Posts

ಅನಾಥಪ್ರಜ್ಞೆ

Image
ಕು ತ್ತಿಗೆಯ ನೆರಿಗೆಗಳನ್ನು ಲೆಕ್ಕ ಹಾಕಿದರೆ ಅರವತ್ತರ ಮೇಲೆ ದಾಟಬಹುದೇನೋ. ಅಜಮಾಸು ಅಷ್ಟೇ ವಯಸ್ಸಾದ ಅಜ್ಜಿಯವಳು. ಟಿವಿ ಕಪಾಟಿನ ಡ್ರಾವರಿಗೆ ಬೀಗ ಜಡಿದೂ ಮತ್ತೆ ಮತ್ತೆ ಭದ್ರತೆಯ ತಪಾಸಣೆ ಮಾಡುವಷ್ಟು ಅಭದ್ರತೆ ಅವಳನ್ನ ಕಾಡುತ್ತಿತ್ತು. ಅದರಲ್ಲಿ ಅಬ್ಬಬ್ಬಾ ಅಂದರೆ ಯಾವುದೋ ಕಾಲದ ತರಂಗವೋ, ಸುಧಾ ಮ್ಯಾಗಜೀನೋ ಇರಬಹುದಷ್ಟೇ! ಚಿಕ್ಕ ಚಿಕ್ಕ ವಸ್ತುಗಳೂ ತನಗೆ ನಿಽಯಷ್ಟೇ ಮುಖ್ಯ ಎಂಬಂತೆ ಜತನದಿಂದ ಕಾಯ್ದುಕೊಳ್ಳುವ ಅಭ್ಯಾಸ ಆಕೆಗೆ ಇತ್ತೀಚೆಗಷ್ಟೇ ಶುರುವಾದದ್ದು; ಇರದ ಮಕ್ಕಳನ್ನು ಇವಳಿಗೆ ಬಿಟ್ಟು ಗಂಡನೂ ಹರನ ಪಾದ ಸೇರಿದಾಗಿನಿಂದ... ಗಡಿಹನಿ ಹತ್ತುವ ವೇಳೆಗೆಲ್ಲ ಊರ ಉಳಿದ ಮಂದಿ ಬಾಳೆಹೆಡೆ ಮಾಡಿ ಅಡಿಕೆಗೊನೆಗಳಿಗೆ ತುತ್ತ-ಸುಣ್ಣವನ್ನೋ, ಬಯೋಪಾಯ್ಟನ್ನೋ ಹೊಡೆಯಲು ತಯಾರಾಗುತ್ತಿದ್ದರೆ ಸಾವಿತ್ರಜ್ಜಿ ಬೆಳೆಸಾಲಕ್ಕೆ ಅರ್ಜಿ ಹಾಕುವುದೂ ಬಗೆಹರಿಯದೆ, ಕೊನೆಗೌಡನ ಹುಡುಕಾಟವೂ ಕೊನೆಗಾಣದೆ ಹೇಡಿಗೆಯ ಮೇಲೆ ಕುಂತು ಸೆರಗಿನ ತುದಿಯಲ್ಲಿ ಗಾಳಿ ಬೀಸಿಕೊಳ್ಳುತ್ತಿದ್ದಳು. ಇಂಥ ದಿನಗಳು ಶುರುವಾಗಿದ್ದು ಎಲ್ಲಿಂದ? ಪ್ರಶ್ನೆಯಾಗಿ ನೆನಪುಗಳು ಬರುತ್ತಿದ್ದರೆ ಗಾಳಿ ಬೀಸುತ್ತಿದ್ದ ಸೆರಗೂ ನಿಷ್ಕ್ರಿಯವಾಗಿತ್ತು. ಮೊಗೆ ಓಳಿಗೆ ನೀರು ಹೊಯ್ಯಲು ಹೋಗಿದ್ದ ಮಗ ಥಿಮೇಟು ಕರಡಿ ಕುಡಿದಿದ್ದು, ಬಯಲುಸೀಮೆಯ ಸೊಸೆ ಮಲೆನಾಡ ಕೃಷಿ-ಬದುಕಿಗೆ ಒಗ್ಗದೇ ತನ್ನ ಮಗಳೊಟ್ಟಿಗೆ ತವರಿಗೆ ಹೋಗಿದ್ದು, ಇದ್ದೊಬ್ಬ ಗಂಡನೆಂಬ ಪ್ರಾಣಿ ಸಂಭಾವನೆಯ ಆಸೆಗೆ ಮನೆಯ ಜವಾಬ್ದಾರಿ ತೊರೆದು ಊರೂ...

