಾ ಕುಡಿದು ಎಸ್‌ಪಿಯವರ ಕಚೇರಿ ಹೊಕ್ಕೆವು. ನಂಗೆ need to know ಅಂತನಿಸಿದ ಮಾಹಿತಿಗಳನ್ನೆಲ್ಲ ನೀಡೋದಾಗಿ ಹೇಳಿದ್ರು. ಅದರಂತೆ, ಕೆಫೆಟೆರಿಯಾದಲ್ಲಿ ನಾ ಕೇಳಿದ್ದ ಪ್ರಶ್ನೆ, "ನಿಮ್ಗೆ ಗೋಪುಟ್ಟ ಸಿಕ್ಕಿದ್ನಾ?" ಅನ್ನೋದಕ್ಕೆ ಮೊದಲ ಉತ್ತರವಿತ್ತು.

"ಆವತ್ತು, ಅಂದ್ರೆ ಅಕ್ಟೋಬರ್ ೧೨, ೨೦೨೧ರ ರಾತ್ರಿ ಭಟ್ರೇರಿಯಲ್ಲಿ ಹತ್ಯಾಕಾಂಡವಾಗಿದ್ರೆ; ಭಟ್ರಕುಳಿ ಮತ್ತು ಭಟ್ರೇರಿ ನಡುವಿನ ಸ್ಮಶಾನದ ಬಳಿ ಟೆಂಟ್ ಕಟ್ಟಿಕೊಂಡಿದ್ದ ಗೋಪುಟ್ಟ ಮತ್ತು ಅವನ ಹದಿನೈದು ಮಂದಿ ಸಹಚರರು ಎರಡು ಇಸಝು ಪಿಕಪ್ ಟ್ರಕ್ ಮತ್ತು ಒಂದು ಕೆಂಪು ಸೆಡಾನ್ ಕಾರಿನಲ್ಲಿ ಕಾರವಾರ ಹಾದು ಗೋವಾ ಗಡಿ ಪ್ರವೇಶ ಮಾಡೋವಾಗ D&D (ಮದ್ಯದಮಲಿನಲ್ಲಿ ವಾಹನ ಚಲಾಯಿಸೋದು), carrying substances and scheduled first grade drugs, carrying unauthorized weapons ಪ್ರಕರಣಗಳಡಿ ಬಂಧಿತರಾಗಿದ್ರು. ನಮ್ಮ ಭಟ್ರೇರಿ ಹತ್ಯಾಕಾಂಡದ ತನಿಖೆ ಒಂದು ಹಂತಕ್ಕೆ ಬಂದು ಸಸ್ಪೆಕ್ಟ್‌ಗಳ ಯಾದಿ ತಯಾರಾದ್ಮೇಲೆ ರಾಜ್ಯದ ಎಲ್ಲ ಠಾಣೆಗಳಿಗೆ ಆರೋಪಿಗಳ ಮಾಹಿತಿ ಕೊಟ್ಟು, ಹೋಲಿಕೆಯುಳ್ಳ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಿಳಿಸಿ ಅಂತ ಸೂಚನೆ ಕೊಟ್ಟಿದ್ವಿ. ಹೆಚ್ಚು ಹುಡುಕೋದು ಬೇಕಾಗ್ಲಿಲ್ಲ, ಅಕ್ಟೋಬರ್ ೧೪ರ ಬೆಳಿಗ್ಗೆ ನಮ್ಮ ಬೆಂಗಳೂರು ಕಚೇರಿಗೆ ಗೋಪುಟ್ಟ ಮತ್ತು ಸಹಚರರ ಆಗಮನವಾಗಿತ್ತು. ನಾನೇ ಖುದ್ದಾಗಿ ಇಂಟರಾಗೇಶನ್ ಮಾಡ್ದೆ. ನಾಲ್ಕು ಮಂದಿ ಭಟ್ರೇರಿ ಹತ್ಯೆಗಳನ್ನ ತಾವೇ ಮಾಡಿದ್ದಾಗಿ ಒಪ್ಕೊಂಡ್ರು" ಅಂತ ವಿವರಿಸಿದ್ರು ಎಸ್‌ಪಿ ಸಾಹೇಬ್ರು.

