Posts

ಗಿಲ್ಟು ಪುರಾಣ

ಲೈಫು ತುಂಬಾ ದೊಡ್ದು ಅಂತ ತಿಳ್ಕೊಂಡು ಬೇಕಾಬಿಟ್ಟಿ ಬದುಕ್ತಾ ಇರೋ ಸಿಕ್ಕಾಪಟೆ ಕಮ್ಮಿ ಜನ್ರಲ್ಲಿ ನಾನೂ ಒಬ್ಬ. ಒಂದ್ ಡಿಗ್ರೀನ ಮುಗಿಸೋ ಹೊತ್ತಿಗೆ ಭರ್ತಿ ಇಪ್ಪತ್ತೈದು ವರ್ಷ ಖಾಲಿಯಾಗಿತ್ತು, ಅಷ್ಟ್ರಲ್ಲಿ ನನ್ ಜೊತೆ ಕಲೀತಿದ್ದೋರೆಲ್ಲ ಮಾಸ್ಟರ್ ಡಿಗ್ರಿ ಮಾಡ್ಕೊಂಡು ಐದಾರು ಸೊನ್ನೆ ಹಿಂದೆ ಒಂದ್ ಅಂಕಿ ಸಂಬ್ಳ ಲೆಕ್ಕ ಮಾಡ್ತಿದ್ರು. ಹಿಂಗೆ ಆರಾಮಾಗಿ ಬದ್ಕಿ ಏನ್ ಕಡ್ದು ಕಟ್ಟೆ ಹಾಕಿದ್ನೋ ಇಲ್ವೋ, ಲೆಕ್ಕ ಮಾಡಿದ್ರೆ ಕೈಬೆರಳು ಸಾಕಾಗೋವಷ್ಟು ಗಿಲ್ಟ್ ಇದೆ, ಬಹುಶಃ ಈ ನನ್ನ ಹಳೆ ಕ್ಲಾಸ್‌ಮೇಟ್‌ಗಳದ್ದು ಅವರ ಸಂಬಳದಷ್ಟೇ ದೊಡ್ಡ ಲೆಕ್ಕವಾಗ್ಬೋದು. ಹಿಂಗಾಗಿ ನಾನು ಗ್ರೇಟು, ನೀವ್ ನಂಬ್‌ಬೇಕು. ಹಿಂಗೇ ಹೊತ್ತೋಗ್ದಿದ್ದಾಗ ನನ್ ಗಿಲ್ಟ್‌ಗಳನ್ನ ನೆನ್ಪ್ ಮಾಡ್ಕೊಂಡು ಫ್ರೆಶ್ ಆಗ್ತೀನಿ. ಅಪ್ಪಿತಪ್ಪಿ ಕೂಡ ಲೆಕ್ಕಕ್ಕೆ ಸಾಕಾಗ್ದಿರೋ ವಿಫಲ ಪ್ರೇಮಗಳನ್ನ ಹೇಳಿ ಬೋರ್ ಹೊಡೆಸಲ್ಲ, ಇದು ನನ್ ಲವ್ಕತೆ ಅಲ್ವೇ ಅಲ್ಲ. ಈಗ ನಗ್ಬೋದು ನೀವು, ಖುಷಿ ಆಗಿರ್ಬೇಕಲ್ಲ? ಗಿಲ್ಟ್ ನಂಬರ್ ಒಂದು, ಲಿಮಿಟೇಶನ್ಸ್ ಅನ್ಲಿಮಿಟೆಡ್: ಮೊದಲ್ನೇ ಸಲ ಡಿಗ್ರಿಗೆ ಸೇರ್ಕೊಂಡಾಗ ಅಷ್ಟೂ ಸಬ್ಜೆಕ್ಟ್ಸ್ ಕ್ಲಿಯರ್ ಇರೋ ಕ್ಯಾಟಗರೀಲಿ ಒಂದ್ವರ್ಷ ಬದ್ಕಿ ಬೇಜಾರ್ ಬಂತು. ಹಿಂಗೆ ಲೆಕ್ಕ ಮಾಡಿದ್ರೆ ಲೆಕ್ಕಾಚಾರ ನೆಟ್ಗಿರತ್ತೆ ಅಂತ ಹೇಳ್ಕೊಡೋ ಬಿ.ಕಾಂ. ಪ್ರತಿ ಕ್ಲಾಸೂ ಒಂದೇ ಥರ ಇರ್ತಿತ್ತು, ಸಿ ಕ್ಲಾಸ್ ಗಂಡ್ಮಕ್ಳ ಬೇಕಾಬಿಟ್ಟಿ ಲೈಫು ಆಕರ್ಷಣೆಯಾಗಿತ್ತು. ಆಕರ್ಷಣೆ ಗುಟಖಾ ತಿನ್ನೋ...