ಕೈಗಾರಿಕಾ ಕ್ರಾಂತಿಯ ತೆಕ್ಕೆಯಲ್ಲಿ ಮಿಸುಕಾಡುವ ಕೃಷಿವಲಯದ ಸಾಧ್ಯತೆ

Image
ನಾ ವು ಆಗಾಗ ‘ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ’ ಅನ್ನೋ ಆರೋಪವನ್ನು ಕೇಳುತ್ತೇವೆ, ಮಾಡುತ್ತೇವೆ. ಆದರೆ ಈ ಆಧುನಿಕ ವೃದ್ಧಾಶ್ರಮಗಳ ನಿರ್ಮಾಣ ಹೇಗಾಯ್ತು ಅನ್ನುವ ಯೋಚನೆಗೆ ’ನಗರಗಳತ್ತ ಯುವಜನತೆಯ ವಲಸೆ’ ಎನ್ನುವ ಮೂರು ಪದಗಳ ಉತ್ತರವನ್ನು ನೀಡಿ ಸುಮ್ಮನಾಗುತ್ತಿದ್ದೇವಷ್ಟೆ. ಇದರ ಮೂಲ ಮತ್ತು ಪರಿಣಾಮ ನಮ್ಮ ಮೇಲ್ಮಟ್ಟದ ಊಹೆಗಳಲ್ಲಿ ಮೂಡದೇ ಉಳಿದುಬಿಡುತ್ತವೆ. ೧೯೬೦ರ ದಶಕದಲ್ಲಿ ಕೃಷಿ ಕ್ರಾಂತಿ ಎನ್ನುವ ಕ್ರಾಂತಿಯೊಂದಕ್ಕೆ ಭಾರತ ತನ್ನನ್ನ ದೂಡಿಕೊಂಡಿತಾದರೂ ಅದಕ್ಕೂ ಮೊದಲೇ, ಅಂದರೆ ಸ್ವಾತಂತ್ರ್ಯದ ಹೊತ್ತಿಗೆಲ್ಲಾ ಕೈಗಾರಿಕಾ ಕ್ರಾಂತಿಯೆಂಬುದರ ಮೂಲಕ ಹೊಸ ಉದ್ಯೋಗಗಳನ್ನು ತಯಾರಿಸಲಾಗಿತ್ತು. ಅದಕ್ಕೆ ಕನಿಷ್ಠ ವಿದ್ಯಾರ್ಹತೆ, ಕೌಶಲಗಳ ಮಾನದಂಡ ಆ ಕಾಲಕ್ಕೆ ನಿಗದಿಯಾಗದಿದ್ದರೂ ಕೌಶಲದ ಅವಶ್ಯಕತೆ ಇದ್ದೇ ಇತ್ತು. ನಾವು ಆರೋಪಿಸುವ ಮೆಕಾಲೆ ಶಿಕ್ಷಣ ಪದ್ಧತಿ ಅದಾಗಲೇ ರೂಢಿಯಲ್ಲಿದ್ದುದಲ್ಲದೆ ಅದರ ಅವಶ್ಯಕತೆಯನ್ನೂ ಸೃಷ್ಟಿಸಲಾಯ್ತು. ಇವೆಲ್ಲ ಸ್ವಾತಂತ್ರ್ಯೋತ್ತರ ಭಾರತವನ್ನು ಬಲಿಷ್ಠಗೊಳಿಸಲು ಅವಶ್ಯವೆಂಬ ನಂಬಿಕೆ ನಮ್ಮಲ್ಲಿ ಮೂಡಿದ್ದು ಬಹುಶಃ ೭೦-೮೦ರ ದಶಕದ ಸುಮಾರಿಗೆ. ಆರ್ಥಿಕತೆಯ ಜಾಗತಿಕ ಸ್ಥಾನಮಾನಗಳ ಸಂಪಾದನೆಗೋಸ್ಕರ ಭಾರತದ ಸರ್ಕಾರಗಳು ನಗರ ಸೃಷ್ಟಿಗೆ, ನಗರಗಳ ಆರ್ಥಿಕ ಸಾಬಲ್ಯಕ್ಕೆ, ಕೈಗಾರಿಕಾ ವಸಾಹತುಗಳ ಸಾಬಲ್ಯಕ್ಕೆ ಹಲವು ಯೋಜನೆಗಳನ್ನು ತಂದ ಪರಿಣಾಮವೇ ಈಗಿನ ಹಳ್ಳಿಗಳ ಸ್ಥಿತಿ. ಕಡಿಮೆ ಕೂಲಿದರಕ್ಕಾಗಿ ಹಳ್ಳಿಗರತ್ತ ದೃಷ್ಟಿ! ನಗರಗ...

ಪತ್ತೆದಾರಿ ಕತೆ

      ನಾ ನು ಮೊದಲಿಂದಲೂ ಅಷ್ಟೇ, ತೀರಾ ಶೆರ್ಲಾಕ್ ಹೋಮ್ಸ್‌ನಷ್ಟಲ್ಲದಿದ್ದರೂ ಒಂದು ರೇಂಜಿಗೆ ಬೆಶ್ಟ್ ಪತ್ತೇದಾರ. ಸಣ್ಣಕಿದ್ದಾಗಲೇ ನಮ್ಮ ತೋಟದ ಮಂಡಗಾಲುವೆ ಬದಿಯ ಬಕ್ಕೇಮರಕ್ಕೆ ಬೆಳೆದಿದ್ದ ಬಕ್ಕೆ ಹಣ್ಣು ಕಾಣೆಯಾದಾಗ ನನ್ನ ಚಾಣಾಕ್ಷತನದಿಂದ ಕಳ್ಳನನ್ನು ಹಿಡಿದಿದ್ದೆ. ಹೆಂಗೆ ಅಂತೀರಾ? ಹೇಳಿದರೂ ನಿಮಗೆ ತಿಳಿಯಲಿಕ್ಕಿಲ್ಲ ಬಿಡಿ. ಹೋದ ತಿಂಗಳು ನಡೆದ ಕೊಲೆಯ ಆರೋಪಿಯನ್ನು ಪತ್ತೆ ಹಚ್ಚಿದ ಮೇಲಂತೂ ನನ್ನ ಪ್ರೊಫೆಶನನ್ನೇ ಬದಲಾಯಿಸಿ ಪೂರ್ಣಾವಧಿ ಪತ್ತೇದಾರಿಕೆ ಮಾಡಬೇಕೆಂದು ತೀರ್ಮಾನಿಸಿದ್ದೇನೆ. ಅದಕ್ಕೂ ಮೊದಲು ನಡೆದದ್ದೇನು ಅಂತ ಹೇಳಿ ನಿಮ್ಮ ಅಭಿಪ್ರಾಯವನ್ನೂ ಕೇಳೋಣ ಅಂದುಕೊಂಡೆ. (ನಿಮ್ಮ ಅಭಿಪ್ರಾಯ ನನ್ನ ತೀರ್ಮಾನವನ್ನು ಬದಲಾಯಿಸಲಾರದು. ನನ್ ಬದುಕು, ನನ್ ರೂಲ್ಸು. ಕೇಳೋಕ್ ನೀವ್ಯಾರು) ನಮ್ಮೂರು ಮೆರವಣಿಗೆ ಪಕ್ಕದ ಹಳ್ಳಿ. ಜಗತ್ತಿನಲ್ಲಿ ನಡೆವ ಎಲ್ಲಾ ಥರದ ಘಟನೆಗಳೂ ಮೆರವಣಿಗೆಯಲ್ಲಿ ನಡೀತವೆ. ಅದಕ್ಕೇ ಆ ಊರು ನಿಮಗೆ ಗೊತ್ತಿರಬಹುದು. ನಮ್ಮೂರು ಅಗ್ದಿ ಶಾಂತ, ಸೌಮ್ಯ, ಸಹಬಾಳ್ವೆಯ ಮಂದಿ ಬದುಕೋ ಊರು. ಹೊಳೆಗೆ ಬ್ರಿಜ್ ಇಲ್ಲ, ರಸ್ತೆಯಿಲ್ಲ. ಆದರೂ ಇಪ್ಪತ್ತಿಪ್ಪತ್ತೈದು ವರ್ಷದಿಂದ ವೋಟು ಒತ್ತಿದ್ದು ಮಾತ್ರ ಒಬ್ಬರಿಗೇ. ಕಾರಣ ಗೊತ್ತಲ್ಲ, ಆತ ಯಾರಿಗೂ ಕೆಟ್ಟದು ಮಾಡದ ಗೋವಿನಂಥಾ ಮನ್ಷ ಅಂತ. ನೋಡಿ, ಪತ್ತೇದಾರಿ ಕತೆ ಹೇಳೋನಿಗೆ ರಾಜಕೀಯ ಬೇರೆ ನೆನ್ಪಾಯ್ತು. ಅಲ್ಲ, ಯಾಕೆ ಆ ವಿಷ್ಯ ಬಂತು ಅಂದ್ರೆ, ನಮ್ಮೂರಿನ ಮಂದಿ ಅಗ್ದಿ...

ಕುಂಟಣೆ

Image
ನಿಮಗೆ ಮೆರವಣಿಗೆ ಊರು ಗೊತ್ತಿರಬಹುದು. ಗೊತ್ತಿಲ್ಲವೆ? ಮೆರವಣಿಗೆ ರಾಮಣ್ಣ, ಮೆರವಣಿಗೆ ವೇದಕ್ಕ? ಛೆ, ನಿಮಗೆ ಮೆರವಣಿಗೆ ಬಗ್ಗೆ ಸ್ವಲ್ಪವಾದ್ರೂ ಗೊತ್ತಿರಲೇಬೇಕು. ಇತ್ತೀಚೆಗೆ ಭರ್ತಿ ಸುದ್ದಿಯಲ್ಲಿದ್ದ ಊರೇ ಗೊತ್ತಿಲ್ಲವೆಂದ್ರೆ ನೀವು ನ್ಯೂಸ್ ಚಾನಲ್‌ಗಳಲ್ಲಿ ಕೊರೊನಾ ಕಾಮೆಂಟರಿ ಮಾತ್ರ ಕೇಳ್ತಿದ್ರಿ ಅನ್ಸತ್ತೆ. ಇರ್ಲಿ ಬಿಡಿ, ಮೆರವಣಿಗೆ ಅನ್ನೋದು ಮಲೆನಾಡಿನ ಒಂದೂರು. ಇತ್ತೀಚೆಗೆ ಒಂದೆರ್ಡು ಸಾವುಗಳಿಂದ ಇಡೀ ಮಲೆನಾಡ ಭಾಗಕ್ಕೇ ಫುಲ್ ಫೇಮಸ್ ಆಗಿತ್ತು. ನೋಡಿ, ಬೇರೆ ಏನೋ ಹೇಳೋಕೆ ಬಂದೋನಿಗೆ ಮೆರವಣಿಗೆ ಬಗ್ಗೆ ಹೇಳೋ ಹಂಗಾಗಿದ್ದು ವಿಪರ್ಯಾಸವಲ್ವೆ? ಅಷ್ಟೇನು ದೊಡ್ಡದಲ್ಲದ, ಚಿಕ್ಕದೂ ಅಲ್ಲದ ಊರದು. ಪಶ್ಚಿಮ ಘಟ್ಟದ ಎರಡನೇ ಹಂತದ ಗುಡ್ಡಗಳಡಿಗೆ ಸ್ಥಾಪಿತ ಪ್ರದೇಶ. ಹಸಿರು ಗುಡ್ಡಗಳ ಮಧ್ಯೆ ಅಡಿಕೆ ತೋಟ, ಭತ್ತದ ಗದ್ದೆ ಸರಗಳನ್ನು ಸುತ್ತಲೂ ಹಚ್ಚಿಕೊಂಡಿರೋ ಊರನ್ನ ನೋಡೋಕೆ ಒಮ್ಮೆಯಾದ್ರೂ ನೀವು ಹೋಗಲೇಬೇಕು. ಎಂಥ ಚೆಂದ ಉಂಟು ಗೊತ್ತುಂಟಾ! ಅಂಥ ಊರು ಸಿನಿಮಾ ಮಂದಿಯ ಕಣ್ಣಿಗೂ ಬಿದ್ದು ಶೂಟಿಂಗಿಗೆ ಅಂತಲೂ ಬಂದಿದ್ರಂತೆ. ಆದ್ರೆ ಅಲ್ಲಿಯ ಮಳೆಗೆ, ಮಣ್ಣು ರಸ್ತೆಗೆ, ಅಡಿಕೆ ಮುಂಡಿಯ ಸಾರಕ್ಕೆ ಶೂಟಿಂಗು ಅಂದ್ರೆಂತ ಪರಿಚಿತವಾ? ಸರೀ ಹಿಡ್ಕೊಂಡು ಕೊಟ್ಟ ಮಳೆಗೆ ಶೂಟಿಂಗೂ ಆಗ್ದೇ, ಬಂದ ಯುನಿಟ್ಟು ಮಂದಿ ವಾಪಾಸು ಹೋಗುವಾಗ ಟಿಟಿ ಗಾಲಿಗಳು ಎರಡಡಿ ಹೂಳಲ್ಲಿ ಹುಗಿದು ಬಿದ್ದು ಒದ್ದಾಡಿದ್ದೂ ಆಯ್ತಂತೆ. ಮತ್ತೆ ಈಬದಿಗೆ ಮುಖ ಹಾಕಲ್ಲ ಅಂತ ದೊಡ್ಡ ಮಂದಿಯೆಲ್...

ಪದ್ಯದಂಗಡಿ ಮತ್ತು ಅಕ್ಷರ ಮಾರಾಟ

ಪದ್ಯದಂಗಡಿ, ಹೇಗೆ ಶುರುವಾಯ್ತು, ಯಾವಾಗ ಶುರುವಾಯ್ತು, ಯಾರಿಂದ ಶುರುವಾಯ್ತು..? ಹಿಂಗಿದ್ದೊಂದು ಪ್ರಶ್ನೆ ನಿಮ್ಮಲ್ಲನೇಕರಲ್ಲಿ ಮೂಡಿರಬಹುದು.  