"ಮತ್ತೆ ಉಳ್ದ ೧೧ ಮಂದಿ ಏನಂದ್ರು? ಗೋಪುಟ್ಟ ಒಪ್ಕೊಂಡ್ನಾ? ಅವ್ನ ಮಗೂನ ಅವ್ನೇ ಕೊಲೆ ಮಾಡೋಕೆ ಹೆಂಗಾದ್ರೂ ಮನ್ಸು ಬಂತೋ. ಕೊಲೆ ಮೊಟೀವ್ ಏನಂತೆ?" ತೀರಾ ಟಿವಿ ನ್ಯೂಸಿನಲ್ಲಿ ಪೆದ್ದ ಆ್ಯಂಕರ್ ತನ್ನ ರಿಪೋರ್ಟರ್‌ಗೆ ಪ್ರಶ್ನೆ ಕೇಳುವಂತೆ ಕೇಳಿದ್ದೆ.

"ಗೋಪುಟ್ಟ ತಾನು ಕೊಲೆ ಮಾಡಿದ್ದಾಗಿ ಒಪ್ಕೊಂಡಿಲ್ಲ. ಮಲ್ಲಿಕಾ aka ಮೈಸೂರ್ ಪಾಕ್, ಗುರ್ವಿಂದರ್ ಕೌರ್ aka ಗುಲ್ಕನ್, ಜಮೀಯಾ aka ಜಾಮೂನ್ ಮತ್ತೆ ದಿಲ್ಹೋನ್ ಖ್ವಾಜಾ aka ದಿಲ್ ಪಸಂದ್ ತಾವೇ ಕೊಲೆ ಮಾಡಿದ್ದಾಗಿ ಸ್ಟೇಟ್ಮೆಂಟ್ ಕೊಟ್ಟಿದಾರೆ. ಉಳಿದೋರ್ಯಾರೂ ಕೊಲೆ ಮಾಡೋವಾಗ ಅಲ್ಲಿರ್ಲಿಲ್ವಂತೆ. Even Goputta wasn't there; as their statements. They were unanimous, gave every details including motive. But no one is admitting Goputta's involvement. ಗೋಪುಟ್ಟನ ಇಂಟರಾಗೇಶನ್ ಮಾಡಿದ್ರೆ ಅವ್ನು ೨೦೨೦ರಲ್ಲಿ ಊರು ಬಿಡೋ ಕಾರಣದವರೆಗೆ ಎಲ್ಲಾ ಹೇಳ್ತಾನೆ. ಆದ್ರೆ ಅದ್ರ ನಂತರದ ಯಾವ ಟೈಮ್‌ಲೈನ್ ಬಗ್ಗೆ ಕೂಡ ಹೇಳ್ತಿಲ್ಲ. And when I asked frustratedly, ಇನ್ ಹೆಂಗಪ್ಪಾ ನಿನ್ನನ್ನ ಮಾತಾಡ್ಸೋದು ಅಂತ, then he uttered your name. Once I thought you're the mastermind. But it seemed illogical to think a renowned journalist doing all these crimes. Then we had statements of admitted murderers saying they committed crimes believing Goputtas story of Aagasada tootu. We ruled out your involvement ad asked you to come over. ಈಗ ನಿಮ್ಮನ್ನ ಇಲ್ಲಿಗೆ ಕರೆಸ್ಕೊಂಡ ಕಾರಣ ಗೊತ್ತಾಯ್ತು ಅಂದ್ಕೊಳ್ತೀನಿ" ಅಂತ ತಮ್ಮ ದೀರ್ಘ ಕಂಗ್ಲೀಷು ಮಾತಿಗೆ ವಿರಾಮವಿಟ್ರು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಸಾಹೇಬ್ರು. ನನ್ನಲ್ಲೊಂದು ನಿರಾಳ ಮೌನವಿತ್ತು. ಅದರ ಜೊತೆಜೊತೆಗೇ ನನ್ನ ಹೆಸರನ್ನ ಗೋಪುಟ್ಟ ಹೇಳಿದ್ದು ಆಶ್ಚರ್ಯ, ಆಘಾತ ಹುಟ್ಟಿಸಿತ್ತು.

