ಆಗಸದ ತೂತು | ಸಂಚಿಕೆ‌ ೧೦ - ಮೈಸೂರ್ ಪಾಕು

 ಒದ್ದೊದ್ದೆ ಮೋಡಗಳು

ಮುತ್ತಿ ಮುತ್ತಿಡುವಾಗ
ಎಲ್ಲಿದ್ದೆ ನೀ ಹೊಟ್ಟೆಕಿಚ್ಚಿನವಳೆ

ಹನಿ ಬಿದ್ದ ಒಡಲಲ್ಲಿ
ಹೂ ನಗುವ ಹೊದ್ದಾಗ
ಎಲ್ಲಿದ್ದೆ ನೀ ಹಸಿರ ಮನದವಳೆ?

ಮೀಸೆ ಮೂಡಿದ ಪ್ರಾಯ
ಕನಸುಗಳ ಕೊಡುವಾಗ
ಎಲ್ಲಿದ್ದೆ ನೀ ಬನದ ಮೈಯವಳೆ?

"Wait, you wrote this? To whom?" ಗೋಪುಟ್ಟನ ಕತೆಗೆ ತಡೆಯೊಡ್ಡಿದ್ದೆ. ಪದ್ಯ ಬರೆವಷ್ಟು ಬರಗೆಟ್ಟ ಪ್ರೀತಿ ಅವನಲ್ಲಿದ್ದಿರಬಹುದೆಂಬ ಕಲ್ಪನೆಯೂ ಇದ್ದಿರಲಿಲ್ಲ.
------------------------------***---------------------------------
ಮತ್ತೆ ನಾನೆಂಗೆ ಇಂಟರಾಗೇಶನ್ ರೂಮಿಗೆ ಹೊಕ್ಕಿದೆ ಅನ್ನೋ ನಿಮ್ಮ ಪ್ರಶ್ನೆ ಉತ್ತರಿಸಿಯೇ ಮುಂದಿನ ಕತೆಗೆ ಹೋಗ್ತೇನೆ.

ಅಕ್ಟೋಬರ್ ೧೫, ೨೦೨೧; ರಾತ್ರಿ ೮ ಗಂಟೆ ಹೊತ್ತು. ಎಸ್‌ಪಿಯವರು ಕರೆ ಮಾಡಿ, "ಇಲ್ಲೇ ರೌಂಡ್ಸಿಗೆ ಬಂದಿದ್ದೆ, ನಿಮ್ಮ ಹೊಟೆಲ್ ಕಡೆ. ಒಂದಿಷ್ಟು ವಿಚಾರಗಳ ಬಗ್ಗೆ ಮಾತಾಡೋದಿತ್ತು, ಅಭ್ಯಂತರವಿಲ್ದಿದ್ರೆ ರೂಮಿಗೆ ಬರ್ಬೋದಾ?" ಅಂತ ಕೇಳ್ದಾಗ ವಾಪಸ್ ಚೆನ್ನೈಗೆ ಹೋಗೋಕೆ ತಯಾರಾಗ್ತಿದ್ದೆ. ತೊಂದ್ರೆ ಇಲ್ಲ, ಬನ್ನಿ ಅಂದ ೫ ನಿಮಿಷಕ್ಕೆ ರೂಮೆದುರಿಗೆ ಬಂದು ಬಾಗಿಲನ್ನು ತಮ್ಮ ತೋರುಬೆರಳಲ್ಲಿ ಮೂರು ಬಾರಿ ತಟ್ಟಿದ್ದರು.

"ಬನ್ನಿ, ಊಟ?" ಅಂದೆ, ಬಾಗಿಲು ತೆರೆದು ಅವರ ಮುಖ ದರ್ಶನವಾದಮೇಲೆ.

"ಇಲ್ಲ, ಇನ್ನೂ ಲೇಟ್ ಇದೆ. ನೀವ್ ಬೇಕಿದ್ರೆ ಊಟ ಆರ್ಡರ್ ಮಾಡಿ" ಅಂದ್ರು ಎಸ್‌ಪಿಯವ್ರು.