ನಾಯಿಮಳ್ಳ

ಮೊದಲು ನಾಯಿ ಮಳ್ಳ ಬಂದ. ಹೆಗಲಿಗೊಂದು ಜೋಳಿಗೆ, ಅದರಲ್ಲೊಂದು ನಾಯಿಮರಿ. ನರಪೇತಲ ನಾಯಿಯೊಂದು ಅವನ ಹಿಂದೆ. ಅದರ ಸಂಗಾತಿ ಮತ್ತೊಂದು ನಾಯಿ; ಕತ್ತಿಗೆ ಕಟ್ಟಿಸಿಕೊಂಡಿದ್ದ ಒಂದಂಗುಲ ದಪ್ಪದ ಸರಪಳಿಯ ಮತ್ತೊಂದು ತುದಿ ನಾಯಿಮಳ್ಳನ ಕೈಯಲ್ಲಿತ್ತು. "ಒಂದ್ ಕೆಂಪೀ ಹೆಣ್ ಕುನ್ನಿ ಒಂದ್ ಹೆಂಗ್ಸಿನ ಸಂತಿಗೆ ಬಂದಿತ್ತು. ಹೊಳೆ ಬುಡ್ಕೆ ಕಂಡಿತ್ತು. ಅದ್ಯಾರ್ ನಾಯೀನ್ರಾ? " ಅಂತ ಕೇಳಿದಾಗ ಅದು ಮಡಿವಾಳರ ಕೇರಿ ಚಂದ್ರನದ್ದೆಂದೂ, ಅವನ ಹೆಂಡತಿ ತಾರಾಳೊಟ್ಟಿಗೆ ಗದ್ದೆ ಕಡೆ ಬಂದಿತ್ತೆಂದೂ ಹೇಳಿದೆ. "ಚಂದ್ರನ ಮನೆ ಎಲ್ಲಿ?" ಎಂದು ಕೇಳಿದ್ದ. ಹಿಂಗೇ ಬೆಟ್ಟದ ಕೆಳಗೆ ಹಾವು ಹರಿದಂತೆ ಹೋಗಿರೋ ಕಾಲುಹಾದಿಯಲ್ಲಿ ನೆಟ್ಟಗೆ ಹೋದಾಗ ಸಿಗೋ ಮೂರನೇ ಮನೆಯೆಂದು ಹೇಳಿ ನನ್ನ ಬೈಕನ್ನು ತೊಳೆಯೋ ಕೆಲಸ ಮುಂದುವರಿಸಿದ್ದೆ.      ಮಾರನೇ ದಿನ ವಾಪಸ್ಸು ಕೆಲಸಕ್ಕೆ ಹಾಜರಿರಬೇಕಿತ್ತು. ಸಂಜೆ ಮನೆಗೆ ಬರೋವರೆಗೆ ದನಗಳಿಗೆ ತಿನ್ನಲು ಬೇಕಲ್ಲ, ಹೊಳೆಬದಿಯ ಹಾಳು ಗದ್ದೆಗೆ ಹೋಗಿ ಹಸಿ ಹುಲ್ಲು ಸವರುತ್ತಿದ್ದೆ. ಹುಲ್ಲು ಸವರುತ್ತಿದ್ದವನಿಗೆ ಈ ನಾಯಿ ಮಳ್ಳನದ್ದೇ ಯೋಚನೆ. ಭಯಂಕರ ಲವಲವಿಕೆಯ ಮನುಷ್ಯ. ಅದ್ಯಾಕೆ ಈ ಮಳ್ಳ ಮಳ್ಳನಾದನೋ ಗೊತ್ತಿಲ್ಲ, ಗೊತ್ತು ಮಾಡಿಕೊಳ್ಳುವ ಜರೂರತ್ತು ಇದೆ ಅನ್ನಿಸಿತು. ನಾನೂ ಶರತ್‌ಚಂದ್ರರ ದೇವದಾಸ್ ಓದಿದ್ದೆ. ಪಾರೋ ಸಿಗದೇ ನಾಯಿಗಳನ್ನೇ ಪತ್ನಿಯರಂತೆ ಸಾಕೋ ಕ್ಯಾರೆಕ್ಟರ್ರು ಪರಿಚಯವಿತ್ತು. ನಮ್ಮೂರಿನಲ್ಲೇ ತನಗೆ ನಟಿ ಮಂಜು...

