ಮುಖಗಳು ಭಾಗ ೨

                    ನಾನಾಗ ಐದನೇ ಕ್ಲಾಸು,ಸರ್ಕಾರಿ ಶಾಲೆಯಲ್ಲಿ ನಾನೇ ತರಗತಿಗೆ ಮೊದಲಿಗಳು. ಬರಿ ಓದಿನಲ್ಲಲ್ಲ,ಎಲ್ಲದರಲ್ಲೂ. ಅಪ್ಪ ಅಮ್ಮನ ಜಗಳಗಳ ಮದ್ಯೆ ನಾನೂ ಹಾಳಾಗುತ್ತಿದ್ದೆ. ಐದನೆ ತರಗತಿ ಮುಗಿಯುವ ಹೊತ್ತಿಗೆ ನನ್ನ ಶೈಕ್ಷಣಿಕ ಪ್ರಗತಿ ಸಾಧಾರಣ ಎಂದರೆ ಸಾಧಾರಣ ಮಟ್ಟ ತಲುಪಿತ್ತು.
                    ಇತ್ತ ಅಪ್ಪನ ಅರ್ಭಟವೂ ಅತಿಯಾಗುತಿತ್ತು. ಅದಾಗಲೇ ಅಮ್ಮನಿಗೆ ಯಾವ ಸ್ನೇಹಿತೆಯರೂ ಇಲ್ಲವಾಗಿದ್ದರು. ಅದಾಗಲೇ ತವರೂ ದೂರವಾಗಿತ್ತು. ಅಮ್ಮನ ಕೊನೆ ದಿನಗಳಂತೂ ಥೇಟಾನುಥೇಟು ಮನೆಯೆಂದರೆ ಜೈಲು ಅನ್ನುವಮ್ತಾಗಿತ್ತು. ಅವಳದೇ ಸ್ವಂತ ಮನೆ ಈಗ ಜೈಲು!! ಸಾಯ್ಬೇಕೆಂದರೂ ಕೈಗೆ ಏನೂ ಸಿಗದಂತೆ ಮಾಡಿಬಿಟ್ಟಿದ್ದ ಅಪ್ಪ. ಕೊನೆಗೆ ಅದೊಂದೇ ಉಳಿದಿತ್ತು, ತನ್ನ ಆರು ಮೊಳದ ಸೀರೆ.
                  ಅಮ್ಮ ಸತ್ತಮೇಲೆ ಅಪ್ಪ ಮತ್ತೊಂದು ಮದುವೆಯಾಗಲಿಲ್ಲ ಅನ್ನೋದೇ ನನಗಿನ್ನೂ ಆಶ್ಚರ್ಯ. ಅಪ್ಪನಿಗೆ ಹೆಂಡತಿ ಬೇಡ್ವಾಗಿದ್ದಳು ಆದರೆ ನನಗೆ ಅಮ್ಮ ಬೇಕಾಗಿದ್ದಳು. ಆದರೆ ಅಪ್ಪನಿಗೆ ಹಣ ಬೆಕಿತ್ತು. ಅಮ್ಮ ಅದೆಂಗೊ ನಾನು ಪಿ.ಯು.ಸಿ. ಮುಗಿಯುವ ವರೆಗೆ ಬದುಕಿದ್ದಳು. ನಾನು ಇಂಜನಿಯರಿಂಗ್ ಮುಗಿಸಲು ಇನ್ನೂ ನಾಲಕ್ಕು ವರ್ಷಗಳಿದ್ದವು, ಆಮೇಲೆ ಅಪ್ಪನಿಗೆ ಬೇಕಿದ್ದ ಹಣ ಬರುತ್ತಿತ್ತು, ಅವನ ಅದ್ದೂರಿ ಯೋಜನೆಗಳಿಗೆ ನಾನು ಫೈನಾನ್ಸಿಯರ್ ಆಗುತ್ತಿದ್ದೆ. ಅವನ ಮಗಳೆಂಬ ತಿಜೋರಿ ಕನ್ನೆದುರುಗಿತ್ತು. ಬಹುಶಃ ಅಮ್ಮನ್ ಸಾವು ಅವನಿಗೆ ಬುದ್ದಿಯನ್ನೇನು ಕಲಿಸಲಿಲ್ಲ,ಇತ್ತ ನಾನೂ ಅಂತರ್ಮುಖಿಯಾಗುತ್ತ ಸಾಗಿದೆ...
*******        *******     *******    *******     *******   *******    *******    *******    *******