ballistic missile ಅವರಂತೂ ದೀರ್ಘ ಬರೆಹವೊಂದನ್ನೇ ಬರೆದುಬಿಟ್ಟಿದ್ದಾರೆ. We are not supposed to hide our identity. ಸ್ವಲ್ಪವಾದರೂ ಬೆಂಬಲಿಗರು ಸಿಗಲಿ, ಆಮೇಲೆ ನಮ್ಮ ವಿವರಗಳನ್ನ ಬಹಿರಂಗಪಡಿಸೋಣ ಅಂತಲೇ ಸುಮ್ಮನಿದ್ದೆವು. ಅಷ್ಟರಲ್ಲಿ ಏನೇನೋ ಚರ್ಚೆಗಳು ನಡೆದವು, ಏಕಮುಖ ಜಗಳಗಳೂ ನಡೆದವು. ಪದ್ಯದಂಗಡಿಯ ಓನರ್ರುಗಳು ಯಾರಂತ ತಿಳಿಯೋ ಮೊದಲೇ ಪದ್ಯದಂಗಡಿಯ ಭಾಗವೊಂದು ದೂರವಾಯ್ತು. ಹೊಸದೊಂದು ಶುರುವಾದಂತೆ ಪರ-ವಿರೋಧ ಚರ್ಚೆಗಳು ಸಾಮಾನ್ಯ. Unconventional ಅಥವಾ ಅಸಾಂಪ್ರದಾಯಿಕ ಯೋಚನೆಗಳಿಗೆ ಪರ ವಹಿಸುವವರಿಗಿಂತ ವಿರೋಧಿಗಳ ಸಂಖ್ಯೆ ಬೇಗ ಬೆಳೆಯುತ್ತದೆ. ಸದಾ ಎತ್ತಿನಗಾಡಿಯನ್ನೇ ಅವಲಂಬಿಸಿ ಪ್ರಯಾಣ ಮಾಡುತ್ತಿದ್ದವರಿಗೆ ಏಕ್ದಂ ಉಗಿಬಂಡಿ ಕಂಡು ಭಯ ಹುಟ್ಟಲಿಲ್ಲವೇ? ಹಾಗೇ ಪದ್ಯದಂಗಡಿಯ ಅಸಾಂಪ್ರದಾಯಿಕ (ಕ್ರಾಂತಿಕರಿ ಅನ್ನಲಾರೆ, ಕಾರಣ ಮುಂದಿದೆ) ಬರೆವಣಿಗೆ ಮಾರಾಟಗಾರರನ್ನು ಕಂಡು ಬರೀ ಪುಸ್ತಕಗಳಿಗಷ್ಟೇ ಒಗ್ಗಿಕೊಂಡಿದ್ದ, ಹೆಚ್ಚೆಂದರೆ ಬ್ಲಾಗುಗಳಲ್ಲಿ ಪುಕ್ಕಟೆಯಾಗಿ ದೊರಕುತ್ತಿದ್ದ 'ಪ್ರವರ್ಧಮಾನ'ಕ್ಕೆ ಬರುತ್ತಿರುವ ಬರೆಹಗಳಗೆ ಒಗ್ಗಿಕೊಂಡಿದ್ದ ಮನಸ್ಸುಗಳು ಬಂಡೆದ್ದವು. ಇದು ನಮಗೂ ಗೊತ್ತಿತ್ತು. ಪ್ರತಿರೋಧಗಳು ಸ್ವಲ್ಪವಾದರೂ ಚರ್ಚಿಸುವ ಮನಸ್ಥಿತಿಯವರಿಂದ ಬರಬಹುದೆಂಬ ನಿ...