"ಪರ್ವಾಗಿಲ್ಲ, ನಾನು ಊಟ ಮಾಡೋದೂ ಹತ್ತು ಗಂಟೆಯ ನಂತ್ರಾನೇ. ಅಂದಂಗೆ ಏನೋ ಮಾತಾಡ್ಬೇಕು ಅಂದಿದ್ರಲ್ಲ?" ಪುರಸೊತ್ತಿರದವನಂತೆ ಮಾತನಾಡಿದ್ದೆ.

"ಕೇಸ್ ವಿಷಯವಾಗಿ ಮಾತಾಡೋದಿತ್ತು. ನೀವು ಇಂಟರಾಗೇಟ್ ಮಾಡಿದ ಫುಟೇಜನ್ನ ನಮ್ಮ ಪ್ರೊಫೈಲರ್ ಮತ್ತೆ ಬಿಹೇವಿಯರಲ್ ಸೈನ್ಸವ್ರು ನೋಡಿದ್ರು. They said you're good. ಗೋಪುಟ್ಟ ಅಟೆನ್ಶನ್‌ಗಾಗಿ ಕೆಲ ಕೃತ್ಯಗಳನ್ನ ಮಾಡಿದ, ಕತೆ ಕಟ್ಟಿದ ಅನ್ನೋದಕ್ಕೆ ಅವರ ಸಹಮತ ಕೂಡ ಇದೆ. Actually they are happy with your work.‌ ಆದ್ರೆ ನಮ್ಮ ಸುಪೀರಿಯರ್ಸ್‌ಗೆ ನಿಮ್ ಬಗ್ಗೆ ಅಷ್ಟಾಗಿ ಒಳ್ಳೆ ಅಭಿಪ್ರಾಯ ಇಲ್ಲ. ಒಂದು ಚಾನ್ಸ್ ಕೊಟ್ಟು ನೋಡೋಣ ಅಂತ ರಿಕ್ವೆಸ್ಟ್ ಮಾಡಿದೀನಿ. ಬೆಳಿಗ್ಗೆ ಹೇಳ್ತೇವೆ ಅಂದಿದಾರೆ. ನಂಗೆ ನಿಮ್ಮಿಂದ ಮತ್ತೊಂದಿಷ್ಟು ಹೆಲ್ಪ್ ಬೇಕಿತ್ತು. ಗೋಪುಟ್ಟನ ಸಹಚರರರಲ್ಲಿ ಯಾರ ಕಡೆ ಗೋಪುಟ್ಟನಿಗೆ ಹೆಚ್ಚು ಬಯಾಸ್ ಇದೆ ಅಂತ ಗೊತ್ತಾದ್ರೆ ಅವ್ನನ್ನ ಬೆಂಡ್ ಮಾಡೋಕೆ ಹೆಲ್ಪ್ ಆಗ್ತಿತ್ತು. ಅವ್ನ ಸಹಚರರ ಪ್ರೊಫೈಲ್‌ಗಳನ್ನ ತಂದಿದೀನಿ. If you don't mind..." ಅಂತ ಹದಿನೈದು ಸಣ್ಣ ಫೈಲ್ಗಳನ್ನ ನನ್ನ ಮುಂದಿಟ್ರು.

ಗೋಪುಟ್ಟನ ಫೈಲಿನಲ್ಲಿ ಅವನ ಸೈಕ್ ರಿವ್ಯೂ ಬಹಳ ದೀರ್ಘವಾಗಿತ್ತು. ಬಹಳಷ್ಟು ವಿವರಗಳು ನನ್ನ ಇಂಟರಾಗೇಶನ್ನಿನಿಂದ ತಿಳಿದುಬಂದ ಮಾಹಿತಿ ಅಂತ ಬರೆದಿದ್ದು ನನ್ನಲ್ಲಿ ಗರ್ವ ಮೂಡಿಸಿತ್ತು. ಆದರೆ ಅದಕ್ಕಿಂತ ಗಮನ ಸೆಳೆವ ಅಂಶ ಮೈಸೂರು ಪಾಕಿನ ಪ್ರೊಫೈಲಿನಲ್ಲಿತ್ತು.
Actually, the Mysore Pak was not Mysore Pak! ಹೊಸ ಹುಡುಗಿಯ ಫೊಟೋ ಅಂಟಿಸಿ ಮೈಸೂರು ಪಾಕಿನ ಹೆಸರು ಬರೆಯಲಾಗಿತ್ತು, ಮಲ್ಲಿಕಾ ಅಲಿಯಾಸ್ ಮೈಸೂರ್ ಪಾಕ್ ಅಂತ! ಮೊದಲ್ನೇದಾಗಿ ಆಕೆ ಮಲ್ಲಿಕಾ ಅಲ್ಲ. ಪೊಲೀಸರು ತಪ್ಪು ಮಾಡಿರಬಹುದು ಅಥ್ವಾ ಆರೋಪಿಗಳ ಐಡೆಂಟಿಟಿ ವಿಚಾರಿಸಿದಾಗ ಅವರು ಹೇಳಿದ್ದಿರಬಹುದು. ಆಕೆ ಮಲ್ಲಿಕಾ ಅಲ್ಲ ಅಂದ್ಮೇಲೆ ಮೈಸೂರ್ ಪಾಕ್ ಅವಳಲ್ಲ. ಇವಳು ಕ್ಲಬ್ಬನಲ್ಲಿ ಸಿಕ್ಕಿದ್ದ ಹೊಸ ಹುಡುಗಿ! ಈಕೆಯ ಹೆಸರು ನಂಗೆ ಗೊತ್ತಿಲ್ಲದಿದ್ರೂ ಮಲ್ಲಿಕಾ aka ಮೈಸೂರ್ ಪಾಕ್ ಪರಿಚಯವಿದೆ, ಆಕೆಯೊಂದಿಗೆ ಮಾತನಾಡಿದ್ದಿದೆ. ನಕ್ಕಾಗ ಕಣ್ಣು ಮುಚ್ಚೇಹೋಯ್ತೇನೋ ಎಂಬಷ್ಟು ಕಿರಿದಾಗುವ, ಹಳದಿ ಮಿಶ್ರಿತ ಬಿಳಿ ಕೆನ್ನೆಯ ನಾರ್ಥ್‌ಈಸ್ಟರ್ನ್ ಭಾರತೀಯ ಮಲ್ಲಿಕಾ ಇವಳಲ್ಲ. ಅದನ್ನೇ ಎಸ್‌ಪಿಯವರಿಗೆ ಹೇಳಿದ್ದೆ. ಅದಕ್ಕೆ ಪ್ರತಿಯಾಗಿ, ಮಾರನೇ ದಿನ ನಾನು ಮತ್ತೆ ಇಂಟರಾಗೇಶನ್ ರೂಮಿಗೆ ಎಂಟ್ರಿ ಪಡೆದಿದ್ದೆ. I was their only help to understand those murders.

ಮೊದಲಿಗೆ ತಾನು ಮೈಸೂರ್‌ ಪಾಕ್ ಎಂದು ಹೇಳಿಕೊಂಡೋಳ ಕೊಠಡಿಗೆ ನನ್ನ ಒಯ್ಯಲಾಯ್ತು. ಗೋಪುಟ್ಟ ತಾನು ಕೊಲೆ ಮಾಡಿಲ್ಲ ಅಂತ ಸ್ಟೇಟ್ಮೆಂಟ್ ಕೊಟ್ಟ ಅಂದಾಗ ಆಕೆ ಸಿಟ್ಟಾಗಿದ್ಳು.