ಮುಳ್ಳಂದಿ ಅಂಬು ಮತ್ತು ಎಂಟು ತಿಂಗಳು

“ಇಲ್ಲಿಯ ಅಡಿಕೆಗೊನೆಗಳಿಗೆ ಚೌಡೇಶ್ವರಿಯ ಕಾವಲಿದೆ. ತೋಟದ ತುದಿಯ ವಾಟೆಮಟ್ಟಿಗೆ ಹೊಕ್ಕಿದ ಹೆಂಗಸರಿಗೆ ಯಾವ ಕಾವಲೂ ಇಲ್ಲ." ಹೀಗೆ ಎರಡು ವಾಕ್ಯಗಳನ್ನು ಓದಿಸುತ್ತಿತ್ತು ಆ ತಂತಿ ಬೇಲಿಯ ಅಂಚಿನ ಅಡಿಕೆ ಮರಕ್ಕೆ ತೂಗುಬಿಟ್ಟಿದ್ದ ಒಂದು ಚದರಡಿಯ ಬೋರ್ಡು. ರಾಮ ಎದುರುಸಿರು ಬಿಟ್ಟುಕೊಂಡು ಬಂದಾಗ ವಿಷಯದ ಗಾಂಭೀರ್ಯತೆ ಇಷ್ಟಿರಬಹುದು ಎಂಬ ನಿರೀಕ್ಷೆಯಿದ್ದಿರಲಿಲ್ಲ. ಒಂದು ಉದ್ದನೆಯ ಉಸಿರ ಒಳಗೆಳೆದು ಬಿಟ್ಟ ಮಂಜ್ನಾಥ ಹೆಗಡೆ. ಹಿಂದೆಯೇ “ಅದ್ರಜ್ಜಿಕುಟಾ" ಎಂಬ ಉದ್ಗಾರ, ತುಸು ಕೋಪದಿಂದೆಂಬಂತೆ. ‘ಗಂಗಾ...’ ಸೊಪ್ಪಿನ ಬೆಟ್ಟದಲ್ಲಿ ರಾಮನ ಕೂಗು ಮೊಳಗಿದಾಗ ಕರೆಯ ಉದ್ದೇಶ ಸ್ಪಷ್ಟವಾಗಿತ್ತು. ಉದ್ದ ತೋಳಿನ ಗಂಡಸರ ಅಂಗಿ, ಸೊಂಟಕ್ಕೊಂದು ಸವಕಲು ಟುವಾಲು ಸುತ್ತುಕೊಂಡಿದ್ದ ಕಪ್ಪುಗಂಗಳ ಗಂಗಾ ನೀರಿನ ಉಗ್ಗ ಇಟ್ಟಿದ್ದ ಹೊನ್ನೆಮರದ ಬುಡದತ್ತ ಹೊಂಟಳು. ಮರದ ಹೆಣೆಗಳ ಜೊತೆ ಕತ್ತಿಗಳ ಗುದ್ದಾಟದ ಸದ್ದು ಆಲಿಸಿ, ಹಿಂಬಾಲಿಸಿ ರಾಮ ಬೆಟ್ಟ ತಲುಪಿದ್ದ. “ಹಗೀರ್ ಮನಿ ಕೆಲ್ಸನೂ ಸಾಕು, ಕಿತ್ರಾಬಿದ್ ಓಡೂದೂ ಸಾಕು", ರಾಮ ಗೊಣಗಿಕೊಂಡ. “ಎಂತಕ್ಕೆ ಕರ್ದೆ?" ಗಂಗಾಳ ನೇರ ಪ್ರಶ್ನೆ, ಹಾಯಗದ ಎಲೆಗೆ ಬಳಿದಿದ್ದ ಬೆಲ್ಲವ ಖಾಲಿ ಮಾಡುತ್ತಾ ಹೊರಬಂತು. “ಮಂಜ್ನಾತೆಗ್ಡ್ರು ಕರೀತವ್ರೆ, ಬ್ಯಾಗ್ ಬರೂಕಂದ್ರು", ರಾಮ ಬಂದ ಕೆಲಸ ಮುಗಿಸಿದ. “ಈಗಾಗೂದಿಲ್ಲಾ, ಭಟ್ರ್ ಸೊಪ್ ಕಡಿಬೋಕು" ಅಂದು ಗಂಡಾಳುಗಳು ಮರಹತ್ತಿ ಕಡಿದು ಕೆಡಗಿದ್ದ ಭಾ...