ಉಂಬಳ

Image
      ಸಣ್ಣಕಿದ್ದಾಗ ಕಂಡಿದ್ದಷ್ಟೇ ಭಯಂಕರ ಮಳೆಗಾಲವದು. ಮನೆಗೂ ತೋಟಕ್ಕೂ ಮಧ್ಯದ ಹಳ್ಳ ದಾಟಲು ಕಟ್ಟಿಕೊಂಡಿದ್ದ ಬ್ರಿಜ್ಜು ತೇಲಿಹೋಗುವಷ್ಟು ಮಳೆ ಬಂದಿತ್ತು ಅಂದ್ರೆ ಭಯಂಕರ ಅಂತಲೇ ಉದ್ಗಾರ ಹೊರಬರೋದು. ಅಂಥ ಭರ್ಜರಿ ಮಳೆಗಾಲದ ದಿನ ಮಂಜು ನಮ್ಮನೆಯತ್ತ ಬರುತ್ತಿದ್ದುದು ಟಾರಸಿಯ ಮೇಲೆ ಆರಾಮು ಕುರ್ಚಿ ಹಾಕಿ ಕುಂತಿದ್ದ ನಂಗೆ ಕಂಡಿತು. ದೂರದಿಂದಲೇ, ಬರುತ್ತಿರುವ ಮನುಷ್ಯ ಮಂಜು ಎಂದು ಗುರುತು ಹಿಡಿಯಬಲ್ಲ ರೂಪು ಅವನದ್ದು. ಮೊಣಕಾಲನ್ನು ಹೌದೋ ಅಲ್ಲವೋ ಎನ್ನುವಷ್ಟು ಮಾತ್ರ ಮಡಚಿ ನಡೆಯುವ ನಡಿಗೆಯ ಶೈಲಿಯೂ ಅವನಿಗಷ್ಟೇ ಒಲಿದ ಕಲೆಯಂತೆ ಅನಿಸೋದುಂಟು. ಉದ್ದ ದಂಟಿನ ಕಮಲಕಡ್ಡಿ ಕೊಡೆಯನ್ನು ಅದೆಲ್ಲಿಂದ ಹುಡುಕಿ ಕೊಂಡುಕೊಳ್ಳುತ್ತಾನೋ ಗೊತ್ತಿಲ್ಲ, ಬಟನ್ ಛತ್ರಿಗಳ ಕಾಲದಲ್ಲಿ ನನ್ನಂಥವರಿಗೆ nostalgia ಹುಟ್ಟಿಸುವಷ್ಟು ಟಿಪಿಕಲ್ ಆಸಾಮಿ ಈ ಮಂಜು. ಇಂಥ ಮಳೆಯಲ್ಲಿ ಹೊಳೆ ಹೆಂಗೆ ದಾಟಿದನೋ ಎಂಬ ಕುತೂಹಲದ ಸಂತಿಗೇ ಈಗ ಬರೋ ಅರ್ಜೆಂಟು ಏನಿತ್ತು ಅನ್ನೋ ಪ್ರಶ್ನೆಯೊಂದು ಮೂಡಿತ್ತು. ನಮ್ಮನೆಯತ್ತ ಬಂದವನ ನಡುಗೆ ನಿಧಾನವಾಗಿತ್ತು. ನಮ್ಮನೆಯತ್ತ ತಿರುಗುವ ಕಾಲುಹಾದಿಯಲ್ಲಿ ಮೂರೋ- ನಾಲ್ಕೋ ಹೆಜ್ಜೆಯಿಟ್ಟವ ದಾರಿ ಬದಲಿಸಿಬಿಟ್ಟ! ಬಹುಶಃ ನನ್ನನ್ನು ಗಮನಿಸಲಿಲ್ಲವೇನೋ. ಸ್ಟ್ಯಾಂಡು ಹುಗಿಯುತ್ತದೆಂದು ಬೈಕನ್ನು ಶೆಡ್‌ನಲ್ಲಿ ಇಡದೇ ಅಂಗಳದೊಳಕ್ಕೆ ತಂದು ಇಟ್ಟಿದ್ದೆ. ಬಹುಶಃ ಬೈಕು ಕಾಣದೇ ನಾನು ಮನೆಯಲ್ಲಿಲ್ಲ ಅಂದುಕೊಂಡು ಹೊಂಟನೇನೋ ಎಂದು...

ವಿದಾಯ...