"ಅವ್ನೇ ನಮ್ಮಲ್ಲಿ ಆಗಸದ ತೂತು ಅನ್ನೋ ನಂಬಿಕೆ ಹುಟ್ಸಿದ್ದು. ದೇವಿ ಆಗಸಕ್ಕೆ ತೂತು ಕೊರೀದಿದ್ರೆ ನಾವೇ ಆಗಸಕ್ಕೆ ತೂತು ಬೀಳೋ ಥರ ಮಾಡ್ಬೇಕು ಅಂದಿದ್ದು ಅವ್ನೇ. He was desperate to bring aagasada tootu. We did what he told us to do. He is the culprit as much we are." ಅಂತ ತನ್ನ ತಪ್ಪೊಪ್ಪಿಗೆಯನ್ನೂ, ಗೋಪುಟ್ಟನ ಮೇಲೆ ಆರೋಪವನ್ನೂ ಮಾಡಿದ್ಳು.

"ಭಟ್ರೇರಿ ಕುಟುಂಬಗಳ ಸರ್ವನಾಶ ಮಾಡಿ ಅಂತ ಗೋಪುಟ್ಟ ನಿಮ್ಗೆ ಆದೇಶ ಕೊಟ್ಟಿದ್ನಾ?" ಗೋಪುಟ್ಟನನ್ನು ಈ ಕೇಸಿಗೆ ಪಿನ್ ಮಾಡಲು ಹಾತೊರೆಯುತ್ತಿದ್ದವನಂತೆ ಪ್ರಶ್ನೆ ಕೇಳಿದ್ದೆ.

"Not exactly. ಆಗಸದ ತೂತು ಅದಾಗದೇ ಬೀಳ್ಲಿಲ್ಲ ಅಂದ್ರೆ ನಾವೇ ಬೀಳಿಸ್ಬೇಕು. ಹದಿಮೂರು ಮಂದಿ ಬಲಿ ಕೊಡ್ಬೇಕು. ಆರು ಮಂದೀನ ಭೂಮಿಯಲ್ಲಿ ಹುಗಿಬೇಕು, ಆರು ಮಂದಿ ನೀರಲ್ಲಿ ತೇಲ್ಬೇಕು. ಒಂದು ಮಗು ಆಗಸದತ್ತ ನೋಡ್ತಾ ಅಂತರಿಕ್ಷದಲ್ಲಿರ್ಬೇಕು ಅಂತ ಒಂದಿನ ಅಂದಿದ್ದಾ. ನಾವು ಆರು ತಿಂಗ್ಳು ಕಾದ್ವಿ, ಆಗಸದ ತೂತಿನ ನಿರೀಕ್ಷೆ ಹೆಚ್ಚಾಗ್ತಿತ್ತು. We were getting more frustrated. ದಿನ ಕಳ್ದಂಗೆ ನಮ್ಮ ರೇಶನ್ ಖಾಲಿಯಾಗ್ತಿತ್ತು. ಮನಾಲಿ ಬಿಟ್ಟಾಗ ನಮ್ ಜೊತೆ ಇದ್ದ ಮಾತ್ರೆಗಳನ್ನ ಬಿಟ್ಟು ಹೊಸ ಸಪ್ಲೈ ಇಲ್ವಾಗಿತ್ತು. ಆಗಸದ ತೂತು ಬರ್ಲಿಲ್ಲ ಅಂದ್ರೆ ಇನ್ನೊಂದ್ ವಾರ ಕೂಡ ಬದ್ಕೋಕಾಗ್ತಿರ್ಲಿಲ್ಲ. ಹಾಗಾಗಿ ಗೋಪುಟ್ಟನ ಸೂಚನೆಗೆ ಕಾಯ್ದೇ ಭಟ್ರೇರಿಯವ್ರನ್ನ ಕೊಲೆ ಮಾಡಿದ್ವಿ. ಈಗ ಅನಿಸ್ತಿದೆ, ಗೋಪುಟ್ಟನಿಗೆ ದೇವಿ ಸಂದೇಶ ಕೊಟ್ಟಿದ್ಳು, ಅವ್ನು ಹೇಳೋವರ್ಗೆ ನಾವು ಕಾಯ್ಬೇಕಿತ್ತು." ಕೆಲ ನಿಮಿಷಗಳ ಹಿಂದೆ ಕೊಟ್ಟಿದ್ದ ಸ್ಟೇಟ್ಮೆಂಟು ಲೆಕ್ಕಕ್ಕೇ ಇಲ್ಲವೆಂಬಂತೆ ಈಗ ಕೊಲೆಯ ಸಂಪೂರ್ಣ ಜವಾಬ್ದಾರಿಯನ್ನು ತಾನೇ ತಗೊಂಡ್ಳು ಹೊಸ ಮೈಸೂರ್ ಪಾಕು. ಗೋಪುಟ್ಟನಿಗೂ ಕ್ಲೀನ್ ಚಿಟ್ ನೀಡುವಂತಿತ್ತು ಹೊಸ ಸ್ಟೇಟ್ಮೆಂಟು.