ಸೌಂಡು

ಎದೆಯ ಕದವ ಯಾರೋ ಬಡಿದಂತೆ ಸೌಂಡು. ಯಾರಿದ್ದೀರಾ ಎಂಬ ದನಿ, ಮತ್ತೆ ಬಡಿದಂತೇ ಸೌಂಡು. ಬಾಗಿಲಲಿ ನಿಂತವರಾರು? ಅದು ಅವಳೇ ಇರಬೇಕು, ಅಷ್ಟುದ್ದ ಕೇಶ ಯಾರಿಗಿದೆ! ಮತ್ತೆ ಸೌಂಡು. ಇಲ್ಲೇನು ಕೆಲಸ? ಕನಸ ಕೊಲೆ ಮಾಡಿದ ಸಾಕ್ಷಿ ನಾಷಕೆ ಬಂದಳೇ, ಕೊಲೆ ಮಾಡಿದ ಸಂತೋಷ ಕೂಟಕೋ? ಮತ್ತೆ ಸೌಂಡು, ಟಕ್ ಟಕ್... ಚಿಲಕ ತೆಗೆದ ಶಬ್ಧ, ಒಳಗೇ ಬಂದಳು! ಟಕ್ ಟಕ್ ಚಪ್ಪಲಿಯ ಸದ್ದು, ಚಪ್ಪಲಿ ಬಿಚ್ಚಿಟ್ಟು ಬಾ ಅನ್ನಲೇ? ಅಂದರೆ ಆಹ್ವಾನ ಕೊಟ್ಟಂತೆ! ಟಕ್ ಟಕ್ ಸೌಂಡು ಅರೆ ಶಬ್ಧ ಮಾಯ! ಎದೆಯ ಮಾಂಸಲದಲ್ಲಿ ಚಪ್ಪಲಿಯ ಮುಳ್ಳು ಚುಚ್ಚಿರಬೇಕು! ನನ್ನದೇ ಎದೆ, ಆದರೂ ನೋವಿಲ್ಲ! ಎದೆಯ ಜಗುಲಿಯಲ್ಲಿ ಸೌಂಡು, ಕೊಲೆಯ ಕಲೆ ಅಳಿಸಿದ ಸೌಂಡು, ನೆನಪು ಸಾಕ್ಷಿ ನಾಷಕ, ಬದುಕ ವಿನಾಷಕ! ಪ್ರೀತಿ ವಿದೂಷಕ.

