Posts

ಆತ್ಮಗಮನೆ

         ಕುಮಟಾ, ಅಂಥಾ ದೂರದೂರೇನಲ್ಲ ನನ್ನೂರಿಂದ. ಅಂಥಾ ಪ್ರೇಕ್ಷಣೀಯ ಪಟ್ಟಣವಾಗ್ಲೀ, ಆಕರ್ಷಕ ನಗರವಾಗ್ಲೀ ಅಲ್ಲ. ಆದರೆ, ನಂಗೊಂಥರಾ ಸೆಳೆತ ಆ ಊರೆಂದರೆ‌. ಪ್ರತೀಬಾರಿ ಹೋದಾಗಲೂ ಒಂಥರಾ ರಿಪ್ರೆಷ್ಷಾಗಿ ಬರ್ತೀನಿ, ಇಲ್ಲೆಲ್ಲೋ ಕಳೆದು ಹೋದ ನಾನು ಅಲ್ಲೆಲ್ಲಿಂದಲೋ ಪತ್ತೆಯಾಗುವ ಕ್ರಿಯೆಯೇ ಕುಮಟಾ ಆಗಿರ್ಬೋದು.         ಸಖತ್ತ್ ಬೋರಿಂಗ್ ಲೀಡ್ ಅಲ್ವಾ? ಇರ್ಲಿ ಬಿಡಿ‌. ನಂಗೆ ಕುಮಟಾ ಪೇಟೆಗಿಂತಾ ಶಿರಸಿಯಿಂದ ಕುಮಟಾವನ್ನ ಸೇರಿಸೋ ರಸ್ತೆ, ಆ ಪಯಣವೇ ಇಷ್ಟ‌.‌‌‌‌ ಹಿಂಗಂದ್ರೆ ಹಿಂಗೇ ನಿಶ್ಚಲ ನಾನು ಚಲಿಸೋಕೆ ಶುರು ಮಾಡ್ತೀನಿ. ಅಮ್ಮೀನಳ್ಳಿ ಗೊತ್ತಾ ನಿಮಗೆ? ಅಲ್ಲೇ, ಚೂರು ಒಳಗಡೆ ನನ್ನ ಅಮ್ಮನ ತವರೂರಿದೆ. ಇತ್ತು, ನನ್ನ ಸೋದರಮಾವಂದಿರೆಲ್ಲಾ ಹಿಸೆಯಾಗಿ ಪಟ್ಟಣ ಸೇರುವುದರೊಂದಿಗೆ ಇಲ್ಲವಾಯ್ತು‌. ಅಜ್ಜಿಯ ಮೊದಲ ತಿಥಿಯೇ ಅಲ್ಲಿಗೆ ನನ್ನ ಕೊನೇ ಭೇಟಿಯಾಗಿತ್ತು, ಏಳೆಂಟು ವರ್ಷಗಳ ಹಿಂದಿನ ಮಾತದು ಈಗ್ಯಾಕೆ ಬಿಡಿ. ಹಾ, ಕುಮಟಾ ರಸ್ತೆ ಇಷ್ಟವಾಗೋದು ಇಂಥದೇ ಮರೆತು ಹೋದ ನನ್ನವರ ನೆನಪಿಂದ‌. ಮೊದಲ ಹುಡುಗಿಯ ತವರೂ ಆ ಕಡೆಗೇ ಅನ್ನೋದು ನೆನಪಾದರೂ ಮರೆಯಬಲ್ಲ ವಿಷಯ.           ಆಗೆಲ್ಲಾ ನಾನು ಬಿ.ಕಾಂ‌. ಓದುತ್ತಿದ್ದ ಸಮಯ. ವೆಂಕ,ನಂದು, ರವಿ ಮತ್ತೆ ನಾನು ಮೂಡು ಬಂತೆಂದ್ರೆ ಹಂಗೇ ಗಾಡಿ ಹತ್ತಿ ಉಂಚಳ್ಳಿ ಫಾಲ್ಸಿಗೋ, ಬೆಣ್ಣೆ ಫಾಲ್ಸಿಗೋ ಹೋಗುತ್ತಿದ್ದದುಂಟು. ಈ...