"ನೀನು ಮಲ್ಲಿಕಾ aka ಮೈಸೂರ್ ಪಾಕ್ ಅಲ್ಲ. ಯಾಕೆ ಅವ್ಳ ಐಡೆಂಟಿಟಿ ಕದ್ದೆ? ಅವ್ಳೆಲ್ಲಿದಾಳೆ? ನಿಜ್ವಾಗೂ ನೀನ್ಯಾರು? ಗೋಪುಟ್ಟನ ಸಹವಾಸ ಹೇಗೆ ಶುರ್ವಾಯ್ತು?" ಈ ಬಾರಿ ನನ್ನ ಪ್ರಶ್ನೆ ಅವಳ ಗುರುತನ್ನು ಪ್ರಶ್ನಿಸಿತ್ತು.

"ನನ್ನ ಅಪ್ಪ, ಅಣ್ಣ ಮತ್ತೆ ನಾನು ಮನಾಲಿಯ ಹೊರ ಭಾಗದಲ್ಲಿ ಎಕ್ಸ್ಟಸಿ ಮಾತ್ರೆ ತಯಾರಿಸ್ತಿದ್ವಿ. ನಮ್ಗೆ ವರ್ಷಗಟ್ಲೆ ಹಳೆ ಕಸ್ಟಮರ್ಸ್ ಇದ್ರು. They were old school pushers. ಅಂಡರ್ ಏಜ್ ವ್ಯಕ್ತಿಗಳಿಗೆ ಮಾತ್ರೆ ಕೊಡ್ತಿರ್ಲಿಲ್ಲ, ದೊಡ್ಡ ಪಾರ್ಟಿಗಳಲ್ಲಿ ಮಾತ್ರೆಯನ್ನ ಮಿಸ್‌ಯೂಸ್ ಮಾಡ್ತಾರೆ ಅಂತ ಸಪ್ಲೈ ಮಾಡ್ತಿರ್ಲಿಲ್ಲ. ಮಾತ್ರೆಗಳ ಬೆಲೆ ಅಪ್ಡೇಟ್ ಆಗ್ದೇ ವರ್ಷಗಳೇ ಆಗಿದ್ವು. ನಂಗೆ ಬಿಜ್ನೆಸ್ಸನ್ನ ಬೆಳ್ಸೋ ಆಸೆಯಿತ್ತು. ಅಪ್ಪ ಮತ್ತೆ ಅಣ್ಣ ಅದಕ್ಕೆ ಅವಕಾಶ ಕೊಡ್ತಿರ್ಲಿಲ್ಲ. ಹೀಗೇ ಹೊಸ ಕಸ್ಟಮರ್ ಹುಡ್ಕೋವಾಗ ಸಿಕ್ದೋನು ಗೋಪುಟ್ಟ. He had his clan. ಅವ್ನ ಸಹಚರರಿಗೆ ತುಂಬಾ ಮಾತ್ರೆಗಳು ಬೇಕು ಅಂತಂದಿದ್ದ. ಅದ್ರ ಬಗ್ಗೆ ಮಾತಾಡೋಕೆ ಮನಾಲಿಯ ಕ್ಲಬ್ ಒಂದ್ರಲ್ಲಿ ಮೀಟ್ ಆದ್ವಿ. ಆವತ್ತೇ ಆಗಸದ ತೂತಿನ ಕತೆ ಅಂದಿದ್ದ. ಅದ್ರ ಬಗ್ಗೆ ಪ್ರತಿಯೊಂದು ವಿವರವನ್ನೂ ಹೇಳಿದ್ದ, ನಾನೂ ನಂಬಿದೆ. ಅದಾದ ಮೂರು ವಾರಗಳ ನಂತ್ರ ನನ್ ಫ್ಯಾಮಿಲಿಯ ಗೊಡೌನ್‌ ಲೂಟಿ ಮಾಡಿ ಎಂಬತ್ತು ಕೆಜಿ ಎಕ್ಸ್ಟಸಿ ಮಾತ್ರೆ ಜೊತೆ ಮನಾಲಿಯಿಂದ ದಕ್ಷಿಣಕ್ಕೆ ಬಂದ್ವಿ. ಗೋಪುಟ್ಟನ ಎಲ್ಲ ಸಹಚರರಿಗೂ ಒಂದೊಂದು ಹೊಸ ಹೆಸ್ರಿತ್ತು. ನಂಗೆ ಮಾತ್ರ ಯಾವತ್ತೂ ಅವ್ನು ಪುಟ್ಟಿ ಅಂತ ಕರೀತಿದ್ದ. ಒಂದಿನ ಮೈಸೂರ್ ಪಾಕ್ OD ಆಗಿ ಸತ್ತೋದ್ಳು. We couldn't save her." ಅನ್ನೋ ಹೊತ್ತಿಗೆ ಅವಳ ಕಣ್ಣಲ್ಲಿ ನೀರು ಬಂದಿತ್ತು.