"ಗೋಪುಟ್ಟ ನನ್ನ ಹೆಸರನ್ನಷ್ಟೇ ಹೇಳಿದ್ದಕ್ಕೆ ನನ್ನನ್ನ ಚೆನ್ನೈನಿಂದ ಬೆಂಗಳೂರಿಗೆ ಕರೆಸಿದ್ರಾ?" ನನ್ನ ಮೊದಲ ಪ್ರಶ್ನೆಯಾಗಿತ್ತು.

"ಇಲ್ಲ. ನಿಮ್ಮ ಹೆಸರನ್ನಷ್ಟೇ ಹೇಳಿದ್ರೆ ನಿಮ್ಮನ್ನ ಹುಡುಕೋಕೇ ನಮ್ಗೆ ನಾಲ್ಕೈದು ದಿನ ಬೇಕಾಗ್ತಿತ್ತು" ಅಂತ ನಕ್ಕ ಪ್ರಜ್ವಲರು ಮಾತನ್ನ ಮುಂದುವರಿಸಿ, "ನಿಮ್ಮ ಹೆಸರು, ನೀವು ಕೆಲಸ ಮಾಡೋ ಮಿಡಿಯಾದ ಹೆಸರು, ಅದರ ಅಡ್ರೆಸ್ಸು, ನಿಮ್ಮ ಚೆನ್ನೈ ಮತ್ತು ಮಂಗಳೂರಿನ ನಿವಾಸದ ಅಡ್ರೆಸ್ಸು, ನಿಮ್ಮ ಆಫೀಸಿನ ಟೆಲಿಫೋನ್ ನಂಬರ್ರು ಎಲ್ಲ ಹೇಳಿದಮೇಲಷ್ಟೇ ನಿಮ್ಮನ್ನ ಸಂಪರ್ಕಿಸಿದ್ದು. ನಂಗೊಂದು ಡೌಟಿದೆ, ಹತ್ಯಾಕಾಂಡದ ಸುದ್ದಿ ಬ್ರೇಕಾದಾಗ ನಿಮ್ಗೆ ಇದ್ರ ಹಿಂದೆ ಗೋಪುಟ್ಟನ ಕೈವಾಡವಿದೆ ಅಂತನಿಸಿತ್ತಾ? ಅನ್ಸಿದ್ರೆ ಯಾಕೆ ಪೊಲೀಸರನ್ನ ಸಂಪರ್ಕಿಸ್ಲಿಲ್ಲ?" ಅಂತ ಕೇಳಿದ್ರು.

"ಹ್ಞೂಂ, ಭಟ್ರೇರಿಯಲ್ಲಿ ಕೊಲೆಯಾಗಿದೆ ಅಂತನ್ನೋ ಸುದ್ದಿಯಲ್ಲಿ ಭಟ್ರೇರಿ ಅಂದಕ್ಷಣವೇ ಗೋಪುಟ್ಟ ಅನ್ನೋ ಸಫಿಕ್ಸು ಸೇರಿತ್ತು. ಮನಾಲಿಯಿಂದ ಹೊರಟಮೇಲೆ ಅವನ ಬಗ್ಗೆ ಯೋಚನೆ ಮಾಡಿದ್ರೂ ಹುಚ್ಚು ಹಿಡಿಯತ್ತೆ ಅನಿಸಿ ಅವನ ಬಗ್ಗೆ ಎಲ್ಲವನ್ನೂ ಮರೆತಿದ್ದೆ. ನಾನು ಪೊಲೀಸರನ್ನು ಸಂಪರ್ಕಿಸಿದ್ರೂ ಅವರಿಗೆ ಸಹಾಯ ಮಾಡೋಕೆ ಆಗೋದು ಡೌಟು ಅಂತನಿಸಿ ಮೊದಲಿಗೆ ಸುಮ್ಮನಿದ್ದೆ. ಕೊನೆಗೆ ಮಗುವಿನ ಸುದ್ದಿ ಕೊರೆಯೋಕೆ ಶುರ್ವಾಗಿ ಇನ್ನೇನು ಪೊಲೀಸರಿಗೆ ಕಾಲ್ ಮಾಡ್ಬೇಕು ಅನ್ನೋವಷ್ಟರಲ್ಲಿ ಸಸ್ಪೆಕ್ಟ್ಸ್ ಲಿಸ್ಟ್ ರಿಲೀಸ್ ಆಗಿತ್ತು. ಆಮೇಲೆ I could've stopped this way before it happened ಅನ್ನೋ ಗಿಲ್ಟ್ ಟ್ರಿಪ್ ಶುರುವಾಯ್ತು. ನಿಮ್ಮ ಕರೆ ಬರೋವರ್ಗೂ ತಲೆ ಭಾರವಾಗಿ ನಿಷ್ಕ್ರಿಯವಾಗಿತ್ತು" ಅಂದೆ.

