ಖಾಲಿ ಕಾ೧


ಎಲ್ಲ ಬರೆದಂತೆ
ನಾನೂ ಬರೆಯುವೆ ಪದ್ಯವ,
ಘರ್ಷಣೆಯದು, ಸಂಘರ್ಷದ್ದು
ಉಚ್ಚೆವಾಸನೆಯ ಇತಿಹಾಸದ್ದು...
ನನ್ನದೇ ಸೆಂಟೊಡೆದ ಬದುಕಿನದು.

ಯಾರ ಹೆಸರಿಡಲಿ
ಮೊದಲ ಸಾಲಿನಲಿ?
ಶುರುವಾಗಲಿ ಅವನಿಂದ,
ಮೇಲಿರುವನೆಂದು ಜನರನ್ನೋ
ನಾ ನಂಬದ ದೇವನಿಗೇ
ಥೂ, ಉಗಿದೆ...
ಬಿತ್ತು, ಅಂಗವಸ್ತ್ರದ ಅಂಚಿನಲೇ
ಒರೆಸಿದೆ ಮುಖವ.

ಯಾರಂದು ಏನ ಮಾಡಲಿ?
ನನ್ನ ಬದುಕಿದು,
ನನ್ನದೇ ಪದ್ಯ.
ಸುತ್ತೊಡೆದ ಭೂಮಿಯಲಿ
ನಾನಿಬ್ಬನಿರುವೆ, ಎಲ್ಲ ಮರೆತಂತೇ.
ನಾ ಕೆಟ್ಟವ ನೆನಪುಳಿದಂತೆ,
ಚರಿತ್ರೆಯದು ಖಾಲಿ ಪುಸ್ತಕ.ಚೊ

ಎಲ್ಲ ಬರೆದಂತೆ
ನಾನೂ ಬರೆವೆ ಪದ್ಯವ,
ಜಗಕೆ ಹೇಳುವುದಿದೆ
ಕೂಗಿ, ನಾ ಹುಟ್ಟಾಕೆಟ್ಟವನಲ್ಲ
ಕೆಟ್ಟೂ ಹುಟ್ಟಿದವನಲ್ಲ,
ಹುಟ್ಟಿ ಕೆಟ್ಟವನು
ಬೆಳೆದು ಕೆಡಿಸಲ್ಪಟ್ಟವನು...😊

Comments

Ranjana Bhat said…
ವಿಭಿನ್ನವಾದ ಸುಂದರ ಕವನ. ಕೊನೆಯ ಪ್ಯಾರಾ ಮನಮುಟ್ಟುವಂತಿದೆ. ಪ್ರತಿ ಸಾಲಿನಲ್ಲೂ ನವೀನತೆಯ ಸೊಗಡಿದೆ.ಕವನ ಸೂಪರ್...

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