ಆಗಸದ ತೂತು | ಸಂಚಿಕೆ ೭ - ಹೊಳೆ ಬ್ಯಾಲೆ (೨)
ಓದುವ ಮುನ್ನ: ಈ ಸಂಚಿಕೆಯಲ್ಲಿ ಕೆಲ ಆಘಾತಕಾರಿ ವಿವರಣೆಗಳು ಮಾನಸಿಕವಾಗಿ ನೋವುಂಟುಮಾಡಬಹುದಾಗಿದೆ. ನೀವು ಭಾವುಕ ಜೀವಿಯಾಗಿದ್ದರೆ, ಹೃದಯ ಸಂಬಂಧೀ ಕಾಯಿಲೆಯುಳ್ಳವರಾಗಿದ್ದರೆ ಅಥವಾ ಬೇಗನೆ ಪ್ರಭಾವಕ್ಕೊಳಗಾಗುವ ಮನಸ್ಥಿತಿಯವರಾಗಿದ್ದರೆ ಖಂಡಿತ ಓದಬೇಡಿ. ಯಾರೇ ಓದಿದರೂ ಅದರಿಂದಾಗುವ ಪರಿಣಾಮಗಳಿಗೆ ನೀವೇ ಜವಾಬ್ದಾರರು ಹೊರತು ಬರೆಹಗಾರರಲ್ಲ. ದಯವಿಟ್ಟು ಓದಬೇಡಿ. ೨೦೨೧, ಅಕ್ಟೋಬರ್ ೧೪. ಆಫೀಸಿಗೆ ಹೋದರೂ ಕೆಲಸ ಮಾಡಲು ಉಮೇದಿಯಿಲ್ಲದೆ ಛೇಂಬರಿನಲ್ಲಿ ಕುಂತಿದ್ದೆ. ಮಧ್ಯಾಹ್ನ ಮೂರು ಗಂಟೆಯಿರಬಹುದು, ಗೆಳೆಯ, ಬಾಸು ಪ್ರಣವ್ ಬಂದು, "ಕರ್ನಾಟಕದ ಯಾವ್ದೋ ಎಸ್ಪಿ ಆಫೀಸಿಂದ ಕಾಲ್ ಬಂದಿತ್ತು. ನಿನ್ ಜೊತೆ ಮಾತಾಡ್ಬೇಕಂತೆ. ನೀನು ಹೊರ್ಗಡೆ ಹೋಗಿದೀಯಾ ಅಂತದೆ. You need to call him back" ಅಂತಂದು ಒಂದು ಚೀಟಿ ಕೈಗಿತ್ತ. ಕರ್ನಾಟಕದ ಲ್ಯಾಂಡ್ಲೈನ್ ನಂಬರದು, ಬೆಂಗಳೂರಿನ ಕೋಡ್ ಇತ್ತು. ಹದಿಮೂರು ಹೆಣಗಳ ಬಗ್ಗೆಯೇ ಆಗಿರ್ಬೇಕು. ಆದ್ರೆ ನಂಗೇನು ಸಂಬಂಧ? ಅಂತೊಂದು ಪ್ರಶ್ನೆ ಮೂಡಿದರೂ ಮಾಹಿತಿಯ ಕೊರತೆ ನಂಗೂ ಇದ್ದಿದ್ದರಿಂದ ಕಾಲು ಬಂದಿದ್ದ ನಂಬರನ್ನು ಮೊಬೈಲಿನಲ್ಲಿ ಡಯಲ್ ಮಾಡಿದೆ. ಛೇಂಬರಿನ ಅಷ್ಟೂ ಬಾಗಿಲು, ಕರ್ಟನ್ನುಗಳು ಮುಚ್ಚಿರುವುದನ್ನು ಖಾತರಿಪಡಿಸಿಕೊಂಡು ಟೇಬಲ್ಲಿಗೆ ಒರಗಿ ನಿಂತುಕೊಂಡೆ. ಅರ್ಧ ರಿಂಗಿಂಗ್ ಟೈಮು ಮುಗಿದಮೇಲೆ ಯಾವುದೋ ಆಪರೇಟರ್ ಕಾಲು ರಿಸೀವಿಸಿದ. ನೇರವಾಗಿ ಎಸ್ಪಿಯವರೇ ಲೈನಿಗೆ ಬಂದು ಮಾತಾಡಿದಾ...