Image
ಅಧೂರಿ ಆಂಸ್ ಚೋಡ್‌ಕೆ ಅಧೂರಿ ಪ್ಯಾಸ್ ಚೋಡ್‌ಕೆ ಮೇ ರೋಜ್ ಯೂಹೀಂ ಜಾವೂಂಗಿ ತೋ ಕಿಸ್ ತರಹ್ ನಿಭಾವೋಗೆ ಯೇ ಜಿಂದಗೀಕಿ ರಾಹ್ ಮೇಂ ಜವಾಂ ದಿಲೋಂಕಿ ಚಾಹ್ ಮೇಂ ಕಯೀಂ ಮಕಾಮ್ ಆಯೆಂಗೆ ಜೋ ಹಮ್ ಕೊ ಆಜಮಾಯೇಂಗೆ ಬೂರಾ ನಾ ಮಾನೋ ಬಾತ್‌ಕಾ ಯೇ ಪ್ಯಾರ್ ಹೆ ಗಿಲಾ ನಹೀಂ... ಅಭೀ ನಾ ಜಾವೋ ಚೋಡ್ ಕರ್ ಕೆ ದಿಲ್ ಅಭೀ ಭರಾ ನಹೀಂ... ಇಂಥದ್ದೊಂದು ಅಗ್ದಿ ಇಷ್ಟವಾಗೋ ಹಾಡು ಕನ್ನಡದಲ್ಲಿ ಅದ್ಯಾಕೆ ಕೇಳಿಲ್ಲವೋ ನಾನು. ಇಷ್ಟು ಆಪ್ತವಾಗುವ ಭಾವನೆ, ಶಬ್ದಗಳು ಬರೀ ನನಗಾಗೇ ಬರೆದದ್ದಾ ಅನಿಸುವಷ್ಟು ಹತ್ತಿರವಾಗಿವೆ.. ಅವಳನ್ನ ಮೊದಲಬಾರಿ ಭೆಟ್ಟಿಯಾದಗಲೂ ಅಷ್ಟೇ ಅಲ್ಲವೆ? ಮೊದಲ ಬಾರಿ ಮಾತ್ರವಲ್ಲ, ಪ್ರತಿಬಾರಿಯೂ ಹೋಗ್ಬೇಡ ಅಂತ ಗೋಗರೆದು ಮಳ್ಳಾ ಅಂತ ಬೈಸ್ಕೊಳೋದು ಖಾಯಮ್ಮಾಗಿತ್ತು. ಅಷ್ಟು ಅಮಲು ಅವಳಲ್ಲಿತ್ತಾ ಅಥವಾ ನಮ್ಮ ಪ್ರೇಮದಲ್ಲಿತ್ತಾ? ಗೊತ್ತಿಲ್ಲ. ನಾವು ಭೆಟ್ಟಿಯಾದ ಮುನಿಸಿಪಾಲ್ಟಿ ಲೈಬ್ರರಿಯ ಬಾಗಿಲೂ ದಿಕ್ಕುತಪ್ಪಿದೆ ಈಗ‌. ಅಲ್ಲಿಗೆ ಪ್ರತಿಬಾರಿ ಹೋದಾಗ್ಲೂ ಗೋಣಿ ಚೀಲದಲ್ಲಿ ತುಂಬಿ ತರುವಷ್ಟು ನೆನಪುಗಳಿರತ್ವೆ. ಊರಿಗೆ ಹೋದಾಗೆಲ್ಲ ಆ ಫ್ರೆಶ್ಶು ನೆನಪುಗಳಿಗಾಗಿ ಗ್ರಂಥಾಲಯ ಹೊಕ್ಕುವ ಮನಸ್ಸಾಗತ್ತೆ. ಯೇ ಜಿಂದಗೀಕಿ ರಾಹ್ ಮೆ, ಕಯೀಂ ಮಕಾಮ್ ಆಯೆಂಗೆ... ಮತ್ತವಳ ಸಂಪರ್ಕ ಬೆಳ್ಯತ್ತೆ ಅಂತಾಗ್ಲಿ, ಅಷ್ಟೇ ಆತ್ಮೀಯತೆಯಿಂದ ಮಾತಾಡ್ತೇನೆ ಅಂತಾಗ್ಲೀ ಊಹೆಯೂ ಇರ್ಲಿಲ್ಲ. Love can happen twice ಅನ್ನೋದು ಹಳೆ ಅನುಭ...