ಇವಳು ಹೇಳಿದ್ದೆಲ್ಲ ಸತ್ಯವಿರ್ಬೋದಾ ಅನ್ನೋ ಡೌಟ್ ಬಂದಿತ್ತು. ಅದನ್ನ ಕ್ರಾಸ್ ಚೆಕ್ ಮಾಡೋಕೆ ಗೋಪುಟ್ಟನ ಇಂಟರಾಗೇಶನ್ ಮಾಡಬೇಕಾಯ್ತು. ಅಲ್ಲಿ ಮತ್ತೊಂದು ಕತೆಯೇ ಹುಟ್ಕೊಂಡಿತ್ತು.

"ಮಲ್ಲಿಕಾ ಡ್ರಗ್ ಓವರ್‌ಡೋಸ್ ಆಗಿ ಸತ್ಳಂತೆ ಹೌದಾ?" ನಾನು ಕೇಳ್ದಾಗ ಗೋಪುಟ್ಟ ಆಗಷ್ಟೇ ಇಂಟರಾಗೇಶನ್ ರೂಮಿಗೆ ಬಂದು ಕೂತಿದ್ದ. ಟೇಬಲ್ಲಿನ ಹುಕ್ಕಿಗೆ ಜೋಡಿಸಿಟ್ಟಿದ್ದ ಕೈಕೋಳವನ್ನು ನನ್ನ ಜೊತೆಯಿದ್ದ ಪಿಎಸ್‌ಐ ಗೋಪುಟ್ಟನ ಕೈಗಳಿಗೆ ಬಂಧಿಸ್ತಿದ್ದ. ಒಳಬರುವಾಗ ನಗುತ್ತಿದ್ದ ಗೋಪುಟ್ಟನ ಮುಖ ಪ್ರಶ್ನೆ ಕೇಳ್ತಿದ್ದಂತೆ ವಿಷಣ್ಣವಾಗಿತ್ತು.

"ನಿಮ್ ಕಸ್ಟಡೀಲೇ ಇದಾಳಲ್ಲ ಮಲ್ಲಿಕಾ, ಡ್ರಗ್ ಕೊಟ್ಟು ಸಾಯಿಸ್ಬಿಟ್ರಾ ರಾಕ್ಷಸರಾ?" ಅಂತ ರೌದ್ರನಾಗಿದ್ದ ಗೋಪುಟ್ಟ.