                                                    ಸುತ್ತಿಗೆ ಮುರಿಯಿತೆ?(ಅಪ್ಪನ ಮುಖ)
               
                        ಅವಳ ಸಾವು ನನ್ನಲ್ಲಿ ಬದಲಾವಣೆಯನ್ನು ತಂದಿತ್ತು.. ಅಷ್ಟು ಪ್ರೀತಿಯಿಂದ ಮದುವೆಯಾಗಿದ್ದ ಅವಳು ನನ್ನ ಕಷ್ಟ ಕಾಲದಲ್ಲೇ ನನ್ನನ್ನು ಬಿಟ್ಟು ಹೋಗಿದ್ದಳು. ಮಗಳಿಗೆ ನನ್ನ ಮೇಲೆ ಕೋಪ, ಅವಳ ಅಮ್ಮನ್ ಸಾವಿಗೆ ನಾನೇ ಕಾರಣವೆಂದು.  ಆದರೆ ನಾನು ಅಂಥದ್ದೇನು ಮಾಡಿದೆ?
           ನಿಜ, ನನ್ನ ಬದುಕು ಜೂಜಿನಂತೆ ಇತ್ತು. ಯಾವೊಂದು ಕೆಲಸದಲ್ಲೂ ನಾನೊಬ್ಬ ಯಶಸ್ವಿ ವ್ಯಕ್ತಿ ಆಗಲೇ ಇಲ್ಲ. ಮಗಳಿಗೆ ಅನ್ನಿಸಬಹುದೇನೋ, ನನ್ನ ಅಹಂನಿಂದಾಗಿಯೇ ನಾನವಳ ಕೆಲಸ ಬಿಡಿಸಿದೆ ಎಂದು.ಪಾಪ ಆ ಪುಟ್ಟ ಕಂದನಿಗೇನು ಗೊತ್ತು, ನಾನಾದರೂ ಹೇಗೆ ಹೇಳಲಿ? ನಿನ್ನಮ್ಮನ ಹೆಸರು ಅದ್ಯಾವುದೋ ಶ್ಯಾಮಸುಂದರನೆಂಬ ಯುವಕನ ಜೊತೆ ಸೇರಿಸಿ ಅಕ್ಕ ಪಕ್ಕದವರು ಆಡಿಕೊಳ್ಳುತ್ತಿದ್ದರು ಎಂದು ಹೇಗೆ ಹೇಳಲಿ? ಅಮ್ಮನ ತಪ್ಪಿಲ್ಲದೆ ಅವಳ ನೀತಿಯ ಬಗ್ಗೆ ಕೆಟ್ಟ ಮಾತುಗಳು ಬಂದರೆ ನಾನಾದರೂ ಹೇಗೆ ಸುಮ್ಮನಿರಲಮ್ಮ? ನಾವಿಬ್ಬರು ಸೇರಿಯೇ ಕೆಲಸ ಬಿಡುವ ತೀರ್ಮಾನ ಮಾಡಿದೆವೆಂದು ಹೇಳಿದರೆ ನಿನಗೆ ನಂಬಿಕೆ ಹುಟ್ಟೀತೆ? ಹೀಗೆಲ್ಲ ನಿನ್ನ ಬಾಲಿ ಮಾತನಾಡುವ ಧೈರ್ಯ ನನಗಿಲ್ಲ. ಹೇಗೆ ಮಾತನಾಡಲಿ?

                                                                                                     ಮುಂದುವರೆಯುವುದು...  

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