ನರ್ಸಜ್ಜನ 'ಖತ್ರಿ'

                                   ನಾನು ದಿನಾ ಬಸ್ಸಲ್ಲಿ ಹೋಗ್ಬೇಕಾದ್ರೆ, ರುದ್ರಮೂಲೆಯನ್ನೋ ಆ ಊರ ಒಂಟಿಮನೆ,ಮನೆಯ ಮುಂದಿನ ಅಂಗಡಿ, ಅಂಗಡಿಯ ಮುಂದೆ ಬಸ್ಸನ್ನು ನೋಡ್ತಾ ನಿಂತ್ಕೊಳ್ಳೋ ಆ ಅಜ್ಜ ತುಂಬಾನೇ ಕುತೂಹಲ ಹುಟ್ಟಿಸೋ ಆಕೃತಿಗಳಾಗಿದ್ವು. ಊರು ಬಿಟ್ಟು ಬಂದ್ಮೇಲೆ ಆ ದಾರಿಯಲ್ಲಿ ಹೋಗಿದ್ದೇ ಕಡಿಮೆಯಾಗಿ ಅವೆಲ್ಲಾ ಮೆದುಳಿನ ಸುರುಳಿಗಳ ಮಧ್ಯೆ ಅಜೀರ್ಣವಾಗಿ ನೆನಪಾಗದಂತೇ ಉಳಿದುಬಿಟ್ಟಿದ್ವು. ಅದ್ಯಾವತ್ತೋ ಯಾರದೋ ಬಾಯಿಯಲ್ಲಿ ಆ 'ಖತ್ರಿ ಅಂಗಡಿ'ಯ ಕಥೆಯಂತಾ ಸುದ್ದಿ ಕೇಳೋವರೆಗೂ.       ನರ್ಸಜ್ಜ,ಅಂಥದ್ದೇ ಎಂಥದೋ ಹೆಸರು ಆ ಅಜ್ಜಂದು ಸರಿಯಾಗಿ ಜ್ಞಾಪಕವಿಲ್ಲ. ಯಾರೂ ಸುಳಿಯದ ಆ ಮೂಲೆಯಲ್ಲಿ ಅದೇಕೆ ಅಂಗಡಿಯಿಟ್ಟಿದ್ನೋ, ಅದೊಂದು ನಿಗೂಢವೇ ಸೈ. ಆಗ್ಲೇ ಎಪ್ಪತ್ತರ ಹತ್ತಿರದ ಪ್ರಾಯ. ಅಂಗಡಿಯ ಖಾಲಿಯಾಗದ ಸಾಮಾನುಗಳ ಅವಧಿ ಮುಗಿದ ನಂತರ ಅಂಗಡಿಯನ್ನ ಅದೆಂಗೆ ತುಂಬಿಡ್ತಿದ್ನೋ, ಅದು ಮತ್ತೊಂದು ನಿಗೂಢ. ಆತ ಬಸ್ಸಿಗೆ ಬಂದದ್ದಂತೂ ನಾನು ನೋಡಿಲ್ಲ. ಅಂತಾ ನರ್ಸಜ್ಜನ ಖತ್ರಿ ಅಂಗಡಿಯು ಈಗಲೂ ಇದೆ. ಗೋಡೆಯಿದೆ,ಬಾಗಿಲಿಲ್ಲ. ರೀಪು-ಪಕಾಸುಗಳ ಒಪ್ಪವಾದ ಅಲಂಕಾರವಿದೆ, ಛಾವಣಿಯಿಲ್ಲ. ಆ ಅಜ್ಜ?        ಎರಡು ವರ್ಷಗಳ ಹಿಂದಂತೆ,             ಯಾವತ...