"ನಾಟ್ಕ ನಿಲ್ಸು ಗೋಪುಟ್ಟ, ಈಗಷ್ಟೇ ಹೊಸ ಹುಡ್ಗೀನ ಮಾತಾಡ್ಸಿ ಬಂದೆ. ಅವ್ಳೆಲ್ಲಾ ಹೇಳಿದ್ಳು, ನೀವು ಅವ್ಳ ಅಪ್ಪನ ಎಕ್ಸ್ಟಸಿ ಮಾತ್ರೆಗಳನ್ನ ಲೂಟಿ ಮಾಡಿದ್ದು, ಮನಾಲಿಯಿಂದ ಪಲಾಯನಗೈದಿದ್ದು, ಮೈಸೂರ್ ಪಾಕ್ OD ಆಗಿ ಸತ್ತಿದ್ದು, ಎಲ್ಲ ಹೇಳಿದಾಳೆ. ಅವ್ಳಾಗವ್ಳೇ ಅಷ್ಟು ಡ್ರಗ್ಸ್ ತಗೊಂಡು ಸತ್ಳಾ ಅಥ್ವಾ ನಿನ್ ಕತೆ ಮೇಲೆ ನಂಬಿಕೆ ಕಳ್ಕೊಂಡ್ಳು ಅಂತ ನೀವೇ ಸಾಯ್ಸಿದ್ದಾ?" ಗೋಪುಟ್ಟನ ಮೇಲೆ ಎಂತದೋ ಸಿಟ್ಟು ಇದ್ದವನಂತೆ ಪ್ರಶ್ನಿಸಿದ್ದೆ.

"ಇಲ್ಲ, ಅವ್ಳು ಯಾಕೆ ಅಷ್ಟೊಂದು ಮಾತ್ರೆ ತಗೊಂಡ್ಳು ಅಂತ ನಿರ್ದಿಷ್ಟವಾಗಿ ಗೊತ್ತಿಲ್ಲ. ಆದ್ರೆ ನನ್ನ ಆಪ್ತ ಮಂದಿಯ ಲಿಸ್ಟ್ ಮಾಡೋದಿದ್ರೆ ಅವ್ಳು ಟಾಪಲ್ಲಿರ್ತಿದ್ಳು. ಅವ್ಳನ್ನ ಕೊಲೆ ಮಾಡೋಕೆ ಯಾವ್ದೇ ಕಾರಣ ಇಲ್ಲ. ಬಹುಶಃ ಹೊಸ ಹುಡ್ಗಿ ನನ್ ಜೊತೆ ಕ್ಲೋಸ್ ಆಗ್ತಿದ್ದದ್ದು ಮೈಸೂರ್ ಪಾಕಿಗೆ ಇಷ್ಟವಾಗ್ಲಿಲ್ವೇನೋ. ನನ್ ಅಟೆನ್ಶನ್ ಪಡೆಯೋಕೆ ಜಾಸ್ತಿ ಮಾತ್ರೆ ತಗೊಂಡು ರಂಪಾಟ ಮಾಡೋ ಪ್ಲಾನ್ ಇತ್ತೇನೋ. ಅಥ್ವಾ she was just jealous. ಈಗ್ಲೂ ಆಗಿದ್ದನ್ನ ತಿದ್ದೋ ಅವಕಾಶ ನನ್ನತ್ರ ಇದ್ರೆ ಅವ್ಳ ಸಾವನ್ನ ತಿದ್ದೋಕಿಷ್ಟಪಡ್ತೀನಿ." ಅಂದ ಗೋಪುಟ್ಟ, he was genuinely sad.

"ನೀನು ಮತ್ತೆ ಹೊಸ ಹುಡ್ಗಿ ರಿಲೇಶನ್ಶಿಪ್ಪಲ್ಲಿ ಇದ್ರಾ?" ಈಗ ಜಲಸಿ ಪಾರ್ಟ್ ನಂದೇನೋ ಅನಿಸುವಂತಿತ್ತು ಪ್ರಶ್ನೆ.