ಬೆಂಗ್ಳೂರು

"ಇದು ಬೆಂಗ್ಳೂರು ಅಪ್ಪಾ, ಇಲ್ಲಿ ಉತ್ಪಾದನೆಯಷ್ಟೇ ಆಗುತ್ತೆ ಸೃಷ್ಠಿಯಲ್ಲ" ಅಣ್ಣನ ಮದುವೆಯಾಗಿ ಮೂರುವರ್ಷವೇ ಕಳೆದರೂ ಮಕ್ಕಳಾಗದ್ದರ ಬಗ್ಗೆ ಅಪ್ಪನ ಜಿಜ್ಞಾಸೆಗೆ ಅಣ್ಣನ ಉತ್ತರ ಸೂಚ್ಯವಾಗಿ ಪೇಟೆಯ ಬದುಕಿನೆಡೆಗಿನ ತಾತ್ಸಾರವನ್ನು ಸೂಚಿಸುತ್ತಿತ್ತು. ಅಣ್ಣ ಮಾಡಿದ ಮ್ಯಾನೇಜ್ಮೆಂಟ್ ಮಾಸ್ಟರ್ ಪದವಿಗೆ ದಿನಕ್ಕೆ ಬರೀ ಹದಿನಾರು ಘಂಟೆಗಳಷ್ಟೇ ಕೆಲಸಮಾಡುವ ನೌಕರಿ ಸಿಕ್ಕಿತ್ತು ಅನ್ನೋದು ಇತಿಹಾಸ. ಅಣ್ಣನಿಗೋ ಮನೆಕಡೆ ತೋಟಗಳ ಮಧ್ಯೆ ಬದುಕೋದೇ ಇಷ್ಟವಾಗಿತ್ತು. ಆದರೆ ಅಪ್ಪನಿಗೋ ತನ್ನ ಮಗ ತಿಂಗಳಿಗೆ ಐದಂಕಿಯ ಸಂಬಳ ಪಡೆಯುವ ಉದ್ಯೋಗಿ ಎಂಬ ಜಂಭವೇ ಇಷ್ಟವಾಗಿತ್ತು. ಅವನಿಷ್ಟದಂತೇ ಎಂ.ಬಿ.ಎ ಮುಗಿಸಿ ಬೆಂಗಳೂರೆಂಬ ಬದುಕ ಕಾರ್ಖಾನೆಯಲ್ಲಿ ಪ್ರತಿಷ್ಠಾಪಿತನಾದ. ಅಪ್ಪನಿಗೂ ವಯಸ್ಸಾಯಿತು, ಸಮಯ ಕಳೆದಂತೆ ಆಸೆಗಳು ಬದಲಾಗುತ್ತವಂತೆ, ಈಗ ಅಪ್ಪನಿಗೆ ಮೊಮ್ಮಕ್ಕಳ ಬಳಿ ತನ್ನ ಮೀಸೆ ಎಳೆಸಿಕೊಳ್ಳೋ ಹಂಬಲ. ಇತಿಹಾಸ ಆಸೆಗಳಂತೆ ಬದಲಾಗುವುದಿಲ್ಲ ಎಂಬ ಅನುಭವ ಅಪ್ಪನಲ್ಲಿ ನಿರಾಸೆ ಮೂಡಿಸಿದೆ. ಒಂದು ಪಡೆಬೇಕೆದರೆ ಒಂದನ್ನು ಕಳೆದುಕೊಳ್ಳಲೇಬೇಕು ಅಲ್ವಾ...

ಮಾಯಾ!

ಅವಳು ಇದ್ದಕ್ಕಿದ್ದಂಕೇ ಮಾಯವಾದವಳು, ಇದ್ದಕ್ಕಿದ್ದಂತೇ ಪ್ರತ್ಯಕ್ಷವಾದವಳು! ಅವಳಾಗೇ ಬಿಟ್ಟು ಹೋದಾಗ ಅಯ್ಯೋ ಹೋದಳಲ್ಲಾ ಎಂಬ ನೋವಿಗಿಂತಾ ಎಲ್ಲಿ ಹೋದಳು ಅನ್ನೋ ಚಿಂತೇನೇ ಜಾಸ್ತಿಯಾಗಿತ್ತು. ಅವಳು ವಾಪಸ್ಸು ಬಂದಾಗ ಎರಡು ಸುಧೀರ್ಘ ವಸಂತಗಳು ಉರುಳಿದ್ದವು. ಆ ವಸಂತಗಳಲ್ಲಿ ಅದೆಷ್ಟೋ ಘಟನೆಗಳ ನಡುವೆ ಅವಳ ನೆನಪು ವಿಶ್ರಾಂತಿ ತೆಗೆದುಕೊಂಡಿತ್ತು. ಈಬಾರಿ ಅವಳ ಕಥೆ ಕೇಳುವ ಮನಸ್ಸು ನನ್ನದಾಗಿರ್ಲಿಲ್ಲ. ಬದುಕು ಅವಳ ಪಾವಿತ್ರ್ಯವನ್ನು ಶಂಕಿಸಿತ್ತು. ಒಳ್ಳೆಯತನ ಅನ್ನೋದು ತೀರಾ ಆಪ್ತರಿಗೆ ಅಪಥ್ಯ. ಅವಳು ಜಗತ್ತಿನ ಎಲ್ಲಾ ಒಳ್ಳೆಯತನವನ್ನ ನನ್ನಲ್ಲಿ ನಿರೀಕ್ಷಿಸಿ ಎದುರಿಗೆ ನಿಂತದ್ದು ಕಾಣುತ್ತಿತ್ತು. ನನ್ನೆಲ್ಲಾ ಪ್ರಶ್ನೆಗಳನ್ನು ಮಾನವೀಯತೆಯ ಮುಖವಾಡದಲ್ಲಿ ಅಡಗಿಸಿಟ್ಟು ಅವಳನ್ನು ಸ್ವಾಗತಿಸಿದೆ.ಎಂದಿಗೂ ಆ ಎರಡು ವರ್ಷದ ಅವಳ ಬದುಕನ್ನು ಪ್ರಶ್ನಿಸಲೇ ಇಲ್ಲ...