ಹಂಡ್ಗೆಡುಕ

            ಮಕ್ಕಳಿಗೆಲ್ಲಾ ಕೈತುಂಬ ಕೆಲಸ. ಅದ್ಯಾಕೋ ಊರ ಕಡೆಯ ಸೆಳೆತ ಜಾಸ್ತಿಯಾಗಿತ್ತು,ಇತ್ತೀಚೆಗೆ. ಇತ್ತೀಚೆಗೆ ಅಂದ್ರೆ ಮೊನ್ನೆಯಿಂದ, ಹೊತ್ತು ಖಾಲೀ ಮಲಗಿದ್ದಾಗ ಎಚ್ಚರಿಸಿ ಕಂಡ ಆ ಚಿತ್ರದಿಂದ.      ಜಾಸ್ತಿ ದಿನ ತಡೆದುಕೊಳ್ಳೋಕೆ ಆಗಲಿಲ್ಲ. ಬಿಟ್ಟು ಬಂದಿದ್ದ ಅದೇ ಹಳೆ ಊರಿಗೆ, ರಂಗನಾಥ ಎ.ಎಸ್. ಎಂಬ ಹೆಸರಿನ ಎಸ್ ಅಕ್ಷರದ ಹುಟ್ಟಿಗೆ ಕಾರಣವಾದ ಊರಿಗೆ, ಸಣ್ಣಳ್ಳಿಗೆ ಬಂದೇಬಿಟ್ಟಿದ್ದ. ಹಳೇಮನೆ, ತೋಟ ನೋಡಿಕೊಳ್ಳುತ್ತಿದ್ದ ಅಣ್ಣನ ಮಗ ರಾಮು ಇವನು ಬಂದ ದಿನವೇ ಮನೆ ಖಾಲಿ ಮಾಡಿಕೊಡುತ್ತಿದ್ದನೇನೋ, ಒಬ್ಬಂಟಿ ಇವನಿಗಾದರೂ ಹೊತ್ತು ಕಳೆಯಬೇಕಲ್ಲ! ಬೇಡ ಅಂದಿದ್ದ. ಇಲ್ಲ, ಇಲ್ಲೇ ಇರು ಅಂದಿದ್ದ.          ರಾಮನಿಗೆ ಒಬ್ಬಳು ಹೆಂಡತಿ, ಸುಗುಣೆ,ಸುಶೀಲೆ, ಸಾಧ್ವಿ ಅಂತೆಲ್ಲ ಕರೆಯಲಾಗದಿದ್ದರೂ ಗಂಡನ ಚಿಕ್ಕಪ್ಪ ಮರಳಿ ಬಂದನೆಂದು ಗಂಡನ ಬಳಿ ' ಜಮೀನನ್ನು ಇಷ್ಟು ವರ್ಷ ನೋಡಿಕೊಂಡಿರಿ, ಈಗ ಬಿಟ್ಟುಬಿಡುವಿರಾ' ಎಂದೆಲ್ಲಾ ಕೂಗಾಡಿ ತಲೆಕೆಡಿಸುವಷ್ಟು ನಾಗರಿಕ ಹೆಣ್ಣಲ್ಲ. ಹೆಸರು ನನಗೆ ನೆನಪಿಲ್ಲ, ರಂಗನಾಥ ಅದೇನೋ ಹೆಸರು ಅಂದಿದ್ದ ಅಂತಷ್ಟೇ ಗೊತ್ತು. ಈ ಶ್ರೀ ಮತ್ತು ಶ್ರೀಮತಿ ರಾಮರಿಗೆ ಒಬ್ಬ ಮಗ, ಶರತನೋ ಭರತನೋ ಯಾರೋ ಒಬ್ಬ. ತಾಲೂಕು ಕೇಂದ್ರದ ಯಾವುದೋ ಕಾಲೇಜಿನಲ್ಲಿ ಮಾಸ್ತರನಂತೆ, ಊರು ದೂರವಾದ್ದರಿಂದ ಅಲ್ಲೇ ಬಾಡಿಗೆ ರೂಮಿನಲ್ಲಿ ಉಳಿಯುತ್ತಾನಂತೆ. ...