"ಗೋಪುಟ್ಟನ ಸ್ಟೇಟ್ಮೆಂಟ್ ಪಡೆಯೋಕೆ ನಿಮ್ಮ ಸಹಾಯ ಬೇಕು. You will act as consultant now on. ಅವನೊಟ್ಟಿಗೆ ಮಾತಾಡೋವಾಗ ನಿಮ್ಮ ಜೊತೆ ಒಬ್ರು ಪಿಎಸೈ ಇರ್ತಾರೆ. ನೀವಾಡೋ ಪ್ರತಿ ಮಾತನ್ನೂ ರೆಕಾರ್ಡ್ ಮಾಡ್ತೀವಿ. ಅವ್ನು manipulate ಮಾಡ್ತಿದಾನೆ ಅಂತನ್ಸಿದ್ರೆ ಅಲ್ಲಿಗೇ ನಿಲ್ಸ್ತೀವಿ. ಇದಕ್ಕೆಲ್ಲ ನಿಮ್ಮ ಒಪ್ಪಿಗೆ ಇದ್ರೆ ಮಾತ್ರ ಮುಂದುರಿಯೋಣ" ಅಂದ್ರು. ನಾನು ಪೊಲೀಸರು ಕೊಡ್ತಿರೋ ಮರ್ಯಾದೆಗೇ ಫುಲ್ ಉಬ್ಬಿದ್ದೆ. ದೇಶ ಕಂಡ ಅತಿ ಹೀನ ಕೃತ್ಯಗಳಲ್ಲೊಂದನ್ನ ಬಗೆಹರಿಸೋ ಅವಕಾಶ ಸಿಕ್ರೆ ಅದನ್ನ ಬೇಡ ಅನ್ನೋಕಾಗತ್ತಾ? ಅದ್ರಿಂದ ಸಿಗೋ ಪ್ರಚಾರದ ಬಗ್ಗೆ ಒಂದ್ಸಲ ಯೋಚ್ನೆ ಮಾಡಿ, you will be treated as god for lifetime! ಜಾಸ್ತಿ ಯೋಚ್ನೆ ಮಾಡ್ದೇ "ಹ್ಞೂಂ" ಅಂದೆ. ಒಂದು NDA (Non Disclosure Agreement)ಗೆ ಸಹಿ ತಗೊಂಡ್ರು. ಅಂದ್ರೆ ಅವರು ಹೇಳಿದ್ದನ್ನ, ತನಿಖೆ ವೇಳೆ ಕಂಡುಕೊಂಡಿದ್ದನ್ನ ಯಾರಿಗೂ ಹೇಳ್ಬಾರ್ದು ಅನ್ನೋ ನಿಬಂಧನೆಗೆ ನನ್ನ ಸಹಮತವನ್ನ ಪಡೆಯಲಾಯ್ತು.

ಮೊದಲಿಗೆ ಪ್ರಶ್ನೆ ಕೇಳೋದು, ಉತ್ರ ಪಡೆಯೋದು ಸುಲಭದ ಕೆಲ್ಸ ಅಂದ್ಕೊಂಡೋನಿಗೆ ನಿಜವಾದ ಕಷ್ಟ ಮುಂದಿರೋದು ಅನ್ನೋ ತಿಳಿವಳಿಕೆ ಬರೋವಷ್ಟರಲ್ಲಿ ತಡವಾಗಿತ್ತು. ಎಂತ ಕಷ್ಟ ಅಂತ ಕೇಳಿದ್ರಾ? ಮುಂದೆ ಓದ್ತಾ ಗೊತ್ತಾಗತ್ತೆ ಬಿಡಿ. At least, you can guess I'm not dead! ನಿಮ್ಗೆ ಕತೆ ಹೇಳ್ತಿದೀನಲ್ವಾ ಇನ್ನೂ!

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