ರಿಪ್ಲೈ

ಅನಾಮತ್ತು ನೂರೈವತ್ತು ಬಾರಿ ಮೆಸೇಜಿಸಿದ್ರೂ ಆಕಡೆಯಿಂದ ರಿಪ್ಲೈ ಬರದಿರೋದ ನೋಡಿ ಅವಳ ಮನೆ ಕಡೆಯೇ ಹೊರಟ. ಎರಡು ದಿನಗಳಿಂದ ಪತ್ತೆಯೇ ಇಲ್ರಾ ಏನು ಕಥೆ ಎಂದು ದಬಾಯಿಸಿ ತನಗೆ ಅವಳ ಮೇಲಿರೋ ಮಮಕಾರವನ್ನ ಷೋ ಮಾಡಬೇಕು, ಅದನ್ನು ಕಂಡು ಆಕೆ ಇವನ ಪ್ರೀತಿಯಲ್ಲಿ ಮುಳುಗಬೇಕು ಅನ್ನೋ ಆಸೆ ಆತನದ್ದಾಗಿತ್ತು ಅನ್ಸುತ್ತೆ. ಮದ್ಯ ದಾರಿಯಲ್ಲೇ ಆಕೆ ಸಿಕ್ಕಿಬಿಟ್ಲು! "ನಂಗೇಕೆ ರಿಪ್ಲೈ ಮಾಡ್ತಿಲ್ಯಾ? ಏನಾದ್ರೂ ತಪ್ಪಾಯ್ತಾ?" ಅಂತಾ ಕೇಳಿಯೂಬಿಟ್ಟ. "ಬಾ ಪೋಲಿಸ್ ಸ್ಟೇಷನ್ನಿಗೆ ಹೋಗೋಣ" ಅಂದ್ಲು. ಇದೇನಪ್ಪಾ ಗ್ರಹಚಾರ, ಯಾರಾದ್ರೂ ಮಾಡ್ಬಾರ್ದನ್ನ ಮಾಡ್ಬಿಟ್ರಾ? ಮೊದಲೇ ಬೆಂಗ್ಳೂರು ಅತ್ಯಾಚಾರದ ನಗರವಾಗೋಗಿದೆ. ಪುಣ್ಯ ಇನ್ನೂ ಪ್ರಪೋಸ್ ಮಾಡಿಲ್ಲ, ಬೇರೆ ಯಾರ್ನಾದ್ರೂ ಹುಡ್ಕೊಳ್ಬೇಕು ಅಂತ ಯೋಚನೆ ಮಾಡೋ ಹೊತ್ತಿಗೆ ಪೋಲಿಸ್ ಸ್ಟೇಷನ್ ಹತ್ತಿರ ಬಂದಿತ್ತು. ಆಕೆ ಒಳಗೆ ಹೋದೋಳೇ ಒಬ್ಬ ಕಾನ್ಸ್ಟೇಬಲ್ ಹತ್ರಾ ಅಂದ್ಲು, "ಸಾರ್ ನನ್ನ ಮೊಬೇಲ್ ಸಿಕ್ತು ಅಂತಾ ಹಾಸ್ಟೇಲಿಗೆ ಫೋನ್ ಬಂದಿತ್ತು..."