ಖಾಲಿ ಕಾ೧

Image
ಎಲ್ಲ ಬರೆದಂತೆ ನಾನೂ ಬರೆಯುವೆ ಪದ್ಯವ, ಘರ್ಷಣೆಯದು, ಸಂಘರ್ಷದ್ದು ಉಚ್ಚೆವಾಸನೆಯ ಇತಿಹಾಸದ್ದು... ನನ್ನದೇ ಸೆಂಟೊಡೆದ ಬದುಕಿನದು. ಯಾರ ಹೆಸರಿಡಲಿ ಮೊದಲ ಸಾಲಿನಲಿ? ಶುರುವಾಗಲಿ ಅವನಿಂದ, ಮೇಲಿರುವನೆಂದು ಜನರನ್ನೋ ನಾ ನಂಬದ ದೇವನಿಗೇ ಥೂ, ಉಗಿದೆ... ಬಿತ್ತು, ಅಂಗವಸ್ತ್ರದ ಅಂಚಿನಲೇ ಒರೆಸಿದೆ ಮುಖವ. ಯಾರಂದು ಏನ ಮಾಡಲಿ? ನನ್ನ ಬದುಕಿದು, ನನ್ನದೇ ಪದ್ಯ. ಸುತ್ತೊಡೆದ ಭೂಮಿಯಲಿ ನಾನಿಬ್ಬನಿರುವೆ, ಎಲ್ಲ ಮರೆತಂತೇ. ನಾ ಕೆಟ್ಟವ ನೆನಪುಳಿದಂತೆ, ಚರಿತ್ರೆಯದು ಖಾಲಿ ಪುಸ್ತಕ.ಚೊ ಎಲ್ಲ ಬರೆದಂತೆ ನಾನೂ ಬರೆವೆ ಪದ್ಯವ, ಜಗಕೆ ಹೇಳುವುದಿದೆ ಕೂಗಿ, ನಾ ಹುಟ್ಟಾಕೆಟ್ಟವನಲ್ಲ ಕೆಟ್ಟೂ ಹುಟ್ಟಿದವನಲ್ಲ, ಹುಟ್ಟಿ ಕೆಟ್ಟವನು ಬೆಳೆದು ಕೆಡಿಸಲ್ಪಟ್ಟವನು...😊

ಶುರು

  ಮಧ್ಯಾಹ್ನ ನಿದ್ರೆ ಜಾಸ್ತಿಯಾಯ್ತು, ಈಗ ನಿದ್ರೆ ಬರ್ತಿಲ್ಲ.  ಹಿಂಗೇ ನ್ಯೂಸ್ ಪೀಡೆಯ ಬುಡ ಕಾಣುತ್ತೇನೋ ಅಂತ ನೋಡ್ತಿದ್ದೆ...ನಾಲ್ಕೈದು ಹಳೆ ಸ್ನೇಹಿತರು ಯಾವತ್ತೋ ಬದಲಿಸಿದ ಪ್ರೊಫೈಲ್ ಪಿಕ್ಚರ್ರುಗಳು ಕಂಡ್ವು.      ಬಹುತೇಕ ಎಲ್ಲರ ಡೀಪಿಗಳು ಪಾರ್ಮಲ್ ಅಂಗಿಗಳ ಒಳಗೆ ಅವರನ್ನ ಅಡಗಿಸಿಟ್ಟಿದ್ವು. ಹೊಟ್ಟೆ ಚೂರೇಚೂರು ದೊಡ್ಡದಾದ್ರೂ ಅಂಗಿಯಿಂದ ಬಿಡುಗಡೆಯಾಗುತ್ತವೇನೋ ಅನ್ವಂಗಿದ್ವು. ಲೈಕ್ ಒತ್ತದೇ ಅವರ ಪ್ರೊಫೈಲುಗಳನ್ನ ಚೆಕ್ಕಿಸಿದೆ. ಎಲ್ಲರದೂ ಒಂದೋ ದೊಡ್ಡ ಕಂಪನಿಯಲ್ಲಿ ಚಿಕ್ಕ ಜಾಬ್, ಚಿಕ್ಕ ಕಂಪನಿಯಲ್ಲಿ ದೊಡ್ಡ ಜಾಬ್ ಅಥವಾ ದೊಡ್ಡ ಚಿಕ್ಕ ಕಂಪನಿಗಳಲ್ಲಿ ದೊಡ್ಡ ಚಿಕ್ಕ ಜಾಬ್ಗಳಲ್ಲಿ ಇರೋದಾಗಿ ತೋರಿಸ್ತಿದ್ವು. ಆಗ ಅನ್ನಿಸಿದ್ದು, ನಾನೂ ಇಷ್ಟೊತ್ತಿಗೆ ಹಿಂಗಿರ್ಬೇಕಾಗಿತ್ತು ಅಲ್ವಾ ಅಂತ.        ಆ ಕ್ಷಣಕ್ಕೆ ಹಂಗನ್ನಿಸಿದ್ರೂ...ಊಹೂಂ ಯಾವುದೋ ಕಲರ್ ಕಾಲರಿನ ಪಾರ್ಮಲ್ ಷರ್ಟಿಗಿಂತಾ ನನಗಿಷ್ಟವಾದ ಕಾಲರ್ಲೆಸ್ ಟೀ ಷರ್ಟನ್ನೇ ಹಾಕಿಕಿಳ್ತಿರೋ ನನಗೆ ಆತ್ಮ ತೃಪ್ತಿಯಿದೆ. ಹಂಗಂತ ಅವರಿಗಿಲ್ಲ ಅಂತಲ್ಲ, ಆ ಜಾಗದಲ್ಲಿ ನನ್ನನ್ನು ಕಲ್ಪಿಸಿಕೊಳ್ಳೋಕೆ ನನಗೆ ಅಸಾಧ್ಯ. ದೊಡ್ಡ ನಗರದಲ್ಲಿ ಬದುಕೋದೂ ನನ್ನಿಂದಾಗದ ಕೆಲಸ. ನನಗೆ ನನ್ನೊಬ್ಬನಿಗೇ ಕೇಳುವ ಎದೆಬಡಿತ ಇಷ್ಟವೇ ಹೊರತು ನನ್ನೊಳಗಿನ ಮಾತೂ ಕೇಳದ ನಗರದ ಗಲಾಟೆ ಊಹ್ಞೂಂ ಇಂಪಾಸಿಬಲ್.       ಒಂದು ಜಾಬಿಗಾಗಿ ಊರು ಬಿ...