"ಒದ್ದೊದ್ದೆ ಮೋಡಗಳು
ಮುತ್ತಿ ಮುತ್ತಿಡುವಾಗ
ಎಲ್ಲಿದ್ದೆ ನೀ ಹೊಟ್ಟೆಕಿಚ್ಚಿನವಳೆ

ಹನಿ ಬಿದ್ದ ಒಡಲಲ್ಲಿ
ಹೂ ನಗುವ ಹೊದ್ದಾಗ
ಎಲ್ಲಿದ್ದೆ ನೀ ಹಸಿರ ಮನದವಳೆ?

ಮೀಸೆ ಮೂಡಿದ ಪ್ರಾಯ
ಕನಸುಗಳ ಕೊಡುವಾಗ
ಎಲ್ಲಿದ್ದೆ ನೀ ಬನದ ಮೈಯವಳೆ?

"Wait, you wrote this? To whom?" ಗೋಪುಟ್ಟನ ಕತೆಗೆ ತಡೆಯೊಡ್ಡಿದ್ದೆ. ಪದ್ಯ ಬರೆವಷ್ಟು ಬರಗೆಟ್ಟ ಪ್ರೀತಿ ಅವನಲ್ಲಿದ್ದಿರಬಹುದೆಂಬ ಕಲ್ಪನೆಯೂ ಇದ್ದಿರಲಿಲ್ಲ.

"ಹೊಸ ಹುಡ್ಗಿಗೋಸ್ಕರ ಬರ್ದಿದ್ದಿದು. ಬಯಾಸ್ ನದಿಯ ತಂಪು ಬಂಡೆಗಳ ಮೇಲೆ ಕೂತು ಇದನ್ನ ಹಾಡ್ತಿದ್ದೆ ನಾನು. ಗುಲ್ಕನ್ ಗಿಟಾರ್ ಹಿಡಿದು ಅದ್ಯಾವುದೋ ಗಂಧರ್ವ ಸಂಗೀತ ನುಡಿಸ್ತಿದ್ದ. ಮೈಸೂರ್ ಪಾಕು ಮತ್ಯಾವುದೋ ತಂಪು ಬಂಡೆಯ ಮೇಲೆ ಕುಂತು ಸಿಗರೇಟು ಸೇದ್ತಿದ್ಳು. ನನ್ನೆದುರಿಗೆ ಕುಂತಿದ್ದ ಪುಟ್ಟಿ ಗಲ್ಲ ಕೆಳಗೆ ಬಿದ್ದೀತೆಂಬಂತೆ ತನ್ನ ಎಡಗೈಯನ್ನು ಗದ್ದಕ್ಕೆ ಸಪೋರ್ಟಾಗಿ ಕೊಟ್ಟು ಕೂತಿದ್ಳು. It was to her, every word meant to be her. ನನ್ನ ಜಗತ್ತಿಗೆ ಅತಿ ದೊಡ್ಡ ಕುತೂಹಲ ಅವ್ಳಾಗಿದ್ಳು. ನಾನು ಇಷ್ಟೆಲ್ಲ ಕಷ್ಟ ಪಡ್ತಿದ್ದಾಗ ಅವ್ಳೆಲ್ಲಿದ್ಳು ಅನ್ನೋದು ನನ್ನ ಬಹುದೊಡ್ಡ ಪ್ರಶ್ನೆಯಾಗಿತ್ತು." ಗೋಪುಟ್ಟ ತನ್ನ ಲವ್ ಸ್ಟೋರಿಯ ಮೂಲಕ ಅಷ್ಟೂ ಘಟನೆಗಳನ್ನು ಬಿಚ್ಚಿಡೋಕೆ ಶುರುಮಾಡಿದ.

ಉಳ್ದಿದ್ದೆಲ್ಲಾ ಮುಂದಿನ ಸಂಚಿಕೇಲಿ ಹೇಳ್ತೀನಿ, ಕೇಳ್ತೀರಲ್ವಾ?

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