ಮಾರಾಟಕ್ಕಿವೆ...ಎಂದೂ ಬಳಸದ ಚಪ್ಪಲಿಗಳು.

                 ಈ ಬ್ಲಾಗಿಗರ ಖೋಖೊ ಆಟ ನೋಡಿ ಗೊತ್ತು, ಆದ್ರೆ ನಂಗಿದು ಹೊಸದು.                  ಗುರುಕಿರಣ್ ಸೋದೆ ಬರೆದ ಕಥೆಯಲ್ಲಿ ನಂಗಿಷ್ಟವಾದದ್ದು ಕಥೆಯ ತಲೆ,'ಮಾರಾಟಕ್ಕಿವ ೆ,ಎಂದೂ ಬಳಸದ ಚಪ್ಪಲಿಗಳು' ಎಂಬ ಆ ಭಾವನೆ. ಇದೊಂದೇ ಸಾಲು ಸಾಕಲ್ಲವೇ? ಕಥೆಯೇ ಬೇಡವಾಗಿತ್ತು ಅನ್ನಿಸಿದರೂ ಗೆಳೆಯ ಗುರುವಿನ ಕಥೆ ಹೇಳುವ ಶೈಲಿ ಮತ್ತೆ ಆಯ್ದುಕೊಂಡ ಕಥೆಯ ಮಾಂಸಲ ಭಾಗ ಇಷ್ಟವಾಯ್ತು. ಗುರು ಬರೆದ ಕಥೆ ಓದಲು ಕೆಳಗಿನ ಲಿಂಕ್ ಬಳಸಿ  http:// guruu725.blogspo t.in/2015/11/ blog-post_7.html                   ಗುರು ಅವನ ಆಟ ಮುಗಿಸಿ ನನ್ನ ತಂಗಿಯಂತಾ ಹುಡುಗಿ ರಾಧಾ ಹೆಗಡೆಗೆ ಖೋ ಕೊಟ್ಟ.ರಾಧೆಯ ಕಥೆ ನಂಗೆ ಬಹಳವೇ ಇಷ್ಟವಾಯ್ತು. ಆಧುನಿಕ ಅರ್ಜೆಂಟ್ ಪ್ರೇಮ, ಅರ್ಜೆಂಟ್ ಮದುವೆ, ಅಪಕ್ವ ಬೌದ್ದಿಕತೆಯ ಫಲ ಅಪೂರ್ಣ ಮಗುವಿನ ಸುತ್ತ ಆಕೆ ಹಣೆದ ಕಥೆಯ ಪಾತ್ರಗಳು ನಮ್ಮ ಮಧ್ಯೆಯೇ ಇದ್ದವೇನೋ, ಇದ್ದಾವೇನೋ ಅನ್ನಿಸಿತು. ರಾಧೆಯ ಕಥೆ ಓದಲು ಕೆಳಗಿನ ಲಿಂಕ್ ತೆರೆಯಿರಿ  http:// radhayagneshwar. blogspot.in/ 2015/11/ blog-post_13.htm l?spref=fb                  ಸರಿ, ರಾಧಾ ನನಗೆ ಖೋ...

ಮುಖಗಳು ಭಾಗ ೨

                    ನಾನಾಗ ಐದನೇ ಕ್ಲಾಸು,ಸರ್ಕಾರಿ ಶಾಲೆಯಲ್ಲಿ ನಾನೇ ತರಗತಿಗೆ ಮೊದಲಿಗಳು. ಬರಿ ಓದಿನಲ್ಲಲ್ಲ,ಎಲ್ಲದರಲ್ಲೂ. ಅಪ್ಪ ಅಮ್ಮನ ಜಗಳಗಳ ಮದ್ಯೆ ನಾನೂ ಹಾಳಾಗುತ್ತಿದ್ದೆ. ಐದನೆ ತರಗತಿ ಮುಗಿಯುವ ಹೊತ್ತಿಗೆ ನನ್ನ ಶೈಕ್ಷಣಿಕ ಪ್ರಗತಿ ಸಾಧಾರಣ ಎಂದರೆ ಸಾಧಾರಣ ಮಟ್ಟ ತಲುಪಿತ್ತು.                     ಇತ್ತ ಅಪ್ಪನ ಅರ್ಭಟವೂ ಅತಿಯಾಗುತಿತ್ತು. ಅದಾಗಲೇ ಅಮ್ಮನಿಗೆ ಯಾವ ಸ್ನೇಹಿತೆಯರೂ ಇಲ್ಲವಾಗಿದ್ದರು. ಅದಾಗಲೇ ತವರೂ ದೂರವಾಗಿತ್ತು. ಅಮ್ಮನ ಕೊನೆ ದಿನಗಳಂತೂ ಥೇಟಾನುಥೇಟು ಮನೆಯೆಂದರೆ ಜೈಲು ಅನ್ನುವಮ್ತಾಗಿತ್ತು. ಅವಳದೇ ಸ್ವಂತ ಮನೆ ಈಗ ಜೈಲು!! ಸಾಯ್ಬೇಕೆಂದರೂ ಕೈಗೆ ಏನೂ ಸಿಗದಂತೆ ಮಾಡಿಬಿಟ್ಟಿದ್ದ ಅಪ್ಪ. ಕೊನೆಗೆ ಅದೊಂದೇ ಉಳಿದಿತ್ತು, ತನ್ನ ಆರು ಮೊಳದ ಸೀರೆ.                   ಅಮ್ಮ ಸತ್ತಮೇಲೆ ಅಪ್ಪ ಮತ್ತೊಂದು ಮದುವೆಯಾಗಲಿಲ್ಲ ಅನ್ನೋದೇ ನನಗಿನ್ನೂ ಆಶ್ಚರ್ಯ. ಅಪ್ಪನಿಗೆ ಹೆಂಡತಿ ಬೇಡ್ವಾಗಿದ್ದಳು ಆದರೆ ನನಗೆ ಅಮ್ಮ ಬೇಕಾಗಿದ್ದಳು. ಆದರೆ ಅಪ್ಪನಿಗೆ ಹಣ ಬೆಕಿತ್ತು. ಅಮ್ಮ ಅದೆಂಗೊ ನಾನು ಪಿ.ಯು.ಸಿ. ಮುಗಿಯುವ ವರೆಗೆ ಬದುಕಿದ್ದಳು. ನಾನು ಇಂಜನಿಯರಿಂಗ್ ಮುಗಿಸಲು ಇನ್ನೂ ನಾಲಕ್ಕು ವರ್ಷಗಳಿದ್ದವು, ಆಮೇಲೆ ಅಪ್ಪನಿಗೆ ಬೇಕಿದ್ದ ಹಣ ಬರುತ...